ಮೊಬೈಲ್ ಫೋನ್ ಗೀಳು ಖಿನ್ನತೆ ಮತ್ತು ಆತಂಕ ಉಂಟುಮಾಡುತ್ತದೆ: ಅಧ್ಯಯನ

ಮೊಬೈಲ್ ಫೋನ್ ಗೀಳು ಖಿನ್ನತೆ ಮತ್ತು ಆತಂಕ ಉಂಟುಮಾಡುತ್ತದೆ: ಅಧ್ಯಯನ

ಮೊಬೈಲ್ ಗೀಳಿಗೆ ಅಂಟಿಕೊಂಡಿರುವ ಒಬ್ಬ ವ್ಯಕ್ತಿ ಖಿನ್ನತೆ ಮತ್ತು ಆತಂಕಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಇಲಿನೋಯಿಸ್ ವಿಶ್ವವಿದ್ಯಾಲಯದ ಅಧ್ಯಯನವೊಂದರಲ್ಲಿ ಸಾಬೀತುಪಡಿಸಲಾಗಿದೆ. 

ಇಲಿನೋಯಿಸ್ ಸುದ್ದಿ ವಾಹಿನಿಯ ಮೂಲಗಳ ಅನುಸಾರ ವಿಶ್ವವಿದ್ಯಾಲಯದ 3000 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಆಧರಿಸಿ ಪ್ರಶ್ನೋತ್ತರ ಮಾಲಿಕೆಯನ್ನು ಒದಗಿಸಲಾಗಿದ್ದು, ಈ ಪ್ರಶ್ನೋತ್ತರ ಮಾಲಿಕೆಯಲ್ಲಿ ವ್ಯಾಸಂಗ ಮತ್ತು ಕಚೇರಿಯ ಕಾರ್ಯನಿರ್ವಹಣೆಯ ಮೇಲೆ ಮೊಬೈಲ್ ಬಳಕೆಯ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಕೇಳಲಾಗಿದೆ. ಜೊತೆಗೆ ಅಂತರ್ಜಾಲ ಇಲ್ಲದೆ ಬದುಕು ನೀರಸವಾಗಿ ಕಾಣುವುದೇ, ಆಸಕ್ತಿ ಇಲ್ಲವಾಗುವುದೇ ಎಂಬ ಪ್ರಶ್ನೆಗಳನ್ನೂ ಕೇಳಲಾಗಿದೆ.

ಮೊಬೈಲ್ ಫೋನ್ ಮತ್ತು ಅಂತರ್ಜಾಲ ಬಳಕೆಗೂ, ವಿದ್ಯಾರ್ಥಿಗಳಲ್ಲಿರುವ  ತಮ್ಮನ್ನೇ ಹಾಳುಮಾಡಿಕೊಳ್ಳುವ ವರ್ತನೆಗೂ ಸಂಬಂಧ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದು ಪ್ರಶ್ನೋತ್ತರ  ಮಾಲಿಕೆಯ ಉದ್ದೇಶವಾಗಿತ್ತು . ಇಲಿನೋಯಿಸ್ ವಿಶ್ವವಿದ್ಯಾಲಯದ ಮನಶ್ಶಾಸ್ತ್ರದ ಪ್ರೊಫೆಸರ್ ಅಲೆಕ್ಸಾಂಡ್ರೋ ಲೀರಾಸ್ ಅವರ ಪ್ರಕಾರ ಮೊಬೈಲ್ ಮತ್ತು ಅಂತರ್ಜಾಲದ ಗೀಳಿಗೆ ಬಲಿಯಾದವರು  ಅತಿ ಹೆಚ್ಚಿನ ಪ್ರಮಾಣದಲ್ಲಿ ಖಿನ್ನತೆ ಮತ್ತು ಆತಂಕಕ್ಕೊಳಗಾಗಿರುತ್ತಾರೆ.

ಈ ಸಂಶೋಧನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಸಂಪರ್ಕಿಸಿ: https://news.illinois.edu/blog/view/6367/334240

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org