ಪ್ರಸವಾನಂತರ ದೇಹದ ಸೌಂದರ್ಯದ ಬಗ್ಗೆ ಚಿಂತೆ ಬೇಡ

ಪ್ರಸವಾನಂತರ ದೇಹದಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳಲಾಗದೇ ತಾಯಂದಿರು ತುಂಬ ಒದ್ದಾಡುತ್ತಾರೆ. ಅದರಲ್ಲೂ ದೇಹ ಸೌಂದರ್ಯ ಮೊದಲಿನಂತಿರುವುದಿಲ್ಲ ಎಂಬ ಚಿಂತೆಯಂತೂ ಬಹುವಾಗಿ ಕಾಡುತ್ತದೆ.

ಗರ್ಭಾವಸ್ಥೆಯಲ್ಲಿ ಆರೋಗ್ಯ ರಕ್ಷಣೆಗಾಗಿ ಹಾಗೂ ಸರಿಯಾದ ಪ್ರಮಾಣದಲ್ಲಿ ದೇಹದ ತೂಕ ಹೆಚ್ಚಲು ಗರ್ಭಿಣಿಗೆ ಇಬ್ಬರ ಲೆಕ್ಕದಲ್ಲಿ ಆಹಾರ ಸೇವಿಸುವಂತೆ ಉತ್ತೇಜಿಸಲಾಗುತ್ತದೆ. ಇದರಿಂದ ದಪ್ಪವಾಗುವ ಮಹಿಳೆ ಮಗು ಹುಟ್ಟಿದ ಕೆಲವು ವಾರ ಅಥವಾ ತಿಂಗಳುಗಳ ನಂತರ ತೂಕವನ್ನು ಕಳೆದುಕೊಂಡು ಮತ್ತೆ ಮೊದಲಿನ ಆಕಾರಕ್ಕೆ ಮರಳುವುದರಿಂದ ಅತೀವ ಒತ್ತಡಕ್ಕೆ ಒಳಗಾಗುತ್ತಾಳೆ.

ಈ ಸಮಯದಲ್ಲಿ ಹೆಚ್ಚಿನ ತಾಯಂದಿರು ತಾವು ಆಕರ್ಷಣೀಯವಾಗಿಲ್ಲ, ತುಂಬಾ ದಪ್ಪಗಿದ್ದೇವೆ ಅಥವಾ ದೇಹಾಕೃತಿಯು ಕೆಟ್ಟಿದೆ ಎಂದು ಯೋಚಿಸಲು ಆರಂಭಿಸುತ್ತಾರೆ. ಈ ಕೆಳಗಿನ ಕಾರಣಗಳಿಂದ ದೇಹದ ಸೌಂದರ್ಯದ ಕುರಿತು ಯೋಚನೆಗಳುಂಟಾಗಬಹುದು:

  • ನೀವು ನಿಮ್ಮ ದೇಹದ ಸೌಂದರ್ಯದ ಬಗ್ಗೆ ಈ ಸಮಯದಲ್ಲಿ ಮತ್ತೆ ಯೋಚಿಸಲು ಆರಂಭಿಸುತ್ತೀರಿ.
  • ನೂತನ ಜವಾಬ್ದಾರಿಗಳಿಂದ ನೀವು ಬಳಲಿರಬಹುದು ಮತ್ತು ನಿಮ್ಮ ದೈನಂದಿನ ಕಾರ್ಯಗಳನ್ನು ಮತ್ತು ನಿಮಗೆ ಖುಷಿಯನ್ನು ನೀಡುತ್ತಿದ್ದ ಚಟುವಟಿಕೆಗಳನ್ನು ನೀವು ಮಿಸ್ ಮಾಡಿಕೊಳ್ಳುತ್ತಿರಬಹುದು.
  • ನಿಮ್ಮ ಪತಿಯು ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದರೆ ನೀವು ಮಾತ್ರ ಮನೆಗೆ ಸೀಮಿತವಾಗಿರಬೇಕು ಎಂದು ಅನಿಸಬಹುದು.
  • ಸ್ನೇಹಿತರು ಮತ್ತು ಕುಟುಂಬದವರು ತೂಕವನ್ನು ಇಳಿಸಿಕೊಳ್ಳಲು ಸೂಚಿಸುತ್ತಿರುವುದರಿಂದ ನೀವು ಒತ್ತಡಕ್ಕೆ ಒಳಗಾಗಬಹುದು.
  • ಹೆರಿಗೆಯ ನಂತರ ಸೆಲೆಬ್ರಿಟಿಗಳು ಅತ್ಯಂತ ಬೇಗ ಮೊದಲಿನ ಸ್ಥಿತಿಗೆ ಮರಳುವುದು.

