ಮಗುವಿಗೆ ಮಾನಸಿಕ ತೊಂದರೆಯಿದೆಯೆಂದು ಗೊತ್ತಾದಾಗ

ನಿಮ್ಮ ಸಂಗಾತಿ, ತಂದೆ/ತಾಯಿ, ಒಡಹುಟ್ಟಿದವರು  ಅಥವಾ ನೀವು ಅನಾರೋಗ್ಯದಿಂದಿದ್ದರೆ ಇದನ್ನು ನಿಭಾಯಿಸುವುದು ಸುಲಭ. ಆದರೆ ನಿಮ್ಮ ಮಗುವು  ಕಾಯಿಲೆಗೆ ತುತ್ತಾದಾಗ ಅದು ಬೇರೆ ವಿಷಯ. ಇನ್ನು  ಮಾನಸಿಕ  ಅಸ್ವಸ್ಥತೆಯಾದರಂತೂ  ಪರಿಸ್ಥಿತಿ ಬಹಳ ಗಂಭೀರವಾಗುತ್ತದೆ. ಇದನ್ನು ವಿವರಿಸುವ ಪ್ರಯತ್ನ ಮಾಡುತ್ತಿದ್ದೇನೆ.

ನಿಮ್ಮ ಮಗುವಿಗೆ ಮಾನಸಿಕ ಅಸ್ವಸ್ಥತೆ ಉಂಟಾಗಿದೆ ಎಂದು ಗೊತ್ತಾದಾಗ ಏನಾಗುತ್ತದೆ? ಭಯ ಮತ್ತು ಆತಂಕ, ಅಪಮಾನ ಮತ್ತು ಮುಜುಗರ , ಗೊಂದಲ ಮತ್ತು ಗಾಭರಿ, ಅಪನಂಬಿಕೆ ಮತ್ತು ನೋವು ನಿಮ್ಮನ್ನು ಆವರಿಸುತ್ತದೆ. ಪ್ರಪಂಚವು  ನಿಮ್ಮ ಬಗ್ಗೆ,  ನಿಮ್ಮ ಮಗುವಿನ ಬಗ್ಗೆ ಏನು ಹೇಳುತ್ತದೆಂಬ ಭಯ.  ನನಗೇ ಏಕೆ?  ನನ್ನ ಮಗುವಿಗೇ ಏಕೆ ಹೀಗಾಯಿತು?  ಎಂಬ  ತಪ್ಪಿತಸ್ಥ ಮನೋಭಾವ ಕಾಡುತ್ತದೆ. ಕುಸಿಯುವ ಭಾವನೆ ಉಂಟಾಗುತ್ತದೆ.  

ಪೋಷಕನಾಗಿ ಏನೋ ತಪ್ಪು ಮಾಡಿದೆ, ಕೆಟ್ಟ ಜೀನ್ ತಪ್ಪಾಗಿಹೊಂದಿದ್ದೇನೆ,  ಏನೋ ಮಾಡಬಾರದ್ದನ್ನು ಮಾಡಿದೆ, ಸರಿಯಾದ ವಾತಾವರಣ ರೂಪಿಸಲಿಲ್ಲ ಎಂಬ ಭಾವನೆ, ಮಗುವನ್ನು ಈ ಸ್ಥಿತಿಗೆ ತಳ್ಳಿದೆನಲ್ಲಾ ಎಂಬ ಭಾವನೆ. ಸಾಕಷ್ಟು ಭಾವೋನ್ಮಾದ! ಬಹಳ ಜನರು ತೊಂದರೆ  ಇರುವುದನ್ನು ಗುರುತಿಸಲು ಹೆದರುತ್ತಾರೆ, ನಿರಾಕರಿಸುತ್ತಾರೆ, ಅವುಗಳನ್ನು ಪರಿಹರಿಸಲು ಸಮಯ ಕಳೆಯುವುದಿಲ್ಲ.

