ವಿದ್ಯಾರ್ಥಿಯೊಂದಿಗೆ ಸಂಭಾಷಣೆ

ಕಲಿಸುವುದರ ಜತೆಗೆ ವಿದ್ಯಾರ್ಥಿಯ ಮಾನಸಿಕ ಅಗತ್ಯವನ್ನು ಪೂರೈಸುವ ಬಗ್ಗೆ ಸಂಭಾಷಣೆ ಆರಂಭಿಸಲು ಒಂದಿಷ್ಟು ಸಲಹೆಗಳು..

ತರಗತಿಯ ಮನಸ್ಥಿತಿಯನ್ನು ಅಳೆಯಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಆ ತರಗತಿಯಲ್ಲಿ ಯಾವುದೇ ವಿದ್ಯಾರ್ಥಿಯ ನಡತೆ ವಿಲಕ್ಷಣವಾಗಿದೆ ಎಂದು ನಿಮ್ಮ ಗಮನಕ್ಕೆ ಬಂದರೆ, ಆ ವಿದ್ಯಾರ್ಥಿಯ ಮೇಲೆ ಸ್ವಲ್ಪ ಸಮಯ ಹೆಚ್ಚಿನ ನಿಗಾ ವಹಿಸಿ. ಅಂಥ ವಿಲಕ್ಷಣ ನಡವಳಿಕೆ ಮುಂದುವರಿಯುತ್ತದೆಯೇ ಅಥವಾ ಅದು ಒಮ್ಮೆ ಮಾತ್ರ ಕಂಡುಬಂತೇ ಎಂದು ಪರಿಶೀಲಿಸಿ.

ಇತರ ನಂಬಿಗಸ್ಥ ಸಹೋದ್ಯೋಗಿಗಳ ಜತೆಗೆ ಕೂಡಾ ಚರ್ಚಿಸಿ, ಇಂಥ ನಡವಳಿಕೆ ಅವರ ಪಾಠದ ವೇಳೆಯೂ ಕಂಡುಬರುತ್ತದೆಯೇ ಎಂದು ತಿಳಿದುಕೊಳ್ಳಿ. ಸಹೋದ್ಯೋಗಿಗಳ ಜತೆ ಚರ್ಚಿಸುವಾಗ ನಿಮ್ಮ ವಿವೇಚನೆಯನ್ನು ಬಳಸಿ. ಯಾಕೆಂದರೆ ನಿಮ್ಮ ಉದ್ದೇಶ ವಿದ್ಯಾರ್ಥಿಗೆ  ನೆರವಾಗುವುದೇ ವಿನಃ ಅವರ ಬಗ್ಗೆ ಗಾಳಿಸುದ್ದಿ ಹಬ್ಬಿಸುವುದಲ್ಲ.

ವಿದ್ಯಾರ್ಥಿಯ ಈ ನಡವಳಿಕೆಸಾಮಾನ್ಯಕ್ಕಿಂತ ಧೀರ್ಘಾವಧಿವರೆಗೆ ಮುಂದುವರೆದರೆ, ಆ ವಿದ್ಯಾರ್ಥಿಯನ್ನು ಖಾಸಗಿಯಾಗಿ ಕರೆದು ಸಾಮಾನ್ಯ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದವನ್ನು ಆರಂಭಿಸಿ. " ಹೇಗಿದ್ದೀಯಾ? ನಿನ್ನ ವ್ಯಾಸಂಗ ಹೇಗೆ ನಡೆಯುತ್ತಿದೆ?", ಇತ್ಯಾದಿ.

ಆದರೆ ವಿದ್ಯಾರ್ಥಿಗಳಿಗೆ ನೇರವಾಗಿ ತೀರಾ ಕಠಿಣ ಪದಗಳನ್ನು ಬಳಸಬೇಡಿ. ಉದಾಹರಣೆಗೆ ನಿನಗೆ ಖಿನ್ನತೆ ಇರಬಹುದು ಅಥವಾ ಬೇರೆ ಇನ್ಯಾವುದೋ ಮಾನಸಿಕ ಸಮಸ್ಯೆ ಇರಬಹುದು ಎಂಬಂಥ ಮಾತುಗಳು ಬೇಡ.

ನಿಮ್ಮೊಂದಿಗೆ ವಿದ್ಯಾರ್ಥಿ ತನ್ನ ಭಾವನೆಗಳನ್ನು ಹಂಚಿಕೊಂಡರೆ, ತಾಳ್ಮೆಯಿಂದ ಕೇಳಿಸಿಕೊಳ್ಳಿ ಹಾಗೂ ಈ ವಿಷಯವನ್ನು ಯಾರೊಂದಿಗೂ ಚರ್ಚಿಸಬೇಡಿ. ವಿದ್ಯಾರ್ಥಿಯು ನಿಮ್ಮ ಮೇಲಿಟ್ಟಿರುವ ಭರವಸೆಯನ್ನು ಮುರಿಯಬೇಡಿ.  ತೀರಾ ಗಂಭೀರವಾದ ವಿಷಯ ಎಂದು ತೋರಿದರೆ, ನಿಮ್ಮ ಕಾಲೇಜಿನ ನೀತಿಗೆ ಅನುಗುಣವಾಗಿ ಈ ಮಾಹಿತಿಯನ್ನು  ಕಾಲೇಜು ಕೌನ್ಸೆಲರ್‌ನ ಸಲಹೆ ಬೇಕಾಗುತ್ತದೆ ಎಂದು ವಿದ್ಯಾರ್ಥಿಗೆ ತಿಳಿಸಿ.

ಕೆಲ ಪ್ರಕರಣಗಳಲ್ಲಿ, ವಿದ್ಯಾರ್ಥಿ ಮುಕ್ತವಾಗಿ ಮಾತನಾಡಲು ನಿರಾಕರಿಸಬಹುದು, ಅಂಥ ಸಂದರ್ಭದಲ್ಲಿ ಅವರನ್ನು ಅವರ ಇಚ್ಛೆಯಂತೆ ಬಿಟ್ಟುಬಿಡಿ ಹಾಗೂ ಅವರ ನಡವಳಿಕೆಯನ್ನು ಮತ್ತೆ ಕೆಲಕಾಲ ಗಮನಿಸಿ.  ಇನ್ನೊಮ್ಮೆ ಮಾತನಾಡಲು ಪ್ರಯತ್ನ ಮಾಡಿ. ಎರಡನೇ ಪ್ರಯತ್ನವೂ ವಿಫಲವಾದಲ್ಲಿ, ಇದನ್ನು ಕೌನ್ಸೆಲರ್‌ನ ಗಮನಕ್ಕೆ ತಂದು, ಅವರೇ ನಿರ್ಧಾರ ಕೈಗೊಳ್ಳಲು ಬಿಟ್ಟುಬಿಡಿ.

Was this helpful for you?