ಹದಿಹರೆಯದ ನಡವಳಿಕೆ ಬದಲಾವಣೆಯಲ್ಲಿ ಅಸ್ವಸ್ಥತೆಯ ಮುಸುಕು

ದೆಹಲಿ ಮೂಲದ ಅನೀಶಾ 23ರ ಯುವತಿ. ಎಂಟು ತಿಂಗಳಿಂದ ಬೆಂಗಳೂರಿನಲ್ಲಿ ವಾಸ. ಆಕೆ ಮಾನಸಿಕ ಸಲಹೆಗಾರರ ಜತೆ ನನ್ನ ಎರಡು ಸೆಷನ್‌ಗಳಿಗೆ ಹಾಜರಾಗಿದ್ದಳು. ಮಾನಸಿಕ ಸಲಹೆಗೆ ಸ್ಪಂದಿಸದಷ್ಟು ಖಿನ್ನತೆ. ಈಕೆಗೆ ವೈದ್ಯಕೀಯ ಚಿಕಿತ್ಸೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಮಾನಸಿಕ ಸಲಹೆಗಾರ ಬಂದಿದ್ದರು.

ಮೊದಲ ಸೆಷನ್‌ನಲ್ಲಿ ಅನೀಶಾಳಿಂದ ನಕಾರಾತ್ಮಕ ಸ್ಪಂದನೆ ಬಂತು. ತನ್ನ ಕಣ್ಣೀರನ್ನು ಅದುಮಿ ಇಟ್ಟುಕೊಳ್ಳುವ ಪ್ರಯತ್ನ ಕಾಣುತ್ತಿತ್ತು. ಒಂದು ತಿಂಗಳಿನಿಂದೀಚೆಗೆ ಆಕೆಗೆ ಭಾರಿ ಖಿನ್ನತೆ. ಆಕೆಯ ಖಿನ್ನತೆ ಎಷ್ಟು ಆಳದ್ದಾಗಿತ್ತೆಂದರೆ ಆಕೆ ಒಂದು ಮಾತನಾಡಲೂ ಇಚ್ಛಿಸುತ್ತಿರಲಿಲ್ಲ. ಆಕೆ ವೃತ್ತಿಯಿಂದ ಲೇಖಕಿ. ವೆಬ್‌ಸೈಟ್‌ಗೆ ಜೀವನಶೈಲಿ ಬಗ್ಗೆ ಬರೆಯುವುದು ಆಕೆಯ ಉದ್ಯೋಗವಾಗಿದ್ದರೂ ಒಂದೊಂದು ಶಬ್ದಕ್ಕೂ ತಡವರಿಸುತ್ತಿದ್ದಳು. ಮಾಮೂಲಿಯಾಗಿದ್ದಾಗ ಆಕೆ ಮುಕ್ತ ಅಭಿವ್ಯಕ್ತಿಯ ಪ್ರವೃತ್ತಿಯವಳು.

ಇದೀಗ ಖಿನ್ನತೆಯಿಂದಾಗಿ ಆಕೆ ಯಾವ ಕಾರಣದಿಂದ ಅಷ್ಟು ಖಿನ್ನಳಾಗಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೂ ಸಾಧ್ಯವಾಗಲಿಲ್ಲ ಹಾಗೂ ಅದನ್ನು ವಿವರಿಸುವುದೂ ಆಕೆಗೆ ಸಾಧ್ಯವಾಗುತ್ತಿಲ್ಲ. ತನ್ನ ಹೈಸ್ಕೂಲ್ ಹಾಗೂ ಕಾಲೇಜು ದಿನಗಳಲ್ಲಿ ಎರಡು- ಮೂರು ಬಾರಿ ಇಂಥದ್ದೇ ಅನುಭವ ಆಗಿತ್ತು ಎಂದು ಆಕೆ ನೆನಪಿಸಿಕೊಂಡರು. ಆ ಕಾಲದಲ್ಲಿ ಇಂಥ ಅನುಭವ ಆಗಲು ಆಕೆಯ ಜೀವನದಲ್ಲಿ ನಡೆದ ಒಂದೆರಡು ಘಟನೆಗಳೂ ಕಾಕತಾಳೀಯವಾಗಿದ್ದವು. ಇದರ ಪರಿಣಾಮವಾಗಿ ಆಕೆ ಹೊರ ಹಾಕಲ್ಪಟ್ಟಿದ್ದಳು.

