ಗರ್ಭಾವಸ್ಥೆಯಲ್ಲಿ ಸಂಗಾತಿಯ ಪಾತ್ರ

ಹೆರಿಗೆ, ಮಗು, ಅದರ ಆರೈಕೆ ಇವೆಲ್ಲಾ ಮಹಿಳೆಗೆ ಸಂಬಂಧಿಸಿದ ವಿಷಯ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ

ಭಾರತದಲ್ಲಿ ಭಾವಿ ತಂದೆಯಂದಿರು ಎಷ್ಟೋ ಬಾರಿ ತಮ್ಮ ಪಾತ್ರವನ್ನು ಆರ್ಥಿಕ ಬೆಂಬಲ ನೀಡುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ. ಗರ್ಭಧಾರಣೆಯ ಅವಧಿಯು ನಿರೀಕ್ಷೆ ಮತ್ತು ಸಂತೋಷದಿಂದ ಕೂಡಿದ್ದರೂ, ನೂತನ ತಾಯಂದಿರು ತಮ್ಮ ಮಗುವಿನ ಆರೋಗ್ಯ, ತಮ್ಮ ಆರೋಗ್ಯ, ದೈಹಿಕ ಅಡಚಣೆಗಳು ಮತ್ತು ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿಂದಾಗಿ ಆತಂಕ ಮತ್ತು ಮತ್ತು ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಂಗಾತಿಯಾದವನು – (ಹೆಚ್ಚಿನ ವೇಳೆ ಮಹಿಳೆಗೆ ಇವರೇ) ಎಲ್ಲರಿಗಿಂತ ಆತ್ಮೀಯರಾಗಿರುತ್ತಾರೆ.

ಅನೇಕ ವೇಳೆ ಗಂಡನಾದವನು ತನ್ನ ಹೆಂಡತಿಯ ಜೀವನದಲ್ಲಿ ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅನ್ನಿಸುತ್ತಿರುತ್ತದೆ. ಆದರೆ ತಾವು ಹೇಗೆ ಸಹಾಯ ಮಾಡಬಹುದೆಂದು ತಿಳಿದಿರುವುದಿಲ್ಲ. ಕೆಲವೊಮ್ಮೆ ಹೆರಿಗೆ, ಮಗು, ಅದರ ಆರೈಕೆ ಇವೆಲ್ಲಾ ಮಹಿಳೆಗೆ ಸಂಬಂಧಿಸಿದ ವಿಷಯ ಎಂಬ ತಪ್ಪು ಕಲ್ಪನೆಯಿಂದಾಗಿಯೂ ಅವರು ಗರ್ಭಧಾರಣೆಯ ಸಮಯದಲ್ಲಿ ಸಹಾಯ ಮಾಡಲು ಹಿಂಜರಿಯಬಹುದು.

ಸಂಗಾತಿಯ ಸಕ್ರಿಯ ಪಾಲ್ಗೊಳ್ಳುವಿಕೆಯಿರುವ ಮಹಿಳೆಯರು ಪ್ರಸವಪೂರ್ವ ಮತ್ತು ಪ್ರಸವಾನಂತರದ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಂಭವ ಕಡಿಮೆ ಇರುತ್ತದೆ. ಮತ್ತು ಅಂಥವರು ಗರ್ಭಾವಸ್ಥೆಯನ್ನು ಚೆನ್ನಾಗಿ ಕಳೆಯುತ್ತಾರೆ. ಆದ್ದರಿಂದ ಭಾವಿ ತಂದೆಯಾದವನು ಈ ವೇಳೆ ಏನು ಮಾಡಬಹುದು?.

  • ಮುಂದೆ ಹುಟ್ಟುವ ಮಗುವಿನ ಬಗ್ಗೆ ಪತ್ನಿಯೊಂದಿಗೆ ಆಲೋಚಿಸಿ. ವೈದ್ಯಕೀಯ ವೆಚ್ಚ, ಮಗುವಿನ ಜನನದ ನಂತರ ಮತ್ತು ಜನನದ ಮೊದಲು ತಾಯಿಯು ಆರಾಮವಾಗಿರಲು ಬೆಂಬಲವನ್ನು ಒದಗಿಸಿ, ಹುಟ್ಟುವ ಮಗುವು ಆರಾಮವಾಗಿರುವಂತೆ ಮನೆಯನ್ನು ಸಿದ್ಧಗೊಳಿಸಿ.
  • ಆಕೆಯ ಗರ್ಭಧಾರಣೆಯ ಪ್ರಗತಿ ಹಾಗೂ ಯಾವುದಾದರೂ ತೊಂದರೆಗಳಿವೆಯೆ ಎಂದು ತಿಳಿಯಲು ಪ್ರಸೂತಿ ತಜ್ಞರ ಭೇಟಿಯಲ್ಲಿ ಆಕೆಯ ಜೊತೆಯಾಗಿ. ನಿಮ್ಮ ಗರ್ಭಿಣಿ ಪತ್ನಿಯ ಅವಶ್ಯಕತೆಗಳು ಮತ್ತು ಆರೈಕೆಯ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಿ.
  • ನಗರದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವುದರಿಂದ, ನೂತನ ತಾಯಿಯು ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸುತ್ತಿದ್ದಾಳೆಯೇ ಮತ್ತು ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುತ್ತಿದ್ದಾಳೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದು ಸಂಗಾತಿಯ ಜವಾಬ್ದಾರಿಯಾಗಿರುತ್ತದೆ.
  • ಗರ್ಭಧಾರಣೆಯ ಅವಧಿಯಲ್ಲಿ ಮನಸ್ಥಿತಿಯಲ್ಲಿ ಏರಿಳಿತವಾಗುವುದು ಸಹಜ. ಈ ಸಂದರ್ಭದಲ್ಲಿ ಸಹನೆಯಿಂದ ವರ್ತಿಸಿ ಮತ್ತು ಅವರಿಗೆ ಅಗತ್ಯ ಬೆಂಬಲ ಒದಗಿಸಿ.
  • ಅವರಿಗೆ ಪ್ರೀತಿ ತೋರಿಸಿ, ನಗಿಸಿ, ನಿಮ್ಮ ಗಮನವನ್ನು ನೀಡಿ ಗರ್ಭಾವಸ್ಥೆಯನ್ನು ಆರಾಮಾಗಿ ಕಳೆಯಲು ಸಹಾಯ ಮಾಡಿ.
  • ಮನೆಯ ಇತರ ಸದಸ್ಯರ ಜೊತೆ ಸಂಘರ್ಷವಾದಲ್ಲಿ ಆಕೆಯನ್ನು ಬೆಂಬಲಿಸಿ. ನೀವೀಗ ಒಂದೇ ಯುನಿಟ್ ಎಂಬುದನ್ನು ನೆನಪಿಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org