ಒಂದು ಕಡೆ, ಏನೂ ಆಗಿಲ್ಲ ಎಂದು ಮನಸ್ಸಿಗೆ ಸಮಾಧಾನ ತರುವ ಮನೋಭಾವ, ಇನ್ನೊಂದೆಡೆ,ನಮ್ಮ ಮಗುವಿನ ಭವಿಷ್ಯವೇನು ಎಂಬ ಚಿಂತೆ. ಮಗು ಸ್ವತಂತ್ರವಾಗಿರುತ್ತದೆಯೇ, ಅದರ ಬದುಕು ಹೇಗಿರುತ್ತದೆ? ಒಬ್ಬ ವ್ಯಕ್ತಿಯಾಗಿ, ಸಂಗಾತಿಯಾಗಿ ಇದರಿಂದ ನನ್ನ ಭವಿಷ್ಯದ ಮೇಲೆ ಏನು ಪರಿಣಾಮ ಉಂಟಾಗುತ್ತದೆ?  ಬಹಳ ಸಲ ಇದು ಮದುವೆಯ ಸಂಬಂಧದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ದಂಪತಿಗಳಾಗಿ  ದೋಷವಿರುವ ಜೀನು ಹೊಂದಿರುವ ತಪ್ಪಿತಸ್ಥ ಭಾವನೆ ಕಾಡುತ್ತದೆ, ಇದರಿಂದ ಪರಸ್ಪರ ಒಬ್ಬರೊನ್ನೊಬ್ಬರು ತೆಗಳುವುದು, ದೂಷಿಸುವುದು ನಡೆಯುತ್ತದೆ. ಇದು ಎಷ್ಟೇ ವ್ಯರ್ಥವಾದರೂ ವಾಸ್ತವವನ್ನು ನಂಬಲು ಎಷ್ಟೇ ಕಷ್ಟವಾದರೂ  ಇದು ಬಹಳ ಶಿಕ್ಷಿತ, ತಿಳಿವಳಿಕೆ ಹೊಂದಿದವರಲ್ಲೂ  ನಡೆಯುತ್ತದೆ.
ನೇರವಾಗಿ ಸಮಸ್ಯೆಯನ್ನು ಎದುರಿಸುವ ಬದಲು ಅದನ್ನು ನಿರಾಕರಿಸಿ ದೂಷಣೆಯಲ್ಲೇ ಹೆಚ್ಚು ಕಾಲ ವ್ಯರ್ತೆಮಾಡುವುದೂ ಉಂಟು. ಆದ್ದರಿಂದ ಸಮಸ್ಯೆ ಬಗ್ಗೆ ವೈದ್ಯರೊಡನೆ, ಅಥವಾ ತಜ್ಞರೊಡನೆ ಚರ್ಚಿಸಿ ಏನಾಗಿದೆಯೆಂದು ಕೇಳಿ, ಎರಡನೆಯ ಅಭಿಪ್ರಾಯ ಪಡೆಯಬೇಕು ಮತ್ತು ಅದನ್ನು ಖಚಿತಗೊಳಿಸಬೇಕು. ಮುಂದೆ ಎಷ್ಟರಮಟ್ಟಿಗೆ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಬೇಕು.
ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಅದನ್ನು ಮಗುವಿಗೆ ಹೇಗೆ ತಿಳಿಸುವುದೆಂದು ಹೆಚ್ಚು ಹೆಚ್ಚು ಅರಿಯಬೇಕು. ಹಾಗೆಯೇ  ಕುಟುಂಬದ ಬೇರೆ ಸದಸ್ಯರಿಗೂ, ಮಗುವಿಗೆ ಹೇಗೆ ನೆರವು ನೀಡಬೇಕೆಂದು ವಿವರಿಸಬೇಕು. ಹಾಗೆಯೇ ಸುತ್ತಮುತ್ತಲಿನವರಿಗೂ ತಿಳಿಸಿಬೇಕು.

