ಆರೈಕೆದಾರರಿಗೂ ಬಿಡುವು ಬೇಕು

ನಾನು ಈ ಲೇಖನದಲ್ಲಿ  ಹೇಗೆ ಕುಟುಂಬ, ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಆರೈಕೆಯ ಜವಾಬ್ದಾರಿಯನ್ನು ಹಂಚಿಕೊಂಡು ಆರೈಕೆದಾರರಿಗೆ ಅಗತ್ಯವಿರುವ ವಿರಾಮ ಒದಗಿಸಬಹುದೆಂದು ವಿವರಿಸುತ್ತೇನೆ.
ನಾವು ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ಆರೈಕೆದಾರರ ಬಗ್ಗೆ ಮಾತನಾಡಿದ್ದೇವೆ. ಮತ್ತು ಪ್ರತಿದಿನ ಅವರು ಎದುರಿಸುವ ಕಷ್ಟಕಾರ್ಪಣ್ಯಗಳು ಹಾಗೂ ಅವರು ತಮಗಿರುವ ಸಮಸ್ಯೆಯ ಕಾರಣದಿಂದ ಇಡೀ ರಾತ್ರಿ ನಿದ್ದೆಯಿಲ್ಲದೆ ಒದ್ದಾಡುವ ಸಮಸ್ಯೆಗಳ ಬಗ್ಗೆ ತಿಳಿದಿದ್ದೇವೆ.
ಆರೈಕೆಯ ಕೆಲಸದಿಂದ ಅವರಿಗೆ ಬಿಡುವು ಸಿಗುವುದಿಲ್ಲ ಎಂದು ಕೇಳಿದ್ದೇವೆ. ತಮಗಾಗಿ ಸಮಯವೇ ಇಲ್ಲದಿರುವುದು, ಅಥವಾ ಮಾನಸಿಕವಾಗಿ ಅಸ್ವಸ್ಥರಿರುವ ತಮ್ಮ ಪ್ರೀತಿಪಾತ್ರರ ಕ್ಷೇಮದ ಬಗ್ಗೆ ಕಾಳಜಿ ವಹಿಸದೆ  ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಇರುವುದು, ಹೀಗೆ ಹಲವಾರು ಕಾರಣಗಳನ್ನು ಕೇಳುತ್ತೇವೆ. 
ನಮ್ಮ ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 90ರಷ್ಟು ಆರೈಕೆದಾರರು ತಮಗೆ ಆರೈಕೆ ಕೆಲಸದಿಂದ ಬಿಡುವು ಸಿಗುತ್ತಿಲ್ಲ ಎಂದು ಚಿಂತೆಗೀಡಾಗಿರುವುದು ತಿಳಿಯುತ್ತದೆ. ಆರೈಕೆದಾರಾರಿಗೆ ತಮ್ಮ ಕೆಲಸ ನಿರ್ವಹಿಸಲು ಇತರರ ಸಹಾಯ ಸಹಾಯ ಸಿಗದೆ ಹೋದರೆ ಪರಿಣಾಮ ಬಹಳ ಗಂಭೀರವಾಗಿರುತ್ತದೆ. 
ಸೆರೆಬ್ರಲ್ ಪಾಲ್ಸಿಇಂದ ಬಳಲುತ್ತಿರುವ  ತನ್ನ 12 ವರ್ಷದ ಮಗ ಗಂಗಪ್ಪನ ಪೂರ್ಣಾವಧಿ ಆರೈಕೆದಾರರಾದ ಶಾಂತಮ್ಮ ಹೀಗೆ ಹೇಳಿದ್ದಾರೆ. "ಮಗನನ್ನು ಮನೆಯಲ್ಲಿ ಇಡೀ ದಿನ ಕೂಡಿ ಹಾಕಿ ನಾನು ಕೆಲಸಕ್ಕೆ ಹೋಗಲು ಸಾಧ್ಯ. ಇಲ್ಲದಿದ್ದರೆ ಅವನ ಆರೈಕೆಗೆ ಮತ್ತು ಸಂಸಾರ ನಡೆಸಲು ಹಣವಿರುವುದಿಲ್ಲ" . ಆದರೆ ಆಕೆಗೆ ಕೆಲಸದಲ್ಲಿ ಗಮನ ಹರಿಸಲಾಗುತ್ತಿರಲಿಲ್ಲ . ದಿನವಿಡೀ ಮಗನ ಚಿಂತೆಯಲ್ಲೇ ಕಾಲಕಳೆಯುತ್ತಿದ್ದಳು. ಮನೆಗೆ ವಾಪಸ್ಸಾದ ನಂತರ ಅವನ ದೈಹಿಕ ಮತ್ತು ತೀವ್ರ ಮಾನಸಿಕ ಸ್ಥಿತಿಯನ್ನು ಕಾಣುತ್ತಿದ್ದಳು. ಈ ಕಾರಣದಿಂದ ಹಲವು ದಿನ ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ . 
ಪರಿಣಾಮವಾಗಿ, ಶಾಂತಮ್ಮ ಎಲ್ಲಿಯೂ ನಿರತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.  ಇದರಿಂದ ಹಣ ಕಾಸು ಇಲ್ಲದೆ ಹಲವು ಬಾರಿ ಅವರು ಒಂದು ಹೊತ್ತು ಊಟ ಮಾತ್ರ ತಿನ್ನುತ್ತಿದ್ದರು . ದುಃಖಕರವೆಂದರೆ ಶಾಂತಮ್ಮ ಹಾಗೆ ಲಕ್ಷಾಂತರ ಆರೈಕೆದಾರರು ಕಷ್ಟ ಪಡುತ್ತಿದ್ದಾರೆ.
ಸಣ್ಣ ಪ್ರಮಾಣದ ಶುಲ್ಕದಲ್ಲಿ ಆರೈಕೆದಾರರು ತಮ್ಮ ಮಗು /ಅಥವಾ ವಯಸ್ಕರನ್ನು ಇಲ್ಲಿ ಅಲ್ಲಿ ಬಿಟ್ಟು ತಮ್ಮ ದೈನಂದಿನ ಕೆಲಸಕ್ಕೆ ಹೋಗಬಹುದು. ತಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದಾರೆ, ಉತ್ತಮ ಆಹಾರ ಮತ್ತು ಆರೈಕೆ ಪಡೆಯುತ್ತಾರೆ ಎಂಬ ಆಶ್ವಾಸನೆಯಿಂದ ಇರಬಹುದು. ಈ ಕೇಂದ್ರಗಳಿಗೆ ಬರುವ ಮಕ್ಕಳು ಮತ್ತು ವಯಸ್ಕರು ತಮ್ಮ ಮನೆಯಿಂದಾಚೆಯಿದ್ದು ಉಪಯುಕ್ತ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಇದು ವ್ಯಕ್ತಿ ಮತ್ತು ಆರೈಕೆದಾರರಿಬ್ಬರಿಗೂ ಎರಡೂ ಕಡೆಯಿಂದ ಪ್ರಯೋಜನವಾಗುತ್ತದೆ.
 
