ಅಂಕಣ

ಮೌಲಿಕ ಶರ್ಮ

 • ಮೌಲಿಕ ಶರ್ಮ

  ಮೌಲಿಕ ಶರ್ಮಾ ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿ, ಪ್ರಸ್ತುತವಾಗಿ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ (Reach Clinic) ಸೇವೆಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರಿ.

ಡಾ.ಶ್ಯಾಮಲ ವತ್ಸ

 • ಡಾ.ಶ್ಯಾಮಲ ವತ್ಸ

  ಡಾ. ಶ್ಯಾಮಲ್ ವತ್ಸ ಬೆಂಗಳೂರಿನ ಹೆಸರಾಂತ ಮನೋವೈದ್ಯ ತಜ್ಞರು. ಇವರು ಸುಮಾರು 20 ವರ್ಷಗಳಿಂದ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರ ಪ್ರಪಂಚ ಹಾಗು ಅವರ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳ ಬಗ್ಗೆ  ಡಾ. ಶ್ಯಾಮಲಾ ವತ್ಸ ಬರೆದಿರುವ ಲೇಖನಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪ್ರಕಟಿಸುತ್ತೇವೆ. ನಿಮಗೆ ಈ ಲೇಖನದ ಬಗ್ಗೆ ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರ.

   

ಡಾ.ಅನಿಲ್‌ ಪಾಟೀಲ್‌

 • ಡಾ.ಅನಿಲ್‌ ಪಾಟೀಲ್‌

  ಡಾ. ಅನಿಲ್ ಪಾಟೀಲ್ ‘ಕೆರರ್ಸ್ ವರ್ಲ್ಡ್ವೈಡ್’ (Carers Worldwide) ಸಂಸ್ಥೆಯ ಸಂಸ್ಥಾಪಕರು ಮತ್ತು ಕಾರ್ಯಕಾರಿ ನಿರ್ದೇಶಕರು. ಕೆರರ್ಸ್ ವರ್ಲ್ಡ್ವೈಡ್ ಸಂಸ್ಥೆಯು ಕೌಟುಂಬಿಕ ಆರೈಕೆದಾರರು ಎದುರಿಸುವ ಸಮಸ್ಯೆಗಳನ್ನು ಗುರುತಿಸಿ, ಅವರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ಹುಡುಕಲು ಹಾಗು ನೆರವು ನೀಡಲು ಕಾರ್ಯನಿರ್ವಹಿಸುತ್ತದೆ. 2012 ರಲ್ಲಿ ಆರಂಭವಾಗಿರುವ ಸಂಸ್ಥೆಯು ಇಂಗ್ಲೆಂಡಿನಲ್ಲಿ ನೋಂದಣಿಯಾಗಿದ್ದು ಅಭಿವೃದ್ಧಿಶೀಲ ದೇಶಗಳಲ್ಲಿರುವ ಆರೈಕೆದಾರರ ಜೊತೆ ಕಾರ್ಯನಿರ್ವಹಿಸುತ್ತದೆ. 

