ವಿಶೇಷ ಲೇಖನಗಳು

ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡ ವ್ಯಕ್ತಿ ಕೆಲಸಕ್ಕೆ ಯಾವಾಗ ಹಿಂದಿರುಗಬಹುದು?

ಕೆಲವು ಸಲಹೆಗಳು: ಮಾನಸಿಕ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದ ನಂತರ  ವ್ಯಕ್ತಿಯು ತಮ್ಮ ಕೆಲಸಕ್ಕೆ ಹಿಂದಿರುಗಬಹುದೇ ಅಥವಾ ಇಲ್ಲವೇ? ಎಂದು ನಿರ್ಧರಿಸಲು ತಜ್ಞರು ಕೆಲವು ಅಂಶಗಳನ್ನು ಸೂಚಿಸುತ್ತಾರೆ. ರೋಗಲಕ್ಷಣದ ಸ್ಥಿತಿ: ವ್ಯಕ್ತಿಯಲ್ಲಿ ಕಾಯಿಲೆಯ ಲಕ್ಷಣಗಳು ಇನ್ನೂ ಕಾಣಿಸಿಕೊಳ್ಳುತ್ತಿವೆಯೇ ? ಎಂದು ಮನೋವೈದ್ಯರ ಸಹಾಯ ಪಡೆದು ಖಚಿತ ಪಡಿಸಿಕೊಳ್ಳಿ. ಈ ವಿಷಯದಲ್ಲಿ ಮಾನಸಿಕ ಕಾಯಿಲೆಯ ಸ್ವರೂಪವನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಸಾಮಾನ್ಯ ಅಥವಾ ಮಿತವಾದ ಖಿನ್ನತೆಯಿದ್ದಲ್ಲಿ ಚಿಕಿತ್ಸೆ ಪಡೆದ ನಂತರ, ಬಹುಬೇಗ ಗುಣಮುಖ ಹೊಂದುತ್ತಾರೆ. ಆದರೆ ಒಬ್ಸೆಸ್ಸಿವ್ ...

ಇನ್ನೂ ಓದಿ

ಚಿತ್ರೀಕರಣ ಮಾಲಿಕೆ

img

ಡಾ. ಸಿ. ಆರ್. ಚಂದ್ರಶೇಖರ್

ಚಿತ್ರ ಕಥೆ

ಮಾನಸ್ ಭಟ್ಟಾಚಾರ್ಯ

ಸ್ಕಿಜ಼ೋಫ್ರೇನಿಯ ಸಮಸ್ಯೆಯಿರುವ ಮಗನ ಆರೈಕೆದಾರರು

“ಯಾವುದೇ ಸಂಗತಿಗೂ ನಾನು ಭಯಗೊಳ್ಳಲಾರೆ. ಸಮಸ್ಯೆಗಳೆದುರಾದರೆ, ಸುಮ್ಮನಿದ್ದು, ನನ್ನಿಂದ ಸಾಧ್ಯವಿರುವ ಕೆಲಸ ಮಾಡುತ್ತೇನೆ. ನನ್ನ ಮಗನ ಸ್ಕಿಜ಼ೋಫ್ರೇನಿಯ ಸಮಸ್ಯೆಯ ವಿಚಾರದಲ್ಲೂ ಇದೇ ನಿಲುವು. 20 ವರ್ಷಗಳ ಹಿಂದೆ ಚಿಕಿತ್ಸೆ ಶುರು ಮಾಡಿದಾಗ ಸ್ಕಿಜ಼ೋಫ್ರೇನಿಯ  ಖಾಯಿಲೆ ಇದೆ ಎಂದು  ಗೊತ್ತಾಯಿತು. ಈಗ ನನ್ನ ಮಗನಿಗೆ 45 ವರ್ಷ.. ಮಡದಿ ತೀರಿಕೊಂಡ ಬಳಿಕ ನಾನೇ ಸಂಪೂರ್ಣವಾಗಿ ಇವನ ಆರೈಕೆ ಮಾಡುತ್ತಿರುವೆ. ವ್ಯಾಯಾಮ, ಯೋಗದ ಕೆಲವು ಆಸನಗಳ ಮೂಲಕ ನನ್ನ ದಿನ ಆರಂಭಿಸುತ್ತೇನೆ. ಇದು ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಇದೇ ರೀತಿಯಲ್ಲಿ ಅವನ ಚಿಂತೆಯಿಂದಲೂ ಹೊರ ಬರುತ್ತೇನೆ.”

