ಮನೋಲೋಕ

ಸುಷ್ಮಾ ಸಿಂಧು

ಹಾಸನದಲ್ಲಿ ನೆಲೆಸಿರುವ ಸುಷ್ಮಸಿಂಧು ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆ. ಎಂ.ಎಸ್ಸಿ (ಕ್ಲಿನಿಕಲ್ ಸೈಕಾಲಜಿ) ಪ್ರಥಮ ರಾಂಕ್ ವಿಜೇತೆ. ವಿವಿಧ ಸಂಸ್ಥೆಗಳಲ್ಲಿ ಆಪ್ತಸಮಾಲೋಚನೆ, ಉಪನ್ಯಾಸ ನೀಡಿರುವ ಅನುಭವವಿರುವ ಸುಷ್ಮ ಲೇಖಕಿಯೂ ಹೌದು. ಮನಸ್ಸು, ಆಧ್ಯಾತ್ಮ, ಬದುಕಿನ ಆಯಾಮಗಳ ಅವಲೋಕನ ಬರವಣಿಗೆಯ ವೈಶಿಷ್ಟ್ಯ. ಸದ್ಯ ವಿಶ್ವವಾಣಿಯ ಪಡಸಾಲೆಯಲ್ಲಿ ಅಂಕಣಕಾರ್ತಿಯಾಗಿದ್ದು ಲೇಖನಗಳು, ಅಂಕಣ, ಕಥೆಗಳು ವಿವಿಧ ಪತ್ರಿಗೆಳಲ್ಲಿ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಸಮಾವೇಶದಲ್ಲಿ ಭಾಗಿ, ಅಂತರರಾಷ್ಟ್ರೀಯ ಜರ್ನಲ್‍ಗಳಲ್ಲಿ ಬರಹಗಳು ಪ್ರಕಟಗೊಂಡಿವೆ. ಪಯಣ ಸಾಗಿದಂತೆ ಎಂಬ ಕಥಾ ಸಂಕಲನ ಹೊರ ತಂದಿದ್ದು ಅದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧÀನ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ವಿವಿಧ ಕಥಾ ಪ್ರಶಸ್ತಿಗಳಿಗೂ ಭಾಜನರಾಗಿದ್ದು ‘ಲ್ಯುಮಿನಸ್ ಲೇನ್’ ಹೆಸರಿನ ವೆಬ್‍ತಾಣ ಸಂಸ್ಥಾಪಿಸಿ ಅಲ್ಲಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.