ಬಳಕೆಯ ಷರತ್ತುಗಳು


ವೈಟ್ ಸ್ವಾನ್ ಫೌಂಡೇಶನ್ನಿಗೆ ಸ್ವಾಗತ. ತೃಪ್ತಿಕರ ಬ್ರೌಸಿಂಗ್ ಅನುಭವವನ್ನು ನೀವು ಪಡೆಯುತ್ತೀರಿ ಎಂಬುದನ್ನು ಖಾತರಿಗೊಳಿಸುವ ಜತೆಗೆ ನಾವು ಅತ್ಯುನ್ನತ ಮಟ್ಟದ ನಿರ್ವಹಣೆಯನ್ನು ಕಾಯ್ದುಕೊಳ್ಳುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿರುತ್ತೇವೆ. ನೀವು ಇಲ್ಲಿಂದ ನಿಮ್ಮ ಪ್ರಯಾಣವನ್ನು ಆರಂಭಿಸುವ ಮೊದಲು ಈ ಕೆಳಗೆ ವಿವರಿಸಲಾಗಿರುವ ಬಳಕೆಯ ಷರತ್ತುಗಳನ್ನು ಓದಿಕೊಳ್ಳಲು ಕೆಲ ಕ್ಷಣಗಳನ್ನು ತೆಗೆದುಕೊಳ್ಳಬೇಕೆಂದು ನಿಮ್ಮನ್ನು ವಿನಂತಿಸಿಕೊಳ್ಳುತ್ತೇವೆ.

ಸರ್ವಾನ್ವಯಿಕ

ವೈಟ್ ಸ್ವಾನ್ ಫೌಂಡೇಶನ್ನಿನ ಜಾಲತಾಣವನ್ನು ಉಪಯೋಗಿಸುವ ಮೂಲಕ ( ಈ ನಂತರದಲ್ಲಿ “ಜಾಲತಾಣ” ಎಂದು ಕರೆಯಲಾಗುವ) ನೀವು ಈ ಬಳಕೆಯ ಷರತ್ತುಗಳಿಗೆ ಕಾನೂನಾತ್ಮಕವಾಗಿ ಬದ್ಧರಾಗಿರಲು ಒಪ್ಪಿಗೆ ಸೂಚಿಸುತ್ತೀರಿ. ಮೊದಲ ಬಾರಿಗೆ ನೀವು ಈ ಜಾಲತಾಣವನ್ನು ಉಪಯೋಗಿಸಲಾರಂಭಿಸಿದ ತಕ್ಷಣದಿಂದ ಇದು ಅನ್ವಯವಾಗುತ್ತದೆ. ನಾವು ಈ ಬಳಕೆಯ ಷರತ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸಬಹುದು. ಅಂತಹ ಬದಲಾವಣೆಗಳನ್ನು ಸೂಚಿಸುವ ಪ್ರಕಟಣೆಯನ್ನು ನಾವು ನೀಡುತ್ತಿರುತ್ತೇವೆ. ನೀವು ಜಾಲತಾಣವನ್ನು ನಿರಂತರವಾಗಿ ಉಪಯೋಗಿಸುವುದು ನೀವು ಅನುಸರಿಸಲೊಪ್ಪಿದ ಮತ್ತು ತಿದ್ದುಪಡಿ ಮಾಡಲಾದ ಬಳಕೆಯ ಷರತ್ತುಗಳಿಗೆ ಬದ್ಧರಾಗಿರುವ ಒಪ್ಪಂದವೊಂದನ್ನು ರೂಪಿಸುತ್ತದೆ. ಆ ಪ್ರಕಾರ, ಕಾಲಕಾಲಕ್ಕೆ ಬದಲಾವಣೆಗಳನ್ನು ಸೂಚಿಸುವ ಬಳಕೆಯ ಷರತ್ತುಗಳ ಪೇಜನ್ನು ನೀವು ನೋಡುತ್ತಿರಬೇಕು ಎಂದು ಸಲಹೆ ಮಾಡುತ್ತೇವೆ.

