ಹೊಸ ತಾಯ್ತನದ ಮಾನಸಿಕ ಒತ್ತಡಗಳ
ತಾಯ್ತನ

ಹೊಸ ತಾಯ್ತನದ ಮಾನಸಿಕ ಒತ್ತಡಗಳ

ವೈಟ್ ಸ್ವಾನ್ ಫೌಂಡೇಶನ್

ಹೊಸ ತಾಯ್ತನದ ಮಾನಸಿಕ ಒತ್ತಡಗಳ ಬಗ್ಗೆ ಸಾಕಷ್ಟು ಗಮನ ಹರಿಸಿದ್ದೇವೆಯೇ? ಎಷ್ಟು ಬಾರಿ ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ ನಾವು? ಮಗು ಹುಟ್ಟಿದ ತಕ್ಷಣ ತನ್ನಲ್ಲಿ ಆಗುವ ಮಾನಸಿಕ ಬದಲಾವಣೆಗಳು, ಹಾಗೂ ಭಾವನೆಗಳಲ್ಲಾಗುವ ಏರುಪೇರುಗಳ ಬಗ್ಗೆ ಎಷ್ಟು ತಾಯಂದಿರಿಗೆ ತಿಳಿದಿದೆ? ತನ್ನ ಅನುಭವಕ್ಕೆ ಬರುವ ಅತಂಕ, ಕಾಳಜಿ, ಯೋಚನೆಗಳು ಸಹಜ ಎನ್ನುವುದು ಹೊಸ ಅಮ್ಮನಿಗೆ ತಿಳಿದಿದ್ದರೆ ಸಾಕು.
 
ತಾಯ್ತನ ಅತ್ಯಂತ ಸುಂದರ ಹಾಗೂ ಮಹತ್ವಪೂರ್ಣ ಘಟ್ಟ. ಆದರೆ ಮಾಹಿತಿಯ ಕೊರತೆಯಿಂದಾಗಿ ಈ ಹಂತ ಬಹಳ ಕಷ್ಟಕರ ಕೂಡ ಆಗಿಬಿಡಬಹುದು. ಹಾರ್ಮೋನುಗಳಿಂದಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಈ ಸಮಯದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಆದರೆ ಮಾನಸಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಪ್ರವೃತ್ತಿ ಕಡಿಮೆ ಇದೆ. ನಿಮ್ಮ ಮುಂದಿರುವ ಈ-ಪುಸ್ತಕದಲ್ಲಿ ತಾಯ್ತನದ ದಿನಗಳಲ್ಲಿ ಏನನ್ನು ನಿರೀಕ್ಷಿಸಬಹುದು ಎಂದು ಚರ್ಚಿಸಲಾಗಿದೆ. ಅಷ್ಟೇ ಅಲ್ಲ, ದೈಹಿಕ ಹಾಗೂ ಮಾನಸಿಕವಾಗಿ ಕಷ್ಟ ಎನ್ನಿಸುವ ಹಂತದಲ್ಲಿ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದೂ ಕೂಡ ವಿವರಿಸಲಾಗಿದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org