ಆಕೆಯ ಜೀವನದ ಛಿದ್ರ ಘಟನೆಗಳನ್ನು ಒಂದೊಂದಾಗಿ ಜೋಡಿಸುತ್ತಿದ್ದಂತೆ, ತನ್ನ ಜೀವನದಲ್ಲಿ ನಡೆದ ಎರಡು ಅತ್ಯಂತ ಸಂತಸದ ಭಿನ್ನ ಘಟನೆಗಳನ್ನು ಬಿಚ್ಚಿಟ್ಟಳು. ಅದಕ್ಕೆ ಕೂಡಾ ಯಾವುದೇ ಬಲವಾದ ಕಾರಣ ಇರಲಿಲ್ಲ. ಆ ಎರಡು ಘಟನೆಗಳನ್ನು ಆಕೆ ಎಳೆ ಎಳೆಯಾಗಿ ಬಿಚ್ಚಿಟ್ಟಳು. ಈ ಎರಡೂ ಘಟನೆಗಳು ಆಕೆ ಹಾಸ್ಟೆಲ್‌ನಲ್ಲಿ ಇದ್ದಾಗ ನಡೆದ ಘಟನೆಗಳು. ಪದವಿ ತರಗತಿಯಲ್ಲಿ ಆಕೆ ಓದುತ್ತಿದ್ದಾಗ ನಡೆದ ಘಟನೆಗಳು.

ಈಕೆ ಸದಾ ಹುಮ್ಮಸ್ಸಿನಿಂದ ಇರುತ್ತಿದ್ದ ಬಗ್ಗೆ ರೂಂ ಮೇಟ್ ಪ್ರತಿಕ್ರಿಯಿಸಿದ್ದಳು. ಅನಿಶಾ ಕೂಡಾ ಆ ಘಟನೆಯನ್ನು ನೆನಪಿಸಿಕೊಂಡಳು. ಅದು ಅಲ್ಪಾಯುಷಿ ಹಾಗೂ ಅಷ್ಟೇನೂ ತೀವ್ರವಲ್ಲದ ಲಘು ಸಂತಸದ ಕ್ಷಣಗಳು. ಕೆಲವು ಗಂಟೆ ಅಥವಾ ಕೆಲ ದಿನಗಳು ಕಳೆದ ಬಳಿಕ ಮರೆತು ಬಿಡುವಂಥ ಘಟನೆಗಳು ಅವು.

ಕಾಲ ಕಳೆದಂತೆ ಮನಸ್ಥಿತಿಯ ಅಸ್ವಸ್ಥತೆಯ ಚಿತ್ರಣ ಅನಾವರಣಗೊಂಡಿತು. ಆಕೆ ಅತೀವ ಸಿಟ್ಟಾಗುತ್ತಿದ್ದ ಹಾಗೂ ಕಿರಿಕಿರಿಗೆ ಒಳಗಾಗುತ್ತಿದ್ದ ಘಟನೆಗಳು ಕೂಡಾ ಕಂಡುಬಂದವು. ಆದರೆ ಇದಕ್ಕೆ ಕೂಡಾ ನಿರ್ದಿಷ್ಟವಾಗಿ ಯಾವ ಕಾರಣವೂ ಇರಲಿಲ್ಲ. ಆಕೆ ಅತೀವ ಸಂತಸದಿಂದ ಇದ್ದ ಒಂದು ಘಟನೆಯೂ ಇತ್ತು.

ಅತಿ ಎತ್ತರದ ಕಟ್ಟಡವೊಂದರ ತುತ್ತತುದಿಯ ಟೆರೇಸ್‌ನಲ್ಲಿ ನಿಂತು ತನ್ನ ಕೈಗಳನ್ನು ಚಾಚಿಕೊಂಡು ಹಾರಬಹುದು ಮತ್ತು ಜಿಗಿಯಬಹುದು ಎಂಬ ಕಲ್ಪನಾ ಲೋಕದಲ್ಲಿ ತೇಲುತ್ತಿದ್ದಳು. ಈ ಘಟನೆ ನಡೆದದ್ದು ನನ್ನನ್ನು ಆಕೆ ಭೇಟಿಯಾಗುವ ಎರಡು ವಾರ ಮೊದಲು. ಇದರಿಂದ ತತ್ತರಿಸಿದ ಸ್ನೇಹಿತ ಆಕೆಯನ್ನು ಮಾನಸಿಕ ಸಲಹೆಗಾರರ ಬಳಿಗೆ ಎಳೆದು ತಂದರು.

