We use cookies to help you find the right information on mental health on our website. If you continue to use this site, you consent to our use of cookies.
ಡಾ.ಅನಿಲ್‌ ಪಾಟೀಲ್‌

ಅಕ್ಕರೆಯ ಆರೈಕೆ

ಮಕ್ಕಳು ತಮ್ಮ ಪೋಷಕರ ಆರೈಕೆ ಮಾಡುವಾಗ - ಡಾ.ಅನಿಲ್‌ ಪಾಟೀಲ್‌

ಭಾರತದಲ್ಲಿ ಹಲವಾರು ಎಳೆಯ ಆರೈಕೆದಾರರಿದ್ದಾರೆ .ತೆರೆಮರೆಯಲ್ಲಿರುವ ಇವರ ಹಾಗೆ ಬಗ್ಗೆ ನಮಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಬಹಳಷ್ಟು ಸಂದರ್ಭದಲ್ಲಿ ಮಕ್ಕಳು, ತಮ್ಮ ಪಾಲಕರು ಕಾಯಿಲೆ ಬಿದ್ದಾಗ ಮತ್ತು ಅವರ ಆರೈಕೆ ಮಾಡಲು ಯಾರೂ ಇಲ್ಲದ ಸಂದರ್ಭದಲ್ಲಿ ಈ ಸ್ಥಿತಿಗೆ ಸಿಲುಕುತ್ತಾರೆ. ಹೊರಲಾರದ ಹೊರೆಯನ್ನು ತಮ್ಮ ಎಳೆಯ ಭುಜಗಳ ಮೇಲೆ ಹೊತ್ತು ಒಮ್ಮೆಲೇ ವಯಸ್ಕರಾಗುತ್ತಾರೆ.
ಆರೈಕೆಯ ದಾರರ ಕೆಲಸವು ಮಕ್ಕಳನ್ನು ಭಾವನಾತ್ಮಕವಾಗಿ ಬರಿದು ಮಾಡುವುದಲ್ಲದೆ ದೈಹಿಕವಾಗಿ, ಸಾಮಾಜಿಕವಾಗಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಇಂತಹವರಿಗೆ ಅಗತ್ಯವಾಗಿ ಬೆಂಬಲ ಬೇಕಾಗಿದೆ.
 
ಎಳೆಯ ಆರೈಕೆದಾರರ ಸಂಕಷ್ಟದ ಬದುಕು
ದೊಡ್ಡ ಅಪಘಾತವೊಂದರ ಕಾರಣದಿಂದ ತನ್ನ ತಂದೆಯು ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಾಗ ಪ್ರಿಯ ಹತಾಶಳಾದಲು. ಅವಳಿಗೆ ಬೆಂಬಲದ ಅಗತ್ಯವಿತ್ತು. ಆದರೆ ಅವಳ ತಾಯಿ ಅಂದಿನ ರಾತ್ರಿಯೇ ಮನೆ ಬಿಟ್ಟು ಹೊರಟು ಹೋದಳು. ಆ ಎಳೆಯ ಹೆಗಲಿನ ಮೇಲೆ ತಂದೆಯ ಜವಾಬ್ದಾರಿ ಬಿತ್ತು. ಪ್ರಿಯ ತನ್ನ ತಂದೆಯ ಆರೈಕೆದಾರಳು, ಅಡುಗೆಯವಳು ಮತ್ತು ಮನೆಕೆಲಸದವಳಾದಳು. ಮನೆ ನಡೆಸಲು ಯಾವ ಆದಾಯವೂ ಇಲ್ಲದ ಕಾರಣ ಬಹುಬೇಗ ನಿರ್ಗತಿಕರಾದರು. ಆ ಪುಟ್ಟ ಹುಡುಗಿ ತನ್ನ ಸಾಮಾಜಿಕ ಬದುಕನ್ನು ಕಳೆದುಕೊಂಡಳು. ಜೊತೆಗೆ ತನ್ನ ಓದನ್ನೂ ನಿಲ್ಲಿಸಬೇಕಾಯಿತು.
ತೀವ್ರ ಒತ್ತಡಕ್ಕೆ ಸಿಲುಕಿದ ಪ್ರಿಯಳಿಗೆ ಕೋಪ, ಹತಾಶೆ ಉಂಟಾಯಿತು. ಮನೆ ಬಿಟ್ಟು ಓಡಿ ಹೋಗಬೇಕು ಅನ್ನಿಸುತ್ತಿತ್ತು. ಅದೃಷ್ಟವಶಾತ್, ಸ್ಥಳೀಯ ಎನ್ ಜಿ ಒ ಗೆ ಈ ವಿಷಯ ತಿಳಿಯಿತು. ಪ್ರಿಯ ಹಾಗೂ ಅವಳ ತಂದೆಗೆ ಬೆಂಬಲ ನೀಡಲಾಯಿತು.
ಈಗ ಅವಳು ತನ್ನ ಓದನ್ನು ಮುಂದುವರೆಸುತ್ತಿದ್ದಾಳೆ. ತಾನು ಶಾಲೆಗೆ ಹೋಗುವ ಮುನ್ನ ಮತ್ತು ಶಾಲೆಯಿಂದ ಹಿಂದಿರುಗಿದ ನಂತರ ತನ್ನ ತಂದೆಯನ್ನು ನೋಡಿಕೊಳ್ಳಲು ಕೂಡ ಸಾಧ್ಯವಾಗುತ್ತಿದೆ.
ಅವಳ ಮನೆಯ ಹಿಂದೆ ಒಂದು ಶೌಚಾಲಯವನ್ನು ಕಟ್ಟಲು ಹಣ ಸಂಗ್ರಹಿಸಲಾಯಿತು ಮತ್ತು ಮಹಿಳಾ ಸಿಬ್ಬಂದಿಗಳು ನಿರಂತರವಾಗಿ ಭೇಟಿ ನೀಡಿ ಪ್ರಿಯಳಿಗೆ ಭಾವನಾತ್ಮಕ ಬೆಂಬಲ ಹಾಗೂ ಸಲಹೆ ನೀಡುತ್ತಿದ್ದಾರೆ.
ಬದುಕು ಕಷ್ಟಕರವಾಗಿದ್ದರೂ ಸುಲಭವಾಗಿಲ್ಲದಿದ್ದರೂ ಈಗ ಪ್ರಿಯಳಿಗೆ ಉತ್ತಮ ಭವಿಷ್ಯದ ಆಶಾಭಾವವಿದೆ.
 
