ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಓದಲು ಸಾಕಷ್ಟಿರುತ್ತದೆ. ಸಮಯದ ಉಪಯೋಗ ಸರಿಯಾಗಿ ಮಾಡಿದರೆ ಟೆನ್ಷನ್ ದೂರ ಆಗುತ್ತದೆ.  ಎಲ್ಲಾ ವಿಷಯಗಳನ್ನು ಪರೀಕ್ಷೆಯ ಹಿಂದಿನ ದಿನ ಕೂತು ಬಾಯಿಪಾಠ ಮಾಡುವುದು ಮಕ್ಕಳ ಅಭ್ಯಾಸ. ಬದಲಾಗಿ ಮುಂಚಿನಿಂದ ಸ್ವಲ್ಪ ಸ್ವಲ್ಪವೇ ಓದುತ್ತಾ ವಿಷಯಗಳನ್ನು ಅರ್ಥ ಮಾಡಿಕೊಂಡರೆ, ಪರೀಕ್ಷೆಯ ಮುಂಚೆ ಆರಾಮಾಗಿರಬಹುದು. ಪ್ರತಿನಿತ್ಯ ಒಂದು ...

  • ಪರೀಕ್ಷೆಯ ಕಾಲ ಆರಂಭವಾಗಿದೆ. ಪ್ರತಿ ವರ್ಷವೂ ಈ ಸಮಯದಲ್ಲಿ ಪರೀಕ್ಷೆಗಳು ಬರುವುದು ಸಹಜ. ಇದರಲ್ಲಿ ಯೋಚಿಸುವಂತದ್ದು ಏನೂ ಇಲ್ಲ. ಆದರೆ ಪರೀಕ್ಷೆಯು ಕೇವಲ ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ಅವರ ಪೋಷಕರು, ಶಿಕ್ಷಕರು ಮತ್ತು ಹತ್ತಿರದ ಎಲ್ಲಾ ಸಂಬಂಧಿಕರಲ್ಲೂ ಒತ್ತಡ ಉಂಟು ಮಾಡುತ್ತದೆ. ಇದು ಯೋಚಿಸಬೇಕಾದ ವಿಚಾರ. ಯಾಕೆ ಪ್ರತಿಯೊಬ್ಬರೂ ಪರೀಕ್ಷೆಯ ಬಗ್ಗೆ ಇಷ್ಟೊಂದು ಚಿಂತಿಸುತ್ತಾರೆ? ಏಕೆಂದರೆ, ಸಮಾಜ, ಕುಟುಂಬ ಮತ್ತು ಸ್ವತಃ ವಿದ್ಯಾರ್ಥಿಗಳೇ, ಪರೀಕ್ಷೆಯು ತಮ್ಮ ಬೆಲೆಯನ್ನು ಅಳೆಯುತ್ತದೆ ಎಂದು ಭಾವಿಸುತ್ತಾರೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರುವ ಅಂಕಗಳು ತಮ್ಮ ಯಶಸ್ಸನ್ನು ನಿರ್ಧರಿಸುತ್ತದೆ ಎಂದು ತಿಳಿದಿದ್ದಾರೆ. ಹೆಚ್ಚು ...

  • “ಓದೋದಕ್ಕೆ ಎಷ್ಟೊಂದು ಇದೆ. ಹೇಗೆ ಮುಗಿಸುತ್ತೀನೋ?” “ಈ ಸಿಲಬಸ್ ನೋಡಿದರೆ ಹಾಸಿಗೆಯಲ್ಲೇ ಇದ್ದುಬಿಡೋಣ ಎನಿಸುತ್ತಿದೆ” ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಓದುವುದನ್ನು ಮುಂದೂಡುವುದು, ಸಿಲಬಸ್ ಬಗ್ಗೆ ಆತಂಕ ಪಡುವುದೇ ಹೆಚ್ಚು. ಬದಲಾಗಿ ಸಿಲಬಸ್ ಅನ್ನು ಚಿಕ್ಕ ಭಾಗಗಳಾಗಿ ಮಾಡಿ, ದಿನಕ್ಕೆ ಇಷ್ಟು ಎಂಬಂತೆ ಗುರಿ ಇಟ್ಟುಕೊಂಡು ಓದಬೇಕು. ಗುರಿಯನ್ನು ನಿರ್ಧರಿಸುವುದು ಏಕೆ ಅಗತ್ಯ? ನೀವು ಬೆಟ್ಟ ಹತ್ತಬೇಕೆಂದಿದ್ದರೆ, ಬೆಟ್ಟ ನೋಡಿದ ಕೂಡಲೇ ಭಯ ಪಡಬಹುದು. ಆದರೆ ಎಲ್ಲಿಯವರೆಗೆ ತಲುಪಬೇಕೆಂಬ ಗುರಿ ಇಟ್ಟು, ಹತ್ತುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಾಗಿದರೆ, ಗುರಿ ತಲುಪಿದ ಖುಷಿ ಸಿಗುತ್ತದೆ. ಹಾಗೆಯೇ ...

  • ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಬಹಳ ಆತಂಕದಲ್ಲಿರುತ್ತಾರೆ. ಎಷ್ಟು ಓದಿದರೂ ಮುಗಿಯದ ಸಿಲಬಸ್, ನಿರೀಕ್ಷೆಯ ಭಾರ ಹೊರಿಸುವ ಪೋಷಕರು, ಶಿಕ್ಷಕರು ಮತ್ತು ನಮ್ಮಲ್ಲಿ ಈಗಾಗಲೇ ಇರುವ ಟೆನ್ಷನ್. ಕೆಲವರಂತೂ ...

  • ತಜ್ಞರ ಪ್ರಕಾರ, ಮಕ್ಕಳಿಗೆ ಓದಿನ ಬಗ್ಗೆ ಇರುವ ಆತಂಕ ಮತ್ತು ಅದರಿಂದಾಗುವ ಪರಿಣಾಮಕ್ಕೆ ಎಷ್ಟೋ ಬಾರಿ ತಿಳಿದೋ ತಿಳಿಯದೆಯೋ ಪೋಷಕರೇ ಕಾರಣರಾಗಿರುತ್ತಾರೆ. ಪರೀಕ್ಷಾ ವೇಳೆಯಲ್ಲಿ ತಂದೆ ತಾಯಿ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು? ಮಕ್ಕಳಿಗೆ ಸಹಜವಾಗಿ ಪರೀಕ್ಷೆ ಬಗ್ಗೆ ಆತಂಕವಿರುತ್ತದೆ ಎಂದು ನೆನಪಿಡಿ. ಈ ಸಂದರ್ಭದಲ್ಲಿ ನೀವು: ಪರೀಕ್ಷೆಗೆ ಸಾಕಷ್ಟು ಸಮಯ ಇರುವಾಗಲೇ ಮಕ್ಕಳಿಗೆ ಟೈಮ್ ಟೇಬಲ್ ತಯಾರಿಸಲು ಸಹಾಯ ಮಾಡಿ. ಪೌಷ್ಟಿಕ ಆಹಾರವನ್ನು ನೀಡಿ. ಮಕ್ಕಳು ಅಗತ್ಯವಾದ ವಿಶ್ರಾಂತಿ ತೆಗೆದುಕೊಳ್ಳುವಂತೆ ಹಾಗೂ ಸರಿಯಾಗಿ ನಿದ್ದೆಮಾಡುವಂತೆ ನೋಡಿಕೊಳ್ಳಿ. ಅವರಿಗೆ ಪಾಠದ ಬಗ್ಗೆ ಇರುವ ...

  • ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ನಿರ್ವಹಣೆ ತೋರುವ ವಿದ್ಯಾರ್ಥಿಗಳು ಹಾಗೂ ಸಾಧಾರಣ ನಿರ್ವಹಣೆ ತೋರುವ ವಿದ್ಯಾರ್ಥಿಗಳ ನಡುವೆ ಇರುವ ಸಾಮಾನ್ಯ ಲಕ್ಷಣವೆಂದರೆ, ಇಬ್ಬರೂ ಪರೀಕ್ಷಾ ಒತ್ತಡದಿಂದ ಬಳಲುತ್ತಿರಬಹುದು. ಮತ್ತು ಹೆಚ್ಚಿನ ವೇಳೆ ಈ ಒತ್ತಡವುಂಟಾಗಲು ಶಿಕ್ಷಕರೇ ಪ್ರಮುಖವಾಗಿ ಕಾರಣರಾಗಿರುತ್ತಾರೆ. ಶಾಲೆಯ ಆಡಳಿತಗಾರರು ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಾರೆ ಇದರಿಂದ ಶಿಕ್ಷಕರು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವ ಮತ್ತು ಹೆಚ್ಚಿನ ಅಂಕ ಗಳಿಸುವ ಅಗತ್ಯತೆಯನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ. ಇದರಿಂದ ಕೊನೆಯಲ್ಲಿ ಶಿಕ್ಷಕರೂ ಕೂಡ ಎರಡು ಮುಖ್ಯವಾದ ಕಾರಣದಿಂದ ಒತ್ತಡವನ್ನು ಅನುಭವಿಸುತ್ತಾರೆ: ...