ಈ ಘಟನೆಗಳನ್ನು ಪರಿಗಣಿಸಿದಾಗ, ಆಕೆ ಪ್ರಸ್ತುತ ಎದುರಿಸುತ್ತಿದ್ದ ಖಿನ್ನತೆಯ ಮನಸ್ಥಿತಿ ಹಾಗೂ ಆಕೆಯ ಇತಿಹಾಸದ ಬಗೆಗಿನ ಮಾಹಿತಿಗಳನ್ನು ಕಲೆ ಹಾಕಿ ಆಕೆಗೆ ಮನಸ್ಥಿತಿ ವ್ಯತ್ಯಯದ ಚಿಕಿತ್ಸೆ ನೀಡಬೇಕು ಎಂಬ ನಿರ್ಧಾರಕ್ಕೆ ಬಂದೆವು. ಚಿಕಿತ್ಸೆ ಆರಂಭವಾಯಿತು. ವೈದ್ಯಕೀಯ ಚಿಕಿತ್ಸೆಯ ಪರಿಣಾಮವಾಗಿ ಮುಂದಿನ ಕೆಲ ವಾರಗಳಲ್ಲಿ ಆಕೆಯ ಮನಸ್ಥಿತಿ ಸ್ಥಿರವಾಯಿತು. ಈಗ ಆಕೆ ಪದೇ ಪದೇ ಪರಾಮರ್ಶೆಗಾಗಿ ಬರುತ್ತಿದ್ದಾಳೆ. ಅಪರೂಪಕ್ಕೊಮ್ಮೆ ಆಕೆಗೆ ಮನಸ್ಥಿತಿ ವ್ಯತ್ಯಯವಾಗುವುದು ಇತರರಿಗೆ ಅಪರೂಪಕ್ಕೊಮ್ಮೆ ಆಗುವ ಮೂಡ್ ಔಟ್‌ನಂತೆ. ಆಕೆ ಈಗ ಚೆನ್ನಾಗಿದ್ದಾಳೆ.

ಮನಸ್ಥಿತಿ ಹೀಗೆ ಓಲಾಡುವುದಕ್ಕೆ ಚಿಕಿತ್ಸೆ ಏಕೆ ಎಂದು ತಿಳಿದುಕೊಳ್ಳುವುದು ಕಷ್ಟ. ಆಕೆಯ ಅದೇ ಸ್ಥಿತಿ ಮುಂದುವರೆದಲ್ಲಿ ಕಟ್ಟಡದ ತುತ್ತತುದಿಯಿಂದ ಹಾರುವ ಅಪಾಯವೂ ಇತ್ತು ಅಥವಾ ಆಳವಾದ ಖಿನ್ನತೆಯಿಂದ ಬದುಕಿಗೆ ವಿದಾಯ ಹೇಳುವ ಸಾಧ್ಯತೆಯೂ ಇತ್ತು. ಈ ಎರಡೂ ತೀರಾ ವಿಭಿನ್ನ ಪರಿಣಾಮಗಳಿಗೆ ಹೊರತಾಗಿಯೂ ಇಂಥ ತೀವ್ರ ಮನಸ್ಥಿತಿಯಿಂದ ಬೇಕಾಬಿಟ್ಟಿ ಖರ್ಚು, ವಿನಾಕಾರಣ ಜಗಳಕ್ಕೆ ಇಳಿಯುವುದು, ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು, ಲೈಂಗಿಕ ಅಚಾತುರ್ಯದಂಥ ಪರಿಣಾಮಗಳ ಅಪಾಯವೂ ಇದೆ.

ಇಂಥ ಒಂದಲ್ಲ ಒಂದು ಘಟನೆಗಳು ಆಕೆಯ ಜೀವನದಲ್ಲಿ ಉದ್ಭವಿಸುವ ಸಾಧ್ಯತೆ ಇತ್ತು. ಇಂಥ ಮನಸ್ಥಿತಿ ವ್ಯತ್ಯಯದಿಂದ ಒಬ್ಬ ವ್ಯಕ್ತಿ ತನ್ನ ತೀರಾ ಸಂತಸದ ಕ್ಷಣದಲ್ಲಿ ವಿಮಾನ ನಿಲ್ದಾಣಗಳಿಂದ ವಿಮಾನ ನಿಲ್ದಾಣಗಳಿಗೆ ಪ್ರಯಾಣ ಮಾಡುತ್ತಾ ತನ್ನ ಬಹುಪಾಲು ಉಳಿತಾಯವನ್ನು ವ್ಯಯಿಸಬಲ್ಲ. ಅದೇ ವ್ಯಕ್ತಿ ತೀರಾ ಖಿನ್ನತೆಯ ಸಂದರ್ಭದಲ್ಲಿ, ತಾನು ಮಾಡಲೇಬೇಕಾದ ಕರ್ತವ್ಯಗಳನ್ನು ಕೂಡಾ ನಿರ್ವಹಿಸದಂಥ ಸ್ಥಿತಿಯನ್ನು ಎದುರಿಸಿ ಹಾನಿ ಉಂಟು ಮಾಡಿಕೊಳ್ಳಬಹುದು. ಇದರಿಂದ ಅವರ ಇಡೀ ಜೀವನವೇ ಗೋಜಲಾಗಿ ಬಿಡುತ್ತದೆ.

