ಪ್ಲೇ ಥೆರೆಪಿ

ಆಟದ ಮೂಲಕ ಮಕ್ಕಳಲ್ಲಿ ಕಂಡುಬರುವ ಸಮಸ್ಯೆಯನ್ನು ಬಗೆಹರಿಸಬಹುದು

ವಯಸ್ಕರಾಗಿ ನಮಗೆ ಯಾವುದಾದರೂ ಭಾವನಾತ್ಮಕ ಸಮಸ್ಯೆ ಅಥವಾ ಮಾನಸಿಕ ತೊಂದರೆ ಉಂಟಾದಾಗ  ನಮ್ಮ ಭಾವನೆಗಳನ್ನು ಇತರರ ಜತೆ ಹಂಚಿಕೊಳ್ಳುತ್ತೇವೆ. ಆದರೆ ಮಕ್ಕಳು  ಹೇಗೆ ಮಾಡಲು ಆಗದೆ ಇರಬಹುದು. ಕೆಲ ಮಕ್ಕಳಿಗೆ ಸಂಕೋಚ ಇರಬಹುದು ಅಥವಾ ಕೆಲವರಿಗೆ ಸಮಸ್ಯೆ ಬಗ್ಗೆ ಮಾತನಾಡಲು ಕಿರಿ ಕಿರಿ ಎನಿಸಬಹುದು. ಇಂಥ ಸಂದರ್ಭದಲ್ಲಿ  ಮಕ್ಕಳ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ಲೇ ಥೆರಪಿ ಸುಲಭ ಹಾಗೂ ಸಮರ್ಥ ಮಾಧ್ಯಮ.

ಇಲ್ಲಿ ಚಿಕಿತ್ಸಕ  ಆಟವನ್ನು ಮಾಧ್ಯಮವಾಗಿ ಬಳಸಿಕೊಂಡು, ಮಕ್ಕಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇದರಿಂದ ಮಕ್ಕಳ ಮನಸ್ಸಿನಲ್ಲಿರುವ ಭಾವನೆಯನ್ನು ಅರಿಯಲು ಸಹಾಯಕವಾಗುತ್ತದೆ. ಮಕ್ಕಳಿಗೆ ಕೌತುಕಗಳನ್ನು ಭೇದಿಸಲು ಆಟ ಸೂಕ್ತವಾದ ಮಾಧ್ಯಮ. ಕೆಲ ಮಕ್ಕಳಿಗೆ ಆಟ, ಸುಪ್ತ ಭಾವನೆಗಳನ್ನು ಹೊರಹಾಕುವ ಕ್ರಿಯೆಯೂ ಆಗಿರುತ್ತದೆ.

 ಇಲ್ಲಿ ಮಕ್ಕಳು ತಮ್ಮ ಜೀವನದ ಮೇಲಿನ ನಿಯಂತ್ರಣವನ್ನು ತಾವೇ ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಅವರಿಗೆ ಕಿರಿ ಕಿರಿ ಉಂಟುಮಾಡುವ ಅಂಶಗಳನ್ನು ಸಹಜ ಹಾಗೂ ಪರಿಚಿತ ಮಾಧ್ಯಮದ ಮೂಲಕ  ತಮ್ಮದೇ ವೇಗದಲ್ಲಿ  ಪರಿಹರಿಸಿಕೊಳ್ಳಲು  ಸಮರ್ಥರಾಗುತ್ತಾರೆ.”  ಎಂದು ನ್ಯಾಶನಲ್ ಅಸೋಸಿಯೇಶನ್ ಫಾರ್ ಪ್ಲೇ ಥೆರಪಿ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕ ಲೂಸಿ ಬೊವೆನ್ ಹೇಳುತ್ತಾರೆ.

ಆಟದ ಮೂಲಕ ಮಕ್ಕಳ ಅಗತ್ಯತೆಗಳನ್ನು ತಿಳಿದುಕೊಳ್ಳಲು ಸಾಧ್ಯ . ಈ ಚಿಕಿತ್ಸೆಯನ್ನು ಇತರ ಮಾನಸಿಕ ಮೌಲ್ಯಮಾಪನದ ಜತೆಗೆ ಉಪಯೋಗಿಸುತ್ತಾರೆ. ಕೆಲವೊಮ್ಮೆ ಚಿಕಿತ್ಸಕ, ಮಕ್ಕಳ ಭಾವನೆಗಳನ್ನು ಅರಿಯಲು ಕಲಾ ಚಿಕಿತ್ಸೆಯನ್ನೂ ಸಹ ಬಳಸಬಹುದು.

