ನಮ್ಮ ಪರಿಚಯ :: ವೈಟ್ ಸ್ವಾನ್ ಫೌಂಡೇಶನ್ ::
We use cookies to help you find the right information on mental health on our website. If you continue to use this site, you consent to our use of cookies.

ನಮ್ಮ ಪರಿಚಯ

ನಮ್ಮ ಪರಿಚಯ

‘ವೈಟ್ ಸ್ವಾನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್’ – ಒಂದು ಲಾಭರಹಿತ ಸಂಸ್ಥೆಯಗಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವನ್ನು ಮೂಡಿಸುತ್ತಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಜನರಿಗೆ, ಪಾಲಕರಿಗೆ ಮತ್ತು ಸಾರ್ವಜನಿಕರಿಗೆ ಅಧಿಕೃತವಾದ ಹಾಗೂ ಪರಿಶೋಧಿತ ಮಾಹಿತಿಯನ್ನು ಒದಗಿಸುವುದೇ ನಮ್ಮ ಗುರಿಯಾಗಿದೆ. ಇದರಿಂದ ಅವರಿಗೆ ಮಾನಸಿಕ ಸಮಸ್ಯೆಗಳನ್ನು ನಿಭಾಯಿಸಲು ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ವೈಟ್ ಸ್ವಾನ್ ಫೌಂಡೇಶನ್ ತಂಡವು ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಜೊತೆಗೂಡಿ ಮಾನಸಿಕ ಆರೋಗ್ಯದ ಬಗ್ಗೆ ಉನ್ನತ ಗುಣಮಟ್ಟದ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.

ನಮ್ಮ ಮೂಲ

ಫೆಬ್ರವರಿ 14-2013 ರಲ್ಲಿ ನಡೆದ ನಿಮ್ಹಾನ್ಸ್ (NIMHANS : National institute of mental health and neuro sciences)ಇನ್ಸ್ಟಿಟ್ಯೂಟ್ ದಿನಾಚರಣೆಯ ದಿನದಂದು, ತಮ್ಮ ಪ್ರಧಾನ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ರೊತೊ ಬಾಗ್ಚಿ,ಮೈಂಡ್ ಟ್ರೀ ಲಿಮಿಟೆಡ್ - ಭಾರತದಲ್ಲಿ ಮಾನಸಿಕ ಆರೋಗ್ಯ ವಲಯದ ಸವಾಲುಗಳನ್ನು ಎದುರಿಸಲು ಮಾಹಿತಿ ಮತ್ತು ಅರಿವಿನ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳಿದರು. ಈ ನಿಟ್ಟಿನಲ್ಲಿ ಜನರಿಗೆ ಸರಿಯಾದ ಮಾಹಿತಿ ಕೊಟ್ಟು, ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಅವರು ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಈ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಇತರರನ್ನು ಕೋರಿದರು. ಆ ನಂತರದಲ್ಲಿ ಸುಬ್ರೊತೊರವರ ಮಾರ್ಗದರ್ಶನದಲ್ಲಿ ಮನೋಜ್ ಚಂದ್ರನ್ ರವರು, ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾನಸಿಕ ಆರೋಗ್ಯದಲ್ಲಿನ ಉತ್ತಮ ಅಭ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದರು. ನಿಮ್ಹಾನ್ಸ್ ನಿರ್ದೇಶಕ/ಉಪಕುಲಪತಿಗಳಾದ ಡಾ.ಪಿ.ಸತೀಶ್ ಚಂದ್ರ ಮತ್ತು ಇದೇ ಸಂಸ್ಥೆಯ ಕೆಲವು ಮನೋವೈದ್ಯರ ಅಭೂತಪೂರ್ವ ಬೆಂಬಲದಿಂದ ಹಾಗೂ ಇತರೆ ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ದೇಶದಾದ್ಯಂತ ಇರುವ ಇದೇ ವಲಯದ ಉದ್ಯಮಿಗಳು ಮಹತ್ತರ ಮಾಹಿತಿಗಳನ್ನು ಒದಗಿಸಿದರು. ಈ ಎಲ್ಲಾ ಮೂಲದ ಬೆಂಬಲಗಳಿಂದ, ನಾವು ವೈಟ್ ಸ್ವಾನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ನ ಧ್ಯೇಯ ಮತ್ತು ದರ್ಶನವನ್ನು ಗುರುತಿಸಿಕೊಂಡೆವು. ಮಾರ್ಚ್ 25,2014ರಂದು ಕಂಪನೀಸ್ ಆಕ್ಟ್, ವಿಭಾಗ 25ರ ಪ್ರಕಾರ ವೈಟ್ ಸ್ವಾನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ಒಂದು ಲಾಭರಹಿತ ಸಂಸ್ಥೆ ಎಂಬುದಾಗಿ ಅಸ್ಥಿತ್ವಕ್ಕೆ ಬಂತು.

