ವೈಟ್ ಸ್ವಾನ್ ಫೌಂಡೇಷನ್ ಕುರಿತು

ವೈಟ್ ಸ್ವಾನ್ ಮಾನಸಿಕ ಆರೋಗ್ಯ ಫೌಂಡೇಷನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಜ್ಞಾನ ಆಧಾರಿತ ಪರಿಹಾರ ಮಾರ್ಗಗಳನ್ನು ಸೂಚಿಸುತ್ತದೆ. ನಾವು ಮಾನಸಿಕ ಸಮಸ್ಯೆ ಎದುರಿಸುವವರಿಗೆ ಮತ್ತು ಅವರ ಕಾಳಜಿ ವಹಿಸುವವರಿಗೆ, ಸಮುದಾಯಗಳಿಗೆ ಅತ್ಯುತ್ತಮ ಸಂಶೋಧನೆಗಳನ್ನು ಆಧರಿಸಿದ ಮಾಹಿತಿಯನ್ನು ಒದಗಿಸುವ ಮೂಲಕ, ಅವರು ತಮ್ಮ ಮಾನಸಿಕ ಅನಾರೋಗ್ಯದ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸುತ್ತೇವೆ. ವೈಟ್ ಸ್ವಾನ್ ಫೌಂಡೇಷನ್ ತಂಡವು ಮಾನಸಿಕ ಆರೋಗ್ಯ ತಜ್ಞರೊಡನೆ , ಸ್ವತಃ ಅನುಭವ ಹೊಂದಿರುವವರೊಡನೆ, ಸಮಾನ ಮನಸ್ಕ ವ್ಯಕ್ತಿಗಳೊಡನೆ ಮತ್ತು ವಿಶ್ವದಾದ್ಯಂತ ವಿವಿಧ ಸಂಘಟನೆಗಳೊಡನೆ ಸಮಾಲೋಚನೆ ನಡೆಸಿ ಮಾನಸಿಕ ಆರೋಗ್ಯದ ಬಗ್ಗೆ ಅತ್ಯುನ್ನತ ಗುಣಮಟ್ಟದ ತಿಳುವಳಿಕೆಯನ್ನು ನೀಡುತ್ತೇವೆ.

ನಮ್ಮ ಕಾರ್ಯ ಚಟುವಟಿಕೆ

ವೈಟ್ ಸ್ವಾನ್ ಮಾನಸಿಕ ಆರೋಗ್ಯ ಫೌಂಡೇಷನ್ನಿನಲ್ಲಿ ನಾವು ಮೂಲತಃ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ನಮ್ಮಲ್ಲಿರುವ ಅತ್ಯುತ್ತಮ ಸಂಶೋಧನೆಯಿಂದ ಕೂಡಿದ, ಸ್ಪಷ್ಟವಾಗಿ ರೂಪಿಸಿದ ಮಾಹಿತಿಯನ್ನು ವಿವಿಧ ಸಮುದಾಯಗಳಿಗೆ ತಲುಪಿಸುತ್ತೇವೆ. ನಮ್ಮ ಕಾರ್ಯ ಚಟುವಟಿಕೆ ಮತ್ತು ಸಂಪಾದಕೀಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನಾವು ಸಿದ್ಧಪಡಿಸಿರುವ ಈ ವಿಡಿಯೋಗಳನ್ನು ವೀಕ್ಷಿಸಿ :

ಮೂವಿಂಗ್ ಮೈಂಡ್ಸ್

Moving Minds

ನಮ್ಮ ನಿತ್ಯ ಜೀವನದಲ್ಲಿ ಎದುರಿಸುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನೆರವಾಗುವಂತಹ ಕೆಲವು ಘಟನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ವಿಡಿಯೋ ಸರಣಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ, ಸಾಮುದಾಯಿಕ ನೆಲೆಯಲ್ಲಿ ಸಂವಾದ ನಡೆಸುವ ಮೂಲಕ ವಿನ್ಯಾಸ ಮಾಡಲಾಗಿದೆ. ಚಲಿಸುವ ಮನಸುಗಳು ವಿಡಿಯೋ ಸರಣಿಯಲ್ಲಿನ ಘಟನೆಗಳು ವಿಭಿನ್ನ ರೂಪಗಳನ್ನು ಹೊಂದಿದ್ದು ವೆಬಿನಾರ್ ಗಳ ಮೂಲಕ , ಕಥೆ ಹೇಳುವುದರ ಮೂಲಕ, ಚರ್ಚಾ ಕೂಟಗಳ ಮೂಲಕ, ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಬಿತ್ತರಿಸಲಾಗುತ್ತದೆ.

