ಸಕಾರಾತ್ಮಕ ಜೀವನ

ಡಾ. ಎಡ್ವರ್ಡ್ ಹಾಫ್‌ಮನ್

ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಇವರು ನ್ಯೂಯಾರ್ಕ್‌ನ ಯೇಶಿವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಪ್ರತ್ಯೇಕವಾಗಿ ಅಧಿಕೃತ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಆಲ್ಪ್ರೆಡ್‌ ಆಡ್ಲರ್‌ ಮತ್ತು ಅಬ್ರಾಹಂ ಮ್ಯಾಸ್ಲೋ ಜೀವನ ಚರಿತ್ರೆಗಳೂ ಸೇರಿದಂತೆ ಮನಃಶಾಸ್ತ್ರ ಹಾಗೂ ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಇವರು ಬರೆದಿದ್ದಾರೆ. ಸದ್ಯ ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಡಾ. ವಿಲಿಯಮ್‌ ಅವರ ಜತೆಯಲ್ಲಿ ಕಾಂಪ್ಟನ್‌ ಆಪ್‌ ಪಾಸಿಟಿವ್‌ ಸೈಕಾಲಜಿ: ದಿ ಸೈನ್ಸ್‌ ಆಫ್‌ ಹ್ಯಾಫಿನೆಸ್‌ ಆಂಡ್‌ ಪ್ಲೋರಿಷಿಂಗ್‌ ಕೃತಿ ರಚಿಸುತ್ತಿದ್ದಾರೆ. ಇಂಡಿಯನ್‌  ಜರ್ನಲ್‌ ಆಫ್‌ ಪಾಸಿಟಿವ್‌ ಸೈಕಾಲಜು ಆಂಡ್‌ ದಿ ಜರ್ನಲ್‌ ಆಫ್‌ ಹ್ಯುಮನಿಸ್ಟಿಕ್‌ ಸೈಕಾಲಜಿ ಗಳ ಸಂಪಾದಕೀಯ ಮಂಡಳಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಡಾ. ಹೋಪ್‌ಮ್ಯಾನ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿದ್ದಾರೆ. ಕೊಳಲು ವಾದನ ಮತ್ತು ಈಜು ಇವರ ಬಿಡುವಿನ ಸಮಯದ ಸಂಗಾತಿ.