ಬಂಗಾರಕ್ಕಾಗಿ ಶೋಧಿಸುವ ಕ್ರಮ ನಿಮಗೆ ನೆನಪಿದೆಯೇ?

 ಈಗ ಕೆಲವು ದಿನಗಳ ಹಿಂದಷ್ಟೇ ಒಬ್ಬರು, ‘ಚಿನ್ನವನ್ನು ಶೋಧಿಸಿ ಕೆಸರನ್ನಲ್ಲ’ ಎಂದು ಹೇಳುವುದನ್ನು  ನಾನು ಕೇಳಿದ್ದೆ. ಎಷ್ಟೊಂದು ಸರಳ ಯೋಚನೆ! ಆದರೆ ಅದರಂತೆ ನಡೆಯುವುದು ಬಹಳ ಕಷ್ಟ. ಈ ವಿಚಾರ ನನ್ನಲ್ಲಿ ಹಳೆಯ ನೆನಪುಗಳನ್ನು ಜಾಗೃತಗೊಳಿಸಿತು. ಹಿಂದೆ ನಾನು ಈ ಮಾತಿನಂತೆ ನಡೆದುಕೊಳ್ಳದೇ ಕೆಲವು ಸಮಸ್ಯೆಗಳನ್ನು ಎದುರಿಸಿದ್ದೆ.
ಆಪ್ತಸಮಾಲೋಚನೆಗೆ ಬರುವ ಮಕ್ಕಳು ಮತ್ತು ಹದಿಹರೆಯದವರು ವಿವರಿಸುವ ಸಮಸ್ಯೆ ಏನೇ ಇದ್ದರೂ ಅವರಲ್ಲಿ ಮುಕ್ಕಾಲು ಭಾಗ ಜನರು ಆತ್ಮಗೌರವದ ಸಮಸ್ಯೆಗೆ ಅಥವಾ ಅದರಿಂದ ಉದ್ಭವಿಸಿರಬಹುದಾದ ಸಮಸ್ಯೆಗೆ ತುತ್ತಾಗಿರುತ್ತಾರೆ ಎಂದರೆ ತಪ್ಪಾಗಲಾರದು. “ನಾನು ಚೆನ್ನಾಗಿಲ್ಲ,” “ನಾನು ಅಷ್ಟು ಬುದ್ಧಿವಂತನಲ್ಲ,” “ನಾನು ಅಂದವಾಗಿಲ್ಲ,” “ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿಲ್ಲ,ಆದ್ದರಿಂದ ನನಗೆ ಯಾರೂ ಒಳ್ಳೆಯ ಸ್ನೇಹಿತರಾಗುವುದಿಲ್ಲ,” “ಯಾರೂ ನನ್ನೊಂದಿಗೆ ಮಾತನಾಡುತ್ತಿಲ್ಲ,” “ಟೀಚರ್ ನನ್ನನ್ನು ಬಯ್ಯಬಹುದು ಅಥವಾ ಉಳಿದವರು ನನ್ನನ್ನು ನೋಡಿ ನಗಬಹುದು ಹಾಗಾಗಿ ನಾನು ಪ್ರಶ್ನೆಯನ್ನು ಕೇಳುವುದಿಲ್ಲ,” “ ಎಲ್ಲರೂ ನನ್ನನ್ನು ನೋಡಿ ನಗುತ್ತಾರೆ ಆದುದರಿಂದ ನಾನು ವೇದಿಕೆಯನ್ನು ಹತ್ತುವುದಿಲ್ಲ,” ಇತ್ಯಾದಿಯಾಗಿ ಅವರು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ.