ಪ್ರಿಯಳಂತಹ ಮಕ್ಕಳು ಅನುಭವಿಸುವ ಒತ್ತಡ ಊಹಿಸಲು ಅಸಾಧ್ಯವಾದದ್ದು.
ಈ ಎಳೆಯರು ಮನೆ ಗುಡಿಸಿ ಶುಚಿಮಾಡುವುದು, ಅಡುಗೆ ಮಾಡುವುದು, ಅಸ್ವಸ್ಥರ ದಿನನಿತ್ಯದ ಕಾರ್ಯಚಟುವಟಿಕೆಗೆ ಸಹಾಯ ಮಾಡುವುದು ಶೌಚಕ್ಕೆ ಸಂಬಂಧಿಸಿದ ಸೂಕ್ಷ್ಮ ಆರೈಕೆ ಹಾಗೂ ತೊಳೆಯುವುದು ಇತ್ಯಾದಿ ಶುಶ್ರೂಷಕಿ ಕೆಲಸವನ್ನೂ ಕೂಡ ಮಾಡಬೇಕಾಗುತ್ತದೆ. ಇವೆಲ್ಲದರ ಜೊತೆಗೆ, ವ್ಯಕ್ತಿಗೆ ಭಾವನಾತ್ಮಕ ಬೆಂಬಲ ಕೂಡ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಮನೆ ನಡೆಸಲು ಬೇಕಾದ ಆದಾಯದ ಹೊರೆಯನ್ನೂ ನಿರ್ವಹಿಸಬೇಕಾಗುತ್ತದೆ . ಕೆಲವೊಮ್ಮೆ ತಮ್ಮ ಒಡಹುಟ್ಟಿದವರ ಆರೈಕೆ ಕೂಡ ಮಾಡಬೇಕಾಗುತ್ತದೆ.
 
ಎಳೆ ಆರೈಕೆದಾರರ ಆರೈಕೆಯ ಅಗತ್ಯ
ಬ್ರಿಟನ್ ದೇಶದ ಯುವ ಆರೈಕಯದಾರರು ಒಂಟಿಯಾಗಿರುತ್ತಾರೆ. ಪರಿಣಾಮವಾಗಿ. ಖಿನ್ನರಾಗಿರುತ್ತಾರೆ.
ಇವರು ಸಂಪರ್ಕ ಕೌಶಲ್ಯಗಳಲ್ಲಿ ಹಿಂದುಳಿದಿರುತ್ತಾರೆ. ಇದರಿಂದ ವಯಸ್ಕರಾಗಿ ಪರಿವರ್ತನೆಯಾಗಲು ಬಹಳ ಕಷ್ಟವಾಗುತ್ತದೆ. ಶಾಲೆಯಲ್ಲೂ ಹಿಂದುಳಿದಿರುತ್ತಾರೆ ಅಥವಾ ಬಹಳ ಹತಾಶೆಯ ಪರಿಸ್ಥಿತಿಯಲ್ಲಿ ಶಾಲೆಯಿಂದ ಪೂರ್ತಿಯಾಗಿ ಹೊರಬೀಳುತ್ತಾರೆ.
ಆರೈಕೆ ಮಾಡುವ ಕೆಲಸದಿಂದ ಮಕ್ಕಳು ಸಂಪೂರ್ಣವಾಗಿ ನಿಶ್ಯಕ್ತರಾಗುತ್ತಾರೆ ಮತ್ತು ಕಾಯಿಲೆಗೆ ತುತ್ತಾಗುತ್ತಾರೆ. ವಿಶೇಷವಾಗಿ, ಜೀವನ ಸ್ಥಿತಿಯು ಬಹಳ ದುಸ್ತರವಾಗಿರುವ ಪ್ರಿಯಳಂತಹ ಸಂದರ್ಭಗಳಲ್ಲಿ ಇದು ಖಚಿತ.
ಆದ್ದರಿಂದಲೇ ಈ ಎಳೆಯ ಆರೈಕೆದಾರರಿಗೆ ನಾವು ನೆರವು ನೀಡಬೇಕು. ಇದು ಸಮುದಾಯದೊಳಗೆ ಅಂತಹವರನ್ನು ಗುರುತಿಸುವುದರಿಂದ ಆರಂಭವಾಗುತ್ತದೆ. ಏಕೆಂದರೆ ಬಹಳಷ್ಟು ಎಳೆ ಆರೈಕೆದಾರರು ಬಹಿರಂಗವಾಗಿ ಕಾಣಿಸುವುದಿಲ್ಲ . ಅವರು ಒಂಟಿಯಾಗಿ ನಿಭಾಯಿಸಲು ಪ್ರಯತ್ನಿಸುತ್ತಿರುತ್ತಾರೆ.
 