ಎಲ್ಲಾ  ತಾಯಂದಿರೂ ಒಂದಲ್ಲಾ ಒಂದು ಹಂತದಲ್ಲಿ ಈ ರೀತಿಯಾಗಿ ಯೋಚಿಸುತ್ತಾರೆ. ಆದರೆ ಕೆಲವು ತಾಯಂದಿರಿಗೆ ಇಂತಹ ಯೋಚನೆಗಳು ಖಿನ್ನತೆಯನ್ನುಂಟುಮಾಡಬಹುದು ಅಥವಾ ಖಿನ್ನತೆಯಿಂದಾಗಿಯೇ ಇಂತಹ ಆಲೋಚನೆಗಳು ಉಂಟಾಗಿರಬಹುದು. ಅತ್ಯಂತ ಅಪರೂಪದ ಕೇಸುಗಳಲ್ಲಿ ಇವು ತಾಯಿಯಲ್ಲಿ ಅನೊರೆಕ್ಸಿಯಾ ಅಥವಾ ಬುಲಿಮಿಯಾದಂತಹ ತಿನ್ನುವ ಸಮಸ್ಯೆಗಳನ್ನು ಉಂಟುಮಾಡಬಹುದು.

ಇವು ಸಹಜ

ಈ ಸಂದರ್ಭದಲ್ಲಿ ನೀವು ಸಹಾಯವನ್ನು ಪಡೆಯಬೇಕು

  • ತಾವು ಆಕರ್ಷಕವಾಗಿಲ್ಲ, ಕುರೂಪಿಯಾಗಿದ್ದೇವೆ ಅಥವಾ ದಪ್ಪವಾಗಿದ್ದೇವೆ ಎಂದು ಒಮ್ಮೊಮ್ಮೆ ಅನಿಸುವುದು.
  • ನಿಮ್ಮ ದೇಹದ ಆಕೃತಿ ಅಥವಾ ಸಿಸೇರಿಯನ್ ನಿಂದ ಉಂಟಾದ ಕಲೆಯ ಬಗ್ಗೆ ಚಿಂತಿತರಾಗುವುದು.
  • ಹೆರಿಗೆಯ ನಂತರ ಮೊದಲಿನ ಆಕೃತಿಗೆ ಮರಳಿರುವ ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳುವುದು.
  • ದೇಹದ ಆಕೃತಿಯ ಬಗ್ಗೆ ಮತ್ತೆ ಮತ್ತೆ ಯೋಚನೆಗಳು ಕಾಡುವುದು.
  • ನೀವು ಪದೇ ಪದೇ ಖಿನ್ನರಾಗುತ್ತಿದ್ದಲ್ಲಿ ಅಥವಾ ಅಳುತ್ತಿದ್ದಲ್ಲಿ.
  • ಒಂದು ವಾರಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ತೀವ್ರವಾಗಿ ಡಯಟ್ ಮಾಡುವುದು ಮತ್ತು ಬಿಂಜ್ ಈಟಿಂಗ್ ನಲ್ಲಿ ತೊಡಗುವುದು.

ದೇಹದ ಸೌಂದರ್ಯದ ಕುರಿತ ಯೋಚನೆಗಳನ್ನು ನಿಯಂತ್ರಿಸುವುದು:

ನೀವು ಒಬ್ಬ ತಾಯಿಯಾಗಿದ್ದು, ನಿಮ್ಮ ದೇಹದ ಆಕೃತಿ ಬಗ್ಗೆ ಚಿಂತಿತರಾಗಿದ್ದರೆ, ಈ ಕೆಳಗಿನ ಅಂಶಗಳು ನಿಮಗೆ ಸಮಾಧಾನ ನೀಡಬಲ್ಲವು:

  • ಗರ್ಭಧಾರಣೆಯ ಸಮಯದ ತೂಕವು ಶಿಶು ಜನನದ ನಂತರ ತಕ್ಷಣಕ್ಕೆ ಕಡಿಮೆಯಾಗುವುದಿಲ್ಲ. ಹೆಚ್ಚಿನ ಮಹಿಳೆಯರಿಗೆ ಮೊದಲಿನ ಆಕಾರಕ್ಕೆ ಮರಳಲು ತಿಂಗಳುಗಳೇ ಬೇಕಾಗುತ್ತದೆ.
  • ನಿಮ್ಮನ್ನು ನೀವು ಬೇರೆ ಮಹಿಳೆಯರೊಂದಿಗೆ ಅಥವಾ ನೀವು ಗರ್ಭಿಣಿಯಾಗುವ ಮೊದಲು ಇದ್ದ ಆಕೃತಿಗೆ ಹೋಲಿಸಿಕೊಳ್ಳಬೇಡಿ. ಪ್ರತಿ ಮಹಿಳೆಯ ವಿಷಯವೂ ಬೇರೆಯೇ ಆಗಿರುತ್ತದೆ. ಬೇರೆ ವ್ಯಕ್ತಿಯ ವಿಷಯದಲ್ಲಿ ನಡೆದಂತೆ ನಿಮ್ಮ ವಿಷಯದಲ್ಲೂ ನಡೆಬೇಕೆಂದೇನಿಲ್ಲ.
  • ಅವಸರದಲ್ಲಿ ವ್ಯಾಯಾಮ ಮಾಡಲು ಮುಂದಾಗಬೇಡಿ. ವ್ಯಾಯಾಮವನ್ನು ಆರಂಭಿಸಲು ಸೂಕ್ತ ಸಮಯದ ಬಗ್ಗೆ ಪ್ರಸೂತಿ ತಜ್ಞರ ಸಲಹೆ ಪಡೆಯಿರಿ.  ಕೆಲವು ಜಗ್ಗುವ, ಬಾಗುವ ಮತ್ತು ಪಾರ್ಕಿನಲ್ಲಿ ಓಡಾಡುವಂತಹ ವ್ಯಾಯಾಮಗಳಿಂದ ಆರಂಭಿಸಿ.  ಮಗುವನ್ನು ವಿಶೇಷವಾದ ಕೈಗಾಡಿ (ಪ್ರ್ಯಾಮ್) ಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗಿ. ಇದರಿಂದ ನಿಮಗೂ ತಾಜಾ ಗಾಳಿ ದೊರೆಯುತ್ತದೆ.
  • ನಿಮ್ಮ ತೂಕವು ಇಳಿಯುವವರೆಗೆ ನೀವು ಇತರ ರೀತಿಯಲ್ಲಿ ಸಜ್ಜುಗೊಳ್ಳಿ.- ಕೂದಲಿನ ಆರೈಕೆ, ಪೆಡಿಕ್ಯೂರ್ ಅಥವಾ ಮೆನಿಕ್ಯೂರ್. ನಿಮಗೆ ಒಪ್ಪುವ ಬಟ್ಟೆಗಳನ್ನು ಹಾಕಿಕೊಳ್ಳಿ. ಇದರಿಂದ ನಿಮಗೆ ನಿಮ್ಮ ದೇಹದ ಬಗ್ಗೆ ಚಿಂತೆಯು ಕಾಡುವುದಿಲ್ಲ.
  • ಹೆರಿಗೆ ನಂತರ ಬಹುಬೇಗ ತೆಳ್ಳಗಾಗುವ ಸೆಲೆಬ್ರಿಟಿಗಳೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ. ಅವರಿಗೆ ಮಗುವನ್ನು ನೋಡಿಕೊಳ್ಳಲು ಬೇರೆಯ ವ್ಯವಸ್ಥೆ ಇರುತ್ತದೆ ಮತ್ತು ಮೊದಲಿನಂತಾಗಲು ವೃತ್ತಿಪರ ಸಹಾಯ ದೊರೆಯುತ್ತದೆ. ನಿಮ್ಮ ಪರಿಸ್ಥಿತಿ ಬೇರೆಯೇ ಆಗಿರುತ್ತದೆ.
  • ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ. ಚಿಕ್ಕ ಪ್ರವಾಸಕ್ಕೆ ತೆರಳಿ, ವಿಶ್ರಾಂತಿ ಪಡೆಯಿರಿ ಅಥವಾ ಸ್ನೇಹಿತರೊಂದಿಗೆ ಕಾಫಿಗೆ ತೆರಳಿ.
  • ನಿಮ್ಮ ಅವಶ್ಯಕತೆಗಳಿಗೂ ಪ್ರಾಮುಖ್ಯತೆ ನೀಡಿ: ನೀವು ವಿಶ್ರಾಂತಿ ಪಡೆಯುವಾಗ ಅಥವಾ ವ್ಯಾಯಾಮ ಮಾಡುವಾಗ ಮನೆಯ ಸದಸ್ಯರು ಅಥವಾ ಪತಿಗೆ ಮಗುವನ್ನು ನೋಡಿಕೊಳ್ಳಲು ತಿಳಿಸಿ.