ಹಕ್ಕು ನಿರಾಕರಣೆ

ಈ ಜಾಲತಾಣದಲ್ಲಿರುವ ಮಾಹಿತಿಯು ನಮಗೆ ವಿಶ್ವಾಸಾರ್ಹತೆಯ ಆಧಾರದಮೇಲೆ ಒದಗಿಸಲ್ಪಟ್ಟಿದೆ. ಇಲ್ಲಿನ ಮಾಹಿತಿ ಸರಿಯಾಗಿದೆ ಮತ್ತು ವಾಸ್ತವಿಕವಾಗಿದೆ ಎಂಬ ನಂಬಿಕೆಯಿದೆ. ಆದಾಗ್ಯೂ ಕೂಡ ಜಾಲತಾಣದಲ್ಲಿರುವ ಮಾಹಿತಿಯ ವಿಶ್ವಸನೀಯತೆ, ನಿಖರತೆ ಅಥವಾ ಸಮಗ್ರತೆಯ ಕುರಿತಾಗಿ ನಾವು ಯಾವುದೇ ಪ್ರಾತನಿಧಿತ್ವ ಅಥವಾ ಸಮರ್ಥನೆಯನ್ನು ಮಾಡಲಿಚ್ಛಿಸುವುದಿಲ್ಲ.

ನಾವು ವೈದ್ಯಕೀಯ ಆರೈಕೆ ಸೇವೆಗಳನ್ನು ಒದಗಿಸುವ ಸಂಸ್ಥೆಯಲ್ಲ. ಹಾಗಾಗಿ ನಾವು ಸೂಚನೆಗಳನ್ನು ನೀಡುವ ಬದಲಾಗಿ ಮಾಹಿತಿಯನ್ನು ಒದಗಿಸುತ್ತೇವೆ. ನಿಮ್ಮ ಸ್ಥಿತಿಗಳಿಗೆ ನಿರ್ದಿಷ್ಟವಾದ ವೃತ್ತಿಪರ ಸಲಹೆ ಸೂಚನೆಗಳನ್ನು ಮೊದಲು ಪಡೆದುಕೊಳ್ಳದೇ ಈ ಜಾಲತಾಣದಲ್ಲಿರುವ ಮಾಹಿತಿಯ ಆಧಾರದ ಮೇಲೆ ನೀವು ಯಾವುದೇ ರೀತಿಯ ಕ್ರಮಗಳನ್ನು ನಿಮ್ಮಷ್ಟಕ್ಕೇ ಕೈಗೊಳ್ಳಬೇಡಿ. ಈ ಜಾಲತಾಣ ಅಥವಾ ಜಾಲತಾಣಕ್ಕೆ ಸಂಪರ್ಕಿಸಲ್ಪಟ್ಟ ಜಾಲತಾಣಗಳ (ಥರ್ಡ್ ಪಾರ್ಟಿ ವೆಬ್ಸೈಟ್ಸ್-third-party websites) ನೇರ ಅಥವಾ ಪರೋಕ್ಷ ಬಳಕೆಯಿಂದ ನಿಮಗೆ ಅಥವಾ ಯಾರಿಗೇ ಆಗಲಿ, ಯಾವುದೇ ರೂಪದಲ್ಲಿ ಉಂಟಾಗುವ (ನೇರವಾದ, ಪರೋಕ್ಷವಾದ, ಅನುಗತ ಅಥವಾ ಆರ್ಥಿಕವಾಗಿ) ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರರಲ್ಲ.

ಗೌಪ್ಯತೆ

ಬಳಕೆಯ ಷರತ್ತುಗಳು ನಮ್ಮ ಗೌಪ್ಯತೆಯ ನೀತಿಯನ್ನು ಒಳಗೊಂಡಿರುತ್ತವೆ ಮತ್ತು ಅದನ್ನು ಹಾಗೆಯೇ ಓದಿಕೊಳ್ಳತಕ್ಕದ್ದು. ಬಳಕೆಯ ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ಮೂಲಕ ನೀವು ಗೌಪ್ಯತಾ ನೀತಿಯಲ್ಲಿ ಹೇಳಲಾದ ನೀತಿ ನಿಯಮಗಳಿಗೆ ಕೂಡ ಒಪ್ಪಿಗೆಯನ್ನು ಸೂಚಿಸಿರುತ್ತೀರಿ.

