ನಮ್ಮ ಮಾಹಿತಿ ನಿಮ್ಮ ಸಹಾಯಕ್ಕಾಗಿ

 

ಮಾನಸಿಕ ಆರೋಗ್ಯ ಮತ್ತು ಉತ್ತಮ ಜೀವನ ನಿರ್ವಹಣೆ ಕುರಿತಾಗಿರುವ ಮಾಹಿತಿಯನ್ನು ವೈಟ್ ಸ್ವಾನ್ ಫೌಂಡೇಶನ್ ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟಿಸುತ್ತಿದೆ. ಪ್ರಸ್ತುತ ಅಂತರ್ಜಾಲ ಒಂದು ಅದ್ಭುತ ಜ್ಞಾನ ಭಂಡಾರ. ಮಾನಸಿಕ ಆರೋಗ್ಯದ ಬಗ್ಗೆ ಹಲವಾರು ವಿಷಯಗಳ ಜ್ಞಾನಪ್ರಸರಣ ಮಾಡಲು ಈ ಅಂತರ್ಜಾಲ ಸಹಕಾರಿಯಾಗುತ್ತದೆ ಎಂದು ನಾವು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಮುಂದೇನು ಮಾಡಬೇಕು ಎಂಬುದನ್ನು ಅರಿಯಲು ನಿಮಗೆ ಪ್ರಯೋಜನವಾಗುವ ಸೂಕ್ತ ತಿಳುವಳಿಕೆಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು.

ನಮ್ಮ ಜಾಲತಾಣದ ಓದುಗರು ಯಾರು?

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಅಥವಾ ಆರೈಕೆದಾರರು, ಈ ಎರಡೂ ರೀತಿಯ ಜನರು ಈ ಅಂತರ್ಜಾಲದ ಪ್ರಯೋಜನ ಪಡೆದುಕೊಳ್ಳಬಹುದು. ರೋಗದ ಗುಣಲಕ್ಷಣಗಳು, ಚಿಕಿತ್ಸೆ, ಆರೈಕೆ, ಮುಂತಾದ ವಿಷಯಗಳನ್ನು ಓದಿ ತಿಳಿದುಕೊಳ್ಳಬಹುದು, ಹಾಗು ನಿಮ್ಮ ಮನಸ್ಸಿನಲ್ಲಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವುದು ಈ ಅಂತರ್ಜಾಲದ ಗುರಿ.

ಮಾನಸಿಕ ಆರೋಗ್ಯ ಸಮಸ್ಯೆಗಳಿಲ್ಲದ ಜನಸಾಮಾನ್ಯರನ್ನು ಸಹ ಲಕ್ಷ್ಯದಲ್ಲಿರಿಸಿಕೊಂಡು ಈ ಅಂತರ್ಜಾಲವನ್ನು ರೂಪಿಸಲಾಗಿದೆ. ಸೂಕ್ತವಾದ ತಿಳುವಳಿಕೆಯಿಲ್ಲದಿದ್ದರೆ, ನಾವು ಮಾನಸಿಕ ಆರೋಗ್ಯದ ಕುರಿತಾಗಿ ಹಲವಾರು ತಪ್ಪು ನಂಬಿಕೆಗಳನ್ನು ಹರಡತೊಡಗುತ್ತೇವೆ ಮತ್ತು ಅವುಗಳನ್ನು ಪೋಷಿಸತೊಡಗುತ್ತೇವೆ.

ಇದರಿಂದಾಗಿ, ತಪ್ಪು ಕಲ್ಪನೆ ಮತ್ತು ಮೂಢ ನಂಬಿಕೆಗಳಿಂದ, ಸಮಾಜದಲ್ಲಿ ಬೇರೂರಿರುವ ಕಳಂಕದಿಂದ ಮಾನಸಿಕ ರೋಗಿಗಳನ್ನು ಸಮಾಜದಿಂದ ದೂರವಿಡುವುದು, ಕೆಲವೊಮ್ಮೆ ಅವರನ್ನು ಹಿಂಸೆಗೆ ಒಳಪಡಿಸುವುದು, ಮುಂತಾದ ಸಾಮಾಜಿಕ ವ್ಯಾಪಕತೆಗೆ ನಮಗರಿವಿಲ್ಲದೇ ಕಾರಣರಾಗುತ್ತೇವೆ.

ಆದ ಕಾರಣ ನಾವು ಸೂಕ್ತ ಜ್ಞಾನವನ್ನು ಪಡೆದುಕೊಂಡರೆ, ಸಮಸ್ಯೆಗಳ ಕುರಿತಾಗಿ ಸರಿಯಾದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ಮತ್ತು ಅಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ  ಸಾಂತ್ವನ ನೀಡಲು ಹಾಗೂ ಧೈರ್ಯ ತುಂಬಿಸಲು ಸಾಧ್ಯವಾಗುತ್ತದೆ. 