ನಮ್ಮ ಮಿಷನ್

ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತು ಮಾಹಿತಿ ನೀಡುತ್ತೇವೆ ಮತ್ತು ಅರಿವು ಮೂಡಿಸುತ್ತೇವೆ

ನಮ್ಮ ಧ್ಯೇಯ ಮತ್ತು ಗುರಿ

  • 500 ಜನ ತಜ್ಞರ ಸಾಮರ್ಥ್ಯ ಹಾಗೂ ದಕ್ಷ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು 3 ಭಾಷೆಗಳಲ್ಲಿ, ದೇಶದ ಪ್ರಮುಖ 10 ನಗರಗಳ ಯುವಕರನ್ನು ತಲುಪುವುದು.
  • ಅಂತರ್ಜಾಲದಲ್ಲಿ ಮಾನಸಿಕ ಆರೋಗ್ಯ ಹಾಗೂ ಸುಸ್ಥಿತಿ ಕುರಿತ ಮಾಹಿತಿ ಸೇವೆಯನ್ನು (ಡೌನ್ ಲೋಡ್ ಮಾಡಿಕೊಳ್ಳಬಹುದಾದ) ಒದಗಿಸುವ ಅತೀ ದೊಡ್ಡ ಕೇಂದ್ರವಾಗುವುದು.
  • ಭಾರತದಲ್ಲಿ ಅತ್ಯಂತ ಜನಮೆಚ್ಚುಗೆ ಪಡೆದಿರುವ 10 ಲಾಭರಹಿತ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಳ್ಳುವುದು.
  • ವಿಶ್ವದ ಹಾಗೂ ಭಾರತದ 5 ಪ್ರಮುಖ ಸಂಸ್ಥೆಗಳ ಜೊತೆ ಕೈ ಗೂಡಿಸುವುದು.
  • ಮಾಹಿತಿ ವಿತರಣಾ ಮಾದರಿಯಲ್ಲಿ ಗ್ರಾಮೀಣ ಜನರಿಗೆ  ನವೀನ ತಂತ್ರಜ್ಞಾನವನ್ನು ಬಳಸಿ ಹೊಸದಾದ ಒಂದಾದರೂ ಪರಿಹಾರವನ್ನು ಒದಗಿಸುವುದು.

ನಮ್ಮ ಜೊತೆಗಾರರು

ನಮ್ಮ ಮಾಹಿತಿಯ ಭಂಡಾರವನ್ನು ಇನ್ನಷ್ಟು ಬಲಶಾಲಿಯಾಗಿಸುತ್ತ, ಭಾರತದಲ್ಲಿ ಪ್ರಚಲಿತವಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವಂತಾಗಲು ವಿಶ್ವದಾದ್ಯಂತ ಇರುವ ವೃತ್ತಿನಿರತ ಸಂಸ್ಥೆಗಳ ಜೊತೆ ಕೈ ಗೂಡಿಸುವುದು ನಮ್ಮ ಅಪೇಕ್ಷೆ.

