ಇಸಿಟಿ ಕುರಿತು ಸಾಮಾನ್ಯವಾಗಿರುವ ಸತ್ಯ ಮಿತ್ಯಗಳು

ತಪ್ಪು ನಂಬಿಕೆ: ವ್ಯಕ್ತಿಗಳು ಎಲ್ಲವನ್ನು ಮರೆಯಲು ಇಸಿಟಿಯನ್ನು ನೀಡಲಾಗುತ್ತದೆ.

ವಾಸ್ತವ: ಇಸಿಟಿಯಿಂದ ತಾತ್ಕಲಿಕವಾಗಿ ನೆನಪು ಮಾಸುವುದು ಸಾಮಾನ್ಯ. ಇದು ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ. ಇಸಿಟಿ ಪ್ರಕ್ರಿಯೆ ಮುಗಿದ ಬಳಿಕ ನೆನಪಿನ ಸಾಮರ್ಥ್ಯ ವಾಪಸ್ ಬರುತ್ತದೆ.

ತಪ್ಪು ನಂಬಿಕೆ: ಕೆಲವರು ಮನೋರೋಗ ಆಸ್ಪತ್ರೆಗೆ ಸೇರಿದರೆ ರೋಗಿಗೆ ಅರಿವಿಲ್ಲದಂತೆ ಇಸಿಟಿ ನೀಡಲಾಗುವುದು.

ವಾಸ್ತವ: ವೈದ್ಯರು ರೋಗಿ ಮತ್ತು ಆತನ ಕುಟುಂಬದ ಜೊತೆ ಚರ್ಚಿಸಿ, ಅವರ ಒಪ್ಪಿಗೆ ಪಡೆದ ನಂತರವೇ ಇಸಿಟಿ ನೀಡಲಾಗುತ್ತದೆ.

ತಪ್ಪು ನಂಬಿಕೆ: ಇಸಿಟಿ ಅನುಭವ ಅತ್ಯಂತ ನೋವಿನದು ಮತ್ತು ಭಯಯುಕ್ತ.

ವಾಸ್ತವ: ಅರವಳಿಕೆಯ ಪ್ರಭಾವದಲ್ಲಿ ಇಸಿಟಿ ನೀಡಲಾಗುತ್ತದೆ ಹಾಗಾಗಿ ರೋಗಿಗೆ ನೋವು ಅಥವಾ ವಿದ್ಯುತ್‌ ಶಾಕ್‌ ಗೊತ್ತಾಗುವುದಿಲ್ಲ.

ತಪ್ಪು ನಂಬಿಕೆ: ಇಸಿಟಿ ಮೆದುಳಿಗೆ ಹಾನಿ ಮಾಡುತ್ತದೆ ಮತ್ತು ರೋಗಿಯ ಬುದ್ಧಿಶಕ್ತಿ ಕಡಿಮೆಯಾಗುತ್ತದೆ ಅಥವಾ ವ್ಯಕ್ತಿತ್ವ ಬದಲಾಗುತ್ತದೆ.

ವಾಸ್ತವ: ಇಸಿಟಿ ಮೆದುಳಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ಇದು ತಾತ್ಕಾಲಿಕವಾಗಿ ಜ್ಞಾಪಕಶಕ್ತಿ ಕಡಿಮೆ ಮಾಡಬಹುದು. ಒಟ್ಟಾರೆಯಾಗಿ ಬುದ್ಧಿವಂತಿಕೆ ಅಥವಾ ವ್ಯಕ್ತಿತ್ವಕ್ಕೆ ಯಾಗುವುದಿಲ್ಲ.

ತಪ್ಪು ನಂಬಿಕೆ: ಇಸಿಟಿ ಶಿಕ್ಷೆಯಾಗಿ ನೀಡಲಾಗುತ್ತದೆ.

ವಾಸ್ತವ: ಇಸಿಟಿ ಶಿಕ್ಷೆಯಲ್ಲ. ಮನೋರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ನೀಡುವ ಒಂದು ವೈದ್ಯಕೀಯ ಪದ್ದತಿ. ಅದಕ್ಕಿಂತ ಹೆಚ್ಚಾಗಿ ಇದೊಂದು ನೋವಿನ ಪ್ರಕ್ರಿಯೆಯಲ್ಲ.

ತಪ್ಪು ನಂಬಿಕೆ: ವೈದ್ಯರು ಇಸಿಟಿ ಸೂಚಿಸಿದ್ದಾರೆಂದರೆ ಆ ಸ್ಥಿತಿಗೆ ಬೇರೆ ಯಾವುದೇ ಚಿಕಿತ್ಸೆ ಕೆಲಸ ಮಾಡುತ್ತಿಲ್ಲ, ಸ್ಥಿತಿ ನಿರಾಶಾದಾಯಕವಾಗಿದೆ ಎಂದರ್ಥ.

ವಾಸ್ತವ: ಸಾಮಾನ್ಯವಾಗಿ ವೈದ್ಯರು ಪ್ರಸ್ತುತದ ಸ್ಥಿತಿಗೆ ಲಭ್ಯವಿರುವ ಚಿಕಿತ್ಸೆಗಳಲ್ಲಿ ಇಸಿಟಿ ತುಂಬಾ ಒಳ್ಳೆಯ ಚಿಕಿತ್ಸೆಯೆಂದು ಸೂಚಿಸುತ್ತಾರೆ. ನೀವು ಇಸಿಟಿ ಸ್ವೀಕರಿಸಲು ಒಪ್ಪದಿದ್ದರೆ ವೈದ್ಯರು ಮುಂದಿನ ಅತ್ಯುತ್ತಮ ಚಿಕಿತ್ಸೆ ಸೂಚಿಸುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org