ನಮ್ಮ ಜೊತೆಗಾರರು

 • ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೊ ಸೈನ್ಸಸ್ (ನಿಮ್ಹಾನ್ಸ್) logo

  ಭಾರತೀಯ ಸಂಸತ್ತು ನಿಮ್ಹಾನ್ಸ್ ಸಂಸ್ಥೆಯನ್ನು ‘ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದಿರುವ ಒಂದು ಸಂಸ್ಥೆ’ ಎಂದು ಮಾನ್ಯಮಾಡಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿಯೇ ಮಂಚೂಣಿಯಲ್ಲಿರುವ ಸಂಸ್ಥೆಯಿದಾಗಿದೆ. ಈ ಸಂಸ್ಥೆಯು ಜನರಿಗೆ ಸೇವೆಯನ್ನೊದಗಿಸುವುದಷ್ಟೇ ಅಲ್ಲದೇ ಮಾನಸಿಕ ರೋಗ್ಯ ಮತ್ತು ನರ ವಿಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗಳನ್ನು ಕೂಡ ನಡೆಸುತ್ತಿದೆ.

  ವೈಟ್ ಸ್ವಾನ್ ಫೌಂಢೇಶನ್ ಸ್ಥಾಪಿಸುವ ನಮ್ಮ ಯೋಚನೆಯನ್ನು ಯೋಜನಾರೂಪದಲ್ಲಿ ನಿಮ್ಹಾನ್ಸಿನ ನಿರ್ದೇಶಕರು ಮತ್ತು ಕುಲಪತಿಗಳಲ್ಲಿ ಹಂಚಿಕೊಂಡಾಗ ನಮ್ಮೊಂದಿಗೆ ಸಹಭಾಗಿಗಳಾಗಲು ಅವರು ತಕ್ಷಣ ಒಪ್ಪಿಕೊಂಡರು. ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಕ್ಷೇತ್ರದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಯೊಂದರ ಸಹಭಾಗಿತ್ವ ಪಡೆದಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಕುರಿತು ನಾವು ನಿಮ್ಹಾನ್ಸಿನ ಮನೋವೈದ್ಯರು, ಮನೋವಿಜ್ಞಾನಿಗಳು ಮತ್ತಿತರ ವೈದ್ಯರುಗಳನ್ನು ಭೇಟಿಮಾಡಿದಾಗ ಅವರೆಲ್ಲರೂ ಯಾವುದೇ ಷರತ್ತಿಲ್ಲದೇ, ಅಪರಿಮಿತ ಉತ್ಸಾಹ ಮತ್ತು ಮಾಹಿತಿಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಉದಾರಭಾವದಿಂದ ಸಹಕರಿಸಿದ್ದರ ಪರಿಣಾಮವಾಗಿ ಈ ಪೋರ್ಟಲ್ ನಿಮ್ಮೆದುರಿಗಿರುವುದು ಸಾಧ್ಯವಾಗಿದೆ. ನಿಮ್ಹಾನ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ದಯಮಾಡಿ http://www.nimhans.kar.nic.in ಜಾಲತಾಣವಕ್ಕೆ ಭೇಟಿಕೊಡಿ.

 • ಮಾಹಿತಿ ಇನ್ಫೋಟೆಕ್ logo

  ಇಂಟರ್ನೆಟ್ ಮುಖಾಂತರ ವಿಷಯಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ತಾತಂತ್ರಿಕ ವಿಷಯಗಳ ಕುರಿತು ನಾವು ಸಹಾಯ ಬಯಸಿ ಪೋರ್ಟಲ್ ಗಳನ್ನು ರೂಪಿಸುವಲ್ಲಿ ಅಪಾರ ಅನುಭವವಿರುವ ಅನೇಕ ಸಂಸ್ಥೆಗಳನ್ನು ಸಂಪರ್ಕಿಸತೊಡಗಿದೆವು. ಅಲ್ಲದೇ, ನಾವು ಕೆಲಸಮಾಡಲು ಬಯಸುವ ಸಂಸ್ಥೆಯು ಹೆಚ್ಚುವರಿ ಸಾಮರ್ಥ್ಯವನ್ನು ಹೊಂದಿರಬೇಕೆಂಬ ಇರಾದೆಯಿಂದ ಅಂತಹ ಸಂಸ್ಥೆಯೊಂದರ ಹುಡುಕಾಟದಲ್ಲಿ ನಿರತರಾಗಿದ್ದೆವು. ನಾವು ಬಯಸಿದ ಸಂಸ್ಥೆಯು ನಮ್ಮ ಸಾಮಾಜಿಕ ಉದ್ದೇಶಗಳನ್ನು ಅರಿತುಕೊಂಡು ನಾವು ರೂಪಿಸಲಿಚ್ಛಿಸಿದ ಸಾಮಾಜಿಕ ಜಾಗೃತಿಯ ಪರಿಣಾಮವನ್ನು ಅರ್ಥೈಸಿಕೊಂಡು, ಒಂದು ತೂಕ ಮುನ್ನಡೆಯುವ ಸಾಮರ್ಥ್ಯವನ್ನು ಹೊಂದಿರಬೇಕೆಂಬುದು ನಮ್ಮ ಆಶಯವಾಗಿತ್ತು. ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನ ಬೇರನ್ನು ನೆಟ್ಟಿರುವ ಮಾಹಿತಿ ಇನ್ಫೋಟೆಕ್ ಸಂಸ್ಥೆಯಲ್ಲಿ ಈ ಎಲ್ಲ ಅಂಶಗಳನ್ನು ನಾವು ಕಂಡುಕೊಂಡೆವು.