ನಮಗೆಲ್ಲರಿಗೂ ‘ಉತ್ತಮ ಮಾನಸಿಕ ಜೀವನದ' ಅಗತ್ಯವಿರುತ್ತದೆ’. ಇದರ ಕುರಿತಾಗಿಯೂ ವೈಟ್ ಸ್ವಾನ್ ಫೌಂಡೇಶನ್ನಿನ ಈ ಅಂತರ್ಜಾಲವು ಮಾಹಿತಿಯನ್ನು ಒದಗಿಸುತ್ತದೆ. ಮಾನಸಿಕವಾಗಿ ಉತ್ತಮ ಜೀವನ ನಿರ್ವಹಿಸಿ,ಎಲ್ಲರೊಡನೆ ಹೊಂದಿಕೊಂಡು ಬಾಳಬಹುದು ಎಂಬ ಭರವಸೆಯನ್ನು ನಾವು ಹೊಂದಬಹುದು.

ಅಂತರ್ಜಾಲದ ವಿನ್ಯಾಸ

ವೈಟ್ ಸ್ವಾನ್ ಫೌಂಡೇಶನ್ನಿನ ಈ ಅಂತರ್ಜಾಲವು ಎರಡು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.

ಮೊದಲನೆಯದು, ಮಾನಸಿಕಆರೋಗ್ಯವನ್ನುಅರ್ಥೈಸಿಕೊಳ್ಳುವ ಕುರಿತಾಗಿದೆ. ಈ ವಿಭಾಗದಲ್ಲಿನ ಲೇಖನಗಳು ಮಾನಸಿಕ ಆರೋಗ್ಯ ಮತ್ತು ಅದರ ವಿವಿಧ ಅಂಶಗಳ ಕುರಿತು ತಿಳಿದುಕೊಳ್ಳಲು ಸಹಾಯವಾಗುತ್ತವೆ. ಹಲವಾರು ಮಾನಸಿಕ ಸವಾಲುಗಳು, ಅವುಗಳನ್ನೆದುರಿಸಲು ಇರುವ ಆಯ್ಕೆಗಳು, ಈ ಕ್ಷೇತ್ರದ ಇತ್ತೀಚಿನ ಬೆಳವಣಿಗೆ, ಪರಿಣತರ ವಿಚಾರಗಳು ಮತ್ತು ಮಾನಸಿಕ ಆರೋಗ್ಯ ಹಾಗೂ ಉತ್ತಮ ಜೀವನ ನಿರ್ವಹಣೆಯ ಕುರಿತಾದ ಇನ್ನಿತರ ಅಂಶಗಳನ್ನು ಒಳಗೊಂಡಿರುತ್ತವೆ.

ಎರಡನೆಯ ಭಾಗವು ಮನೋವೈದ್ಯಕೀಯಅಸ್ವಸ್ಥತೆಗಳ ಕುರಿತಾಗಿದೆ. ಈ ವಿಭಾಗವು ಮನೋವೈದ್ಯಕೀಯ ವಿಜ್ಞಾನದಲ್ಲಿ ಗುರುತಿಸಲಾಗಿರುವ ಹಲವಾರು ಅಸ್ವಸ್ಥತೆಗಳ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಲು ಸಹಾಯ ಮಾಡುತ್ತದೆ.

ಇಲ್ಲಿನ ಪ್ರತಿಯೊಂದು ವಿಷಯ ಅಥವಾ ಅಸ್ವಸ್ಥತೆಯನ್ನು ವಿವಿಧ ವಿನ್ಯಾಸದ ವಿಷಯ ನಿರೂಪಣೆಯನ್ನು ಬಳಸಿಕೊಂಡು ರೂಪಿಸಲಾಗಿದೆ. ಇಲ್ಲಿ ಲೇಖನಗಳು, ಸಂದರ್ಶನಗಳು, ನಿಜಜೀವನದ ಘಟನೆಗಳು, ಮತ್ತು ಕೆಲವು ಸಂದರ್ಭಗಳಲ್ಲಿ ವಿಡಿಯೋ ಚಿತ್ರಣಗಳನ್ನು ಕೂಡ ನೀವು ನೋಡುವಿರಿ.

ಇಲ್ಲಿ ನೀವೇನು ಮಾಡಬಹುದು?

ಜ್ಞಾನವನ್ನು ಪಡೆದುಕೊಳ್ಳಬಹುದು

ಮೊತ್ತಮೊದಲನೆಯದಾಗಿ, ಮಾನಸಿಕ ಆರೋಗ್ಯದ ಕುರಿತ ಮಾಹಿತಿಯನ್ನು, ತಿಳುವಳಿಕೆಯನ್ನು ಪಡೆದುಕೊಳ್ಳಲು ಇದು ಒಂದು ವಿಶೇಷ ತಾಣ.

