ಮಾನಸಿಕ ಸ್ವಾಸ್ಥ್ಯವನ್ನು ನಿಮ್ಮ ಫಿಟ್ನೆಸ್ ಅಭ್ಯಾಸದಲ್ಲಿ ಸೇರಿಸಿಕೊಳ್ಳಿ

ನಮಗೆಲ್ಲ ಮಾನಸಿಕ ಮಾನಸಿಕ ಆರೋಗ್ಯದ ಮಹತ್ವ ತಿಳಿದುಕೊಳ್ಳುವುದು ಅವಶ್ಯಕ, ಇದು ಕೇವಲ ಮಾನಸಿಕ ಅನಾರೋಗ್ಯ ಹೊಂದಿದವರಿಗೆ ಮಾತ್ರವಲ್ಲ…

ನೀವು ಚೆನ್ನಾಗಿರುವಾಗ ನೀವೇಕೆ ಆರೋಗ್ಯದ ಕುರಿತು ಚಿಂತಿಸುವಿರಿ? ಆರೋಗ್ಯದ ಕುರಿತು ಕಾಳಜಿ ಹೆಚ್ಚಾಗಿರುವ ಕಾಲದಲ್ಲಿ ಈ ಪ್ರಶ್ನೆ ಅನಾವಶ್ಯಕ ಎಂದು ಅನಿಸುತ್ತದೆ. ಆದರೆ ಮಾನಸಿಕೆ ಸ್ವಾಸ್ಥ್ಯತೆಯ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ.

ನಮ್ಮ ದೈಹಿಕ ಅರ್ರೋಗ್ಯ ಚೆನ್ನಾಗಿರಲು ನಾವು ದಿನನಿತ್ಯ ವ್ಯಾಯಾಮ ಮಾಡುತ್ತೇವೆ. ಈ ಮೇಲಿನ ಸಾಲುಗಳನ್ನು ಓದುವಾಗ ಏನು ಅನಿಸುತ್ತದೆ? ರಸ್ತೆಯಲ್ಲಿ ಜಾಗಿಂಗ್‌ ಮಾಡುವ, ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಅಥವಾ ಹಿರಿಯರು ಪ್ರತಿನಿತ್ಯ ಮುಂಜಾನೆ ವಾಕಿಂಗ್‌ ಹೋಗುವ ಬಗ್ಗೆ ನೀವು ಯೋಚಿಸುತ್ತಿರಬಹುದು. ನಾವು ಟಿವಿಯಲ್ಲಿ ನೋಡುವ ಆರೋಗ್ಯಯುತ, ಪೌಷ್ಠಿಕಯುತ ಆಹಾರದ ಜಾಹೀರಾತು ನೆನಪಿಗೆ ಬರಬಹುದು. 

ಆದರೆ ನಿಮ್ಮ ಮಾನಸಿಕ ಆರೋಗ್ಯವನ್ನು ನಿಮ್ಮ ಚಿಂತನೆಯಲ್ಲಿ ಸೇರಿಸಿಕೊಂಡಿದ್ದೀರಾ? ನಿಮ್ಮ ಗೆಳೆಯರು ಅವರ ಹತ್ತಿರದ ಸ್ನೇಹಿತರೊಂದಿಗೆ ಅಥವಾ ಸಲಹೆಗಾರರೊಂದಿಗೆ ಅವರ ಒತ್ತಡದ ಕುರಿತು ಹೇಳಿಕೊಂಡಿದ್ದನ್ನು ನೀವು ನೆನಪಿಸಿಕೊಂಡಿರಾ? ಯಾರಾದರೂ ಅವರ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಬರೆದಿಟ್ಟ ಮಾರ್ಗಗಳು ನಿಮ್ಮ ಕಣ್ಣೆದುರಿಗೆ  ಬಂತೆ? ಕಡಿಮೆ ಆತ್ಮಾಭಿಮಾನ ಅಥವಾ ಆತಂಕ ನಿರ್ವಹಣೆಗೆ ಸ್ವಯಂ ಸಹಾಯ ಮಾಡುವ ಪುಸ್ತಕಗಳನ್ನು ಓದಿದ್ದು ನೆನಪಿಗೆ ಬಂತಾ? ಯಾರಾದರೂ ತಮ್ಮ ಜೀವನ ಕೌಶಲ್ಯಗಳನ್ನು ಉತ್ತಮಗೊಳಿಸಲು ತರಬೇತಿ ಪಡೆದ ಬಗ್ಗೆ ಅಥವಾ ತಮ್ಮ ಮಾನಸಿಕ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸಲು ಒಳ್ಳೆಯ ಪುಸ್ತಕಗಳನ್ನು ಓದಿರುವ ನೆನೆಪು ಬಂತೆ?

