ಪೋಷಕರನ್ನು ಸಮಾಲೋಚನೆಯಲ್ಲಿ ಸೇರಿಸಿಕೊಳ್ಳಬೇಕು

ಸಾಮಾನ್ಯವಾಗಿ ವಿದ್ಯಾರ್ಥಿಯ ಪೋಷಕರೊಡನೆ ಶಿಕ್ಷಕರ ಮಾತು ಮಿತವಾಗಿರುತ್ತದೆ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಇರುತ್ತದೆ. ವಿದ್ಯಾರ್ಥಿಯ ಸಮಸ್ಯೆಯನ್ನು ಕಾಲೇಜಿನ ಆಪ್ತಸಮಾಲೋಚಕರು ಬಗೆಹರಿಸಲು ಸಾಧ್ಯವಾಗದೆ ಇದ್ದರೆ  ಶಿಕ್ಷಕರೇ ಪೋಷಕರಿಗೆ ತಿಳಿಸಬೇಕಾಗುತ್ತದೆ.  ವಿದ್ಯಾರ್ಥಿಯು ಅದಾಗಲೇ ಶಿಕ್ಷಕರ ಬಳಿಯಲ್ಲಿ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಿದ್ದರೆ ಆಗ ಗೌಪ್ಯತೆಯ ಪ್ರಶ್ನೆಯೇಳುತ್ತದೆ. ಈ ಸುಳಿಯೊಳಗೆ ಪೋಷಕರನ್ನು ಕರೆತರಬಹುದೆಂದು ಶಿಕ್ಷಕನು ಹೇಗೆ ನಿರ್ಧರಿಸುತ್ತಾನೆ?

ಬಹಳಷ್ಟು ಜನ ಆಪ್ತಸಮಾಲೋಚಕರು ಒಪ್ಪಿಗೆ ಪತ್ರವೊಂದಕ್ಕೆ ಸಹಿ ಮಾಡಲು ವಿದ್ಯಾರ್ಥಿಗಳನ್ನು ಕೇಳುತ್ತಾರೆ, ಮುಂದೆ  ಅದನ್ನೇ ಪಾಲಕರು ಮತ್ತು ಕೆಲವು ಸಂದರ್ಭದಲ್ಲಿ ಕಾನೂನಿಗೆ ತಿಳಿಸಬೇಕಾಗಬಹುದು. ಆ ಸಂದರ್ಭಗಳೆಂದರೆ

  • ವಿದ್ಯಾರ್ಥಿ ತನಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದ್ದರೆ
  • ಬೇರೆಯವರಿಗೆ ಹಾನಿ ಮಾಡುವಂತಿದ್ದರೆ
  • ಮಾದಕ ದ್ರವ್ಯ ಮತ್ತು ಆಯುಧಗಳನ್ನು ಹೊಂದಿದಂಥ ಕಾನೂನುಬಾಹಿರ ಚಟುವಟಿಕೆಗಳು

ವಿದ್ಯಾರ್ಥಿಗೆ ಆತ್ಮವಿಶ್ವಾಸದ ಕೊರತೆ ಇದ್ದಾಗ ಮತ್ತು ಆತ ತರಗತಿಗೆ ಗೈರಾಗುತ್ತಿದ್ದಾಗ ಇದು ಅಗತ್ಯವಾಗಬಹುದು. ಆ ಸಂದರ್ಭದಲ್ಲಿ ಪೋಷಕರು ಕೂಡ ವಿದ್ಯಾಲಯಕ್ಕೆ ಸಮಸ್ಯೆ ನಿವಾರಣೆಯಲ್ಲಿ ನೆರವಾಗಬಹುದಾಗಿದೆ.

ಪೋಷಕರ ಜೊತೆ ಮಾತಾಡಬೇಕಾದ್ದು ಹೇಗೆ?

ಆಪ್ತಸಮಾಲೋಚಕರಿಲ್ಲದ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಯ ಮಂಕುತನ, ಕೋಪ, ಗೀಳು ಇತ್ಯಾದಿಗಳ ಬಗ್ಗೆ ಪೋಷಕರಿಗೆ ಹೇಳಬಹುದು. ಅದು ಹೇಗೆಂದರೆ ವಿದ್ಯಾರ್ಥಿಯ ವೈಯಕ್ತಿಕ ವಿವರಗಳನ್ನು ಬಯಲು ಮಾಡದೆ ಮತ್ತು ಅವನನ್ನು ಇಂಥವನೆಂದು ಹಣೆಪಟ್ಟಿ ಹಚ್ಚದೆ ಮಾತಾಡಬೇಕು.