ಕಾರ್ಯಕ್ಷೇತ್ರದ ಮಾನಸಿಕ ಆರೋಗ್ಯ ಕಾರ್ಯಕ್ರಮಗಳು

ನಾವು ಜ್ಞಾನ ಆಧಾರಿತ, ಸಹಭಾಗಿತ್ವದ ಮತ್ತು ಸಿಬ್ಬಂದಿ ಪ್ರೇರಿತ ಪ್ರಯತ್ನಗಳ ಮೂಲಕ ಕಚೇರಿಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ನೆರವಾಗುತ್ತೇವೆ. ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯುವ ಮಾರ್ಗಗಳು ಹತ್ತಿರದಲ್ಲಿರಬೇಕಾದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಲೇ , ಕಚೇರಿಯ ಸಿಬ್ಬಂದಿ ವರ್ಗವು ಈ ಸೇವೆಗಳನ್ನು ಸದುಪಯೋಗಪಡಿಸಿಕೊಂಡು, ಉಪಯುಕ್ತವಾಗಿ ಬಳಸಿಕೊಳ್ಳಲು, ಕಾರ್ಯಕ್ಷೇತ್ರದಲ್ಲಿನ ಮುಕ್ತ ವಾತಾವರಣ ಮತ್ತು ಒಳಗೊಳ್ಳುವಿಕೆ ನೆರವಾಗುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ kannada.whiteswanfoundation.org/workplace
ನಾವು ಆಪ್ತ ಸಲಹೆ, ಪುನರ್ವಸತಿ ಮತ್ತು ನೇರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದಿಲ್ಲ.

ನಮ್ಮ ಸಹಭಾಗಿಗಳು

National Institute of Mental Health and Neuro Sciences (NIMHANS)

Quintype

Twitter India

ನಮ್ಮ ಮೂಲ

ಫೆಬ್ರವರಿ 14-2013 ರಲ್ಲಿ ನಡೆದ ನಿಮ್ಹಾನ್ಸ್ (NIMHANS : National institute of mental health and neuro sciences)ಇನ್ಸ್ಟಿಟ್ಯೂಟ್ ದಿನಾಚರಣೆಯ ದಿನದಂದು, ತಮ್ಮ ಪ್ರಧಾನ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ರೊತೊ ಬಾಗ್ಚಿ,ಮೈಂಡ್ ಟ್ರೀ ಲಿಮಿಟೆಡ್ - ಭಾರತದಲ್ಲಿ ಮಾನಸಿಕ ಆರೋಗ್ಯ ವಲಯದ ಸವಾಲುಗಳನ್ನು ಎದುರಿಸಲು ಮಾಹಿತಿ ಮತ್ತು ಅರಿವಿನ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳಿದರು. ಈ ನಿಟ್ಟಿನಲ್ಲಿ ಜನರಿಗೆ ಸರಿಯಾದ ಮಾಹಿತಿ ಕೊಟ್ಟು, ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಅವರು ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಈ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಇತರರನ್ನು ಕೋರಿದರು. ಆ ನಂತರದಲ್ಲಿ ಸುಬ್ರೊತೊರವರ ಮಾರ್ಗದರ್ಶನದಲ್ಲಿ ಮನೋಜ್ ಚಂದ್ರನ್ ರವರು, ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾನಸಿಕ ಆರೋಗ್ಯದಲ್ಲಿನ ಉತ್ತಮ ಅಭ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದರು. ನಿಮ್ಹಾನ್ಸ್ ನಿರ್ದೇಶಕ/ಉಪಕುಲಪತಿಗಳಾದ ಡಾ.ಪಿ.ಸತೀಶ್ ಚಂದ್ರ ಮತ್ತು ಇದೇ ಸಂಸ್ಥೆಯ ಕೆಲವು ಮನೋವೈದ್ಯರ ಅಭೂತಪೂರ್ವ ಬೆಂಬಲದಿಂದ ಹಾಗೂ ಇತರೆ ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ದೇಶದಾದ್ಯಂತ ಇರುವ ಇದೇ ವಲಯದ ಉದ್ಯಮಿಗಳು ಮಹತ್ತರ ಮಾಹಿತಿಗಳನ್ನು ಒದಗಿಸಿದರು. ಈ ಎಲ್ಲಾ ಮೂಲದ ಬೆಂಬಲಗಳಿಂದ, ನಾವು ವೈಟ್ ಸ್ವಾನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ನ ಧ್ಯೇಯ ಮತ್ತು ದರ್ಶನವನ್ನು ಗುರುತಿಸಿಕೊಂಡೆವು. ಮಾರ್ಚ್ 25,2014 ರಂದು ಕಂಪನೀಸ್ ಆಕ್ಟ್, ವಿಭಾಗ 25ರ ಪ್ರಕಾರ ವೈಟ್ ಸ್ವಾನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ಒಂದು ಲಾಭರಹಿತ ಸಂಸ್ಥೆ ಎಂಬುದಾಗಿ ಅಸ್ಥಿತ್ವಕ್ಕೆ ಬಂತು.

ಸುಬ್ರೊತೋ ಬಾಗ್ಚಿ ತಮ್ಮ ವೈಯಕ್ತಿಕ ಕಥೆಯನ್ನು ಹಂಚಿಕೊಳ್ಳುವುದರ ಮೂಲಕ ವೈಟ್ ಸ್ವಾನ್ ಫೌಂಡೇಷನ್ ಸ್ಥಾಪನೆಯ ಮೂಲವನ್ನು ತಿಳಿಸಿಕೊಡುತ್ತಾರೆ ವೀಕ್ಷಿಸಿ.

