ದೌರ್ಬಲ್ಯಗಳು

ಜೀವನಾವಧಿಯ ತೊಂದರೆಗಳು

ವೈಟ್ ಸ್ವಾನ್ ಫೌಂಡೇಶನ್

Q

ವೃದ್ಧಾಪ್ಯದ ಅಸ್ವಸ್ಥತೆಗಳು

A

ಜೀವನದ ಕೆಲ ನಿರ್ದಿಷ್ಟ ಹಂತಗಳಲ್ಲಿ ಕಂಡುಬರುವ ಅಸ್ವಸ್ಥತೆಯ ಬಗ್ಗೆ ಈ ವಿಭಾಗದಲ್ಲಿ ಹೇಳಲಾಗುತ್ತದೆ. ಉದಾಹರಣೆಗೆ ಬಾಲ್ಯಾವಸ್ಥೆಯಲ್ಲಿ ಕಂಡುಬರುವ ಅಸ್ವಸ್ಥತೆಗಳನ್ನು ಶೈಶವದಲ್ಲಿ ಅಥವಾ ಬಾಲ್ಯಾವಸ್ಥೆಯ ಆರಂಭಿಕ ಹಂತದಲ್ಲಿ ಕಂಡುಹಿಡಿಯಲಾಗುತ್ತದೆ. ಕ್ರಮೇಣ ಕಾಣಿಸಿಕೊಂಡು ಮುಂದುವರೆಯುವ ಆಟಿಸಂ, ಬೌದ್ಧಿಕ ಅಸಾಮರ್ಥ್ಯ, ಮಾತಿನ ತೊಂದರೆಗಳು, ಕಲಿಕೆಯ ತೊಂದರೆ ಮುಂತಾದವು ಅವುಗಳಲ್ಲಿ ಕೆಲವು. ಇನ್ನೊಂದೆಡೆ, ಜೀವನದ ಉತ್ತರಾರ್ಧದಲ್ಲಿ, ವ್ಯಕ್ತಿಗಳಿಗೆ ವಯಸ್ಸಾದಂತೆಲ್ಲ, ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳತೊಡಗುತ್ತವೆ. ಅಂತವುಗಳಲ್ಲಿ ಒಂದಾದ ಡಿಮೆನ್ಶಿಯಾ, ಅಲ್ಝೈಮರ್ ಮುಂತಾದ ಖಾಯಿಲೆಗಳು ಸಾಮಾನ್ಯವಾಗಿ ವಯಸ್ಸು ಮಾಗಿದಂತೆ ಕಾಣಿಸಿಕೊಳ್ಳುತ್ತವೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org