ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ ಕುಟುಂಬದವರ ಪಾತ್ರ

ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ ಕುಟುಂಬದವರ ಪಾತ್ರ

ಮಾನಸಿಕ ಸಮಸ್ಯೆ ಇರುವ ತಾಯಂದಿರಿಗೆ ಪತಿ ಹಾಗೂ ಕುಟುಂಬದವರಿಂದ ದೈಹಿಕ ಹಾಗೂ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.

ಮಗುವಿನ ಜನನದ ಸಂದರ್ಭದಲ್ಲಿ ತಾಯಿಗೆ ಮಾನಸಿಕ ಸಮಸ್ಯೆ ಉಂಟಾದಾಗ, ಅಥವಾ ಮೋದಲೇ ಖಾಯಿಲೆಯಿದ್ದರೆ, ಆಕೆಗೆ ದೈಹಿಕ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಬೆಂಬಲದ ಅಗತ್ಯವಿರುತ್ತದೆ. ಕುಟುಂಬದವರು ಮಗುವಿನ ಕಾಳಜಿ ತೆಗೆದುಕೊಳ್ಳಲು ಸಹಾಯ ಮಾಡಿ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.

  • ತಾಯಿಗೆ ಮಾನಸಿಕ ಅನಾರೋಗ್ಯವಿರುವುದನ್ನು ತಿಳಿದ ಆಕೆಯ ಕುಟುಂಬದವರು ಮತ್ತು ಪತಿ ಅವಳಿಂದ ಅಂತರ ಕಾಯ್ದುಕೊಳ್ಳುವುದು ತಪ್ಪು. ಮಾನಸಿಕ ತಜ್ಞರೊಂದಿಗೆ ಮಾತನಾಡಿ ಆಕೆಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು.  ಆಕೆ ಮೊದಲಿನಂತಾಗುವುದಕ್ಕೆ ನೀವು ಹೇಗೆ ಸಹಾಯ ಮಾಡಬಹುದು ಹಾಗೂ ಮತ್ತು ಖಾಯಿಲೆಯನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯಬೇಕು.
  • ಕೌಟುಂಬಿಕ ದೌರ್ಜನ್ಯ ನಿಷಿದ್ಧ. ಇದು ಯಾವ ಸಮಸ್ಯೆಗೂ ಪರಿಹಾರವಲ್ಲ
  • ತಾಯಿಗೆ ಮಗುವಿನೊಡನೆ ಹೊಂದಿಕೊಳ್ಳಲು ಸಮಸ್ಯೆಯಾದಲ್ಲಿ, ಆಕೆಯನ್ನು ಬಲವಂತ ಮಾಡಬಾರದು. ಹೊಂದಾಣಿಕೆಗೆ ಸಮಯಾವಕಾಶ ಬೇಕು.
  • ಆಕೆಯ ಭಾವನಾತ್ಮಕ ಏರಿಳಿತವನ್ನು ಅರ್ಥಮಾಡಿಕೊಳ್ಳಿ ಮತ್ತು ಬೆಂಬಲಿಸಿ.
  • ತಾಯಿಯ ಔಷಧೋಪಚಾರಕ್ಕೆ ತಕ್ಕಂತೆ ಮಗುವಿನ ಸ್ತನ್ಯಪಾನದ ಸಮಯ ನಿಗದಿ ಮಾಡಿ.
  • ಮಗುವಿಗೆ ಸರಿಯಾಗಿ ಆಹಾರ ದೊರೆಯುವಂತೆ ಮತ್ತು ಸರಿಯಾದ ವೇಳೆಗೆ ಲಸಿಕೆ ದೊರೆಯುವಂತೆ ನೋಡಿಕೊಳ್ಳಿ.
  • ಪ್ರಸವಾನಂತರದ ಮಾನಸಿಕ ಆರೋಗ್ಯ ಸಮಸ್ಯೆಯ ಬಗ್ಗೆ ನೀವು ಅರ್ಥ ಮಾಡಿಕೊಂಡು, ನಿಮ್ಮ ಕುಟುಂಬದವರಿಗೂ ಅರ್ಥಮಾಡಿಸಿ.
  • ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿರಿ ಮತ್ತು ನಿಮ್ಮ ಅನುಮಾನಗಳನ್ನುಪರಿಹರಿಸಿಕೊಳ್ಳಿ.
  • ಮನೆಯಲ್ಲಿ ಅರೈಕೆ ಮಾಡುತ್ತಿರುವಾಗ ಆತಂಕ ಪಡುವ ಲಕ್ಷಣಗಳನ್ನು ಗಮನಿಸಿ. ವೈದ್ಯರ ಗಮನಕ್ಕೆ ತನ್ನಿ.
  • ಪ್ರಸೂತಿತಜ್ಞರೊಂದಿಗೆ ಚರ್ಚಿಸಿ, ಮುಂದಿನ ಮಗು ಪಡೆಯುವ ಬಗ್ಗೆ ಯೋಜಿಸಿ.
  • ಅಪರೂಪದ ಕೇಸುಗಳಲ್ಲಿ ತಾಯಿ, ಮಗುವಿನ ಜೊತೆ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಲ್ಲಿ, ಮಗುವಿನ ಆರೈಕೆಯ ಜವಾಬ್ದಾರಿಯನ್ನು ಪೂರ್ಣವಾಗಿ ವಹಿಸಿಕೊಳ್ಳಿ. ಮನೋವೈದ್ಯರ ಸಲಹೆಯಂತೆ ಮಗುವನ್ನು ತಾಯಿಯ ಜೊತೆ ಬಿಡಿ.

ನಿಮ್ಮ ಭಾವನಾತ್ಮಕ ಸಂಗತಿಗಳ ಕಡೆಗೂ ಗಮನಕೊಡಿ. ಮಾನಸಿಕ ಅನಾರೋಗ್ಯವಿರುವ ವ್ಯಕ್ತಿಯ ಜೊತೆಗೆ ನವಜಾತ ಶಿಶುವನ್ನೂ ನೋಡಿಕೊಳ್ಳುವುದು ಅತ್ಯಂತ ಶ್ರಮದಾಯಕ. ನಿಮ್ಮ ಮನೋವೈದ್ಯರು ನಿಮಗೆ ಸಪೋರ್ಟ್ ಗ್ರೂಪನ್ನು ಪರಿಚಯಿಸಬಹುದು. ನಿಮ್ಮ ಆಲೋಚನೆಗಳನ್ನು ನಿಯಂತ್ರಣಕ್ಕೆ ತರಲು ಆಪ್ತಸಮಾಲೋಚಕರ ಸಹಾಯವನ್ನೂ ಪಡೆಯಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org