ಆರ್ ಯು ಓಕೆ (R U OK?)

ನಿಮ್ಮ ಪ್ರೀತಿಪಾತ್ರರು ಸೌಖ್ಯವಾಗಿದ್ದಾರ ಎಂದು ನೆನೆಯಲು ಹೀಗೊಂದು ದಿನ

ಸೆಪ್ಟೆಂಬರ್ 9, 2015

ಆರ್ ಯು ಓಕೆ, ಆಸ್ಟ್ರೇಲಿಯಾದಲ್ಲಿ ಆತ್ಮಹತ್ಯೆ ತಡೆಗಟ್ಟಲು ಕಾರ್ಯ ನಿರ್ವಹಿಸುತ್ತಿರುವ ಒಂದು ಸ್ವಯಂ-ಸೇವಾ ಸಂಸ್ಥೆ.

ಈ ಸಂಸ್ಥೆಯನ್ನು 2009ರಲ್ಲಿ ಗ್ಯಾವಿನ್ ಲಾರ್ಕಿನ್ ರವರು ಆರಂಭಿಸಿದರು.ಇವರ ತಂದೆ ಹದಿನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡಿದ್ದರು. ಅವರ ನೆನಪಿನಲ್ಲಿ ಆರಂಭವಾದ ಈ ಸಂಸ್ಥೆಯು ತನ್ನ ಚಟುವಟಿಕೆಗಳ ಒಂದು ಭಾಗವೆಂಬಂತೆ, ಪ್ರತಿ ಸೆಪ್ಟೆಂಬರ್ ತಿಂಗಳ ಎರಡನೇ ಗುರುವಾರದಂದು ಆರ್ ಯು ಓಕೆ? ( ನೀವು ಆರಾಮಾಗಿದ್ದೀರಾ ?) ದಿನವನ್ನಾಗಿ ಆಚರಿಸುತ್ತಾ ಬಂದಿದೆ.

2015ರ ಸೆಪ್ಟೆಂಬರ್10ರಿಂದ ವಿಶ್ವ ಆತ್ಮಹತ್ಯಾ ತಡೆತಟ್ಟುವಿಕೆ ದಿನ ಜಾರಿಗೆ ಬಂದ ನಂತರ, ಅದೇ ದಿನದಂದು 'ಆರ್ ಯೂ ಓಕೆ' ದಿನವೂ ಆಚರಣೆಯಾಗುತ್ತಿದೆ. ಈ ಸಂಸ್ಥೆಯು, ಆತ್ಮಹತ್ಯೆ ತಡೆಗಟ್ಟುವಿಕೆ ಹಾಗೂ ಮಾನಸಿಕ ಅಸ್ವಸ್ಥತೆಗಳ ವಲಯದಲ್ಲಿ ವೃತ್ತಿನಿರತ ತಜ್ಙರು, ಸರ್ಕಾರದ ಇಲಾಖೆಗಳು, ಕಾರ್ಪೋರೇಟ್ ವಲಯ, ಶಿಕ್ಷಕರು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಮತ್ತು ಹಲವಾರು ಸಮುದಾಯಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ.

ಆರ್ ಯು ಓಕೆ ದಿನಾಚರಣೆಯ ಮುಖ್ಯ ಉದ್ದೇಶ - ಜನರು ತಮ್ಮ ಹತ್ತಿರದ ಹಾಗೂ ಆತ್ಮೀಯರ ಕ್ಷೇಮ ವಿಚಾರಿಸುವುದರೊಂದಿಗೆ ಪರಸ್ಪರ ಅರ್ಥಪೂರ್ಣ ಭಾಂದವ್ಯ ಬೆಳಸಿಕೊಳ್ಳಲು ಪ್ರೇರೇಪಿಸುವುದು. ಈ ಮೂಲಕ ಖಿನ್ನತೆಯೊಂದಿಗೆ ಸೆಣೆಸಾಡುತ್ತಿರುವ ಜನರ ಮನಸ್ಥಿತಿಯಲ್ಲಿ ಬದಲಾವಣೆ ಸಾಧ್ಯ ಎನ್ನುವ ಉದ್ದೇಶವನ್ನು ಹೊಂದಿದೆ.

ಈ ವರ್ಷದ ಧ್ಯೇಯವಾಕ್ಯ - “ ಥ್ಯಾಂಕ್ಸ್ ಫಾರ್ ಆಸ್ಕಿಂಗ್ " ( ಕೇಳಿದ್ದುದಕ್ಕಾಗಿ ಧನ್ಯವಾದ). ತಮ್ಮ ಬದುಕಿನ ಕಷ್ಟದಿನಗಳಲ್ಲಿ ಜೊತೆಯಾದ ಆತ್ಮೀಯರಿಗೆ ಧನ್ಯವಾದ ಹೇಳುವ ಮೂಲಕ ಜನರಲ್ಲಿ ಭಾಂದವ್ಯ ಅಭಿವೃದ್ದಿಯಾಗಲಿ ಎಂಬ ಗುರಿಯನ್ನು ಹೊಂದಿದೆ.

ಟ್ವಿಟ್ಟರ್ ಮೂಲಕ ಈ ಚಳುವಳಿಯಲ್ಲಿ ನೀವೂ ಭಾಗವಹಿಸಬಹುದು. #ruok #ruokday ಉಪಯೋಗಿಸಿ ಮತ್ತು ನಿಮಗೆ ಸಹಾಯ ಮಾಡಿದವರಿಗೆ ಕೃತಜ್ಙತೆ ಹೇಳುವುದರ ಮೂಲಕ ಈ ಸುದ್ದಿಯನ್ನು ಪ್ರಚಾರಗೊಳಿಸಿ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org