ವೈಟ್ ಸ್ವಾನ್ ಫೌಂಡೇಷನ್ ಕುರಿತು ತಿಳಿದುಕೊಳ್ಳಿರಿ

ಪ್ರಶಂಸಾಪತ್ರಗಳು

  • "ನನ್ನ ತಾಯಿ ಮಾನಸಿಕ ಖಾಯಿಲೆಯನ್ನು ಕಳಂಕ ಎಂದು ಭಾವಿಸಿರಲಿಲ್ಲ ” ಸುಬ್ರತೋ ಬಾಗ್ಚಿ ಅಧ್ಯಕ್ಷರು ವೈಟ್ ಸ್ವಾನ್ ಫೌಂಡೇಷನ್

  • "ನನ್ನ ಬದುಕು ಹೇಗೆ ಒಳ್ಳೆಯದಕ್ಕೆ ಬದಲಾಯಿತು ” ಅಮಿತ್ ಪಾಲ್ ತಂತ್ರಜ್ಞಾನ ಸಲಹೆಗಾರ


ಮಾನಸಿಕ ಆರೋಗ್ಯ ಅಭಿಯಾನಕ್ಕೆ ನೆರವು ನೀಡಿ

ನಮ್ಮ ವಾರ್ಷಿಕ ಅಭಿಯಾನದ ಉದ್ದೇಶ ಮಾನಸಿಕ ಆರೋಗ್ಯದ ಬಗ್ಗೆ ಇರುವ ಕಳಂಕವನ್ನು ತೊಡೆದುಹಾಕುವುದೇ ಆಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ದೇಣಿಗೆ ನೀಡುವ ಮೂಲಕ ನೆರವಾಗಿ. ದೇಣಿಗೆ ನೀಡುವ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು<

ದೇಣಿಗೆ ನೀಡುವ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ದೇಣಿಗೆಯನ್ನು ಹೇಗೆ ಉಪಯೋಗಿಸಲಾಗುತ್ತದೆ ?
ವಿಶ್ವಾಸಪೂರ್ಣವಾದ, ಎಲ್ಲವನ್ನೂ ಒಳಗೊಂಡಂತಹ ಮತ್ತು ಎಲ್ಲರಿಗೂ ದೊರೆಯುವಂತಹ ಜ್ಞಾನ ಭಂಡಾರವನ್ನು ವೃದ್ಧಿಪಡಿಸುವುದು ವೈಟ್ ಸ್ವಾನ್ ಫೌಂಡೇಷನ್ನಿನ ಪ್ರಮುಖ ಧ್ಯೇಯ. ನಮ್ಮ ಓದುಗರಿಗೆ ಮತ್ತು ಕೇಳುಗರಿಗೆ ಮೌಲ್ಯಯುತವಾದ ರೀತಿಯಲ್ಲಿ ಅತಿ ಹೆಚ್ಚು ಪ್ರಸ್ತುತ ಎನಿಸುವಂತಹ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ನಾವು ಒಂದು ರಚನಾತ್ಮಕ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ. ವಿಷಯವನ್ನು ಸಂಗ್ರಹಿಸುವ ಮತ್ತು ವೃದ್ಧಿಪಡಿಸುವ ಪ್ರಕ್ರಿಯೆಯನ್ನು ಅರಿಯಲು ಇಲ್ಲಿ ಕ್ಲಿಕ್ ಮಾಡಿ . ನಾವು ಪ್ರಕಟಿಸುವ ಪ್ರತಿಯೊಂದು ಲೇಖನವೂ, ನಾವು ನಮ್ಮ ಓದುಗರಿಗಾಗಿ, ಕೇಳುಗರಿಗಾಗಿ ಬಿಡುಗಡೆ ಮಾಡುವ ಪ್ರತಿಯೊಂದು ಮಾಹಿತಿಯೂ ಸಹ ಹಲವಾರು ಚರ್ಚೆಗಳ ನಂತರ, ಚಿಂತನ ಮಂಥನದ ನಂತರ, ಗುಣಮಟ್ಟದ ಪರಿಶೀಲನೆಯ ನಂತರ ಸಿದ್ಧವಾಗುತ್ತದೆ