ಆತ್ಮಗೌರವವು ಒಬ್ಬ ವ್ಯಕ್ತಿಗೆ ತನ್ನಲ್ಲಿರುವ ಮೌಲ್ಯದ ಕುರಿತು ಇರುವ ಸಮಗ್ರ ಭಾವನಾತ್ಮಕ, ವ್ಯಕ್ತಿನಿಷ್ಠ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಇದು ವ್ಯಕ್ತಿಗೆ ತನ್ನ ಬಗ್ಗೆ ತಾನು ಹೊಂದಿರುವ ಅಭಿಪ್ರಾಯ ಮತ್ತು ಮನೋಭಾವವನ್ನು ಸೂಚಿಸುತ್ತದೆ. ಈ ಮೇಲಿನ ಹೇಳಿಕೆಗಳು ಆತ್ಮಗೌರವದ ಕೊರತೆಯನ್ನು ಸೂಚಿಸುತ್ತವೆ. ಇಂತಹ ಮಕ್ಕಳಲ್ಲಿ ಯಾರೂ ಹುಟ್ಟಿನಿಂದಲೇ ಈ ಸಮಸ್ಯೆಯನ್ನು ಹೊಂದಿರುವುದಿಲ್ಲ ಎಂಬುದನ್ನು ಇಲ್ಲಿ ಪ್ರಮುಖವಾಗಿ ಅರ್ಥ ಮಾಡಿಕೊಳ್ಳಬೇಕು.
ಪಾಲಕರಾದ ನಾವು ಮತ್ತು ಉಳಿದ ವಯಸ್ಕರು ಕೆಲವು ಪ್ರಾಸಂಗಿಕ ಮಾತುಗಳಿಂದ, ಹಾನಿಕಾರಕ ಹೇಳಿಕೆಗಳು ಮತ್ತು ಅನಗತ್ಯ ತೀರ್ಮಾನಗಳ ಮೂಲಕ ಅವರನ್ನು ಈ ರೀತಿ ಮಾಡಿರುತ್ತೇವೆ. ನಾವು ಅವರನ್ನು ಪ್ರೋತ್ಸಾಹಿಸುವ ಭರದಲ್ಲಿ ಕೆಲವೊಮ್ಮೆ ಅರಿವಿಲ್ಲದೆಯೇ ಅವರ ಬೆಳವಣಿಗೆಯನ್ನು ನಿಲ್ಲಿಸಿಬಿಡುತ್ತೇವೆ.
ನಾವು ಏನನ್ನು ಹೇಳುತ್ತೇವೆ ಮತ್ತು ಅದನ್ನು ಹೇಗೆ ಹೇಳುತ್ತೇವೆ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಕೆಲವೊಮ್ಮೆ ನಾವು ಎರಡನೆಯ ಬಾರಿ ಯೋಚಿಸದೇ, ಪ್ರಾಸಂಗಿಕವಾಗಿ ನಮ್ಮ ಮಗುವನ್ನು ಮೂರ್ಖ, ಪೆದ್ದ, ನಿಧಾನಿ ಅತವಾ ಅಸಮರ್ಥ ಎಂದು ಕರೆಯುತ್ತೇವೆ.  ಲೂಸರ್ ಎಂದು ಕೂಡ ಕರೆದುಬಿಡುತ್ತೇವೆ. ಆದರೆ ನಾವು ಅವರು ತಾವು ಮೂರ್ಖ, ಪೆದ್ದ, ನಿಧಾನಿ, ಅಸಮರ್ಥ ಅಥವಾ ಲೂಸರ್ ಎಂದೇ ಭಾವಿಸಿಕೊಂಡೇ ಬೆಳೆಯಬೇಕೆಂದು ಬಯಸುತ್ತೇವೆಯೇ?
ಕೆಲವು ದಿನಗಳ ಹಿಂದೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನ ಪಾಲಕರು ನನ್ನ ಬಳಿ ತಮ್ಮ ಮಗುವಿಗಾಗಿ ಸಹಾಯ ಕೇಳಿಕೊಂಡು ಬಂದರು. ಆಗಷ್ಟೇ ನಡೆದ ಪಾಲಕರು ಮತ್ತು ಶಿಕ್ಷಕರ ಮೀಟಿಂಗಿನಲ್ಲಿ ಶಾಲೆಯ ಶಿಕ್ಷಕರು ಮಗುವಿನಲ್ಲಿ ಹಲವಾರು ಸಮಸ್ಯೆಗಳನ್ನು ಗುರುತಿಸಿ ಶಾಲೆಯ ಆಪ್ತಸಮಾಲೋಚಕರನ್ನು ಭೇಟಿ ಮಾಡಲು ತಿಳಿಸಿದ್ದರು.