ಪ್ಲೇ ಥೆರಪೀ 

ಬಹುತೇಕ ಆಸ್ಪತ್ರೆಗಳು ಹಾಗೂ ಆರೋಗ್ಯ ವ್ಯವಸ್ಥೆಗಳು ವಯಸ್ಕರಿಗಾಗಿ ವಿನ್ಯಾಸಗೊಳಿಸಿರುತ್ತಾರೆ.  ಒಂದು ಆಫೀಸ್ ಸೆಟಪ್ ನಂತೆ ಇರುವ ಕ್ಲಿನಿಕ್‌ನಲ್ಲಿ ವೈದ್ಯರು ವ್ಯಕ್ತಿಯ ಜೊತೆ ಮಾತನಾಡಿ ಅವರ ಸಮಸ್ಯೆ ಏನು ಎಂದು ವಿಚಾರಿಸುತ್ತಾರೆ. ಆದರೆ ಈ ತರದ ವ್ಯವಸ್ಥೆ ಮಕ್ಕಳಿಗೆ ಇಷ್ಟವಿರುವುದಿಲ್ಲ ಹಾಗೂ ಅವರು ತಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ

ಮಕ್ಕಳಿಗೆ ಸೂಕ್ತವಾದ ವಾತಾವರಣ ಸೃಷ್ಟಿಸುತ್ತದೆ.  ಕೊಠಡಿಯಲ್ಲಿ ಹಲವು ಬಗೆಯ ಆಟಿಕೆಗಳು ಮತ್ತು ಕ್ರೀಡಾ ಸಾಧನಗಳು ಇರುತ್ತವೆ. ಇಲ್ಲಿ ಇಂಥ ಕ್ರೀಡಾಸಾಧನಗಳು ಆಟಿಕೆಗಳೂ ಆಗಿರಬಹುದು. (ಉದಾಹರಣೆಗೆ  ಗೊಂಬೆ ಮನೆಯಲ್ಲಿ ತಂದೆ- ತಾಯಿ, ಅಜ್ಜ ಅಜ್ಜಿ ಮತ್ತು ಮಕ್ಕಳು, ಸಾಕು ಪ್ರಾಣಿಗಳು, ನಾಯಿಮರಿ ಅಥವಾ ಇತರ ಆಟಿಕೆಗಳು),  ಕಲೆ ಮತ್ತು ಕರಕುಶಲಕ ವಸ್ತುಗಳು (ಕಾಗದ, ಪೆನ್, ಬಣ್ಣ, ಪೆಯಿಂಟ್ ಹಾಗೂ ಇತರ ಲೇಖನ ಸಾಮಗ್ರಿಗಳು). ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಬಹುದು. ಇಲ್ಲಿ ಮಕ್ಕಳು ಸುತ್ತ ಮುತ್ತ ಅಡ್ಡಾಡಲು,  ಹಾಗೂ ಅವರಿಗೆ ಆಸಕ್ತಿ ಇರುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಇರುತ್ತದೆ.

ಕೆಲವೊಮ್ಮೆ ಚಿಕಿತ್ಸಕರು, ಮಕ್ಕಳ ಅಗತ್ಯೆಗನುಸುರಾವಾಗಿ ಗ್ರೂಪ್ ಥೆರಪೀ ಬಳಸಬಹುದು.ಇಲ್ಲಿ ಮಕ್ಕಳು ತಮ್ಮದೇ ವಯಸ್ಸಿನ ಇತರ ಮಕ್ಕಳೊಂದಿಗೆ ಆಟವಾಡುತ್ತಾ ತಮ್ಮ ಮನಸ್ಸಿನಲ್ಲಿರುವ ಹಲವು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದು ಚಿಕಿತ್ಸೆಗೆ ಸಹಾಯವಾಗುತ್ತದೆ.

ಚಿಕಿತ್ಸೆ ಸೆಷನ್‌ ಸಾಮಾನ್ಯವಾಗಿ ೪೫ ನಿಮಿಷದಿಂದ ಒಂದು ಗಂಟೆಯ ಕಾಲವಿರುತ್ತದೆ ಮಗುವನ್ನು ಆಟದ ಕೊಠಡಿಗೆ ಕರೆದೊಯ್ಯಲಾಗುತ್ತದೆ. ಅವರ ವಯಸ್ಸಿಗೆ ಹೊಂದಿಕೆಯಾಗುವ  ಆಟದ ಸಾಮಗ್ರಿಗಳನ್ನು ಆಯ್ಕೆ ಮಾಡಲು ಸೂಚಿಸುತ್ತಾರೆ.