ನನ್ನ ಊಹೆಯಂತೆ ಮೇಲಿನ ಎಲ್ಲ ಪ್ರಶ್ನೆಗಳಿಗೂ ನಿಮ್ಮ ಹತ್ತಿರ ಉತ್ತರ ಇಲ್ಲ. ನೀವು ಇವುಗಳಲ್ಲಿ ಯಾವುದನ್ನಾದರೂ ಚಿಂತಿಸಿದ್ದರೆ, ನಿಮ್ಮ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯವನ್ನು ಸೇರಿಸಿಕೊಂಡು ಕಾಳಜಿ ವಹಿಸಿದ್ದರೆ, ಖಂಡಿತ ಅದು ಅತ್ಯುತ್ತಮ.

ಸಹಜವಾಗಿ ನಮ್ಮ ದೈಹಿಕ ಆರೋಗ್ಯದ ಕುರಿತು ಕಾಳಜಿ ವಹಿಸುತ್ತೇವೆ. ಆದರೆ ಮಾನಸಿಕ ಆರೋಗ್ಯ ಇದರಿಂದ ಬಹು ದೂರ ಉಳಿದಿದೆ. ವಾಸ್ತವಾಂಶವೆಂದರೆ ಮಾನಸಿಕ ಆರೋಗ್ಯ ಎಂಬ ಪದವೇ ಮಾನಸಿಕ ಖಾಯಿಲೆಗಳೊಂದಿಗೆ ಥಳಕು ಹಾಕಿಕೊಂಡಿದೆ. ಅದು ಮಾನಸಿಕ ಅನಾರೋಗ್ಯ ಹೊಂದಿರುವವರು ಮಾತ್ರ ಚಿಂತಿಸಬೇಕಾದ ವಿಷಯ ಎಂದು ನಾವು ಭಾವಿಸಿಬಿಟ್ಟಿದ್ದೇವೆ!

ದೈಹಿಕ ಆರೋಗ್ಯಕ್ಕೆ ಹೇಗೆ ವ್ಯಾಯಾಮ ಹಾಗೂ ಫಿಟ್ನೆಸ್ ಮುಖ್ಯವೋ ಹಾಗೆಯೇ ಮಾನಸಿಕ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಮಾನಸಿಕ ಆರೋಗ್ಯದ ಉತ್ತೇಜನ ಮತ್ತು ಯೋಗಕ್ಷೇಮಗಳಿಗೆ ಕೂಡ ನಾವು ಪ್ರಾಮುಖ್ಯತೆ ನೀಡಬೇಕು

ದೈಹಿಕ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಸಂಬಂಧ ಹೊಂದಿದ್ದು ಮತ್ತು ಒಂದರ ಮೇಲೊಂದು ಪರಿಣಾಮ ಬೀರುತ್ತದೆ ಎಂದು ಸಾಕಷ್ಟು ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಂತೆ ಮಾನಸಿಕ ಮತ್ತು ದೈಹಿಕ ಆರೋಗ್ಯದೊಡನೆ ಸಂಕೀರ್ಣವಾದ ಸಂಬಂಧ ಇದೆ.(ಉದಾ: ವ್ಯಕ್ತಿಗೆ ದ್ವಿತೀಯ ಹಂತದ ಮದುಮೇಹವಿದ್ದಲ್ಲಿ ಖಿನ್ನತೆಗೆ ಒಳಗಾಗಬಹುದು. ಹೃದಯಾಘಾತದ ನಂತರ ಖಿನ್ನತೆ ಲಕ್ಷಣಗಳ ಚಿಕಿತ್ಸೆ ಪ್ರಮಾಣ ಹೆಚ್ಚಿದೆ).

ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದುದ್ದೆಂದರೆ, ಮಾನಸಿಕ ಮತ್ತು ದೈಹಿಕ ಆರೋಗ್ಯಗಳೆರಡನ್ನು ಒಟ್ಟಾಗಿ ನೋಡಬೇಕು. ಒಂದರ ಕುರಿತು ಕಾಳಜಿ  ಇನ್ನೊಂದನ್ನು ಅಲಕ್ಷ್ಯ ಮಾಡುವುದಲ್ಲ.

ಒಳ್ಳೆಯ ಹವ್ಯಾಸಗಳು, ಚಟುವಟಿಕೆ, ವಿಶ್ವಾಸಭರಿತ ಸಂಬಂಧಗಳು, ಗುಣಾತ್ಮಕವಾದ ಆಲೋಚನೆಗಳಿದ್ದಲ್ಲಿ ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ನಿರ್ವಹಿಸಬಹುದು.  ಈ ಒಂದು ಉತ್ತಮ ಮನಸ್ಥಿತಿಯಿರುವಾಗ ಯಾವುದೇ ಕಷ್ಟ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತೇವೆ.