ಇಂಥವನ್ನೆಲ್ಲ ತಂದೆತಾಯಿಯರಿಗೆ ಹೇಳುವಾಗ ಸಂತುಲಿತವಾದ ವಾಕ್ಯಗಳನ್ನು ಬಳಸುವುದು ಒಳ್ಳೆಯದು. ಉದಾ: "ನಾನು ಕಂಡಂತೆ ಆ ವಿದ್ಯಾರ್ಥಿ.." ಅಥವಾ  "ಇದೊಂದು ವರ್ತನೆ ಬಗ್ಗೆ ನಾನು ಚಿಂತಿಸುತ್ತಿದ್ದೇನೆ.." ಇತ್ಯಾದಿ. ಇದಲ್ಲದೆ ಹಿಂದಿನ ತನ್ನ ಅನುಭವಗಳ ಕಥೆಯನ್ನು ಹೇಳುವಮೂಲಕ ಮತ್ತು ಅದಕ್ಕೆ ಕಂಡುಕೊಂಡ ಸಮಾಧಾನಗಳ ಮೂಲಕ ಇದನ್ನು ಪಾಲಕರಿಗೆ ತಿಳಿಸಬಹುದಾಗಿದೆ. ಉದಾ- ಹಳೆಯ ವಿದ್ಯಾರ್ಥಿಯೊಬ್ಬನಿಗೆ ಇದೇ ಸಮಸ್ಯೆ ಇದ್ದಾಗ ಅವ ಆಪ್ತಸಮಾಲೋಚಕರನ್ನು ಕಂಡು ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಂಡ ಎಂದು ತಿಳಿಸಬಹುದು.

ವಿದ್ಯಾರ್ಥಿಯ ಒಪ್ಪಿಗೆ:

ಆತ್ಮಹತ್ಯೆಯ ಭಾವ, ಮಾದಕ ವ್ಯಸನ, ಲೈಂಗಿಕ ಅಪರಾಧಗಳ ಬಗ್ಗೆ ವಿದ್ಯಾರ್ಥಿ ಶಿಕ್ಷಕರಿಗೆ ಹೇಳಿದಾಗ ಅವನಿಗೆ ಸಮಾಧಾನ ಹೇಳಿಯಾದ ಬಳಿಕ ಅದನ್ನು ಆಪ್ತಸಮಾಲೋಚಕರಿಗೆ ಅಥವಾ ಪೋಷಕರಿಗೆ ಹೇಳುವ ಮುನ್ನ ವಿದ್ಯಾರ್ಥಿಯ ಒಪ್ಪಿಗೆ ತೆಗೆದುಕೊಳ್ಳಬೇಕು.

ಹೀಗೆ ಮಾಡುವುದರಿಂದ  ವಿದ್ಯಾರ್ಥಿ ಶಿಕ್ಷಕರ ಮೇಲೆ ಹೆಚ್ಚು ವಿಶ್ವಾಸಪಡುತ್ತಾನೆ ಮತ್ತು ಅದರಿಂದ ಅವರಿಬ್ಬರ ನಡುವೆ ವಿಶ್ವಾಸದ ಸಂಬಂಧವಿರುತ್ತದೆ. ಒಂದು ವೇಳೆ  ವಿದ್ಯಾರ್ಥಿ ಒಪ್ಪದಿದ್ದರೆ ವಿದ್ಯಾರ್ಥಿಗೆ ಅಪಾಯವಿದೆ ಎಂದ ಪಕ್ಷದಲ್ಲಿ ಶಿಕ್ಷಕರು ಪಾಲಕರಿಗೆ ತಿಳಿಸಬೇಕು. ಸಮಸ್ಯೆಯ ಸರಿಯಾದ ನಿವಾರಣೆಗಾಗಿ ಶಿಕ್ಷಕ ಅಥವಾ ಆಪ್ತಸಮಾಲೋಚಕರು ಪಾಲಕರೊಡನೆ ಕೂಡಿ ಪ್ರಯತ್ನ ಮಾಡಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org