ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ದೈಹಿಕ ಆರೋಗ್ಯ ಸಮಸ್ಯೆಗಳು

ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ದೈಹಿಕ ಆರೋಗ್ಯ ಸಮಸ್ಯೆಗಳು

ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ದೈಹಿಕ ಆರೋಗ್ಯ ಸಮಸ್ಯೆಗಳು

ಮಾನಸಿಕ ಅನಾರೋಗ್ಯ ಸಮಸ್ಯೆ ಇರುವವರು  ಸಾಮಾನ್ಯವಾಗಿ ದೈಹಿಕ ಅನಾರೋಗ್ಯದ ಸಮಸ್ಯೆಯನ್ನೂ ಹೊಂದಿರುತ್ತಾರೆ.  ಇದು ಅವರ ಅನಾರೋಗ್ಯದ ಲಕ್ಷಣವನ್ನು ಆಧರಿಸಿರುತ್ತದೆ ಅಥವಾ ಅವರು ತೆಗೆದುಕೊಳ್ಳುವ ಔಷಧಿ, ಅವರ ಜೀವನಶೈಲಿ ಮತ್ತು ಅನಾರೋಗ್ಯದಿಂದ ಜೀವನಶೈಲಿಯಲ್ಲಿ ಉಂಟಾಗುವ ಬದಲಾವಣೆಗಳೂ ಕಾರಣವಾಗಿರುತ್ತವೆ. ವ್ಯಕ್ತಿಯ ಮಾನಸಿಕ ಅನಾರೋಗ್ಯ ಅವರ ದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಮೈ ಕೈ ನೋವಿನಲ್ಲಿ, ಹೆಚ್ಚು ತೂಕ ಹೊಂದಿರುವಲ್ಲಿ, ಮಧುಮೇಹ ಸಮಸ್ಯೆಯಲ್ಲಿ, ರಕ್ತದೊತ್ತಡದ ಸಮಸ್ಯೆಯಲ್ಲಿ ಗುರುತಿಸಬಹುದು. ಹಲವಾರು ವರ್ಷಗಳ ಕಾಲ ಔಷಧಿ ಸೇವಿಸುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೀವ್ರವಾದ ಮಾನಸಿಕ ಅನಾರೋಗ್ಯ ಇರುವವರಲ್ಲಿ ಈ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮನಶ್ಶಾಸ್ತ್ರೀಯ ದೌರ್ಬಲ್ಯ ಇರುವವರು ಕಾಲ ಕಳೆದಂತೆಲ್ಲಾ ಗಂಭೀರವಾದ ದೈಹಿಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಆದಾಗ್ಯೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಇಂತಹ ಅನೇಕ ಸಮಸ್ಯೆಗಳನ್ನು ವ್ಯಕ್ತಿಯ ಸಹಕಾರದೊಂದಿಗೆ ಸರಿಪಡಿಸಿ, ಉತ್ತಮ ಜೀವನ ನಡೆಸಲು ನೆರವಾಗಬಹುದು. ಔಷಧಗಳ ಪ್ರಮಾಣವನ್ನು ಕಡಿಮೆ ಆಡುವ ಮೂಲಕ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು. ಬೇರೆ ಔಷಧಗಳನ್ನು ನೀಡುವ ಮೂಲಕ ಕೆಲವು ಸಮಸ್ಯೆಗಳನ್ನು ಶಾಶ್ವತವಾಗಿ ಸರಿಪಡಿಸಬಹುದು. ನಿಮಗೆ  ಮಾನಸಿಕ ಅನಾರೋಗ್ಯದ ಸಮಸ್ಯೆ ಇದ್ದರೆ ಅಥವಾ ಅಂಥವರನ್ನು ನೀವು ನೋಡಿಕೊಳ್ಳುತ್ತಿದ್ದರೆ, ದೇಹದಲ್ಲಿನ ಈ ಸೂಚನೆಗಳನ್ನು ಗಮನಿಸಿ. ಆಗ ನೀವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಸೂಚಿಸಲು ನೆರವಾಗುತ್ತದೆ.

ಮಾನಸಿಕ ಸಮಸ್ಯೆ ಇರುವವರಲ್ಲಿ ಕಾಣಿಸಿಕೊಳ್ಳುವ ದೈಹಿಕ ಅನಾರೋಗ್ಯ ಸಮಸ್ಯೆಗಳು ಹೀಗಿರುತ್ತವೆ

1.         ಹೈಪೋ ಥೈರಾಯ್ಡ್ : ಔಷಧಿಗಳಲ್ಲಿರುವ ಲಿಥಿಯಂನಿಂದ ಅಥವಾ ವಂಶವಾಹಿಯಾಗಿ ಥೈರಾಯ್ಡ್ ಅಸಮತೋಲನವಾಗಿ ಖಿನ್ನತೆ ಮತ್ತು ಆತಂಕ ಉಂಟಾಗುತ್ತದೆ. ಆಗಾಗ್ಗೆ ಥೈರಾಯ್ಡ್ ಪರೀಕ್ಷೆ ಮಾಡಿಸಿ ಮನೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ವೈದ್ಯರಿಗೆ ತಿಳಿಸಿ.

2.         ವಸ್ತುಗಳ ಅತಿಯಾದ ಬಳಕೆ : ಕೆಲವು ವಸ್ತುಗಳ ಅತಿಯಾದ ಬಳಕೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ.