ಮೂರನೆಯ ಜಾಲತಾಣಗಳು (third-party websites)

ನಮ್ಮ ಜಾಲತಾಣವು ಮೂರನೆಯವರಿಂದ ನಡೆಸಲ್ಪಡುವ ಇನ್ನಿತರ ಜಾಲತಾಣಗಳಿಗೆ ಸಂಪರ್ಕವನ್ನು ಹೊಂದಿರಬಹುದು. ನಿಮ್ಮ ಅನುಕೂಲಕ್ಕಾಗಿ ಮಾತ್ರವೇ ಈ ಸಂಪರ್ಕಗಳನ್ನು ಕಲ್ಪಿಸಲಾಗಿರುತ್ತದೆ. ಹೀಗೆ ಮೂರನೆಯ ಜಾಲತಾಣಕ್ಕೆ ಕೊಡಲಾಗುವ ಸಂಪರ್ಕವು ವೈಟ್ ಸ್ವಾನ್ ಫೌಂಡೇಶನ್ ಅನುಮೋದಿತ, ಪ್ರಾಯೋಜಿತ ಅಥವಾ ಶಿಫಾರಸು ಮಾಡುವ ಸಂಪರ್ಕಗಳೆಂದು ತಿಳಿಯಬಾರದು. ಮೂರನೆಯ ಅಥವಾ ಮತ್ತೊಂದು ಜಾಲತಾಣಕ್ಕೆ ಸಂಪರ್ಕ ಪಡೆಯಲು ನಿಮಗೆ ಸಾಧ್ಯವಾಗುವಂತೆ ಮಾತ್ರ ಈ ಸಂಪರ್ಕಕೊಂಡಿಗಳನ್ನು ನೀಡಲಾಗಿರುತ್ತದೆಯೇ ಹೊರತು ಇನ್ಯಾವುದೇ ಅನ್ಯ ಉದ್ದೇಶಗಳಿಗಾಗಿಯೂ ಅಲ್ಲ. ಈ ಜಾಲತಾಣದಿಂದ ಒಮ್ಮೆ ನೀವು ಇಂತಹ ಥರ್ಡ್ ಪಾರ್ಟಿ ವೆಬ್ಸೈಟ್ಗಳಿಗೆ ಭೇಟಿ ನೀಡಿದರೆ, ನೀವು ಆ ಥರ್ಡ್ ಪಾರ್ಟಿ ವೆಬ್ಸೈಟಿನ ನೀತಿ ನಿಯಮಗಳಿಗೆ ಬದ್ಧರಾಗಿರುತ್ತೀರೇ ಹೊರತು ಈ ಜಾಲತಾಣದ ಬಳಕೆಯ ಷರತ್ತುಗಳಿಗಲ್ಲ.  

