We use cookies to help you find the right information on mental health on our website. If you continue to use this site, you consent to our use of cookies.

ಆಹಾರ ಕ್ರಮ ಮತ್ತು ಮಾನಸಿಕ ಆರೋಗ್ಯ

ಪೌಷ್ಠಿಕತೆಯ ಕೊರತೆ ಮತ್ತು ಮನಸ್ಸಿನ ನಡುವೆ ಬಲವಾದ ಸಂಬಂಧ ಇದೆ.

''ಆಹಾರ ನಿಮ್ಮ ಔಷಧಿಯಾಗದಿದ್ದರೆ, ಔಷಧಿಯೇ ನಿಮ್ಮ ಆಹಾರವಾಗುತ್ತದೆ ‘ – ಹಿಪೋಕ್ರೇಟಸ್‌

ಮನುಷ್ಯರಿಗೆ ಆಹಾರ ಮುಖ್ಯ. ದಿನನಿತ್ಯದ ಕೆಲಸ ಮಾಡಲು ನಮಗೆ ಶಕ್ತಿ ಬೇಕು. ಇದು ನಾವು ಉಣ್ಣುವ ಆಹಾರದಿಂದಲೇ ಸಿಗುತ್ತದೆ.  ಭಾರತದಲ್ಲಿ ಆಹಾರವೂ ಸಂಸ್ಕೃತಿಯ ಪ್ರತೀಕ.  ಕೆಲವು ಹಬ್ಬಗಳ ಸಂದರ್ಭದಲ್ಲಿ ಜನರು ವಿಶೇಷವಾದ ಸಿಹಿ ಖಾದ್ಯಗಳನ್ನು ತಯಾರಿಸುತ್ತಾರೆ.  ಉಪವಾಸವನ್ನು ಆಚರಿಸುವಂತ ಹಬ್ಬಗಳೂ ಇವೆ.  ವ್ಯಕ್ತಿಯ ಆಹಾರಾಭ್ಯಾಸ ಆತನ ಕೌಟುಂಬಿಕ ಹಿನ್ನೆಲೆ ಹಾಗೂ ಬೆಳೆದುಬಂದ ವಾತಾವರಣವನ್ನು ಅವಲಂಬಿಸುತ್ತದೆ. ಹಾಗಾಗಿಯೇ ಕೆಲವರು ಸಸ್ಯಾಹಾರ ಸೇವಿಸುತ್ತಾರೆ, ಇನ್ನು ಕೆಲವರದ್ದು ಮಾಂಸಾಹಾರವಾಗಿರುತ್ತದೆ.

ದೇಹಕ್ಕೆ ಪ್ರೋಟೀನ್‌, ಕಾರ್‌ಬೊಹೈಡ್ರೇಟ್, ಕೊಬ್ಬು, ಜೀವಸತ್ವಗಳು, ಖನಿಜಗಳು ಹಾಗೂ ಇನ್ನಿತರ  ಪೋಷಕಾಂಶಗಳ ಅಗತ್ಯವಿದೆ. ಅದೆಲ್ಲವೂ ನಾವು ಪ್ರತಿದಿನ ಸೇವಿಸುವ ಆಹಾರದಿಂದ ಸಿಗುತ್ತದೆ.  ಪ್ರೋಟೀನ್ ಸ್ನಾಯುಗಳು, ಚರ್ಮ ಮತ್ತು ರಕ್ತಕ್ಕಾಗಿ ಅಗತ್ಯ. ಕೊಬ್ಬು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ನೆರವಾಗುತ್ತವೆ. ವಿಟಮಿನ್‌ ಮತ್ತು ಖನಿಜಗಳು ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಮೂಳೆ ಅಂಗಾಂಶ ವೃದ್ಧಿಗೆ ಅಗತ್ಯವಿದೆ.  ಕೆಲವು ಖನಿಜಗಳು, ಕಬ್ಬಿಣ, ಕ್ಯಾಲ್ಷಿಯಂ, ಅಯೋಡಿನ್ ಮತ್ತು ಜಿಂಕ್‌ ಜತೆಗೆ ವಿಟಮಿನ್‌ ಎ, ಬಿ ಗಳನ್ನು ಹೊಂದಿದ್ದು, ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ದೇಹದ ಅಂಗಾಶಗಳು ಬೆಳೆಯಲು ಸಹಕಾರಿಯಾಗಿವೆ.  ವಿಟಮಿನ್ ಸಿ ದೇಹ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಆಹಾರದಿಂದ ಕ್ಯಾಲ್ಸಿಯಂ ಹೀರಿಕೊಂಡು,  ಆರೋಗ್ಯಕರ ಮೂಳೆಗಳು ಮತ್ತು ಸ್ನಾಯು ನಿರ್ಮಾಣಕ್ಕೆ  ಸಹಾಯ ಮಾಡುತ್ತದೆ.