ಡಾ. ಎಡ್ವರ್ಡ್ ಹಾಫ್‌ಮನ್

 • ಡಾ. ಎಡ್ವರ್ಡ್ ಹಾಫ್‌ಮನ್

  ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಇವರು ನ್ಯೂಯಾರ್ಕ್‌ನ ಯೇಶಿವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಪ್ರತ್ಯೇಕವಾಗಿ ಅಧಿಕೃತ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಆಲ್ಪ್ರೆಡ್‌ ಆಡ್ಲರ್‌ ಮತ್ತು ಅಬ್ರಾಹಂ ಮ್ಯಾಸ್ಲೋ ಜೀವನ ಚರಿತ್ರೆಗಳೂ ಸೇರಿದಂತೆ ಮನಃಶಾಸ್ತ್ರ ಹಾಗೂ ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಇವರು ಬರೆದಿದ್ದಾರೆ. ಸದ್ಯ ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಡಾ. ವಿಲಿಯಮ್‌ ಅವರ ಜತೆಯಲ್ಲಿ ಕಾಂಪ್ಟನ್‌ ಆಪ್‌ ಪಾಸಿಟಿವ್‌ ಸೈಕಾಲಜಿ: ದಿ ಸೈನ್ಸ್‌ ಆಫ್‌ ಹ್ಯಾಫಿನೆಸ್‌ ಆಂಡ್‌ ಪ್ಲೋರಿಷಿಂಗ್‌ ಕೃತಿ ರಚಿಸುತ್ತಿದ್ದಾರೆ. ಇಂಡಿಯನ್‌  ಜರ್ನಲ್‌ ಆಫ್‌ ಪಾಸಿಟಿವ್‌ ಸೈಕಾಲಜು ಆಂಡ್‌ ದಿ ಜರ್ನಲ್‌ ಆಫ್‌ ಹ್ಯುಮನಿಸ್ಟಿಕ್‌ ಸೈಕಾಲಜಿ ಗಳ ಸಂಪಾದಕೀಯ ಮಂಡಳಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಡಾ. ಹೋಪ್‌ಮ್ಯಾನ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿದ್ದಾರೆ. ಕೊಳಲು ವಾದನ ಮತ್ತು ಈಜು ಇವರ ಬಿಡುವಿನ ಸಮಯದ ಸಂಗಾತಿ. 

ಸುಷ್ಮಾ ಸಿಂಧು

 • ಸುಷ್ಮಾ ಸಿಂಧು

  ಹಾಸನದಲ್ಲಿ ನೆಲೆಸಿರುವ ಸುಷ್ಮಸಿಂಧು ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆ. ಎಂ.ಎಸ್ಸಿ (ಕ್ಲಿನಿಕಲ್ ಸೈಕಾಲಜಿ) ಪ್ರಥಮ ರಾಂಕ್ ವಿಜೇತೆ. ವಿವಿಧ ಸಂಸ್ಥೆಗಳಲ್ಲಿ ಆಪ್ತಸಮಾಲೋಚನೆ, ಉಪನ್ಯಾಸ ನೀಡಿರುವ ಅನುಭವವಿರುವ ಸುಷ್ಮ ಲೇಖಕಿಯೂ ಹೌದು. ಮನಸ್ಸು, ಆಧ್ಯಾತ್ಮ, ಬದುಕಿನ ಆಯಾಮಗಳ ಅವಲೋಕನ ಬರವಣಿಗೆಯ ವೈಶಿಷ್ಟ್ಯ. ಸದ್ಯ ವಿಶ್ವವಾಣಿಯ ಪಡಸಾಲೆಯಲ್ಲಿ ಅಂಕಣಕಾರ್ತಿಯಾಗಿದ್ದು ಲೇಖನಗಳು, ಅಂಕಣ, ಕಥೆಗಳು ವಿವಿಧ ಪತ್ರಿಗೆಳಲ್ಲಿ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಸಮಾವೇಶದಲ್ಲಿ ಭಾಗಿ, ಅಂತರರಾಷ್ಟ್ರೀಯ ಜರ್ನಲ್‍ಗಳಲ್ಲಿ ಬರಹಗಳು ಪ್ರಕಟಗೊಂಡಿವೆ. ಪಯಣ ಸಾಗಿದಂತೆ ಎಂಬ ಕಥಾ ಸಂಕಲನ ಹೊರ ತಂದಿದ್ದು ಅದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧÀನ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ವಿವಿಧ ಕಥಾ ಪ್ರಶಸ್ತಿಗಳಿಗೂ ಭಾಜನರಾಗಿದ್ದು ‘ಲ್ಯುಮಿನಸ್ ಲೇನ್’ ಹೆಸರಿನ ವೆಬ್‍ತಾಣ ಸಂಸ್ಥಾಪಿಸಿ ಅಲ್ಲಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.