ಅಂತರ್ಜಾಲದ ಅನ್ವೇಷಣೆ (search function) ತುಂಬ ಸಾಮರ್ಥ್ಯಶಾಲಿ ಗುಣಲಕ್ಷಣಗಳಲ್ಲಿ ಒಂದು. ನೀವು ಹುಡುಕುತ್ತಿರುವುದು ಏನೆಂಬುದು ಖಚಿತವಾಗಿ ಗೊತ್ತಿದ್ದ ಪಕ್ಷದಲ್ಲಿ, ಅಂತರ್ಜಾಲದ ಯಾವುದೇ ಪುಟದಲ್ಲಿ ನೀಡಲಾಗಿರುವ ಸರ್ಚ್ ಬಾಕ್ಸ್ ನಲ್ಲಿ (search box) ದಯಮಾಡಿ ಮುಖ್ಯಪದ (keyword) ಕೀವರ್ಡ್ಸ್ ಎಂಟರ್ ಮಾಡಿ ಮತ್ತು ನಿಮಗೆ ನೀಡಲಾಗುವ ಸರ್ಚ್ ರಿಸಲ್ಟಿನ ಮೂಲಕ ನಿಮಗೆ ಇಷ್ಟವಿರುವ ಲೇಖನಗಳನ್ನು ಓದಿ.

ಸಂಪರ್ಕದಲ್ಲಿರಿ

ನಾವು ಜ್ಞಾನವನ್ನು ಪಡೆದುಕೊಳ್ಳಲು ಯಾವಾಗ ಉತ್ಸುಕರಾಗಿರುತ್ತೇವೆಯೋ, ಆವಾಗ ಅದು ಕೇವಲ ಒಂದು ಲೇಖನ, ಒಂದು ಪುಸ್ತಕ ಅಥವಾ ಒಂದು ಶೈಕ್ಷಣಿಕ ವಿಡಿಯೋ ಚಿತ್ರಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಬದಲಾಗಿ ನಾವು ಮಾಹಿತಿಗಾಗಿ ಹುಡುಕಾಟ ನಡೆಸುವದು ಒಂದು ಸುದೀರ್ಘ ಪ್ರಯತ್ನವಾಗುತ್ತದೆ. ಹಾಗೆ ಮಾಡುವುದು, ಕಾರ್ಯಶೀಲರಾಗುವ ನಿಟ್ಟಿನಲ್ಲಿ ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುತ್ತದೆ.

ಜ್ಞಾನಭಂಡಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದರಿಂದ ಇದು ಸಾಧ್ಯವಾಗುತ್ತದೆ. ಪ್ರತಿಬಾರಿ ನೀವು ನೋಡಿದಾಗಲೂ ಹೊಸತಾದದ್ದನ್ನೇ ಕಾಣುವುದು ಸಾಧ್ಯವಾಗುತ್ತದೆ. ಈ ಅಂತರ್ಜಾಲವನ್ನು ನಿಮ್ಮ ಜ್ಞಾನದಾಸೋಹದ ಒಂದು ಭಾಗವಾಗಿ ಪರಿಗಣಿಸಿ ನಿಯಮಿತವಾಗಿ ನೋಡುತ್ತಿರಿ. ಇದರಿಂದಾಗಿ ನಿಮಗೆದುರಾಗುವ ಸವಾಲುಗಳನ್ನು ಮೀರಿಸಿ ಮುನ್ನಡೆಯುವುದು ಸಾಧ್ಯವಾಗುತ್ತದೆ.

ನಿಮ್ಮ ಅನುಭವವನ್ನು ಹಂಚಿಕೊಳ್ಳಿ

ಚೆನ್ನಾಗಿ ವಿವರಿಸಿದ ನಿಜ ಜೀವನದ ಅನುಭವಗಳನ್ನು ನಾವು ಹೆಚ್ಚು ಸುಲಭವಾಗಿ ಗ್ರಹಿಸುತ್ತೇವೆ. ಈ ನಿಟ್ಟಿನಲ್ಲಿ ಭರವಸೆ ತುಂಬುವ, ಸಮಸ್ಯೆಗಳೊಂದಿಗೆ ಹೋರಾಡಿದ ಮತ್ತು ಅದರಿಂದ ಪಾರಾಗಿ ಯಶಸ್ಸನ್ನು ಪಡೆದ ನೈಜಜೀವನದ ಘಟನೆಗಳನ್ನು ನಿಮ್ಮೆದುರಿಗೆ ಇಡುವ ನಮ್ಮ ನಿರಂತರ ಪ್ರಯತ್ನವಾಗಿರುತ್ತದೆ.

ನಿಮ್ಮ ಜೀವನದಲ್ಲಿಯೂ ಇರಬಹುದಾದ ಇಂತಹ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಕೈಗೊಂಡ ಕಾರ್ಯ, ಆ ನಿಟ್ಟಿನಲ್ಲಿ ನಿಮ್ಮ ನಿರ್ಧಾರಗಳು, ಮತ್ತು ಅದರಿಂದ ದೊರೆತ ಯಶಸ್ಸಿನ ಪ್ರಭಾವವನ್ನು ಇತರರೂ ತಿಳಿದುಕೊಂಡು ಸ್ಫೂರ್ತಿ ಪಡೆಯುವಂತಾಗಲು ನಾವು ಅನುವುಮಾಡಿಕೊಡುತ್ತೇವೆ ಮತ್ತು ಇಂತಹ ನೈಜ ಘಟನೆಗಳನ್ನು ಪ್ರಕಟಿಸುವುದನ್ನು ಉತ್ತೇಜಿಸುತ್ತೇವೆ.

logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org