ಅವರ ಜೊತೆ ಸ್ವಲ್ಪಹೊತ್ತು ಸಂವಹನ ನಡೆಸಿದ ಮೇಲೆ ತಾವು ಮಗುವನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯದೇ ಅಸಹಾರಕರಾಗಿದ್ದೇವೆ ಎಂದು ತಿಳಿಸಿದರು. ಅವರು ಬಳಸಿದ ಪದಗಳು ನನ್ನಲ್ಲಿ ನಡುಕವನ್ನು ಹುಟ್ಟಿಸಿದವು. ನನ್ನ ಪ್ರಕಾರ ನೀವು ಸಮಸ್ಯೆಯನ್ನು ಪರಿಹರಿಸುತ್ತೀರಿ ಆದರೆ ಮಗುವು ಸಮಸ್ಯೆಯಾಗುವುದಿಲ್ಲ. ನೀವು ಮಗುವನ್ನೇ ಸಮಸ್ಯೆಯೆಂದು ಪರಿಗಣಿಸಿದರೆ ಆ ನಿಮ್ಮ ಮನೋಧರ್ಮವು ನಿಮ್ಮ ಮಾತು ಹಾಗೂ ನಡವಳಿಕೆಯಲ್ಲಿಯೂ ವ್ಯಕ್ತವಾಗುತ್ತದೆ. ಇದರಿಂದಾಗಿ ನಿಮ್ಮ ಮಗುವೂ ಕೂಡ ತಾನೊಂದು ಸಮಸ್ಯೆಯೆಂದು ಭಾವಿಸತೊಡಗುತ್ತದೆ. 
ನಾನು ಆ ಪಾಲಕರಿಗೆ ತಮ್ಮ ಮಗುವಿನಲ್ಲಿರುವ ಸಾಮರ್ಥ್ಯಗಳ ಬಗ್ಗೆ ತಿಳಿಸಲು ಹೇಳಿದಾಗ  ಅವರಲ್ಲಿ ಯಾರೊಬ್ಬರಿಗೂ ಕೂಡ ಏನನ್ನೂ ಹೇಳಲು ತಿಳಿಯಲಿಲ್ಲ. ನಾನು ಅದೇ ಪ್ರಶ್ನೆಯನ್ನು ಬೇರೆ ಬೇರೆ ರೀತಿಯಲ್ಲಿ ಕೇಳಿದಾಗಲೂ ಕೂಡ ಏನನ್ನೂ ತಿಳಿಸಲಿಲ್ಲ. 
ಈಗ ನಾನು ಪರಿಹರಿಸಬೇಕಾದ ಸಮಸ್ಯೆಯು ಇದೇ ಆಗಿತ್ತು ಹೊರತು ಮಗುವಾಗಿರಲಿಲ್ಲ. 
ಕೆಲವು ಮಕ್ಕಳು ತಮ್ಮನ್ನು ತಾವು ಅತೀ ಸಾಮಾನ್ಯರೆಂದುಕೊಂಡು, ತಮ್ಮಲ್ಲಿ ಯಾವ ವಿಶೇಷ ಗುಣಗಳು ಇಲ್ಲವೆಂದು ನಂಬಿ ಬೆಳೆಯಲು ಪಾಲಕರು ಕೂಡ ತಮ್ಮಲ್ಲಿ ವಿಶೇಷ ಮನೋಧರ್ಮ ಮತ್ತು ನಡವಳಿಕೆಯನ್ನು ಹೊಂದಿರದಿರುವುದೇ ಕಾರಣವಾಗಿರುತ್ತದೆ. ಅವರೂ ಕೂಡ ಯಾವ ರೀತಿಯಲ್ಲೂ ಅಸಾಮಾನ್ಯರಾಗಿರುವುದಿಲ್ಲ. 