ಸಂಗಾತಿಯ ಮತ್ತು ಕುಟುಂಬದ ಸದಸ್ಯರ ಪಾತ್ರ: 
ದೇಹದ ಸೌಂದರ್ಯದ ಕುರಿತ ಮಹಿಳೆಯ ಯೋಚನೆಗಳನ್ನು ನಿಭಾಯಿಸಲು ಸಂಗಾತಿ ಮತ್ತು ಮನೆಯವರಯ ಹಲವು ರೀತಿಯಲ್ಲಿ ನೆರವಾಗಬಹುದು. ಕೆಲವೊಮ್ಮೆ ಮನೆಯ ಸದಸ್ಯರೇ ಆಕೆಯ ದೇಹದ ಆಕೃತಿ ಅಥವಾ ತೂಕದ ಬಗ್ಗೆ ವಿಮರ್ಶೆ ಮಾಡುತ್ತಾರೆ.

ಅಸುರಕ್ಷಿತ ಭಾವದಿಂದ ಬಳಲುತ್ತಿರುವ ಮಹಿಳೆಯು ತನ್ನ ದೇಹದ ತೂಕ ಮತ್ತು ಆಕೃತಿಯ ಬಗ್ಗೆ ತನ್ನ ಸಂಗಾತಿ ಅಥವಾ ಮನೆಯವರ ಬಳಿ ಹೇಳಿಕೊಂಡಾಗ ಅವರಿಂದ ಪ್ರತಿಯಾಗಿ ಭರವಸೆಯನ್ನು ನಿರೀಕ್ಷಿಸುತ್ತಾಳೆ. ಆಕೆಯ ಚಿಂತೆಯನ್ನು ತಳ್ಳಿಹಾಕುವ ಬದಲು, ಅವಳಿಗೆ ತನ್ನ ಯೋಚನೆಗಳನ್ನು ನಿಭಾಯಿಸಲು ಸಹಾಯ ಮಾಡಿ.

ತಜ್ಞರ ಪ್ರಕಾರ ನೂತನ ತಾಯಂದಿರಲ್ಲಿ ಹೆಚ್ಚಿನ ಬಾರಿ ದೇಹದ ಆಕೃತಿಯ ಕುರಿತ ಯೋಚನೆಯ ಸುತ್ತಲಿನವರ ಪ್ರತಿಕ್ರಿಯೆಗಳಿಂದ ಉಂಟಾಗಿರುತ್ತದೆ. ಆದ್ದರಿಂದ ತೂಕ ಕಳೆದುಕೊಂಡಿಲ್ಲವೆಂದು ಆಕೆಯನ್ನು ಟೀಕಿಸಬೇಡಿ. ನೀವು ಕೆಲ ಸಮಯ ಮಗುವನ್ನು ನೋಡಿಕೊಳ್ಳುವ ಮೂಲಕ ಆಕೆಗೆ ತನಗಾಗಿ ಸ್ವಲ್ಪ ಸಮಯ ಕಳೆಯಲು ನೆರವಾಗಿ.

ಆಕೆಯು ಈ ವಿಷಯದಲ್ಲಿ ಬಹುವಾಗಿ ಚಿಂತಿತಳಾಗಿದ್ದರೆ ತಜ್ಞರ ಸಹಾಯ ಪಡೆಯಲು ಪ್ರೋತ್ಸಾಹಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org