3.         ಜೊಲ್ಲು ಸುರಿಸುವುದು : ಮಾನಸಿಕ ಅನಾರೋಗ್ಯದ ಸಮಸ್ಯೆ ಇರುವವರಲ್ಲಿ ಬಾಯಿಂದ ಜೊಲ್ಲು ಸುರಿಯುವುದು ಸಹಜ ಪ್ರಕ್ರಿಯೆಯಾಗಿರುತ್ತದೆ. ಇದು ಔóಷಧಿಯ ಅಡ್ಡಪರಿಣಾಮವೂ ಆಗಿರಬಹುದು. ಕೂಡಲೇ ನಿಮ್ಮ ಮನೋರೋಗ ತಜ್ಞರನ್ನು ಭೇಟಿ ಮಾಡಿ.

4.         ತೂಕ ಹೆಚ್ಚಾಗುವುದು-ನಿತ್ರಾಣ ನಿಶ್ಶಕ್ತಿ : ಔಷಧಿಗಳಿಂದ ಮತ್ತು ದೈಹಿಕ ಕಸರತ್ತು ಇಲ್ಲದಿರುವುದರಿಂದ ತೂಕ ಹೆಚ್ಚಾಗಿ ನಿಶ್ಶಕ್ತಿ ಹೆಚ್ಚಾಗುತ್ತದೆ. ಪ್ರತಿನಿತ್ಯ ವಾಕಿಂಗ್ ಮತ್ತು ಜಾಗಿಂಗ್ ಮಾಡಿ. ದೈಹಿಕವಾಗಿ ಸಕ್ರಿಯವಾಗಿರಿ.

5.         ಲೈಂಗಿಕ ನಿಶ್ಶಕ್ತಿ : ಋತುಸ್ರಾವದಲ್ಲಿ ಏರುಪೇರಾಗುವುದು, ಲಿಬಿಡೋ ಪ್ರಮಾಣ ಕಡಿಮೆಯಾಗುವುದು, ಶಿಶ್ನ ದುರ್ಬಲವಾಗುವುದು , ಶೀಘ್ರ ಸ್ಖಲನವಾಗುವುದು ಸಾಮಾನ್ಯ ಸಮಸ್ಯೆಗಳು. ಇದು ಔಷಧಗಳ ಪರಿಣಾಮವೇ ಆದರೆ ಕ್ರಮೇಣ ಸರಿಹೋಗುತ್ತದೆ. ಸೂಕ್ತ ವೈದ್ಯರ ಬಳಿ ಸಲಹೆ ಪಡೆಯಿರಿ.

6.         ಅಜೀರ್ಣದ ಸಮಸ್ಯೆ : ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದರಿಂದ ಅಜೀರ್ಣವಾಗುವುದು, ವಾಂತಿ ಬರುವಂತಾಗುವುದು, ಹೊಟ್ಟೆ ಉರಿ ಉಂಟಾಗುವುದು ಸಹಜ.  ಮೃದುವಾದ ಆಹಾರ ಸೇವಿಸುವುದರಿಂದ ವಾಂತಿಯಾಗುವುದನ್ನು ತಪ್ಪಿಸಬಹುದು.

7.         ನಡುಕ : ಮಾನಸಿಕ ಸಮಸ್ಯೆಗೆ ನೀಡುವ ಔಷಧಿಗಳಿಂದ ಕೈಕಾಲುಗಳಲ್ಲಿ ನಡುಕ ಉಂಟಾಗುವುದು ಸಹಜ. ಹಾಗಾದಲ್ಲಿ ನಿಮ್ಮ ವೈದ್ಯರಿಗೆ ವಿಷಯ ತಿಳಿಸುತ್ತಿರಿ.

8.         ಮೈ ಕೈ ನೋವು : ಇದು ಮಾನಸಿಕವೂ ಆಗಿರಬಹುದು  ಅಥವಾ ಉತ್ಪ್ರೇಕ್ಷೆಯಾಗಿರಬಹುದು.  ಇಂತಹ ವ್ಯಕ್ತಿಯನ್ನು ಮನೆಯಲ್ಲೇ ಕೆಲಸಗಳಲ್ಲಿ ತೊಡಗುವಂತೆ ಮಾಡಿ. ವೈದ್ಯರ ಸಲಹೆ ಪಡೆಯಿರಿ.

9.         ಗರ್ಭೀಣಿಯರ ಸಮಸ್ಯೆ : ಮಾನಸಿಕ ಅನಾರೋಗ್ಯಕ್ಕೆ ನೀಡುವ ಮದ್ದು ಕೆಲವೊಮ್ಮೆ ಗರ್ಭಿಣಿ ಮಹಿಳೆಯರಿಗೆ ಮತ್ತು ಗರ್ಭದಲ್ಲಿರುವ ಶಿಶುವಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಮೊದಲ ಮೂರು ತಿಂಗಳಲ್ಲಿ ಔಷಧ ಸೇವಿಸಿದರೆ ಮಗು ಹುಟ್ಟುವಾಗಲೇ ಊನ ಹೊಂದುವ ಸಾಧ್ಯತೆ ಇರುತ್ತದೆ. ಮಾನಸಿಕ ಸಮಸ್ಯೆಗೆ ಔಷಧಿ ಸೇವಿಸುವವರು ಗರ್ಭಧಾರಣೆಯನ್ನು ತಡೆಗಟ್ಟಬೇಕು. ಯೋಚಿಸದೆ ಗರ್ಭ ಧರಿಸಿದ್ದ ಪಕ್ಷದಲ್ಲಿ ಮನೋರೋಗ ತಜ್ಞರನ್ನು ಭೇಟಿ ಮಾಡಿ ಗರ್ಭಿಣಿಯರಿಗೆ ಸೂಕ್ತವಾದ ಔಷಧವನ್ನು ಪಡೆಯಬೇಕು.

10.       ಔಷಧಿಯಿಂದ ಉಂಟಾಗುವ ಯಾವುದೇ ದೈಹಿಕ ಸಮಸ್ಯೆಗಳನ್ನು ಕಂಡಕೂಡಲೇ ಮನೋರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org