ಪಾಲಕರು, ಶಿಕ್ಷಕರು ಮತ್ತು ಉಳಿದ ವಯಸ್ಕರಿಗೆ ಮಕ್ಕಳ ಮನಸ್ಥಿತಿಯು ಅರ್ಥವಾಗುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಆದರೆ ಮಕ್ಕಳು ಒಳ್ಳೆಯದನ್ನು ಮಾಡುತ್ತಿರುವಾಗ ಅವರನ್ನು ಗುರುತಿಸದೇ ಅವರು ಕೆಟ್ಟದ್ದನ್ನು ಮಾಡಿದಾಗ ಗುರುತಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮವುಂಟಾಗುತ್ತದೆ. ವಯಸ್ಕರು ಮಕ್ಕಳ ಮಾತುಗಳನ್ನು ಆಲಿಸುವ ಮೂಲಕ ಅವರ ಒಪ್ಪವಾದ ಕೆಲಸವನ್ನು ಗುರುತಿಸಿ ಒಳ್ಳೆಯ ನಡತೆಯನ್ನು ಪ್ರೋತ್ಸಾಹಿಸಿ ಅವರ ಪ್ರಯತ್ನವನ್ನು ಶ್ಲಾಘಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬಹುದು.
ನೀವು ಈ ರೀತಿ ನಡೆದುಕೊಳ್ಳುತ್ತಿಲ್ಲವಾದರೆ ಅದನ್ನು ಹೇಗೆ ಆರಂಭಿಸುತ್ತೀರಿ? ನೀವು ಪ್ರತಿದಿನವೂ ನಿಮ್ಮ ಮಗುವಿನಲ್ಲಿ ಒಂದು ಒಳ್ಳೆಯ ಗುಣವನ್ನು ಗುರುತಿಸಿ ಅದನ್ನು ಶ್ಲಾಘಿಸುವ ಮೂಲಕ ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯನ್ನಿರಿಸಬಹುದು. ಪ್ರತಿದಿನ ಈ ರೀತಿ ಮಾಡಲು ಸಾಧ್ಯವಾಗಿರದಿದ್ದರೆ ವಾರಗಳಿಂದ ಆರಂಭಿಸಿ.
ನೀವು ನಿಮ್ಮ ಮಗುವನ್ನು ಎಷ್ಟು ಶ್ಲಾಘಿಸುತ್ತಿದ್ದಿರಿ ಎಂದು ತಿಳಿದಾಗ ನಿಮಗೆ ಆಶ್ಚರ್ಯವಾಗುತ್ತದೆ. ಕೆಲವು ಮಕ್ಕಳು ತಮ್ಮ ಪಾಲಕರಿಂದ ಪ್ರಶಂಸೆ ಪಡೆದೇ ಇರುವುದಿಲ್ಲ. ಅಲ್ಲದೇ ಈ ಅಲಕ್ಷ್ಯವನ್ನು ಪಾಲಕರು ಗುರುತಿಸುವುದೂ ಇಲ್ಲ.
ನಾವು ತಪ್ಪಾದ ನಡವಳಿಕೆಯನ್ನು ಬೇಗ ಗುರುತಿಸುತ್ತೇವೆ ಆದರೆ ಸರಿಯಾದ ನಡವಳಿಕೆಯನ್ನು ನಿರ್ಲಕ್ಷಿಸಿಬಿಡುತ್ತೇವೆ. ಚಿನ್ನವನ್ನು ಶೋಧಿಸುವಂತೆ ಇದೊಂದು ಹವ್ಯಾಸವಾಗುವವರೆಗೆ ಪ್ರತಿದಿನವೂ ಮಾಡಿ. ಕೇವಲ ಅವರಿಗೆ ಬುದ್ಧಿ ಮಾತು ಹೇಳುವ ಬದಲು ಚಿನ್ನವನ್ನು ಉಜ್ಜಿ ಇನ್ನಷ್ಟು ಹೊಳಪು ನೀಡಲು ಪ್ರಯತ್ನಿಸಿ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org