ಕಾಪಿರೈಟ್

ಇನ್ನುಳಿದಂತೆ ನಿರ್ದಿಷ್ಟಪಡಿಸದವುಗಳನ್ನು ಹೊರತುಪಡಿಸಿ ಈ ಜಾಲತಾಣದಲ್ಲಿರುವ ಎಲ್ಲ ಸಲಕರಣೆಗಳು, ಬರಹಗಳು, ಗ್ರಾಫಿಕ್ಸ್, ಇಮೇಜುಗಳು ಮುಂತಾದವುಗಳನ್ನೊಳಗೊಂಡಂತೆ (ಇವಿಷ್ಟಕ್ಕೇ ಸೀಮಿತವಾಗಿಲ್ಲದೇ) ವೈಟ್ ಸ್ವಾನ್ ಫೌಂಡೇಶನ್ನಿನ ಆಸ್ತಿಯಾಗಿರುತ್ತದೆ. ಎಲ್ಲ ಕಾಪಿರೈಟ್ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ನಿಮಗೆ ಈ ಜಾಲತಾಣ ವೀಕ್ಷಣೆಗೆ ಅನುಮತಿಯನ್ನು ನೀಡಲಾಗಿದೆಯಾದ್ದರಿಂದ ನೀವು ಇಲ್ಲಿನ ಎಲ್ಲ ಸಂಗತಿಗಳನ್ನು ವೀಕ್ಷಿಸಬಹುದು, ಬೆರಕೆ ಮಾಡದ ರೀತಿಯಲ್ಲಿ ವೈಯಕ್ತಿಕ ಉದ್ದೇಶಕ್ಕೆ ಅಥವಾ ಯಾವುದೇ ವಾಣಿಜ್ಯಕ ಉದ್ದೇಶಗಳಿಗೆ ಹೊರತಾಗಿ ಒಂದು ಕಂಪ್ಯೂಟರಿನಿಂದ ಡೌನ್ ಲೋಡ್, ಡಿಸ್ ಪ್ಲೇ ಅಥವಾ ಪ್ರಿಂಟ್ ಮಾಡಿಕೊಳ್ಳಬಹುದು. ಈ ಜಾಲತಾಣದಲ್ಲಿರುವ ಸಂಗತಿಗಳನ್ನು ಇನ್ಯಾವುದೇ ಉದ್ದೇಶಕ್ಕೆ ಬಳಸಲು ಇಚ್ಛಿಸಿದಲ್ಲಿ, ಹಾಗೆ ಮಾಡುವ ಮೊದಲು ನೀವು ಪೂರ್ವಾನುಮತಿಯನ್ನು ಪಡೆಯುವುದು ಅವಶ್ಯಕವಾಗಿರುತ್ತದೆ. ಈ ಕುರಿತು ನಮಗೆ ಇಲ್ಲಿ ಬರೆದು ಅನುಮತಿಯನ್ನು ಪಡೆದುಕೊಳ್ಳಬಹುದು.

ವೈಟ್ ಸ್ವಾನ್ ಫೌಂಡೇಶನ್ನಿನ ಹೆಸರು ಮತ್ತು ಲೋಗೋ ವೈಟ್ ಸ್ವಾನ್ ಫೌಂಡೇಶನ್ನಿನ ಟ್ರೇಡ್ ಮಾರ್ಕುಗಳಾಗಿರುತ್ತವೆ. ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಇನ್ನಿತರ ಎಲ್ಲ ಲೋಗೋಗಳು, ಗುರುತುಗಳು ಅಥವಾ ಇತರ ಸಂಸ್ಥೆಗಳ ಚಿನ್ಹೆಗಳು ಆಯಾ ಸಂಸ್ಥೆಗಳ/ಮಾಲಿಕರ ಟ್ರೇಡ್ ಮಾರ್ಕುಗಳಾಗಿರುತ್ತವೆ.

ಕಾನೂನು ವ್ಯಾಪ್ತಿ

ಜಾಲತಾಣದ ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಯಾವುದೇ ವಿವಾದ ಅಥವಾ ಹೇಳಿಕೆ ಯಾ ವಾದವು ಸಂಪೂರ್ಣವಾಗಿ ಭಾರತದ ಬೆಂಗಳೂರು, ನ್ಯಾಯಾಲಯಗಳ ನ್ಯಾಯನಿರ್ವಹಣಾ ವ್ಯಾಪ್ತಿಗೆ ಒಳಪಡುತ್ತವೆ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳ ಪ್ರಕಾರ ನ್ಯಾಯನಿರ್ಣಯಕ್ಕೆ ಒಳಪಡುತ್ತವೆ ಎಂಬುದಕ್ಕೆ ನೀವು ಒಪ್ಪಿಗೆ ಸೂಚಿಸಿರುತ್ತೀರಿ. ನಿಮ್ಮ ಪರವಾಗಿ ಹೇಳಿಕೆ ನೀಡುವ ಯಾರಿಗೇ ಆದರೂ ಕೂಡ ಈ ಒಪ್ಪಂದವು ಅನ್ವಯವಾಗುತ್ತದೆ.

