ಯಾವುದೇ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸುವುದು

ನಮ್ಮ ಜೀವನದಲ್ಲಿ ಹಲವಾರು ಘಟನೆಗಳು ಕಷ್ಟಕರವಾಗಿರುತ್ತದೆ ಮತ್ತು ಇದನ್ನು ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ನಿಭಾಯಿಸುತ್ತಾರೆ. ಕೆಲವು ಜನರು ಸ್ವಾಭಾವಿಕವಾಗಿ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡು ತಮ್ಮ ಜೀವನ ನಡೆಸುತ್ತಾ ಹೋಗುತ್ತಾರೆ.

ಹೀಗೆ ಸನ್ನಿವೇಶಗಳನ್ನು ನಿಭಾಯಿಸಲು ಕೆಲವು ಸಲಹೆಗಳು ಇಲ್ಲಿ ಇವೆ:

ಸ್ವಯಂ ಪಾಲನೆ: ನಿಯಮಿತ ವ್ಯಾಯಾಮ,  ಆರೋಗ್ಯಕರ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ಆರೋಗ್ಯ ಕೆಡಿಸುವ ಪದಾರ್ಥಗಳನ್ನು ಬಳಸದೆ ನಿಮ್ಮ ಆರೈಕೆ ಮಾಡಿಕೊಳ್ಳಿ. ನಿಮ್ಮ ಆರೋಗ್ಯ ಬಹಳ ಮುಖ್ಯ.  

ಬದಲಾವಣೆಯನ್ನು ಒಪ್ಪಿಕೊಳ್ಳಿ: ಎದುರಾಗುವ ಒತ್ತಡ ಹಾಗೂ ಸವಾಲುಗಳು ಜೀವನದಲ್ಲಿ ಕಲಿಯಲು ಹಾಗೂ ಬೆಳೆಯಲು ಉತ್ತಮ ಅವಕಾಶಗಳೆಂದು ಭಾವಿಸಿ.

ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಿ: ನಿಮ್ಮ ಬಗ್ಗೆ ಹಾಗೂ ಸಮಸ್ಯೆಯನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಧನಾತ್ಮಕ ನೋಟ ಬೆಳೆಸಿಕೊಳ್ಳಿ.  ನಿಮ್ಮ ಉತ್ತಮ ಗುಣ, ಬಲ ಹಾಗೂ ಸಾಧನೆಯ ಬಗ್ಗೆ ನಿಮಗೆ ಅರಿವಿರಲಿ .

ಸ್ನೇಹ ಸಂಬಂಧ: ಜೀವನದ ಒತ್ತಡ ಅಥವಾ ಏನಾದರರೂ ಸಮಸ್ಯೆಗಳು ಎದುರಾದಾಗ ನಿಮಗೆ ಸಹಾಯ ಮಾಡುವ, ಬೆಂಬಲ ನೀಡುವ ಒಂದಿಷ್ಟು ಜನರು, ಸ್ನೇಹಿತರು ಇರುವಂತೆ ನೋಡಿಕೊಳ್ಳಿ.

ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಬೆಳೆಸಿಕೊಳ್ಳಿ: ಸಮಸ್ಯೆಯನ್ನು ನಿವಾರಿಸುವ ಸಂಭಾವ್ಯ ಮಾರ್ಗಗಳ ಪಟ್ಟಿ ಮಾಡಿಕೊಂಡರೆ ಸಮಸ್ಯೆಯಿಂದ  ಆದಷ್ಟು ಬೇಗ ಹೊರಗೆ ಬರಬಹುದು .

ತೊಂದರೆಯಲ್ಲಿದ್ದರೆ ಸಹಾಯ ಕೇಳಿ: ಏನಾದರೂ ಸಮಸ್ಯೆ ಅಥವಾ ಪ್ರತಿಕೂಲ ಸ್ಥಿತಿಯಲ್ಲಿದ್ದರೆ ನೀವು ನಂಬುವ ವ್ಯಕ್ತಿಗಳ ಬಳಿ ಸಹಾಯ ಕೇಳಿ.  ಕೌನ್ಸೆಲಿಂಗ್‌ ಅಥವಾ ಚಿಕಿತ್ಸೆ ಕೂಡಾ ಒಂದು  ಮಾರ್ಗವಾಗಿದೆ.

ನಿಜ ಸ್ಥಿತಿ ಬಗ್ಗೆ ಅರಿವು: ವಾಸ್ತವಿಕತೆಯ ಆಧಾರದಲ್ಲಿ ಪರಿಸ್ಥಿತಿಗಳನ್ನು ನೋಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿ  

ಜೀವನದಲ್ಲಿ ಉದ್ದೇಶದ ಅರ್ಥ ಹುಡುಕಿ:  ಜೀವನದ ಉದ್ದೇಶ ಮತ್ತು ಮೌಲ್ಯ ತಿಳಿಯುವುದರಿಂದ  ಬಿಕ್ಕಟ್ಟು ಅಥವಾ ಕಷ್ಟದ ಪರಿಸ್ಥಿತಿಯಿಂದ ಬೇಗ ಚೇತರಿಸಿಕೊಳ್ಳಬಹುದು. ಜನರೊಂದಿಗೆ ಬೆರೆಯುವುದು, ಸ್ನೇಹಿತರ ಸಂಪರ್ಕ, ಮಾತುಕತೆ , ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವುದು, ಅಥವಾ ನಿಮ್ಮ ಜೀವನಕ್ಕೆ ಯಾವುದಾದರೂ ಅರ್ಥ ತುಂಬುವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡಿ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org