ಇದೆಲ್ಲರ ಜೊತೆ ಒಂದು ವಿಷಯ ಮನಸ್ಸಿನಲ್ಲಿ ಇರಬೇಕು. ಅದೇನೆಂದರೆ ತಪ್ಪು ನಿಮ್ಮದೂ ಅಲ್ಲ , ಮಗುವಿನದೂ ಅಲ್ಲ ಎಂದು ಒಪ್ಪಿ ಮುಂದುವರೆಯಬೇಕಷ್ಟೆ. ಉದಾಹರಣೆಗೆ, ಡಾಂಡಾಲಿಯನ್ ಗಿಡ ಯಾವುದೇ ಕಡೆ ಬೇರು ಬಿಟ್ಟು ಉಳಿಯುತ್ತದೆ. ಬಹಳಷ್ಟು  ಮಕ್ಕಳು ಈ ರೀತಿ ಇರುತ್ತಾರೆ. ಆದರೆ ನಿಮ್ಮ ಮಗು ಆರ್ಕಿಡ್ ತರಹ ಬಹಳ ನಾಜೂಕು,  ಆದರೆ ಸುಂದರವಾದದ್ದು. ವಿಶೇಷ ಆರೈಕೆ ನೀಡಿದರೆ ಚೆನ್ನಾಗಿ ಬೆಳೆಯುತ್ತಾರೆ. ಆದ್ದರಿಂದ ಸರಿಯಾದ ಪಾಲನೆ ಮತ್ತು ಪರಿಸರ ನೀಡಿದರೆ  ಮಗು ಸೃಜನಶೀಲರಾಗಿ, ಯಶಸ್ವಿಯಾಗಿ ಹಾಗೂ ಸಮಾಜದ ಪ್ರೀತಿ ಪಾತ್ರರಾಗಿ ಬೆಳೆಯುತ್ತಾರೆ.

ಇದರ ಅರ್ಥವೇನು? ಆರ್ಕಿಡನ್ನು ಪೋಷಿಸಲು ಸರಿಯಾದ ಪರಿಸರ ಯಾವುದು?
  • ಒಪ್ಪಿಗೆಯು ಬಹು ಮುಖ್ಯ: ಮಗುವಿನ ಸ್ಥಿತಿಯನ್ನು ಒಪ್ಪಿಕೊಳ್ಳಿ. ಅದು ತನ್ನ ತಪ್ಪಲ್ಲ ಎಂಬುದನ್ನು ಮನವರಿಕೆ ಮಾಡಿ.

  • ಮಗುವಿನ ಭಾವನೆಗಳನ್ನು ಆದರಿಸಿ: ಮಕ್ಕಳು ಶಾಲೆ ಮತ್ತು ಇತರರ ಮುಂದೆ ಪರಸ್ಪರ ಒಟ್ಟಿಗಿರುತ್ತಾರೆ.  ಅವರಿಗೆ ಸ್ವಾತಂತ್ರ ಕೊಡಿ, ಮನೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಬಿಚ್ಚುಮನಸ್ಸಿನಿಂದ ಇರಲು  ಬಿಡಿ.   ಅವರ ಖಾಸಗಿ ಅಗತ್ಯಗಳನ್ನು ಪೂರೈಸಿ.

  •  ಗಮನವಿಟ್ಟು ಕೇಳಿ

  •  ಷರತ್ತಿಲ್ಲದೆ ಪ್ರೀತಿಸಿ

  • ಯಾವಾಗಲೂ ಬಿಚ್ಚುಮನಸ್ಸಿನಿಂದ ಮಾತನಾಡಲು ಪ್ರೋತ್ಸಾಹ ನೀಡಿ. ಶಾಲಾ ಪಾಠಗಳ ಬದಲು ಭಾವನೆಗಳು, ವಿಚಾರಗಳು, ನೈತಿಕ ಸಮಸ್ಯೆಗಳು ಅಥವಾ ವೈಫಲ್ಯಗಳ ಬಗ್ಗೆ ಮಕ್ಕಳ ಜೊತೆ ಮಾತನಾಡಿ.

  • ತಕ್ಷಣ ಮತ್ತು ಎಲ್ಲರ ಮುಂದೆ ತುಂಬು ಭಾವನೆಯಿಂದ ಹೊಗಳಿ, ಚಿಕ್ಕ ಸಾಧನೆಯಾದರೂ ಪರವಾಗಿಲ್ಲ, ಆದರೆ ತೆಗಳಬೇಡಿ, ಅದನ್ನು  ಬೇರೆ ಸಮಯದಲ್ಲಿ ಮಗುವಿಗೆ ಮಾತ್ರ ಸೂಕ್ಷ್ಮವಾಗಿ ತಿಳಿಸಿಮೆತ್ತನೆ. ಸಕಾರಾತ್ಮ ಪ್ರತಿಕ್ರಿಯೆಯು ಯಾವಾಗಲೂ ನಕಾರಾತ್ಮಕ ಪ್ರತಿಕ್ರಿಯೆಗಿಂತ ಹೆಚ್ಚು ಪ್ರಬಲವಾಗಿರುತ್ತದೆ.