ಗೌಪ್ಯತಾ ನೀತಿ

 

ನಿಮ್ಮ ಗೌಪ್ಯತೆ ಮತ್ತು ನೀವು ನಮ್ಮೊಂದಿಗೆ ಹಂಚಿಕೊಳ್ಳುವ ಯಾವುದೇ ವೈಯಕ್ತಿಕ ಮಾಹಿತಿಯ ರಹಸ್ಯವನ್ನು ಕಾಪಾಡುವಲ್ಲಿ ವೈಟ್ ಸ್ವಾನ್ ಫೌಂಡೇಶನ್ ಬದ್ಧವಾಗಿರುತ್ತದೆ. ನಾವು ಮಾಹಿತಿಯನ್ನು ಸಂಗ್ರಹಿಸುವ, ಅವುಗಳನ್ನು ಬಳಸಿಕೊಳ್ಳುವ ಮತ್ತು ನಿಮ್ಮಿಂದ ಪಡೆದ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸುವ ವಿಧಾನವನ್ನು ಈ ಕೆಳಗಿನ ವಿವರಗಳು ವಿವರಿಸುತ್ತವೆ.

ಮಾಹಿತಿ ಸಂಗ್ರಹಣೆ

ನೀವು ಮನಃಪೂರ್ವಹವಾಗಿ ಒಪ್ಪಿಗೆ ನೀಡಿದರೆ ಮಾತ್ರ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲ್ಪಡುವಂತೆ ಯಾವುದೇ ರೀತಿಯ ಮಾಹಿತಿಯ ಸಂಗ್ರಹಣೆಗೆ ನಾವು ಪ್ರಯತ್ನಿಸುವುದಿಲ್ಲ. ನೀವು ನಮ್ಮೊಂದಿಗೆ ಈ-ಮೇಲ್ ಸಂವಹನದ ಮೂಲಕ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮೊಂದಿಗೆ ವ್ಯವಹರಿಸುವಾಗ ನಾವು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು. ನಮ್ಮಿಂದ ತಿರುಗಿ ಮಾಹಿತಿಯನ್ನು ಪಡೆದುಕೊಳ್ಳಲು ಅಥವಾ ಕಾರ್ಯಕರ್ತರಾಗಿ ನೋಂದಣಿ ಮಾಡಿಸಿಕೊಳ್ಳಲು ಮತ್ತು ನಮ್ಮ ಅಭಿಯಾನಗಳಲ್ಲಿ ಭಾಗವಹಿಸಲು ಅಥವಾ ಇನ್ನಿತರ ಯೋಜನೆಗಳಿಗೆ ಈ ಮಾಹಿತಿ ಸಂಗ್ರಹಣೆ ಅವಶ್ಯಕವಾಗಿರಬಹುದು.

ನಾವು ನಿಮ್ಮಿಂದ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯು ನಿಮ್ಮ ಹೆಸರು, ವಿಳಾಸ, ವಯಸ್ಸು ಅಥವ ಜನ್ಮದಿನಾಂಕ, ದೂರವಾಣಿ ಸಂಖ್ಯೆ ಮತ್ತು ಈ-ಮೇಲ್ ಅಡ್ರೆಸ್ ಮುಂತಾದ ವಿವರಗಳನ್ನು ಹೊಂದಿರಬಹುದು. ಇದಕ್ಕೆ ಹೊರತಾಗಿಯೂ, ನೀವು ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮೊಂದಿಗೆ ಹಂಚಿಕೊಳ್ಳಬಯಸುವುದು ನಿಮಗೆ ಬಿಟ್ಟ ವಿಚಾರ. ಹಾಗಿದ್ದಾಗ್ಯೂ, ಕೆಲವು ಸಮೀಕ್ಷೆಗಳಿಗಾಗಿ, ಅಥವಾ ನೀವು ಒಂದೊಮ್ಮೆ ನಮ್ಮ ಅಭಿಯಾನಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ಇಚ್ಛಿಸಿದಲ್ಲಿ, ನಮಗೆ ನಿಮ್ಮ ಬಗ್ಗೆ ಇನ್ನು ಕೆಲವು ಕನಿಷ್ಟ ಪ್ರಮಾಣದ ಮಾಹಿತಿ ಬೇಕಾಗಬಹುದು.

