ಆತ್ಮಹತ್ಯೆ ತಡೆಗಟ್ಟುವಿಕೆ

ಪ್ರತಿ ವರ್ಷ ಭಾರತದಲ್ಲಿ ೧ ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ (NCRB) ದಾಖಲೆಯಂತೆ ಕಳೆದ ಒಂದು ದಶಕದಲ್ಲಿ (2002-2012) ದೇಶದಲ್ಲಿನ ಆತ್ಮಹತ್ಯೆ ಪ್ರಮಾಣ ಶೇ.೨೨.೭ರಷ್ಟು ಹೆಚ್ಚಾಗಿದೆ.

ಆತ್ಮಹತ್ಯೆಗೆ ಕಾರಣ ಸಮಾಜದಲ್ಲಿನ ವಲಯ ಮತ್ತು ಸಂಸ್ಕೃತಿಗಳಿಗೆ ತಕ್ಕಂತೆ ಬೇರೆಯಾಗುತ್ತದೆ. ಆದರೆ ನಾವು ಆತ್ಮಹತ್ಯೆಯಿಂದಾಗುವ ಸಾವನ್ನು ತಡೆಗಟ್ಟಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆತ್ಮಹತ್ಯೆಯ ಪ್ರಯತ್ನ ಮಾಡುವವರು ಸಹಾಯಕ್ಕಾಗಿ ಬೇಡುತಿದ್ದಾರೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದನ್ನು ಮಾನಸಿಕ ತುರ್ತು ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆತ್ಮಹತ್ಯೆ ತಪ್ಪಿಸುವುದು ನಮ್ಮ ಹಾಗೂ ಸಮಾಜದ ಜವಾಬ್ದಾರಿಯಾಗಿರುತ್ತದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಸಾವು ಕುಟುಂಬದ, ಸ್ನೇಹಿತರ, ಸಹೋದ್ಯೋಗಿಗಳ ಮೇಲೆ ಮತ್ತು ಪರಿಚಯದ ವ್ಯಕ್ತಿಗಳ ಮೇಲೆ ಆಘಾದ ಪರಿಣಾಮ ಬೀರುತ್ತದೆ. ಈ ವಿಭಾಗದಲ್ಲಿ ನಾವು ಆತ್ಮಹತ್ಯೆಯ ಸ್ಥಿತಿಗತಿ, ಹೇಗೆ ಸಂಭವಿಸುತ್ತದೆ ಮತ್ತು ಸಾವನ್ನು ತಡೆಗಟ್ಟುವಲ್ಲಿ ಹೇಗೆ ಪ್ರತಿಯೊಬ್ಬರು ಪಾತ್ರ ವಹಿಸಬಹುದು ಎಂದು ನೋಡುತ್ತೇವೆ. ಸರಳವಾದ ಸಂಭಾಷಣೆಯೂ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ. ಹೇಗೆ ಆತ್ಮಹತ್ಯೆ ತಡೆಗಟ್ಟಬಹುದು ಎಂಬುದನ್ನು ಅರಿತುಕೊಳ್ಳಲು ಈ ವಿಭಾಗ ಓದಿ…

ಹೆಚ್ಚಿನ ಮಾಹಿತಿ

ಇನ್ನೂ ಓದಿ