ಗೇಟ್ ಕೀಪರ್ ತರಬೇತಿ

ನಿಮ್ಮ ಸ್ನೇಹಿತರೊಬ್ಬರು ತುಂಬಾ ದುಃಖದಲ್ಲಿದ್ದು, ಎಲ್ಲರಿಂದ ದೂರ ಸರಿದು ಒಂಟಿಯಾಗಿದ್ದಾರೆ ಎಂದು ಊಹಿಸಿ. ಅವರನ್ನು ಮಾತನಾಡಿಸಿದಾಗ  ಭರವಸೆ ಕಳೆದುಕೊಂಡವರಂತೆ , ಅಸಹಾಯಕರಂತೆ ಮತ್ತು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿರುವಂತೆ  ಕಾಣುತ್ತಾರೆ. ಇದರ ಬಗ್ಗೆ ಅವರೊಂದಿಗೆ ಚರ್ಚಿಸಲು ನೀವು ಬಯಸುತ್ತೀರ. ಆದರೆ ವಿಷಯವನ್ನು ಹೇಗೆ ಪ್ರಸ್ತಾಪಿಸಬೇಕು ಎಂದು ತಿಳಿಯುವುದಿಲ್ಲ. ಒಂದು ವೇಳೆ ಅವರು ಪ್ರತಿಕ್ರಿಯಿಸದಿದ್ದರೆ ಏನು ಮಾಡುವುದು? ಅವರಿಗೆ ಸಹಾಯ ಮಾಡಲು ಹೋಗಿ, ಅವರ ನೋವು ಇನ್ನಷ್ಟು ಹೆಚ್ಚಾದರೆ  ಅಥವಾ ಸಮಸ್ಯೆ ಮತ್ತಷ್ಟು ಗಂಭೀರವಾದರೆ ಏನು ಮಾಡುವುದು ?    

ಮನೋವೈದ್ಯರು ಹೇಳುವಂತೆ, ಸಮಸ್ಯೆಯಲ್ಲಿರುವ  ವ್ಯಕ್ತಿಯ ಜೊತೆ ತಾಳ್ಮೆಯಿಂದ ಮಾತನಾಡಿದಾಗ ಅಥವಾ ಸಹನೆಯಿಂದ ಅವರ ಮಾತನ್ನು ಕೇಳಿಸಿಕೊಂಡಾಗ, ಅವರ ಆತ್ಮಹತ್ಯಾ ಆಲೋಚನೆ ದೂರಾಗುವ ಸಾಧ್ಯತೆ ಇರುತ್ತದೆ.  

ಗೇಟ್ ಕೀಪರ್ ಆಗಿ, ಇಂತಹ ಸನ್ನಿವೇಶದಲ್ಲಿ ಹೇಗೆ ನೆರವಾಗಬಹುದು? ಗೇಟ್ ಕೀಪರ್ ಎಂದರೆ , ಯಾರೇ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬಹುದು ಎಂದು ನಂಬಿರುವ ಮತ್ತು ಈ ಕೆಲಸಕ್ಕೆ ತಮ್ಮ ಸಮಯ ಮತ್ತು ಶಕ್ತಿಯನ್ನು ಮುಡಿಪಾಗಿಡಲು ಸಿದ್ಧವಿರುವ ವ್ಯಕ್ತಿ.  ಶಿಕ್ಷಕರು, ಪೋಷಕರು, ಸ್ನೇಹಿತರು, ನೆರೆಮನೆಯವರು, ಹಾಸ್ಟೆಲ್ ವಾರ್ಡನ್ ಅಥವಾ  ಆಪ್ತ ಸಲಹೆಗಾರರು, ಯಾರು ಬೇಕಾದರೂ ಗೇಟ್ ಕೀಪರ್ ಆಗಬಹುದು . ಗೇಟ್ ಕೀಪರ್ ಆದಂತಹ ವ್ಯಕ್ತಿ, ಯಾರಾದರೂ ತೀರ್ವ ದುಃಖದಲ್ಲಿದ್ದರೆ , ಅದನ್ನು ಗುರುತಿಸಿ  ಅವರಿಗೆ ಭಾವನಾತ್ಮಕ ಬೆಂಬಲ ನೀಡಬೇಕು . ನಂತರ ಮನೋವೈದ್ಯರನ್ನು ಭೇಟಿಯಾಗಲು ಸಲಹೆ ನೀಡಬೇಕು.

ಮನೋವೈದ್ಯರು, ಶುಶ್ರೂಕಿಯರು ಮತ್ತು ಮನೋವೈದ್ಯಕೀಯ ಸಮಾಜ ಸೇವಕರನ್ನೊಳಗೊಂಡ ತಜ್ಞರ ತಂಡದ ಸಹಾಯದಿಂದ ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್ ಬಿಯಿಂಗ್ ಕೇಂದ್ರದಲ್ಲಿ  ಗೇಟ್ ಕೀಪರ್  ಟ್ರೈನಿಂಗ್ ಕಾರ್ಯಕ್ರಮ ನೆಡೆಸುತ್ತಾರೆ.  ಈ ಟ್ರೈನಿಂಗ್ ಅವಧಿಯಲ್ಲಿ ಗೇಟ್ ಕೀಪರ್ ಗಳಿಗೆ ತಿಳಿಸಿದ ಅಂಶಗಳು :   

  • ಆತ್ಮಹತ್ಯೆ ಅಪಾಯದಲ್ಲಿರುವ ವ್ಯಕ್ತಿಯನ್ನು ಗುರುತಿಸಿ
  • ಆತ್ಮಹತ್ಯೆಯ ಯೋಚನೆ ಅಥವಾ ಸಾಧ್ಯತೆ ಎಷ್ಟು ತೀರ್ವ ಎಂದು ಪರಿಶೀಲಿಸಿ.
  • ತಕ್ಷಣ  ಮಧ್ಯಸ್ಥಿಕೆ ವಹಿಸಿ
  • ಆಪ್ತರಿಗೆ ತಿಳಿಸಿ ಮತ್ತು ಸಹಾಯ ಪಡೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್ಬಿಯಿಂಗ್ (Nimhans Centre for Wellbeing) , #1/B, 9 ನೇ ಮುಖ್ಯ ರಸ್ತೆ, 1ನೇ ಹಂತ , BTM  ಲೇ ಔಟ್ , ಬೆಂಗಳೂರು -5600076. ದೂರವಾಣಿ ಸಂಖ್ಯೆ : 080- 26685948/9480829670.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org