ಗ್ಲೋರಿ ಜೋಸೆಫ್‌

ಸೈಕಿಯಾಟ್ರಿಕ್‌ ನರ್ಸ್

“ನಾನು ಯಾವಾಗಲೂ ನರ್ಸ್‌ ಆಗುವ ಬಗ್ಗೆ ಯೋಚಿಸುತ್ತಿದ್ದೆನೇ ಹೊರತೂ ಯಾವಾಗಲೂ ಸೈಕಿಯಾಟ್ರಿಕ್ ನರ್ಸ್‌ ಆಗುತ್ತೇನೆಂದು ಎಣಿಸಿರಲಿಲ್ಲ. ಯಾವಾಗ ನಾನು ನಿಮ್ಹಾನ್ಸ್‌ಗೆ ಬಂದೆನೋ, ಇಲ್ಲಿ ರೋಗಿಗಳು ಪಡುವ ನೋವು, ಯಾತನೆಗಳನ್ನು ಕಂಡೆ. ಅವರಲ್ಲಿ ತುಂಬಾ ಜನ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ  ವೈಯಕ್ತಿಕ ಸ್ವಚ್ಛತೆ ಕಡೆಗೂ ಗಮನವಿರಲಿಲ್ಲ. ‘ನಾವು ಯಾಕೆ ಬದುಕಿದ್ದೇವೆ?’  'ಈ ಬದುಕೇ  ಬೇಡ' ಎನ್ನುವ ಯೋಚನೆ ಅವರದ್ದು. ಯಾರಾದರೂ ತಮ್ಮನ್ನು ಮಾತಾಡಿಸಲಿ, ಆರೈಕೆ ಮಾಡಲಿ ಎಂದು ಅವರು ಬಯಸುತ್ತಾರೆ.

ಡಾ. ಎನ್‌. ಜನಾರ್ಧನ್‌

ಸೈಕಿಯಾಟ್ರಿಕ್‌ ಸೋಷಿಯಲ್‌ ವರ್ಕರ್‌

“ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಹೊರೆ ಎಂಬ ಭಾವನೆ ಈಗಲೂ ಇದೆ. ಒಬ್ಬ ಸೈಕಿಯಾಟ್ರಿಕ್‌ ಸೋಶಿಯಲ್ ವರ್ಕರ್‌ ಆಗಿ ನಾನು, ಸಮಸ್ಯೆಗೊಳಗಾದ ವ್ಯಕ್ತಿಗಳ ಯೋಗಕ್ಷೇಮ ಹಾಗೂ ಅವರ ಸ್ವತಂತ್ರ, ಸ್ವಾವಲಂಬನೆ  ಭರಿತ ಜೀವನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಇತರೆಲ್ಲ ಭೇಟಿಗಳಿಗಿಂತ ಇವರ ಭೇಟಿ ನನಗೆ ಅರ್ಥಪೂರ್ಣವೆನಿಸುತ್ತದೆ. ಅವರ ಕುಟುಂಬದವರು ಹಾಗೂ ಸುತ್ತಮುತ್ತಲಿನವರು ನನ್ನ ಕಾರ್ಯವನ್ನು ಗುರುತಿಸಿ, ನನ್ನ ಜತೆ ಮಾತಾಡಲು ವಿಶ್ವಾಸ ಭಾವದಿಂದ ಬಂದಾಗ ನನಗೆ ಸಂತೋಷವಾಗುತ್ತದೆ. ಅವರು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಅಭಿಪ್ರಾಯವನ್ನು ಕೇಳುತ್ತಾರೆ."