ಮಾಹಿತಿಯ ಸುರಕ್ಷತೆ

ನಾವು ಸಂಗ್ರಹಿಸುವ ಎಲ್ಲ ಮಾಹಿತಿಯ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅವಶ್ಯಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಕುರಿತು ನಾವು ವಿವೇಚನಾಯುಕ್ತ ಹೆಜ್ಜೆಗಳನ್ನಿಡುತ್ತೇವೆ. ಯಾವುದೇ ರೀತಿಯ ದುರ್ಬಳಕೆ, ಹಾನಿ, ಮತ್ತು ಅನಧಿಕೃತ ಸೋರಿಕೆ ಅಥವಾ ಅನಾವರಣಗಳಿಂದ ಮಾಹಿತಿಯನ್ನು ಸಂರಕ್ಷಿಸುವೆವು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಧಿಕೃತ ವ್ಯಕ್ತಿಗಳು ಮಾತ್ರ ನೋಡುವಂತೆ ಸುರಕ್ಷಿತ ವಾತಾವರಣದಲ್ಲಿ ಇಟ್ಟು ಸಂರಕ್ಷಿಸಲಾಗುವುದು. ನಿಮ್ಮ ನಿರ್ಧಾರಕ್ಕೆ ಪೂರಕವಾಗಿದ್ದಲ್ಲಿ ಮಾತ್ರ ಮಾಹಿತಿಯನ್ನು ಅನಾವರಣಗೊಳಿಸಲಾಗುವುದು. ಉದಾಹರಣೆಗೆ, ನೀವು ನಿಮ್ಮ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸಿದಲ್ಲಿ ಮಾತ್ರ ಮಾಹಿತಿಯನ್ನು ಪ್ರಕಟಿಸುವೆವು.

ಮಾಹಿತಿಯ ಬಳಕೆ

ನೀವು ವಿನಂತಿಸಿಕೊಳ್ಳುವ ಅಥವಾ ನಿಮ್ಮನ್ನು ಅಭಿಯಾನದಲ್ಲಿ ಒಳಗೊಳ್ಳುವಂತೆ ಮಾಡುವ ಅಥವಾ ಇನ್ನಿತರ ಯೋಜನೆಗಳಲ್ಲಿ ನೀವು ಹೊಂದಿರುವ ಆಸಕ್ತಿಗೆ ಅನುಗುಣವಾಗಿ ಉತ್ತರಗಳನ್ನು ನೀಡಲು ನೀವು ನಮಗೆ ನೀಡುವ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ. ಒಂದೊಮ್ಮೆ ನೀವು ವೈಟ್ ಸ್ವಾನ್ ಫೌಂಡೇಶನ್ ಅಥವಾ ಅದರ ಸಹವರ್ತಿಗಳಿಂದ ಈ-ಮೇಲ್ ಪಡೆಯಲು ಅನುಮತಿಸಿದ್ದಲ್ಲಿ ಮಾತ್ರ ನಮ್ಮ ಕಾರ್ಯಕ್ರಮಗಳು, ಅಭಿಯಾನಗಳು ಅಥವಾ ಕಾರ್ಯಚಟುವಟಿಕೆಗಳ ಕುರಿತು ನಿಮಗೆ ಈ-ಮೇಲ್ ಕಳಿಸುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸಬಹುದು.

ಪ್ರತಿಯೊಂದು ಸಲ ಈ–ಮೇಲ್ ಬಂದಾಗಲೂ, ಅದನ್ನು ಅನ್ ಸಬ್ ಸ್ಕ್ರೈಬ್ ಮಾಡುವ ಮೂಲಕ ಮುಂದಿನ ಯಾವುದೇ ಸಂವಹನಕ್ಕೆ ಆಸ್ಪದವಿಲ್ಲದಂತೆ ನಿರಾಕರಿಸುವ ಅವಕಾಶವನ್ನು ಕೂಡ ನೀಡಲಾಗುತ್ತದೆ. ಒಂದೊಮ್ಮೆ ನಿಮ್ಮಲ್ಲಿ ಯಾವುದೇ ದೂರುಗಳಿದ್ದಲ್ಲಿ, ಅಥವಾ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕುರಿತಾಗಿ ಬೇರೇನಾದರೂ ಪ್ರಶ್ನೆಗಳಿದ್ದ ಪಕ್ಷದಲ್ಲಿ ನೀವು ನಮ್ಮನ್ನು ಸಂಪರ್ಕಿಸಬಹುದು.