ಮಕ್ಕಳು ಆಯ್ಕೆ ಮಾಡುವ ಆಟಿಕೆಗಳು ಅವರ ಭಾವನಾತ್ಮಕ ಸ್ಥಿತಿಯನ್ನು ಸೂಚಿಸುತ್ತವೆ. ಕೆಲವೊಮ್ಮೆ ತಮ್ಮ ಸವಾಲುಗಳನ್ನು ಹಂಚಿಕೊಳ್ಳುವ ಬಗ್ಗೆ ಕೂಡಾ ಮನಸ್ಸು ಮಾಡಬಹುದು. ಉದಾಹರಣೆಗೆ, ಕುಟುಂಬದ ಸಮಸ್ಯೆಯಿದ್ದಲ್ಲಿ, ಮಗು ಒಂದು ಸುಖಿ ಕುಟುಂಬದ ಚಿತ್ರವನ್ನು ಬಿಡಿಸಬಹುದು. ನಡತೆಯ ಸಮಸ್ಯೆಯಿದ್ದರೆ ಆ ಮಗು  ಒಂದು ಗೊಂಬೆಗೆ ಶೂಟ್ ಮಾಡಲು ಪಿಸ್ತೂಲ್ ಆಯ್ಕೆ ಮಾಡಬಹುದು ಅಥವಾ ನೀಡಿದ ಆಟಿಕೆಗಳ ಮೂಲಕ ಹಿಂಸೆಯ ಕೃತ್ಯವನ್ನು ಅಭಿವ್ಯಕ್ತಪಡಿಸಬಹುದು.  

ಉದಾಹರಣೆ: ಲೈಂಗಿಕ ಕಿರುಕುಳಕ್ಕೆ ಒಳಗಾದ ಒಂದು ಏಳು ವರ್ಷದ ಹೆಣ್ಣುಮಗುವಿಗೆ ಆಕೆಯ ಭಾವನೆಗಳನ್ನು ಶಬ್ದಗಳ ಮೂಲಕ ಅಭಿವ್ಯಕ್ತಗೊಳಿಸಲು ಸಾಧ್ಯವಾಗಲಿಲ್ಲ. ಆಟದ ಕೋಣೆಯಲ್ಲಿ ಆಕೆ ಒಂದು ಗೊಂಬೆಯನ್ನು ಆಯ್ಕೆ ಮಾಡಿಕೊಂಡು, ಅದರ ಬಟ್ಟೆಗಳನ್ನು ಕಿತ್ತು ಹಾಕಿದಳು.  ಈ ಸಂದರ್ಭದಲ್ಲಿ ಚಿಕಿತ್ಸಕ ಆಕೆಯ ಜತೆ ಸೌಮ್ಯ ಸಂವಾದ ಮಾಡಿ ಸಮಸ್ಯೆಯ ಬಗ್ಗೆ ಹೆಚ್ಚು ಮಾಹಿತಿ ಪಡೆದರು. ಆ ಮಗು ನಿಧಾನವಾಗಿ "ಅಂಕಲ್ ನನಗೆ ಇದನ್ನೇ ಮಾಡಿದ್ದರು" ಎಂದು ಹೇಳಿದಳು .

ಒಬ್ಬ ಐದು ವರ್ಷದ ಬಾಲಕ ಒಂದು ಗೊಂಬೆಮನೆ ಕುಟುಂಬದ ಜೊತೆ ಆಟವಾಡಲು ಆರಂಭಿಸಿದ . ಬಾಲಕ ಪುಟ್ಟ ಮಗುವಿನ ಗೊಂಬೆಯನ್ನು ತೆಗೆದು ಮರಳಿನ ದಿಬ್ಬದಲ್ಲಿ ಆಳ ಮಾಡಿ ಅದನ್ನು ಹೂತುಹಾಕಿದ . ಉಳಿದ ತಾಯಿ, ತಂದೆ, ಮಗ, ಅಜ್ಜ- ಅಜ್ಜಿ ಗೊಂಬೆಗಳನ್ನು ಗೊಂಬೆ ಮನೆಗೆ ಸೇರಿಸಿದ. ಹೀಗೆ ಯಾಕೆ ಮಾಡಿದೆ ಎಂದು ಚಿಕಿತ್ಸಕ ಕೇಳಿದಾಗ, ಅವನು "ಇದು ನನ್ನ ತಂಗಿ. ಆಕೆಯಿಂದಾಗಿ ನನ್ನ ತಾಯಿ ನನಗೆ ಹೊಡೆಯುತ್ತಾಳೆ. ಮತ್ತು ನನ್ನ ಕಡೆಗೆ ಗಮನ ಹರಿಸುವುದಿಲ್ಲ" ಎಂದು ಹೇಳಿದ ತಕ್ಷಣ ಚಿಕಿತ್ಸಕ, ಇದು ಒಡಹುಟ್ಟಿದವರ ಪೈಪೋಟಿಯ ಸಮಸ್ಯೆ ಎಂದು ಅರ್ಥವಾಯಿತು ಈ ಚಿಕಿತ್ಸಕರೂ ಸಮಸ್ಯೆಯನ್ನು ಸರಿಪಡಿಸಲು ನೆರವಾಗುತ್ತಾರೆ.