ಮೆದುಳಿನಮೇಲೆಆಹಾರ ಹೇಗೆಪರಿಣಾಮಬೀರುತ್ತದೆ?

ವಿಜ್ಞಾನದ ಪ್ರಕಾರ, ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಮತ್ತು ಮನಸ್ಸಿನ ನಡುವೆ ಬಲವಾದ ಸಂಬಂಧ ಇದೆ.  ನಮ್ಮ ಮೆದುಳಿನ ೨೦% ಭಾಗವು ಓಮೆಗಾ ೩ ಮತ್ತು ಓಮೆಗಾ ೬ ನಂಥ ಕೊಬ್ಬನ ಆಮ್ಲಗಳು ಮತ್ತು ಅಮೈನೋ ಆಸಿಡ್ನಿಂದ  ರಚಿತವಾಗಿದೆ.  ದೇಹಕ್ಕೆ ಸ್ವತಃ ಇವುಗಳನ್ನೆಲ್ಲ ಉತ್ಪತ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಈ ಪೌಷ್ಟಿಕಾಂಶಗಳು ಇರುವ ಆಹಾರವನ್ನು ಸೇವಿಸಬೇಕು. 

ಒಮೆಗಾ -3 ಕೊಬ್ಬಿನ ಆಮ್ಲಗಳ ಅಭಾವದಿಂದ ಕೆಲವೊಮ್ಮೆ ಏಕಾಗ್ರತೆ ಹಾಗೂ ಸ್ಮರಣ ಶಕ್ತಿಯ ಸಮಸ್ಯೆಯುಂಟಾಗಿ, ಖಿನ್ನತೆಗೆ ಕಾರಣವಾಗಬಹುದು.  ಅಂತೆಯೇ, ನರಕೋಶಗಳು ಹಾಗೆಯೇ ಸರಿಯಾಗಿ ಕೆಲಸ ಮಾಡಲು ಉತ್ತಮ ಆಹಾರದ ಅಗತ್ಯವಿರುತ್ತದೆ.   

ಹದಿಹರೆಯದವರ ಮೇಲೆ ನಡೆಸಿದ ಅಧ್ಯಯನವೊಂದರಲ್ಲಿ ಹೆಚ್ಚಿನ ಸಿಹಿ, ಕ್ಯಾಲೋರಿಗಳಿರುವ ಮತ್ತು ಕಡಿಮೆ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುತ್ತಿದ್ದರಿಂದ ಅವರಲ್ಲಿ ಸುಸ್ತು,  ನಿದ್ರಾಹೀನತೆ, ಅಶಾಂತಿ, ಬೇಸರ, ಖಿನ್ನತೆ, ನಿರಾಶೆ ಹಾಗೂ ಹತಾಶೆಗಳು ಹೆಚ್ಚಾಗಿ ಕಂಡುಬಂದಿದೆ.  ಯಾಕೆಂದರೆ ಅವರು ಸೇವಿಸುವ ಆಹಾರದಲ್ಲಿ ಹೆಚ್ಚಿನ ಸಕ್ಕರೆಯ ಅಂಶ ಪ್ರಮಾಣದಲ್ಲಿದ್ದು , ಇದರಿಂದ ಉತ್ಪಾದನೆಯಾಗುವ ಇತರ ಬೇಡದ ಅಂಶಗಳು ದೇಹಕ್ಕೆ ಹಾನಿ ಉಂಟುಮಾಡುತ್ತದೆ.  