ಒಮ್ಮೆ ನಾವು ಅಂತಹ ಸ್ಥಿತಿಯಲ್ಲಿರುವ ಮಗುವನ್ನು ಗುರುತಿಸಿದರೆ ನೆರವು ನೀಡಲು ಹಲವು ಮಾರ್ಗಗಳಿವೆ.
ಮಗುವಿನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಲು ಕುಟುಂಬ ಅಥವಾ ಸಮುದಾಯದಲ್ಲಿ ಬೇರೆ ಯಾರಾದರೂ ಆರೈಕೆದಾರರಿದ್ದಾರೆಯೇ ಎಂದು ಕುಟುಂಬವನ್ನು ಸಂಪರ್ಕಿಸಿ ಪತ್ತೆ ಹಚ್ಚಬಹುದು.
ಶಾಲಾ ಶಿಕ್ಷಕರು ಎಳೆಯ ಆರೈಕೆದಾರರ ಅಗತ್ಯಗಳಿಗೆ ಸಂವೇದನಶೀಲರಾಗಿರಬೇಕು ಮತ್ತು ಅವರನ್ನು ಶಾಲೆ ಅಥವಾ ಕಾಲೇಜಿನಲ್ಲಿ ವಾಪಸ್ಸು ಸೇರಿಸಿಕೊಳ್ಳುವ ಪ್ರಯತ್ನ ನಡೆಸಬೇಕು.
ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಮಗುವಿಗೆ ನೆರವು ನೀಡುವುದು ಅತ್ಯಗತ್ಯ. ಮತ್ತು ಇದನ್ನು ಸಾಧಿಸುವ ಒಂದು ಮಾರ್ಗವೆಂದರೆ ಎಳೆ ಆರೈಕೆದಾರರನ್ನು ಒಟ್ಟಿಗೆ ಸೇರಿಸುವುದು
 
ಈ ರೀತಿಯಲ್ಲಿ ಅವರು ಪರಸ್ಪರ ಭೇಟಿಯಾಗುವುದಲ್ಲದೆ ಖುಷಿಯಾಗಿರುತ್ತಾರೆ ಹಾಗೂ ತಾವು ಒಂಟಿಯಲ್ಲ ಎಂದು ಅರಿಯಲು ಆರಂಭಿಸುತ್ತಾರೆ ಮತ್ತು ಅದೇ ಪರಿಸ್ಥಿತಿಯಲ್ಲಿರುವ ಮಕ್ಕಳ ಜೊತೆಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹಾ ಇದು ನೆರವಾಗುತ್ತದೆ.
 
ನಾವು ಈ ಮಕ್ಕಳಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡಬಹುದು ಮತ್ತು ಅವರ ಬದುಕಿನಲ್ಲಿ ಬೆಳಕು ಕಾಣವಂತೆ ಮಾಡಬಹುದು.
ಪ್ರಿಯ ಹೇಳುವಂತೆ “ಬದುಕು ಇನ್ನೂ ಕಷ್ಟವಾಗಿದೆ, ಆದರೆ ನಾನು ಶಾಲೆಗೆ ವಾಪಸ್ಸಾಗಿದ್ದೇನೆ ಮತ್ತು ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವನ್ನು ಕಾಣುತ್ತೇನೆ.”
 
* ಗೌಪ್ಯತೆಯ ಉದ್ದೇಶಕ್ಕಾಗಿ ಹೆಸರನ್ನು ಬದಲಿಸಲಾಗಿದೆ.