(ಈ ಕಥಾವಳಿಯನ್ನು ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಸೃಷ್ಟಿಸಲಾಗಿದ್ದು, ವಿಭಿನ್ನ ಪೋಷಕರ ಅಭಿಪ್ರಾಯಗಳನ್ನು ಮತ್ತು ಮಕ್ಕಳ ಗುಣಲಕ್ಷಣಗಳನ್ನು ಪರಿಗಣಿಸಲಾಗಿದೆ).

ಮಕ್ಕಳು ಆಟಿಕೆಗಳ ಜತೆ ಆಟವಾಡುವುದನ್ನೇ ವೀಕ್ಷಿಸುತ್ತಾ ವಿಶ್ಲೇಷಣೆಗಳನ್ನು ಬರೆದುಕೊಳ್ಳುತ್ತಾರೆ. ಕೆಲವೊಮ್ಮೆ ಮಕ್ಕಳಿಗೆ ಹಿನ್ನೆಲೆ ಸಹಕಾರವನ್ನು ನೀಡಿ  ಕೆಲ ನಿರ್ದಿಷ್ಟ ಚಟುವಟಿಕೆ ನಿರ್ವಹಿಸಲು ಹೇಳುತ್ತಾರೆ. ಸೆಷನ್‌ ಪೂರ್ಣಗೊಂಡ ಬಳಿಕ, ಚಿಕಿತ್ಸಕ ಮಕ್ಕಳ ಜತೆ ಮಾತನಾಡುತ್ತಾರೆ.

"ಪ್ಲೇ ಥೆರಪೀ  ಚಿಕಿತ್ಸಕ ಹಾಗೂ ಮಗುವಿನ ಮಧ್ಯೆ ವಿಶ್ವಾಸವನ್ನು ಬೆಳೆಸುತ್ತದೆ. ಇಲ್ಲಿ ಮಗು ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಲು ಅನುಕೂಲವಾಗಿರುತ್ತದೆ. ಚಿಕಿತ್ಸಕ ಮಗುವಿನ ಮಾತನ್ನು ಅರ್ಥಮಾಡಿಕೊಂಡು ಯಾವ ಅನುಭವ ಪಡೆದಿದೆ ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಮಗುವಿಗೆ ಸುರಕ್ಷೆ ಹಾಗೂ ನಂಬಿಕೆಯ ಮನೋಭಾವ ಮೂಡಿಸಬೇಕು.

ಹಾಗೆಯೇ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಪ್ರೋತ್ಸಾಹ ನೀಡಬೇಕು. ಆಟದ ಮೂಲಕ ಮತ್ತು ಚಿಕಿತ್ಸಕರ ನೆರವಿನ ಮೂಲಕ, ಮಕ್ಕಳು ತಮ್ಮ ಗೊಂದಲದ ಭಾವನೆಗಲಿಂದ ಹೊರಬರಲು ಸಾಧ್ಯ. ಅಂತೆಯೇ ತಾವು ಯಾರು ಹಾಗೂ ತಮ್ಮ ಸುತ್ತ ಎಂಥ ಜಗತ್ತು ಇದೆ ಎಂದು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ" ಎಂದು ಬೊವೆನ್ ವಿವರಿಸುತ್ತಾರೆ.