ನಮ್ಮ ಗುರುತು: ವೈಟ್ ಸ್ವಾನ್ (ಶ್ವೇತ ವರ್ಣದ ಹಂಸ)

ನಮ್ಮ ಗುರುತನ್ನು ಪ್ರಶಸ್ತಿ ವಿಜೇತ ವರ್ಣಚಿತ್ರ ವಿನ್ಯಾಸಗಾರ್ತಿ(ಗ್ರಾಫಿಕ್ ಡಿಸೈನರ್) ಶ್ರೀಮತಿ ಸುಜಾತಕೇಶವನ್ ಅವರು(ರೇ+ಕೇಶವನ್/ಬ್ರಾಂಡ್ ಯುನಿಯನ್) ವಿನ್ಯಾಸ ಮಾಡಿದ್ದಾರೆ. ಇಲ್ಲಿ ವೈಟ್ ಸ್ವಾನ್ ಹಕ್ಕಿಯು ಹಿಂದಿನಿಂದಲೂ ಬಂದ ಹಿಂಡಿನ ಮನಸ್ಥಿತಿಯ ವಿರುದ್ಧವಾಗಿ ಬಲದಿಂದ ಎಡಕ್ಕೆ ಈಜುವ ಸ್ಥಾನದಲ್ಲಿದೆ. ಇಲ್ಲಿ ವೈಟ್ ಸ್ವಾನ್ ಒಂದು ರೂಪವಲ್ಲ, ಆದರೆ ಒಂದು ಪ್ರತಿರೂಪದಿಂದ ಸೃಷ್ಟಿಸಿರುವುದು. ಇಲ್ಲಿ ರೂಪವಾಗಲಿ, ಬಣ್ಣವಾಗಲಿ ಏನೂ ಇಲ್ಲ. ಅದು ಕೇವಲ ಬಿಳಿಯ ಜಾಗವಷ್ಟೆ. ಈ ಬಿಳಿಯ ಜಾಗ ನಮಗೆ ಹಂಸದಂತೆ ತೋರುವುದು ನೀಲಿಯ ಆಯತ ಮತ್ತು ಹಂಸದ ತಲೆಯ ಮೇಲಿನ ಜಾಗದಿಂದಷ್ಟೆ. ಇದೊಂದು ಗೆಸ್ಟಾಲ್ಟ್ ಚಿತ್ರ(ಮನಸ್ಸು ಮತ್ತು ಮಿದುಳಿನ ಥಿಯರಿ). ಇದರಲ್ಲಿ ಮನಸ್ಸು ಅಗತ್ಯ ಸಂಪರ್ಕಗಳನ್ನು ಮಾಡಿ ನಿಮಗೆ ಬಿಳಿ ಜಾಗದ ಬದಲು ಹಂಸವನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ‘ಸ್ವಾನ್’ನ ಬಿಂಬ, ‘ಮೃದು ಮತ್ತು ಶಾಂತ ಸ್ವಭಾವ ಹಾಗೂ ಕಾಳಜಿಯನ್ನು’ ತೋರಿಸುತ್ತದೆ. ಅದರ ಭಂಗಿ ನೋಡಿದಾಗ, ನೀವು ಮರಿ ಹಂಸಗಳು ಅಮ್ಮನ ಸುತ್ತ ಈಜುತ್ತಿರುವುದನ್ನು ಕಲ್ಪಿಸಿಕೊಳ್ಳಬಹುದು. ಹಂಸದ ಎತ್ತಿದ ರೆಕ್ಕೆಗಳು ನೀರಿನಲ್ಲಿ ಈಜುವುದನ್ನು ಸೂಚಿಸುತ್ತದೆ. ವೆಡ್ಜ್ವುಡ್ ನೀಲಿ ಬಣ್ಣ ಹಾಗೂ ದೊಡ್ಡ ಮತ್ತು ಸಣ್ಣ ಅಕ್ಷರದ ಸಂಯೋಜನೆಯು ನಮ್ಮ ಉದ್ದೇಶದ ಗಂಭೀರತೆ ಹಾಗೂ ಸದಾ ನಿಮ್ಮ ಸೇವೆಯಲ್ಲಿರುವ ಗುಣಗಳನ್ನು ಎತ್ತಿ ಹಿಡಿಯುತ್ತದೆ.