  ಮಾಹಿತಿ ಇನ್ಫೋಟೆಕ್ ಒಂದು ಐಟಿ ಸೇವಾ ವಿತರಣಾ ಕಂಪನಿಯಾಗಿದ್ದು ಜಾಗತಿಕವಾಗಿ ವಿವಿಧ ಕಂಪನಿಗಳಿಗೆ ಸಮಗ್ರ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುತ್ತ ತನ್ನ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ.

  ಮಾಹಿತಿ ಇನ್ಫೋಟೆಕ್ ಕುರಿತಾದ ಹೆಚ್ಚಿನ ಮಾಹಿತಿಗೆ ದಯಮಾಡಿ http://www.mahiti.org ಜಾಲತಾಣಕ್ಕೆ ಭೇಟಿಕೊಡಿ.

 • ಟೈಮ್ ಲೂಪ್ logo

  ಅವರೇ ಹೇಳುವಂತೆ, ಬರವಣಿಗೆ ರೂಪದಲ್ಲಿರುವ ವಿಷಯಗಳಿಗಿಂತಲೂ ದೃಶ್ಯಮಾಧ್ಯಮದಲ್ಲಿರುವ ವಿಷಯಗಳು ಹೆಚ್ಚು ಶಕ್ತಿಯುತವಾಗಿ ಸಂವಹನವನ್ನು ಸಾಧ್ಯವಾಗಿಸುತ್ತವೆ. ನಾವು ಮಾನಸಿಕ ಆರೋಗ್ಯದ ಕುರಿತು ಒದಗಿಸುವ ಜ್ಞಾನವು ಕೆಲವು ವೇಳೆ ನೇರವಾಗಿ ಇನ್ನು ಕೆಲವು ಸಲ ಸೂಚ್ಯವಾಗಿ ಹಲವಾರು ಕಥೆಗಳನ್ನು ಹೇಳುತ್ತದೆ. ಈ ರೀತಿಯ ಕಥೆಗಳಿಗೆ ದೃಶ್ಯಮಾಧ್ಯಮದ ಸಹಾಯವನ್ನು ಪಡೆದು ಹೆಚ್ಚು ಸಮರ್ಥವಾಗಿ ನಮ್ಮ ಓದುಗರು/ನೋಡುಗರಿಗೆ ತಲುಪಿಸುವಲ್ಲಿ ನಾವು ಹೆಚ್ಚು ಆಸಕ್ತಿಯನ್ನು ಹೊಂದಿದ್ದೆವು. ಈ ನಿಟ್ಟಿನಲ್ಲಿ ವಿಷಯದ ಸಂವೇದನಾಶೀಲತೆಯನ್ನು ಮತ್ತು ಈ ಬರಹಗಳು ಬಿಂಬಿಸುವ ಶಕ್ತಿಶಾಲಿ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಲ್ಲ ಸೃಜನಶೀಲ ಫೋಟೊಗ್ರಾಫರ್ ಗಳೊಂದಿಗೆ ಕೆಲಸಮಾಡುವುದು ಅವಶ್ಯಕವಾಗಿತ್ತು. ಈ ಹುಡುಕಾಟದಲ್ಲಿರುವಾಗ ಟೈಮ್ ಲೂಪ್ ಸಂಸ್ಥೆಯ ಸಂಸ್ಥಾಪಕರೂ, ಯುವ ಪ್ರತಿಭೆಗಳೂ ಆಗಿರುವ ವರ್ಷಾ ಮತ್ತು ಪೃಥ್ವಿ ಜೋಡಿ ನಮಗೆ ಸಿಕ್ಕಿದ್ದು ಅದೃಷ್ಟವೆನ್ನಬೇಕು.

  ಬೆಂಗಳೂರು ಮೂಲದ ತರುಣ ಸಂಸ್ಥೆ ಟೈಮ್ ಲೂಪ್. ‘ಫೋಟೊಗ್ರಫಿಯನ್ನು ಮಾಡಬೇಕು. ಅದು ಎಂಥದಾಗಿರಬೇಕು ಅಂದರೆ ಸೃಜನಾತ್ಮಕವಾಗಿರಬೇಕು. ಸಂವಾದಕ್ಕೆ ಎಡೆಮಾಡಿಕೊಡುವಂತಿರಬೇಕು. ಅದಕ್ಕೊಂದು ಅರ್ಥವಂತಿಕೆ ಮತ್ತು ಭರವಸೆಯನ್ನು ಹುಟ್ಟಿಸುವ ತಾಕತ್ತಿರಬೇಕು. ಮನ ತಟ್ಟುವಂತಿರಬೇಕು ಅಥವಾ ಒಂದು ಸಣ್ಣ ಮಂದಹಾಸವನ್ನು ಸೂಸುವಂತಿರಬೇಕು’, ಎಂಬುದು ಇವರ ನಂಬಿಕೆ.