  • 'ನಾನು ವ್ಯಾಯಾಮ ಮಾಡಲಾರೆ' ವ್ಯಾಯಾಮವೆಂದರೆ ತುಂಬಾ ಬೆವರು ಸುರಿಸಿ ಕಷ್ಟ ಪಟ್ಟು ಮಾಡುವುದು ಅಂದುಕೊಂಡಿದ್ದೇವೆ. ಕೆಲವರು ಆ ರೀತಿ ವ್ಯಾಯಾಮ ಮಾಡುತ್ತಾರೆ. ಆದರೆ ಎಲ್ಲಾ ವ್ಯಾಯಾಮಗಳೂ ಹಾಗೆ ಇರಬೇಕಿಲ್ಲ. ನಿಮಗೆ ಹೊಂದುವ ವ್ಯಾಯಾಮ ಮಾಡಿ. ಫಿಟ್ ಆಗಿರಲು ನೀವು ಈಜಬಹುದು, ಸೈಕಲ್ ತುಳಿಯಬಹುದು ಅಥವಾ ಪ್ರತಿದಿನ ವಾಕಿಂಗ್ ಮಾಡಬಹುದು. ಇವೆಲ್ಲಾ ನಿಮಗೆ ಬೇಜಾರೆನಿಸಿದರೆ, ನೃತ್ಯ ಅಥವಾ ಕ್ರೀಡೆಯನ್ನು ಕಲಿಯಿರಿ. ನಿಮ್ಮನ್ನು ಚುರುಕಾಗಿಡುವ ಕೆಲವು ಚಟುವಟಿಕೆಗಳೆಂದರೆ: ಹತ್ತಿರದಲ್ಲಿರುವ ಸ್ಥಳಕ್ಕೆ ಹೋಗಲು ಸೈಕಲ್ ಬಳಸಿ ಅಥವಾ ನಡೆದುಕೊಂಡು ಹೋಗಿ. ಎಲಿವೇಟರ್, ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ. ವಾರದಲ್ಲಿ ಸ್ವಲ್ಪ ಸಮಯ ಹೊರ ಹೋಗಿ ಆಟವಾಡಿ. ...

  • ವಿದ್ಯಾರ್ಥಿಗಳ ಜೊತೆಗೆ ಪೋಷಕರು ಮತ್ತು ಶಿಕ್ಷಕರು ಕೂಡ ಪರೀಕ್ಷೆಯ ಸಮಯದಲ್ಲಿ ಆತಂಕದಲ್ಲಿರುತ್ತಾರೆ. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಬೆಲೆ ಅಳೆಯುತ್ತದೆ ಎಂಬ ಕಲ್ಪನೆ ಇದೆ. ತಾವು ಒಳ್ಳೆಯ ಪೋಷಕರೇ, ...

  • ಸಕಾರಾತ್ಮಕವಾಗಿ ಯೋಚಿಸುವುದರಿಂದ ನಿಮ್ಮ ಮನಸ್ಸನ್ನು ಪ್ರಶಾಂತವಾಗಿಡಬಹುದು. ಸಮಾಧಾನದಿಂದ ಪರೀಕ್ಷೆಯನ್ನು ಹೇಗೆ ನಿಭಾಯಿಸಬೇಕು ಎಂದು ಯೋಚಿಸಬಹುದು. ಪರೀಕ್ಷೆ ಚೆನ್ನಾಗಿ ಮಾಡುವೆನೆಂದು ಯೋಚಿಸಿದಾಗ ನಿಮ್ಮ ವಿಶ್ವಾಸ ಹೆಚ್ಚುತ್ತದೆ. ನಿಮ್ಮ ಪರೀಕ್ಷೆಯ ಒತ್ತಡವನ್ನು ನಿಯಂತ್ರಿಸಲು ಗೈಡೆಡ್ ಇಮೆಜರಿ ರಿಲ್ಯಾಕ್ಸೇಷನ್ ತಂತ್ರವನ್ನು (ಒತ್ತಡ ಕಡಿಮೆ ಮಾಡಲು ಸಕಾರಾತ್ಮಕವಾಗಿ ಯೋಚಿಸುವ ತಂತ್ರ) ಹೇಗೆ ಬಳಸಬೇಕು ಎಂದು ಇಲ್ಲಿ ಹೇಳಲಾಗಿದೆ: 1. ನಿಮ್ಮ ಮನೆಯಲ್ಲಿ ಪ್ರಶಾಂತವಾಗಿರುವ ಜಾಗವನ್ನು ಆಯ್ಕೆ ಮಾಡಿ. ಆರಾಮಾಗಿ ಕುಳಿತುಕೊಳ್ಳಿ. ಕೈಗಳು ನಿಮ್ಮ ತೊಡೆಯ ಮೇಲೆ ಅಥವಾ ನಿಮ್ಮ ಪಕ್ಕ ಇರಲಿ. ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಸ್ವಲ್ಪ ತಡೆ ಹಿಡಿದು ಪೂರ್ತಿಯಾಗಿ ಹೊರಬಿಡಿ. ಈ ರೀತಿ ದೀರ್ಘ ಉಸಿರಾಟ ಮುಂದುವರೆಸಿ. ಕ್ರಮೇಣ ಶಾಂತರಾಗುವುದನ್ನು ಗಮನಿಸಿ. ಆತಂಕದ ಯೋಚನೆಗಳು ಬಂದರೆ ಅವನ್ನು ...

  • ಉಸಿರಾಟ/ಪ್ರಾಣಾಯಾಮ ಕ್ರಿಯೆ ಏಕೆ ಮಾಡಬೇಕು? ನಾವು ಸದಾಕಾಲ ಉಸಿರಾಡುತ್ತೇವೆ. ಆದರೆ ನಮ್ಮ ಉಸಿರಾಟ ಗಮನಿಸಿಕೊಳ್ಳುವುದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದು. ಉಸಿರಾಟದಲ್ಲಿ ಎರಡು ವಿಧಗಳಿವೆ. ಕೆಲವರು ಉಸಿರಾಡುವಾಗ ಎದೆಯ ...