ಮಾನಸಿಕ ಅಸ್ವಸ್ಥತೆ ಮತ್ತು ಆಹಾರ 

ಆಹಾರಕ್ರಮ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರಕ್ರಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ ಎನ್ನಬಹುದು.  ಉದಾಹರಣೆಗೆ, ಡೈಯಬಿಟೀಸ್ ಇರುವವರಿಗೆ  ಅಲ್ಜೈಮರ್‌ ಖಾಯಿಲೆ ಬರುವ  ಸಾಧ್ಯತೆ ಹೆಚ್ಚು.   ಅಂತೆಯೇ, ವಿಟಮಿನ್ ಬಿ 12 ಕೊರತೆಯಿಂದ ಖಿನ್ನತೆ, ಬುದ್ಧಿಮಾಂದ್ಯತೆ ಮತ್ತು ಮಾನಸಿಕ ದುರ್ಬಲತೆ ಉಂಟಾಗುತ್ತದೆ. ಮೊಟ್ಟೆ, ಮಾಂಸ ಹಾಗೂ ಡೈರಿ ಪ್ರಾಡಕ್ಟ್ ಸೇವಿಸುವುದರಿಂದ ಈ ತೊಂದರೆಗಳನ್ನು ತಡೆಯಬಹುದು.

ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ ಮತ್ತು ನ್ಯಾಚುರೋಪತಿಗಳನ್ನು ಅನುಸರಿಸುವವರು ಆಹಾರ ಮತ್ತು ಆಹಾರಕ್ರಮವನ್ನು ಜೀವನದ ಮಾರ್ಗ ಎಂದೇ ಪರಿಗಣಿಸುತ್ತಾರೆ.

ಆಯುರ್ವೇದದಲ್ಲಿ ಆಹಾರವು ವ್ಯಕ್ತಿಯ ಮನಸು ಹಾಗೂ ಭಾವನೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗಿದೆ.

ಆಯುರ್ವೇದವು ಆಹಾರವನ್ನು ಮೂರು ವಿಧಗಳಾಗಿ ವಿಂಗಡಿಸಿದೆ, ಅವುಗಳು - ಸಾತ್ವಿಕ, ರಾಜಸಿಕ, ತಾಮಸಿಕ.  

  • ಸಾತ್ವಿಕ ಆಹಾರವು ಸಾವಯವ ರೀತಿಯಲ್ಲಿ ಬೆಳೆದ ತಾಜಾ ತರಕಾರಿ, ಹಣ್ಣುಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಸೇವಿಸಿದವರನ್ನು ಉತ್ಸಾಹಭರಿತರನ್ನಾಗಿ ಇರಿಸುತ್ತದೆ. 
  • ರಾಜಸಿಕ ಆಹಾರವು ವ್ಯಕ್ತಿಗೆ ಉತ್ತೇಜನ ನೀಡುತ್ತದೆ. ಅವರು ಎಣ್ಣೆ ಹಾಗೂ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ, ಮೊಟ್ಟೆ, ಮೀನು ಹಾಗೂ ಮಾಂಸಾಹಾರವನ್ನು ಸೇವಿಸುತ್ತಾರೆ. 
  • ತಾಮಸಿಕ ಆಹಾರ ವ್ಯಕ್ತಿಯನ್ನು ಮಂದ ಮತ್ತು ಆಲಸಿಯನ್ನಾಗಿ ಮಾಡಬಹುದು. ಹಳಸಿದ ಆಹಾರ ಯಾವುದೇ ಶಕ್ತಿಯನ್ನು ನೀಡುವುದಿಲ್ಲ.     

