ತಾಯಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇದ್ದಲ್ಲಿ, ಕುಟುಂಬದ ಸದಸ್ಯರ ಪಾತ್ರ

ಸಂಭವನೀಯ ತೊಂದರೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ/ತಿಳಿವಳಿಕೆ ಪಡೆಯುವುದರಿಂದ ಮಾನಸಿಕ ಸಮಸ್ಯೆಯಿರುವಾಗಲೂ ಸಹ ಗರ್ಭಾವಸ್ಥೆಯನ್ನು ಸುಲಲಿತವಾಗಿ ಕಳೆಯಲು ಸಾಧ್ಯವಿದೆ.

ಗರ್ಭಾವಸ್ಥೆ ಸಂದರ್ಭದಲ್ಲಿ ಸಂಭವನೀಯ ತೊಂದರೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ/ತಿಳಿವಳಿಕೆ ಪಡೆಯುವುದರಿಂದ ಮಾನಸಿಕ ಸಮಸ್ಯೆಯಿರುವಾಗಲೂ ಸಹ ಗರ್ಭಾವಸ್ಥೆಯನ್ನು ಸುಲಲಿತವಾಗಿ ಕಳೆಯಲು ಸಾಧ್ಯವಿದೆ. ಈ ಅವಧಿಯಲ್ಲಿ ಕುಟುಂಬದವರ ಮತ್ತು ಸಂಗಾತಿಯ ಬೆಂಬಲ ಅತ್ಯಂತ ಅವಶ್ಯಕ.
ಕುಟುಂಬದವರು ಮತ್ತು ಸಂಗಾತಿ ಈ ರೀತಿಯಲ್ಲಿ ತಮ್ಮ ಬೆಂಬಲ ನೀಡಬಹುದು:

  • ಮಾನಸಿಕ ಸಮಸ್ಯೆಯ ಕಾರಣದಿಂದ ಮಹಿಳೆಯು ತೆಗೆದುಕೊಳ್ಳುತ್ತಿರಬಹುದಾದ ಔಷಧಗಳ ಬಗ್ಗೆ ಪ್ರಸೂತಿ ತಜ್ಞರಲ್ಲಿ ಚರ್ಚಿಸಿ, ಗರ್ಭಧಾರಣೆಯ ಬಗ್ಗೆ ಯೋಜಿಸಿ.
  • ನೀವು ತಿಳುವಳಿಕೆಯನ್ನು ಪಡೆದು, ಕುಟುಂಬದವರು ಮತ್ತು ಸ್ನೇಹಿತರಲ್ಲಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ. ತಾಯಿಗೆ ಸಮಾಜದ ಪೂರ್ವಗ್ರಹದಿಂದ ತೊಂದರೆಯಾಗದಂತೆ ನೋಡಿಕೊಳ್ಳಿ.
  • ಒಂದುವೇಳೆ ಗರ್ಭಧಾರಣೆಯ ನಂತರ ಮಾನಸಿಕ ಸಮಸ್ಯೆಯು ಆರಂಭವಾದರೆ/ಉಲ್ಭಣಿಸಿದರೆ ಅದಕ್ಕಾಗಿ ತಾಯಿಯನ್ನು ದೂಷಿಸಬೇಡಿ. ಇತರ ದೈಹಿಕ ಖಾಯಿಲೆಗಳಂತೆ ಮಾನಸಿಕ ಸಮಸ್ಯೆ ಉಂಟಾಗುವುದನ್ನು ಊಹಿಸಲು ಅಥವಾ ತಪ್ಪಿಸಲು ಸಾಧ್ಯವಿಲ್ಲ.
  • ಗರ್ಭಧಾರಣೆಯ ಸಮಯದಲ್ಲಿ ಆತಂಕ ಮತ್ತು ಮನಸ್ಥಿತಿಯ ಬದಲಾವಣೆಗಳು ಸಾಮಾನ್ಯವಾಗಿರುತ್ತವೆ. ಆದರೆ ಮಾನಸಿಕ ಸಮಸ್ಯೆಯಿದ್ದಲ್ಲಿ ಇವು ಇನ್ನೂ ಜಾಸ್ತಿಯಾಗಬಹುದು.
  • ಆಕೆಯ ಮೇಲೆ ಯಾವುದೇ ಕೌಟುಂಬಿಕ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಿ. ಇದರಿಂದ ಮಗುವಿನ ಮೇಲೂ ಪರಿಣಾಮವಾಗುತ್ತದೆ.
  • ಮಾನಸಿಕ ಖಾಯಿಲೆಗಾಗಿ ತೆಗೆದುಕೊಳ್ಳುತ್ತಿರುವ ಔಷಧಗಳು ಅಡ್ಡ ಪರಿಣಾಮ ಬೀರಬಹುದು. ಅವುಗಳ ಲಾಭ, ನಷ್ಟಗಳ ಕುರಿತು ನಿಮ್ಮ ಮನೋವೈದ್ಯರು ಮತ್ತು ಪ್ರಸೂತಿ ತಜ್ಞರಲ್ಲಿ ಚರ್ಚಿಸಿ. ಚಿಕಿತ್ಸೆಯನ್ನು ನಿರಾಕರಿಸಬೇಡಿ ಮತ್ತು ವೈದ್ಯರಿಗೆ ತಿಳಿಸದೇ ಔಷಧಗಳನ್ನು ನಿಲ್ಲಿಸಬೇಡಿ.
  • ಮಾನಸಿಕ ಸಮಸ್ಯೆಯ ಲಕ್ಷಣಗಳ ಕುರಿತು ಗಮನವಿರಲಿ.
  • ಮಾನಸಿಕ ಸಮಸ್ಯೆಯಿರುವ ವ್ಯಕ್ತಿಗಳ ಆರೈಕೆಯು ಸವಾಲಿನದ್ದಾಗಿದೆ. ನಿಮ್ಮ ಒತ್ತಡ ಮತ್ತು ಆತಂಕಗಳ ಬಗ್ಗೆ ಕುಟುಂಬದವರು, ಸ್ನೇಹಿತರು ಅಥವಾ ಆಪ್ತ ಸಮಾಲೋಚಕರಲ್ಲಿ ಹೇಳಿಕೊಳ್ಳಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org