ಚಿಕಿತ್ಸಕರು ಪೋಷಕರು ಮತ್ತು ಕುಟುಂಬದ ಇತರ ಸದಸ್ಯರ ಜತೆಯೂ ಮಾತನಾಡುತ್ತಾರೆ. ಅವರು ಏನು ಗಮನಿಸಿದ್ದಾರೆ ಎಂದು ತಿಳಿದುಕೊಂಡು ಮಗುವಿನ ಸಮಸ್ಯೆಯ ತೀವ್ರತೆಯನ್ನು ವಿಶ್ಲೇಷಿಸುತ್ತಾರೆ. ಇಂಥ ನಿರ್ದಿಷ್ಟ ನಡವಳಿಕೆಯನ್ನು ಮಗು ಎಲ್ಲಿ, ಯಾವ ಸನ್ನಿವೇಶದಲ್ಲಿ ಪ್ರದರ್ಶಿಸುತ್ತದೆ ಎಂದು ಕೇಳುತ್ತಾರೆ? ಈ ಮಾಹಿತಿಗಳನ್ನು ಬಳಸಿಕೊಂಡು ಮಗುವಿನ ಸುಧಾರಣೆಗೆ ಯಾವ ಚಿಕಿತ್ಸೆ ಅಗತ್ಯ ಎಂದು ನಿರ್ಧರಿಸುತ್ತಾರೆ.

ಯಾವ ಸಮಸ್ಯೆಗೆ ಇದು ಪರಿಣಾಮಕಾರಿ?:
ಮಕ್ಕಳ ಹಲವು ಬಗೆಯ ಸಮಸ್ಯೆಗಳಿಗೆ ಪ್ಲೇ ಥೆರಪೀ  ಬಳಸಬಹುದು.

  • ದೈಹಿಕ ಅಥವಾ ಮಾನಸಿಕ ಆಘಾತ, ಲೈಂಗಿಕ ಶೋಷಣೆ
  • ಮಕ್ಕಳು ಹಿಂಸೆ ಅಥವಾ ಶೋಷಣೆ ವೀಕ್ಷಿಸಿ ಭಯಭೀತರಾದಾಗ
  • ಅಧಿಕಾರಿಗಳು ಅಥವಾ ಶಿಕ್ಷಕರಿಂದ ಕಠಿಣ ಶಿಕ್ಷೆಗೆ ಒಳಗಾದಾಗ
  • ಸಶಸ್ತ್ರ ಸಂಘರ್ಷಗ ಅಥವಾ ನೈಸರ್ಗಿಕ ವಿಕೋಪನೋಡಿದಾಗ
  • ನಡತೆಯ ಸಮಸ್ಯೆ ಇದ್ದಾಗ
  • ಪೋಷಕರ ವಿಚ್ಛೇದನ ಅಥವಾ ನಿಧನ, ಕುಟುಂಬದಿಂದ ದೂರ ಹೋಗಬೇಕಾದ ಸಂದರ್ಭ ಬಂದಾಗ
  • ಆತಂಕ ಅಥವಾ ದುಖದ ಸಮಸ್ಯೆ
  • ತಮ್ಮ ತಕ್ಷಣದ ಪರಿಸರದ ಜತೆ ಹೊಂದಿಕೊಳ್ಳಲು ಕಷ್ಟವಾದರೆ

ಇನ್ನೊಂದು ಪ್ರಮುಖ ಅಂಶವೆಂದರೆ, "ಎಲ್ಲ ಮಕ್ಕಳಿಗೂ, ಎಲ್ಲ ಸಮಸ್ಯೆಗಳಿಗೂ ಪ್ಲೇ ಥೆರಪೀ  ಫಲಕಾರಿಯಾಗದು. ಇಲ್ಲಿ ಚಿಕಿತ್ಸಕ ಮೊದಲು ಮಕ್ಕಳ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಮಗು ತೀರಾ ಆಕ್ರಮಣಕಾರಿ ಅಥವಾ ಅತಿಕ್ರಿಯಾಶೀಲವಾಗಿದ್ದರೆ, ಈ ಥೆರಪೀ  ಆರಂಭಿಸುವ ಮುನ್ನ ಇತರ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗುತ್ತದೆ." ಎಂದು ನಿಮ್ಹಾನ್ಸ್‌ನ ಮಕ್ಕಳು ಹಾಗೂ ಪ್ರೌಢವಯಸ್ಕರ ಮಾನಸಿಕ ರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಾನ್ ವಿಜಯಸಾಗರ್ ವಿವರಿಸುತ್ತಾರೆ.

ಮಕ್ಕಳಿಗೆ ಹೇಗೆ ಸಹಕಾರಿ?

