ನಿಮ್ಮ ಸ್ನೇಹಿತರ ಪೋಸ್ಟ್ ಗಳಿಗೆ ಲೈಕ್ ಒತ್ತುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ

ನಿಮ್ಮ ಸ್ನೇಹಿತರ ಪೋಸ್ಟ್ ಗಳಿಗೆ ಲೈಕ್ ಒತ್ತುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ

ಒಂದು ಅಧ್ಯಯನದ ಪ್ರಕಾರ , ಸಾಮಾಜಿಕ ತಾಣಗಳಲ್ಲಿ ಅತಿ ಹೆಚ್ಚು ಸ್ನೇಹಿತರನ್ನು ಹೊಂದಿದ್ದು , ಪೋಸ್ಟ್ ಗಳಿಗೆ ಹೆಚ್ಚಿನ ಗೆಳೆಯರಿಂದ ಲೈಕ್ ನಿರೀಕ್ಷಿಸುವುದರಿಂದ ಹದಿಹರೆಯದವರಲ್ಲಿ ಒತ್ತಡ ಹೆಚ್ಚಾಗುತ್ತದೆ.

12 ರಿಂದ 17 ವರ್ಷದೊಳಗಿನ ಯುವಕ ಯುವತಿಯರ ಮೇಲೆ ಪ್ರಯೋಗ ನಡೆಸಿರುವ ಮಾಂಟ್ರಿಯಲ್ ನ “ ಮಾಂಟ್ರಿಯಲ್ ಅಂಡ್ ಇನ್ಸ್ಟಿಟ್ಯೂಟ್ ಯೂನಿವರ್ಸಿಟಿ ಡಿ ಸಾಂಟೆ ಮೆಂಟಲೆ ” ಎಂಬ ಸಂಸ್ಥೆಯ ಸಂಶೋಧಕರು ಈ ಮಾಹಿತಿಯನ್ನು ನೀಡಿದ್ದಾರೆ. ಮುನ್ನೂರಕ್ಕೂ ಸ್ನೇಹಿತರನ್ನು ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ಹೊಂದಿರುವವರು ಹೆಚ್ಚಿನ ಹಾರ್ಮೋನ್ ಒತ್ತಡ, ಕಾರ್ಟಿಸಾಲ್ ಒತ್ತಡ ಎದುರಿಸುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಇವರು ತಮ್ಮ ಸ್ನೇಹಿತರ ಪೋಸ್ಟ್ ಮತ್ತು ಸ್ಟೇಟಸ್ ಗಳಿಗೆ ಬೆಂಬಲ ನೀಡಿ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅವರಲ್ಲಿ ಕಾರ್ಟಿಸಾಲ್ ಪ್ರಮಾಣ ಕಡಿಮೆಯಾಗುತ್ತದೆ ಎಂದೂ ಸಂಶೋಧಕರು ಹೇಳುತ್ತಾರೆ.  

ಫೇಸ್ ಬುಕ್ ಬಳಕೆಯ ಪ್ರಮಾಣ ಮತ್ತು ಎಷ್ಟು ಬಾರಿ ಉಪಯೋಗಿಸುತ್ತಾರೆ ಎನ್ನುವುದನ್ನು ಆಧರಿಸಿ ಈ ನಮೂನೆಯನ್ನು  ಸಂಗ್ರಹಿಸಲಾಗಿದ್ದು ಈ ಅಭಿಪ್ರಾಯಕ್ಕೆ ಬರಲಾಗಿದೆ. ತಮ್ಮನ್ನು ತಾವೇ ಉತ್ತೇಜಿಸುವ ವರ್ತನೆ ಮತ್ತು ತಮ್ಮ ಸ್ನೇಹಿತರಿಗೆ ಬೆಂಬಲ ನೀಡುವ ವರ್ತನೆಯನ್ನು ಈ ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ.

ಇನ್ನು ಕೆಲವು ಅಧ್ಯಯನಗಳ ಅನುಸಾರ 13 ವರ್ಷದ ವಯಸ್ಸಿನಲ್ಲಿ ಕಾರ್ಟಿಸಾಲ್ ಪ್ರಮಾಣ ಹೆಚ್ಚಾಗಿದ್ದರೆ ಅಂತಹವರು 16ನೆಯ ವಯಸ್ಸಿನಲ್ಲಿ  ಶೇ 37ರಷ್ಟು  ಹೆಚ್ಚಿನ ಖಿನ್ನತೆಗೆ ಒಳಗಾಗುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org