  •  ಪ್ರತಿಯೊಂದು ಮಗುವು ಅನನ್ಯವಾದುದು ಮತ್ತು ತನ್ನದೇ ಸಾಮರ್ಥ್ಯ ಹೊಂದಿರುತ್ತದೆ ಎಂದು ಅರಿತು ನಿಮ್ಮ ಮಗುವಿನ ಸಾಮರ್ಥ್ಯ ಅರಿತು ಅದನ್ನು ಪೋಷಿಸಿ.  

  •  ಅವರು ಸಂಬಂಧಗಳನ್ನು ಬೆಳೆಸಿಕೊಳ್ಳಲು ಕಷ್ಟಪಡಬಹುದು. ಸಹಪಾಠಿಗಳು ಅಥವಾ ಸ್ನೇಹಿತರ ನಡುವಿನ ಸಂಬಂಧಗಳಲ್ಲಿ ಕಷ್ಟಪಡಬಹುದು. ಸಾಧ್ಯವಾದಷ್ಟು ಸ್ನೇಹಿತರೊಡನೆ ಬೆರೆಯಲು ಸಹಾಯ ಮಾಡಿ. ಇದರ ಜೊತೆಗೆ ಅವರಿಗೆ ಜೀವರಕ್ಷಾ ಕವಚ ಬೇಕು, ಬೆಂಬಲ ಬೇಕು. ಅದು ನೀವಾಗಬೇಕು.

  • ಬಹಳಮುಖ್ಯವಾಗಿ,  ಮಗುವಿಗೆ ಮಾತ್ರವಲ್ಲ ನೀವೂ ಕೂಡ ಆಪ್ತಸಲಹೆ ಪಡೆಯಿರಿ. ಏಕೆಂದರೆ , ನಿಮ್ಮ ಮಗುವಿಗಾಗಿ ಇದನ್ನೆಲ್ಲಾ ಮಾಡಬೇಕೆಂದರೆ ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ನಿಮ್ಮೊಳಗೆ ಬೇಯುತ್ತಿರುವ ಬೇಡದ, ಉಪಯೋಗಕ್ಕೆ ಬಾರದ ಭಾವನಾತ್ಮಕ ತಳಮಳದಿಂದ ಹೊರಬನ್ನಿ.

 ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸಮಸ್ಯೆಯಿದೆ ಎಂದು ಪ್ರಜ್ಞಾಪೂರ್ವಕವಾಗಿ ನೆನಪಿಡಬೇಕು. ಪ್ರತಿಯೊಬ್ಬರೂ ತಮ್ಮ ಬದುಕಿನ ಯಾವುದೋ ಹಂತದಲ್ಲಿ ಹೊರಾಡುತ್ತಾರೆ. ಹೀಗಾಗಿ ನೀವು ಒಂಟಿಯಲ್ಲ.  ಭವಿಷ್ಯದ ಬಗ್ಗೆ ಚಿಂತೆ ಮಾಡಬೇಡಿ . ಇಂದಿನ, ಈಗಿನ ಬದುಕಿನಲ್ಲಿ ಬದುಕಿ. ಭವಿಷ್ಯ ನಿಮ್ಮ ಕೈಯಲ್ಲಿ ಇಲ್ಲ ಎಂದು ನೆನಪಿಡಿ. ಇದೆಲ್ಲದರ ಜೊತೆಗೆ, ಮಕ್ಕಳು ತಮ್ಮ ಸ್ಥಿತಿಯನ್ನು ನಿಭಾಯಿಸಲು ಕಲಿಸಿ  ಮತ್ತು ಮದುವೆ ಮುರಿಯದಂತೆ ನೋಡಿಕೊಳ್ಳಿ. ಇವೆಲ್ಲವನ್ನೂ ನೀವು ವೃತ್ತಿಪರರ ಸಹಾಯವಿಲ್ಲದೆ ಮಾಡಲು ಕಷ್ಟ. ಅವರ ಸಹಾಯ ಖಂಡಿತ ಪಡೆಯಿರಿ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org