ಪ್ಲೇ ಥೆರಪೀ  ಮಕ್ಕಳ ಭಾವನೆಗಳ ವಿರೇಚನೆಗೆ ಸಹಾಯ ಮಾಡುತ್ತದೆ. ಮಕ್ಕಳು ಈ ಕೌಶಲ್ಯಗಳನ್ನು ಕಲಿಯುತ್ತಾರೆ:

  • ಮೂಲಭೂತ ಕೌಶಲ ಅಥವಾ ಉತ್ತಮ ಚಲನಾ ಕೌಶಲ
  • ನಿರ್ಧಾರ ಮಾಡುವ ಹಾಗೂ ಸಮಸ್ಯೆ ಬಗೆಹರಿಸುವ ಕೌಶಲ
  • ಸಾಮಾಜಿಕ ಕೌಶಲ
  • ಸಿಟ್ಟು ಕಡಿಮೆಯಾಗಿಸಲು ಪ್ಲೇ ಥೆರಪೀ ಉತ್ತಮ ಚಿಕಿತ್ಸೆ
  • ಆತ್ಮವಿಶ್ವಾಸ ಹೆಚ್ಚಿಸುತ್ತದೆ

ಕುಟುಂಬದ ಪಾತ್ರವೇನು?

ಬಹುತೇಕ ಸೆಷನ್‌ ಚಿಕಿತ್ಸಕ ಹಾಗೂ ಮಗುವಿನ ನಡುವೆಯೇ ಇರುತ್ತವೆ. ಅಥವಾ ಗ್ರೂಪ್ ಥೆರಪೀಯಲ್ಲಿ ಇತರ ಮಕ್ಕಳ ಜತೆಗೆ ಇರುತ್ತವೆ. ಮಕ್ಕಳ ಜತೆ ಮನೆಯಲ್ಲಿ ಆಟವಾಡಲು ಪೋಷಕರಿಗೆ ತರಬೇತಿ ನೀಡಲಾಗುತ್ತದೆ. ಮಕ್ಕಳ ಜತೆ ಹೇಗೆ ಸಂವಾದ ನಡೆಸಬೇಕು ಎಂಬ ತರಬೇತಿ ನೀಡಲಾಗುತ್ತದೆ.

ಕೆಲವೊಮ್ಮೆ ಫ್ಯಾಮಿಲೀ ಥೆರಪೀ  ಅಥವಾ ಗ್ರೂಪ್ ಥೆರಪೀಯಲ್ಲಿ ಭಾಗವಹಿಸಲು ಚಿಕಿತ್ಸಕರು ಸೂಚಿಸುತ್ತಾರೆ.  ಇದರ ಮೂಲಕ ಪೋಷಕರು ಮಕ್ಕಳನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.

ಪ್ಲೇ ಥೆರಪೀಗೆ ಯಾರನ್ನು ಸಂಪರ್ಕಿಸಬೇಕು?
ಪ್ಲೇ ಥೆರಪೀಯಲ್ಲಿ ವಿಶೇಷ ತರಬೇತಿ ಪಡೆದ ಎಲ್ಲ ಮಾನಸಿಕ ಆರೋಗ್ಯ ತಜ್ಞರು ಈ ಚಿಕಿತ್ಸೆಯನ್ನು ನೀಡಬಲ್ಲರು. ಇಲ್ಲಿ ಚಿಕಿತ್ಸಕ ಸ್ವತಂತ್ರ್ಯವಾಗಿ, ಅಥವಾ ಆಸ್ಪತ್ರೆ ಯಲ್ಲಿ ಕಾರ್ಯ ನಿರ್ವಹಿಸಬಹುದು.

ನೀವು ಚಿಕಿತ್ಸಕರನ್ನು ಹುಡುಕುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿ:

  • ಅವರು ಅರ್ಹ ಚಿಕಿತ್ಸಕರೇ?
  • ಮಕ್ಕಳ ಜತೆ ಕಾರ್ಯನಿರ್ವಹಿಸಲು ಅವರಿಗೆ ಅನುಭವ ಇದೆಯೇ?
  • ಎಷ್ಟು ಸಮಯದಿಂದ ಅವರು ಈ ಕ್ಷೇತ್ರದಲ್ಲಿದ್ದಾರೆ?

ಇವೆಲ್ಲದರ ಜತೆಗೆ ನೀವು ಹಾಗೂ ನಿಮ್ಮ ಮಗು ಅವರ ಜತೆ ಮುಕ್ತವಾಗಿ ಇರಬಹುದೇ ಎಂದು ಗಮನಿಸಿ ಏಕೆಂದರೆ ಅವರ ಜತೆ ಕೆಲ ಸಮಯ  ಕಳೆಯಬೇಕಾಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org