ನಮ್ಮ ದೃಶ್ಯ ಮಾಧ್ಯಮವನ್ನು ಪ್ರಶಸ್ತಿ ವಿಜೇತ ವಿನ್ಯಾಸಕಾರರಾದ ಸುಜಾತಾ ಕೇಶವನ್ ಅವರ ರೇ+ ಕೇಶವನ್ ಬ್ರಾಂಡ್ ಯೂನಿಯನ್ ಸಂಸ್ಥೆ ಸಿದ್ಧಪಡಿಸಿದೆ.

ನಮ್ಮ ಗುರುತು: ವೈಟ್ ಸ್ವಾನ್ (ಶ್ವೇತ ವರ್ಣದ ಹಂಸ)

ನಮ್ಮ ಗುರುತನ್ನು ಪ್ರಶಸ್ತಿ ವಿಜೇತ ವರ್ಣಚಿತ್ರ ವಿನ್ಯಾಸಗಾರ್ತಿ(ಗ್ರಾಫಿಕ್ ಡಿಸೈನರ್) ಶ್ರೀಮತಿ ಸುಜಾತಕೇಶವನ್ ಅವರು(ರೇ+ಕೇಶವನ್/ಬ್ರಾಂಡ್ ಯುನಿಯನ್) ವಿನ್ಯಾಸ ಮಾಡಿದ್ದಾರೆ. ಇಲ್ಲಿ ವೈಟ್ ಸ್ವಾನ್ ಹಕ್ಕಿಯು ಹಿಂದಿನಿಂದಲೂ ಬಂದ ಹಿಂಡಿನ ಮನಸ್ಥಿತಿಯ ವಿರುದ್ಧವಾಗಿ ಬಲದಿಂದ ಎಡಕ್ಕೆ ಈಜುವ ಸ್ಥಾನದಲ್ಲಿದೆ. ಇಲ್ಲಿ ವೈಟ್ ಸ್ವಾನ್ ಒಂದು ರೂಪವಲ್ಲ, ಆದರೆ ಒಂದು ಪ್ರತಿರೂಪದಿಂದ ಸೃಷ್ಟಿಸಿರುವುದು. ಇಲ್ಲಿ ರೂಪವಾಗಲಿ, ಬಣ್ಣವಾಗಲಿ ಏನೂ ಇಲ್ಲ. ಅದು ಕೇವಲ ಬಿಳಿಯ ಜಾಗವಷ್ಟೆ. ಈ ಬಿಳಿಯ ಜಾಗ ನಮಗೆ ಹಂಸದಂತೆ ತೋರುವುದು ನೀಲಿಯ ಆಯತ ಮತ್ತು ಹಂಸದ ತಲೆಯ ಮೇಲಿನ ಜಾಗದಿಂದಷ್ಟೆ.

ಇದೊಂದು ಗೆಸ್ಟಾಲ್ಟ್ ಚಿತ್ರ(ಮನಸ್ಸು ಮತ್ತು ಮಿದುಳಿನ ಥಿಯರಿ). ಇದರಲ್ಲಿ ಮನಸ್ಸು ಅಗತ್ಯ ಸಂಪರ್ಕಗಳನ್ನು ಮಾಡಿ ನಿಮಗೆ ಬಿಳಿ ಜಾಗದ ಬದಲು ಹಂಸವನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ‘ಸ್ವಾನ್’ನ ಬಿಂಬ, ‘ಮೃದು ಮತ್ತು ಶಾಂತ ಸ್ವಭಾವ ಹಾಗೂ ಕಾಳಜಿಯನ್ನು’ ತೋರಿಸುತ್ತದೆ. ಅದರ ಭಂಗಿ ನೋಡಿದಾಗ, ನೀವು ಮರಿ ಹಂಸಗಳು ಅಮ್ಮನ ಸುತ್ತ ಈಜುತ್ತಿರುವುದನ್ನು ಕಲ್ಪಿಸಿಕೊಳ್ಳಬಹುದು. ಹಂಸದ ಎತ್ತಿದ ರೆಕ್ಕೆಗಳು ನೀರಿನಲ್ಲಿ ಈಜುವುದನ್ನು ಸೂಚಿಸುತ್ತದೆ. ವೆಡ್ಜ್ವುಡ್ ನೀಲಿ ಬಣ್ಣ ಹಾಗೂ ದೊಡ್ಡ ಮತ್ತು ಸಣ್ಣ ಅಕ್ಷರದ ಸಂಯೋಜನೆಯು ನಮ್ಮ ಉದ್ದೇಶದ ಗಂಭೀರತೆ ಹಾಗೂ ಸದಾ ನಿಮ್ಮ ಸೇವೆಯಲ್ಲಿರುವ ಗುಣಗಳನ್ನು ಎತ್ತಿ ಹಿಡಿಯುತ್ತದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org