'ದೇಹದ ಪ್ರತೀ ಕೋಶದ ಮೈಟೋಕಾಂಡ್ರಿಯಾಗಳಲ್ಲಿರುವ ಗ್ಲುಕೋಸ್‌ಅನ್ನು ಕರಗಿಸುವಾಗ ಆಮ್ಲಜನಕ ಮುಕ್ತವಾದ ಕಣಗಳನು  ತಟಸ್ಥಗೊಳಿಸುವ ಕೆಲಸವನ್ನು ಆಂಟೆಆಕ್ಸಿಡೆಂಟ್‌ಗಳು (ಆಹಾರದಿಂದ ಹೀರಲ್ಪಟ್ಟವು) ಮಾಡುತ್ತವೆ.  ಈ ಕಣಗಳು ತಟಸ್ಥವಾಗದಿದ್ದಲ್ಲಿ ಜೀವಕೋಶಗಳು, ಡಿಎನ್‌ಎ ಗಳು ಹಾನಿಗೊಳಗಾಗಬಹುದು ಮತ್ತು ಮ್ಯುಟೇಶನ್‌ಗೆ ಕಾರಣವಾಗಬಹುದು.  ಪಾರ್ಕಿನ್‌ಸನ್‌ನಿಂದ ಹಿಡಿದು ಅಲ್ಜೈಮರ್‌ ಖಾಯಿಲೆಯವರೆಗೆ, ಮೈಟೋಕಾಂಡ್ರಿಯಾಕ್ಕೆ ಹಾನಿ, ಜೀವಕೋಶಗಳಿಗೆ ಹಾನಿ,  ಮತ್ತೂ ಕೋಶದೊಳಗೆ ಶಕ್ತಿಯ ಅಸಮತೋಲನ ಹಾಗೂ ಪ್ರೀರಾಡಿಕಲ್‌ ಹಾನಿಗಳು ಕೂಡ ಈ ಕಾರಣದಿಂದಲೇ ಬರುವುದಲ್ಲದೇ ಒಂದಕ್ಕೊಂದು ಕಾರಣವಾಗುತ್ತದೆ. '

ಹಾಗಾಗಿ,  ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿ ತನ್ನ ಆಹಾರ ಕ್ರಮದ ಬಗ್ಗೂ ಗಮನ ಹರಿಸಬೇಕಾ?  ' ಪ್ರತಿಯೊಂದನ್ನೂ ನೀವು ಆರೋಗ್ಯ ಕಾಳಜಿಯಿಂದಲೇ ಮಾಡುತ್ತಿದ್ದರೆ, ನಿಮಗೆ ಯಾವತ್ತೂ

ಪ್ರಮುಖ ಅಂಶಗಳು:

ನೀವೇನು ತಿನ್ನುತ್ತೀರೋ ಅದು ನಿಮ್ಮ ದೇಹ ಹಾಗೂ ಮಿದುಳಿನ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ.

ಸಿಹಿತಿನಿಸುಗಳು ಮತ್ತು ಮೈದಾ, ಬಿಳಿ ಅಕ್ಕಿಯಂಥ ಸಂಸ್ಕರಿಸಿದ ಪದಾರ್ಥಗಳನ್ನು ತಿನ್ನುವುದರಿಂದ  ಮೆದುಳಿನ ಕಾರ್ಯಚಟುವಟಿಕೆ ನಿಧಾನಗೊಳ್ಳುತ್ತದೆ ಮತ್ತು ಇವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಆಹಾರಗಳು ಮೆದುಳನ್ನು ತೀಕ್ಷ್ಣವಾಗಿ ಇಡಲು ಸಹಾಯ ಮಾಡುತ್ತದೆ.

ವಿಟಮಿನ್ ಬಿ 12 ಯ ಕೊರತೆಯು ಖಿನ್ನತೆ, ಬುದ್ಧಿಮಾಂದ್ಯತೆ ಮತ್ತು ಮಾನಸಿಕ ದುರ್ಬಲತೆಯನ್ನು ಉಂಟುಮಾಡಬಹುದು ಮತ್ತು ಪೂರಕ ಮತ್ತು ಆಹಾರಗಳಿಂದ ಇದನ್ನು ಪಡೆಯಬೇಕು.

ಉಲ್ಲೇಖಗಳು:

ಡಾ. ಅಚ್ಯುತನ್ ಈಶ್ವರ್, ಬೆಂಗಳೂರಿನ ಪ್ರಕೃತಿಚಿಕಿತ್ಸಾ ವೈದ್ಯರು

ಪೀಡಿಂಗ್‌ ಮೈಂಡ್ಸ್‌, ಮೆಂಟಲ್‌ಹೆಲ್ತ್‌ ಫೌಂಡೇಶನ್‌,ನ್ಯೂಜಿಲ್ಯಾಂಡ್‌ ಇದರ ಪ್ರಕಟಣೆ.