ಕುಕಿ (cookies)

ನಿಮ್ಮ ಬ್ರೌಸಿಂಗ್ ಅನುಭವ ಅತ್ಯಂತ ಅನುಕೂಲಕರವಾಗಲಿ ಎಂಬ ದೃಷ್ಟಿಯಿಂದ ವೈಟ್ ಸ್ವಾನ್ ಫೌಂಡೇಶನ್ ಜಾಲತಾಣವು ಕುಕಿಗಳನ್ನು ಬಳಸುತ್ತದೆ. ಜಾಲತಾಣವನ್ನು ಬ್ರೌಸ್ ಮಾಡುವಾಗ ಜನರು ಹೇಗೆ ಈ ವೆಬ್ ಸೈಟನ್ನು ಬಳಸುತ್ತಾರೆ ಎಂಬುದನ್ನು ಗುರುತಿಸಲು ನಾವು ಈ ಕುಕಿಗಳನ್ನು ಉಪಯೋಗಿಸುತ್ತೇವೆ. ನಿಮ್ಮ ಆಯ್ಕೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಕೂಡ ನಾವು ಈ ಕುಕಿಗಳನ್ನು ಉಪಯೋಗಿಸುತ್ತೇವೆ. ಉದಾಹರಣೆಗೆ, ಈ ಜಾಲತಾಣಕ್ಕೆ ನಿಮ್ಮ ಮೊದಲ ಬೇಟಿಯ ಸಂದರ್ಭದಲ್ಲಿ, ಒಂದೊಮ್ಮೆ ನೀವು ಬಳಕೆಯ ನಿಯಮಗಳ ಷರತ್ತುಗಳನ್ನು ಒಳಗೊಂಡ ಪಾಪ್ ಅಪ್ ಬಾಕ್ಸಿನ ಮೇಲೆ ಕ್ಲಿಕ್ ಮಾಡಿ ಒಪ್ಪಿಕೊಂಡಲ್ಲಿ, ನಂತರ ಪ್ರತಿಸಲ ನೀವು ಭೇಟಿ ನೀಡಿದಾಗಲೂ ನೀವು ಅದೇ ಬಾಕ್ಸನ್ನು ನೋಡಿ ಒಪ್ಪಿಗೆಯನ್ನು ಸೂಚಿಸುವ ಅಗತ್ಯವಿರುವುದಿಲ್ಲ. ಯಾವ ಮಾಹಿತಿಯನ್ನು ಕೂಡ ನಿಮ್ಮನ್ನು ವೈಯಕ್ತಿಕವಾಗಿ ಗುರುತು ಹಿಡಿಯಲು ಬಳಸಲಾಗುವುದಿಲ್ಲ.

ಈ ಗೌಪ್ಯತಾ ನೀತಿಯು ಕೂಡ ಕಾಲಕಾಲಕ್ಕೆ, ವಿಶೇಷವಾಗಿ, ಹೊಸ ಕಾನೂನುಗಳು ಅಥವಾ ನಿಬಂಧನೆಗಳು ಜಾರಿಯಲ್ಲಿ ಬಂದಾಗ ಬದಲಾವಣೆಗೆ ಒಳಗಾಗಬಹುದು. ಅಂತಹ ತಿದ್ದುಪಡಿಗಳಾದ ಪಕ್ಷದಲ್ಲಿ ಬದಲಾವಣೆಯ ಕುರಿತಾದ ಮಾಹಿತಿಯನ್ನು ನಾವು ಜಾಲತಾಣದಲ್ಲಿ ಪ್ರಕಟಿಸುತ್ತೇವೆ. ಆದಾಗ್ಯೂ, ನೀವು ಆಗಾಗ ಗೌಪ್ಯತಾ ನೀತಿಯನ್ನು ಪರಿಶೀಲಿಸುತ್ತ ಅದರ ಕುರಿತು ತಿಳಿದುಕೊಂಡಿರಬೇಕು ಎಂಬುದನ್ನು ನಾವು ಶಿಫಾರಸು ಮಾಡುತ್ತೇವೆ. ಈ ಗೌಪ್ಯತಾ ನೀತಿಯನ್ನು ಕೊನೆಯ ಬಾರಿಗೆ ಕಳೆದ ಫೆಬ್ರುವರಿ 3, 2015ರಂದು ಇತ್ತೇದಿಸಲಾಗಿದೆ.

 
 
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org