ಉದ್ಯೋಗ

ಕೆಲಸ: ಲೇಖನ ಬರವಣಿಗೆ/ಭಾಷಾಂತರ (ಕನ್ನಡ)
ಕೆಲಸದ ಸ್ಥಳ: ಬೆಂಗಳೂರು
ನಮಗೆ ಕನ್ನಡದಲ್ಲಿ ಬರೆಯುವ ಲೇಖಕರು/ಭಾಷಾಂತರಕಾರು ಬೇಕಾಗಿದ್ದಾರೆ. ಲೇಖಕರಾಗಿ ನೀವು ಕನ್ನಡದಲ್ಲಿ ಮಾನಸಿಕ ಆರೋಗ್ಯ ಮತ್ತು ಉತ್ತಮ ಜೀವನ ವಿಧಾನಗಳ ಕುರಿತು ಕನ್ನಡದ ಓದುಗರಲ್ಲಿ ಜಾಗೃತಿಯನ್ನುಂಟುಮಾಡುವ, ಅವರನ್ನು ಈ ವಿಷಯದಲ್ಲಿ ಸುಶಿಕ್ಷಿತರನ್ನಾಗಿ ಮಾಡುವ ನುಡಿಚಿತ್ರ, ಲೇಖನಗಳನ್ನು ಬರೆಯಬೇಕಾಗುತ್ತದೆ.

ಸಂವಹನ ಕೌಶಲ್ಯಗಳನ್ನು ಹೊಂದಿರುವದರ ಜೊತೆಗೆ ನೀವು ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಒಲವನ್ನು ಹೊಂದಿರಬೇಕು. ಇದರೊಂದಿಗೆ ಸಂಸ್ಥೆಯೊಂದನ್ನು ಕಟ್ಟಿಬೆಳೆಸುವ ಗುರಿಯೊಂದಿಗೆ ಉತ್ಸಾಹದಿಂದ ಕೆಲಸಮಾಡುವ ಗುಣವನ್ನು ಹೊಂದಿರಬೇಕೆಂದು ನಾವು ನಿಮ್ಮಿಂದ ಪ್ರಮುಖವಾಗಿ ನಿರೀಕ್ಷಿಸುತ್ತೇವೆ.

ಕನ್ನಡದಲ್ಲಿ ಲೇಖನಗಳನ್ನು ಬರೆಯುವ, ಸಂಪಾದಿಸುವ, ಭಾಷಾಂತರಿಸುವ ಹಾಗೂ ದೃಶ್ಯ ಶ್ರವಣ ಮಾಧ್ಯಮದಲ್ಲಿ ವಸ್ತುವಿಷಯಗಳನ್ನು ನಿರೂಪಿಸುವ ನಿಟ್ಟಿನಲ್ಲಿ ನಿಮಗೆ 2 ರಿಂದ 4 ವರ್ಷಗಳ ಅನುಭವವಿದ್ದ ಪಕ್ಷದಲ್ಲಿ careers@whiteswanfoundation.org ವಿಳಾಸಕ್ಕೆ ಈ-ಮೇಲ್ ಮುಖಾಂತರ ವಿವರಗಳನ್ನು ಕಳಿಸಿ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org