ಹಲವು ಇಂಥ ಹದಿಹರೆಯದ ನಡವಳಿಕೆಗಳು ಹೀಗೆ ತಪ್ಪಾಗಿ ಕೆಲವೊಮ್ಮೆ ಚೈತನ್ಯದ ಚಿಲುಮೆಯಾಗುವುದು, ಇದ್ದಕ್ಕಿಂದ್ದಂತೆ ಮನ ಸ್ಥಿತಿ ಬದಲಾಗಿ ಖಿನ್ನತೆ ಆವರಿಸುವುದು, ಹಾರ್ಮೋನ್‌ಗಳು, ಪಿಎಂಎಸ್, ಪರಸ್ಪರ ಮನಸ್ತಾಪಗಳು, ಕೀಳರಿಮೆ ಅಥವಾ ಇತರ ಯಾವುದೇ ಕಾರಣಗಳನ್ನು ಇಂಟರ್‌ನೆಟ್‌ನಿಂದ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಕೆಲವೊಮ್ಮೆ, "ಓಹ್ ಆಕೆ ಕುಡಿದ ಅಮಲಿನಲ್ಲಿದ್ದಾಳೆ ಎಂದು ನಾವು ಅಂದುಕೊಂಡಿದ್ದೆವು" ಎಂದು ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು.

ಮನಸ್ಥಿತಿ ವ್ಯತ್ಯಯ ಎನ್ನುವುದು ಕೇವಲ ಮೂಡಿ ಆಗಿರುವುದಷ್ಟೇ ಅಲ್ಲ. ಅದು ಒಬ್ಬ ವ್ಯಕ್ತಿಯ ಸಾಮಾನ್ಯ ಮನ ಸ್ಥಿತಿಗಿಂತ ತೀರಾ ವೈರುಧ್ಯದ ಬದಲಾವಣೆ. ಅದು ಮನಸ್ಸಿನ ಅತಿ ಆಹ್ಲಾದ ಇರಬಹುದು ಅಥವಾ ತೀರಾ ಖಿನ್ನತೆಯೂ ಇರಬಹುದು. ಇಂಥ ಭಾರಿ ಮನಸ್ಥಿತಿ ಬದಲಾವಣೆಯನ್ನು ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಗಮನಿಸಿದರೆ, ಗಂಭೀರ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಹಾಗೂ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಬಗ್ಗೆ ಮನಃಶಾಸ್ತ್ರೀಯ ಮೌಲ್ಯಮಾಪನಕ್ಕೆ ಸೂಚಿಸಬೇಕು. ಇದರಿಂದ ತೀರಾ ಹಾನಿಯಾಗುವ ಮುನ್ನವೇ ಚಿಕಿತ್ಸೆ ನೀಡಬಹುದು.

ಈ ಸರಣಿಯಲ್ಲಿ ಡಾ.ಶ್ಯಾಮಲಾ ವತ್ಸ ಅವರು, ಹದಿಹರೆಯದ ಬದಲಾವಣೆಗಳಲ್ಲಿ ಇಂಥ ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭದ ಮುಸುಕು ಕೂಡಾ ಕಾಣಬಹುದು ಎಂಬ ಅಂಶಗಳ ಬಗ್ಗೆ ಗಮನ ಸೆಳೆದಿದ್ದಾರೆ. ಒಂದು ಮಾಮೂಲಿನ ಹದಿಹರೆಯದ ನಡವಳಿಕೆ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಬಿಂಬಿಸಬಹುದು ಎಂದು ಈ ಲೇಖನದಲ್ಲಿ ವಿವರಿಸಿದ್ದಾರೆ. ಯುವ ಮನಸ್ಸುಗಳು ಇಂಥ ಅನಗತ್ಯ ಸಮಸ್ಯೆಗಳಿಂದ ಬಳಲುವುದನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಇಂಥ ಯುವಕ- ಯುವತಿಯರ ನಡವಳಿಕೆ ಮಾಮೂಲಿಗಿಂತ ತೀರಾ ವಿಚಿತ್ರ ಎನಿಸಿದರೆ ಅದನ್ನು ಗುರುತಿಸುವ ಜವಾಬ್ದಾರಿ ಸ್ನೇಹಿತರದ್ದು ಮತ್ತು ಕುಟುಂಬ ವರ್ಗದವರದ್ದು. ಅದು ನಿಯಂತ್ರಣ ತಪ್ಪುವ ಮುನ್ನ ಅದಕ್ಕೆ ಚಿಕಿತ್ಸೆ ಪಡೆಯಬಹುದು.

ಡಾ. ಶ್ಯಾಮಲಾ ವತ್ಸ ಅವರು ಬೆಂಗಳೂರು ಮೂಲದ ಮನಃಶಾಸ್ತ್ರಜ್ಞೆಯಾಗಿದ್ದು, ೨೦ ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಪ್ರತಿಕ್ರಿಯೆಗೆ columns@whiteswanfoundation.org ಸಂಪರ್ಕಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org