ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸುವಾಗ, ಸಂಸ್ಥೆಯು ಯಾವ ರೀತಿ ನೆರವು ನೀಡಬಹುದು ?

ಸಾಮಾನ್ಯವಾಗಿ ಸಂಸ್ಥೆಗಳು, ಒಂದು ನೋಟಿಸ್ ನೀಡಿ ಉದ್ಯೋಗಿಗಳನ್ನು ಸುಲಭವಾಗಿ ಕೆಲಸದಿಂದ ವಜಾ ಗೊಳಿಸಿಬಿಡುತ್ತವೆ. ಆದರೂ ಕೆಲವು ಸಂಸ್ಥೆಗಳು ಉದ್ಯೋಗಿ ನೆರವು ಯೋಜನೆಯನ್ನು ಅಳವಡಿಸಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಾರೆ.

ವಲಸೆ ಬಂದವರು,ಕುಟುಂಬದ ಜವಾಬ್ದಾರಿ ಇರುವವರು, ಅಥವಾ ಅಧಿಕ ಹಣಕಾಸಿನ ಅವಶ್ಯಕತೆ ಇರುವವರು, ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ವಜಾಗೊಳಿಸುವಾಗ ಸಂಸ್ಥೆಗಳು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.

ಇಂತಹ ಸಂದರ್ಭದಲ್ಲಿ, ಕೆಲಸದಿಂದ ವಜಾಗೊಳಿಸುತ್ತಿರುವ ಉದ್ಯೋಗಿಗಳ ಬೆಂಬಲಕ್ಕಾಗಿ ಮಾನಸಿಕ ತಜ್ಞರ ಸಹಾಯ ಪಡೆಯಬಹುದು. ಉದ್ಯೋಗಿಗಳಿಗೆ ಮಾನಸಿಕ ಬೆಂಬಲ ನೀಡಲು ಹಲವು ವಿಧಾನಗಳನ್ನು ಬಳಸಬಹುದು :

  • ಉದ್ಯೋಗಿಗಳಿಗೆ ವಿಷಯವನ್ನು ಯಾವ ರೀತಿ ತಲುಪಿಸಬೇಕು ಎಂದು ಮ್ಯಾನೇಜರ್/ ಎಚ್. ಆರ್ ಗೆ ಹೇಳಿಕೊಡುವುದು
  • ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಾಗ ಆಫೀಸಿನಲ್ಲಿ ಇದ್ದು , ಅಗತ್ಯ ಬೆಂಬಲ ನೀಡಬೇಕು.
  • ವಜಾಗೊಳಿಸಿದ ನಂತರ ಅವರಿಗೆ ಬೆಂಬಲ ನೀಡಬೇಕಾದರೆ ಸಿದ್ಧವಿರಬೇಕು.
  • ಗುಂಪಿನಲ್ಲಿ ಅಥವಾ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ವಿಷಯವನ್ನು ತಿಳಿಸಿ.

.ಕೆಲವೊಮ್ಮೆ,  ಉಳಿದ ಉದ್ಯೋಗಿಗಳು ಈ ವಿಷಯದ ಬಗ್ಗೆ ಚಿಂತೆ ಮಾಡುತ್ತಿರಬಹುದು. ಅವರಿಗೆ ಸಂಸ್ಥೆಯ  ಉದ್ಯೋಗಿ ನೆರವು ಯೋಜನೆಯ ಸೇವೆ ಪಡೆಯಲು ಹೇಳಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org