ವ್ಯಸನ ಮುಕ್ತರಾಗುವದು

ಪ್ರಸ್ತುತ ದಿನಗಳಲ್ಲಿ ಭಾರತ ಎದುರಿಸುತ್ತಿರುವ ದೊಡ್ಡಸಮಸ್ಯೆ ಎಂದರೆ, ಮಾದಕವಸ್ತುಗಳ ದುರುಪಯೋಗ. ವ್ಯಸನಕ್ಕೆ ತುತ್ತಾದ ವ್ಯಕ್ತಿಯ ಮೇಲೆ ಮಾತ್ರವಲ್ಲದೆ, ಅವರ ಕುಟುಂಬ, ಸ್ನೇಹಿತರು, ಜೊತೆ ಕೆಲಸಗಾರರು ಮತ್ತು ಸಮುದಾಯದ ಮೇಲೂ ಇದು ಅಗಾಧವಾದ ಪರಿಣಾಮ ಬೀರುತ್ತದೆ. ಮಾದಕವಸ್ತುವಿನ ದುರುಪಯೋಗ ನಮ್ಮ ಕಲ್ಪನೆಗೂ ಮೀರಿದ್ದಾಗಿದೆ.

ದುರದೃಷ್ಟವಶಾತ್, ಮಾದಕ ವಸ್ತುಗಳ ದುರುಪಯೋಗ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಜನರು ದುರ್ಬಲರು ಮತ್ತು ಅವರಲ್ಲಿ ಇಚ್ಛಾಶಕ್ತಿ ಕಡಿಮೆ ಎಂದೇ ಪರಿಗಣಿಸಲ್ಪಡುತ್ತಾರೆ.

ವಾಸ್ತವವಾಗಿ, ವ್ಯಸನವು ಒಂದು ಸಂಕೀರ್ಣ ಸ್ವರೂಪದ ಸಮಸ್ಯೆ. ಇದು ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯ ಚಿಂತನೆ ಹಾಗೂ ವಿಚಾರ ಮಾಡಿ ನಿರ್ಧರಿಸುವ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ವ್ಯಸನದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಮುದಾಯದ ಸಹಕಾರದಿಂದ ವ್ಯಸನ ಮುಕ್ತರಾಗಬಹುದು. ಅವರ ಸಮಸ್ಯೆ ನಮಗೆ ಅರ್ಥವಾದರೆ, ಅವರಿಗೆ ಬೆಂಬಲ ನೀಡಿ ಚೇತರಿಸಿ ಕೊಳ್ಳಲು ಸಹಾಯ ಮಾಡಲು ಸಾಧ್ಯ.

ಈ ಅಧ್ಯಾಯವು ವಿವಿಧ ಮಾದಕ ವಸ್ತುಗಳ ಪ್ರಭಾವದ ಕುರಿತಾಗಿ, ಮುಖ್ಯವಾಗಿ ಮದ್ಯವ್ಯಸನ, ತಂಬಾಕುವ್ಯಸನ ಮತ್ತು ಡ್ರಗ್ (ಮಾದಕದ್ರವ್ಯ) ವ್ಯಸನಗಳ ಕುರಿತಾಗಿ ಗಮನವನ್ನು ಕೇಂದ್ರೀಕರಿಸುತ್ತದೆ.

ಹೆಚ್ಚಿನ ಮಾಹಿತಿ

ಇನ್ನೂ ಓದಿ