ಕೇಂದ್ರಕ್ಕೆ ಬರುವ  ಮಕ್ಕಳು ಮತ್ತು ವಯಸ್ಕರಿಗೆ ಜೊತೆಗಾರರು ಸಿಗುತ್ತಾರೆ. ಆಟ ಆಡಲು ಅವಕಾಶ ಇರುತ್ತದೆ. ಅವರಿಗೆ  ಚಿಕಿತ್ಸೆ ಮತ್ತು ಉತ್ತಮ  ಗುಣಮಟ್ಟದ ಆರೈಕೆಯೂ ಸಹ ಸಿಗುತ್ತದೆ. ಇವೆಲ್ಲಕ್ಕೂ ಹೆಚ್ಚಾಗಿ, ಈ ಕೇಂದ್ರಗಳು ಸ್ಥಳೀಯ ಹೆಂಗಸರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡಿರುತ್ತದೆ.
 
ನಾನು ಇಲ್ಲಿ ವಿವರಿಸಿರುವುದು ಸರಳ ಪರಿಹಾರವಾದರೂ  ಆರೈಕೆದಾರರ ಜವಾಬ್ದಾರಿಯನ್ನು ಹಗುರ ಮಾಡಲು ಇದು ದೀರ್ಘಕಾಲೀನ ಮಾರ್ಗವಾಗಿದೆ.
‘ಈ ಕೇಂದ್ರಗಳು ನಾವು ಬಯಸಿದಂತೆಯೇ ಇವೆ’ ಎಂಬುದು  ಆರೈಕೆದಾರರಿಂದ ನಮಗೆ ಬಂದ ಪ್ರತಿಕ್ರಿಯೆ. 
ಪೂರ್ಣಾವಧಿಯ ಹೊಲಿಗೆ ಕೆಲಸ ಮಾಡಲು ಸಾಧ್ಯವಾಗಿರುವ ಒಬ್ಬ ತಾಯಿ ಹೀಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.  “ನನ್ನ ಸಮುದಾಯವು ನನ್ನ ಕೌಶಲ್ಯವನ್ನು ಮೆಚ್ಚಿದೆ . ನನಗೆ ಮತ್ತೆ ಗೌರವ ಬೆಲೆ ಸಿಕ್ಕಿದೆ. ಇಲ್ಲಿ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಮತ್ತು ಈಗ ನನಗೆ ಮನಃಶಾಂತಿ ಸಿಕ್ಕಿದೆ.”  ಮಗನನ್ನು ಕೇಳಿದಾಗ ಅವನು “ಇಲ್ಲಿ ಬಹಳ ಖುಷಿಯಾಗುತ್ತದೆ. ನನಗೆ ಹೊಸ ಸ್ನೇಹಿತರು ಸಿಕ್ಕಿದ್ದಾರೆ.” ಎಂದು ಹೇಳಿದನು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org