ವೈಟ್ ಸ್ವಾನ್ ಫೌಂಡೇಷನ್ನಿಗೆ ನೀವು ನೀಡುವ ದೇಣಿಗೆಯು ಈ ತಿಳುವಳಿಕೆಯ ಮಾಹಿತಿಯನ್ನು ಅಭಿವೃದ್ಧಿಪಡಿಸಲು ವಿನಿಯೋಗವಾಗುತ್ತದೆ. ನಿಮ್ಮ ಬೆಂಬಲ ನಮ್ಮ ಮಾಹಿತಿ ವಿತರಣೆಯ ಮಾರ್ಗಗಳನ್ನೂಬಲಪಡಿಸಲು ನೆರವಾಗುತ್ತದೆ. ನಮ್ಮ ಬಳಿ ಇರುವ ಮಾಹಿತಿಯನ್ನು ವಿತರಿಸಲು ವೈಟ್ ಸ್ವಾನ್ ಫೌಂಡೇಷನ್ ಹಲವು ವೇದಿಕೆಗಳನ್ನು ಹೊಂದಿರುತ್ತದೆ. ಇವುಗಳ ಪೈಕಿ ಪೋರ್ಟಲ್, ಸುದ್ದಿ ಪತ್ರಿಕೆ, ವಿಡಿಯೋ ಸಮಾವೇಶ, ತಂತ್ರಜ್ಞಾನ ಪುಸ್ತಕಗಳು, ಆನ್ ಲೈನ್ ಮತ್ತು ಆಫ್ ಲೈನ್ ಅಭಿಯಾನ ಮುಖ್ಯವಾಗಿವೆ.

ನಮ್ಮ ಪೋರ್ಟಲ್ ನಲ್ಲಿ ಮಾಹಿತಿಯನ್ನು ಹುಡುಕಲು ಉತ್ತಮ ಮಾರ್ಗಗಳನ್ನು ಒದಗಿಸುವುದೇ ಅಲ್ಲದೆ ಉತ್ತಮ ವಿನ್ಯಾಸ ಮತ್ತು ರಚನೆಯನ್ನೂ ರೂಪಿಸಲಾಗಿದೆ. ಆದರೂ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ನೀವು ನೀಡುವ ಹಣ ನಮ್ಮ ತಂತ್ರಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಮಗೆ ನೆರವಾಗುತ್ತದೆ.

ನಿಮ್ಮ ದೇಣಿಗೆ ನಾವು ನೀಡುವ ಮಾಹಿತಿಗಳನ್ನು ಮುದ್ರಿಸಲೂ ನೆರವಾಗುತ್ತದೆ. ಇದರಿಂದ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಅಂತರ್ಜಾಲ ಸೌಲಭ್ಯ ಇಲ್ಲದೆ ಇರುವವರಿಗೆ ಈ ಮುದ್ರಿತ ಮಾಹಿತಿ ನೆರವಾಗುತ್ತದೆ.

ದೇಣಿಗೆಯನ್ನು ಯಾರು ನೀಡಬಹುದು ?
ಮಾನಸಿಕ ಆರೋಗ್ಯ ಅಭಿಯಾನಕ್ಕೆ ನೆರವಾಗಲು ಯಾರು ಬೇಕಾದರೂ ದೇಣಿಗೆ ನೀಡಬಹುದು. ನೀವು ವ್ಯಕ್ತಿಯಾಗಿರಬಹುದು, ತಂಡವಾಗಿರಬಹುದು, ಸಂಸ್ಥೆ ಅಥವಾ ಸಂಘಟನೆಯಾಗಿರಬಹುದು. ನೀವು ಭಾರತದಲ್ಲೇ ವಾಸಿಸುತ್ತಿರಬಹುದು ಅಥವಾ ವಿಶ್ವದ ಯಾವುದೇ ರಾಷ್ಟ್ರದಲ್ಲಿ ವಾಸಿಸುತ್ತಿರಬಹುದು. ನಿಮಗೆ ನಮ್ಮ ಕಾರ್ಯ ವೈಖರಿ ಇಷ್ಟವಾದರೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಅಭಿಯಾನದ ಪ್ರಭಾವವನ್ನು ಮೆಚ್ಚಿಕೊಳ್ಳುವವರಾದರೆ ನಿಮಗೆ ನಮ್ಮ ಅಭಿಯಾನದಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ನೀವು ನಿಮ್ಮ