ಮಾನಸಿಕ ಯೋಗಕ್ಷೇಮದ ಕುರಿತು ಗಮನಹರಿಸುವುದು ಬುದ್ಧಿವಂತ ಆಯ್ಕೆ. ಗ್ಯಾಲಪ್‌ ಸಂಶೋಧನೆ ತಂಡ ತೋರಿಸಿದಂತೆ (Gallup research) ಇದು ನಮ್ಮ ಸಾಮರ್ಥ್ಯ ಮತ್ತು ನಮ್ಮ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯ ಮೇಲೆ ಅವಲಂಬಿಸಿರುತ್ತದೆ.

ಮಾನಸಿಕ ಆರೋಗ್ಯದ ಬಗ್ಗೆ ಇರುವ ಭಯ ಹಾಗೂ ತಪ್ಪು ಗ್ರಹಿಕೆಯಿಂದ ಮಾನಸಿಕ ಯೋಗಕ್ಷೇಮದ ಬಗ್ಗೆ ಜನ ಹೆಚ್ಚು ಕಾಳಜಿ ವಹಿಸಿಲ್ಲ. ಇದರ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಅಸ್ಪಷ್ಟ ಪರಿಕಲ್ಪನೆ ಹಾಗೂ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ನಾವು ಈ ವಿಷಯದ ಬಗ್ಗೆ ಯೋಚಿಸುವುದಿಲ್ಲ.

ಈ ನಿಟ್ಟಿನಲ್ಲಿ ನಾವು ತಿಳುವಳಿಕೆಯನ್ನು ಪಡೆಯಬೇಕು. ಕೆಲವು ಮನೋವೈಜ್ಞಾನಿಕ ಕೌಶಲ್ಯಗಳನ್ನು ಕಲಿತು ಉಪಯೋಗಿಸುವುದು ಉತ್ತಮ. ಉದಾಹರಣೆಗೆ: ನಕಾರಾತ್ಮಕ ಯೋಚನೆಗಳನ್ನು ನಿಯಂತ್ರಿಸುವುದು, ಸಮತೋಲನದಿಂದ ಆಲೋಚಿಸಿ ಕಾರ್ಯವನ್ನು ನಿರ್ವಹಿಸುವುದು, ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಮುಂತಾದ ಗುಣಗಳನ್ನು ಕಲಿಯುವುದು ಅತಿ ಅವಶ್ಯಕ. ಇದರ ಕುರಿತಾಗಿ ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಮತ್ತು ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸೈಕಾಲಾಜಿಕಲ್ ಸ್ಟಡೀಸ್ ನಲ್ಲಿ ಪ್ರಕಟಿಸಿದ್ದಾರೆ.

ಸಂತಸದಿಂದಿರಲು "ಕ್ವಿಕ್ ಫಿಕ್ಸ್" ಮಾರ್ಗವನ್ನು ಅನುಸರಿಸುವುದು ಉತ್ತಮವಲ್ಲ. ಯಾವುದೇ ತೊಂದರೆ ಬಂದಾಗ ನಮ್ಮ ಪ್ರೀತಿ ಪಾತ್ರರ ಅಥವಾ ಸ್ನೇಹಿತರ ಸಹಾಯ ಕೇಳುವುದು, ತೀವ್ರ ಮಾನಸಿಕ ತೊಂದರೆಯಿದ್ದಾಗ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಇವೆಲ್ಲ ಉದಾಹರಣೆಗಳಷ್ಟೇ. ನಮ್ಮ ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳಲು ಹಲವಾರು ಮಾರ್ಗಗಳಿವೆ. ಇದರ ಬಗ್ಗೆ ನಾವು ಆಲೋಚಿಸಬೇಕು ಹಾಗೂ ಇತರರೊಂದಿಗೆ ಚರ್ಚಿಸಬೇಕು.

ಡಾ.ಸೀಮಾ ಮೆಹರೋತ್ರ, ಹೆಚ್ಚುವರಿ ಪ್ರಾಧ್ಯಾಪಕರು ಕ್ಲಿನಿಕಲ್‌ ಸೈಕಾಲಜಿ, ನಿಮ್ಹಾನ್ಸ್‌. ಅವರು ತಮ್ಮ ವಿಭಾಗದಲ್ಲಿ ಹಲವಾರು ಮನಃಶಾಸ್ತ್ರ ಚಟುವಟಿಕೆಗಳನ್ನು ಸಂಘಟಿಸುತ್ತಾರೆ ಮತ್ತು ವಿಶೇಷವಾಗಿ ಯುವಕರ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಸಂಶೋಧನೆ, ಸೇವೆ, ತರಬೇತಿ ನೀಡುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org