“ಓದೋದಕ್ಕೆ ಎಷ್ಟೊಂದು ಇದೆ. ಹೇಗೆ ಮುಗಿಸುತ್ತೀನೋ?”
“ಈ ಸಿಲಬಸ್ ನೋಡಿದರೆ ಹಾಸಿಗೆಯಲ್ಲೇ ಇದ್ದುಬಿಡೋಣ ಎನಿಸುತ್ತಿದೆ”
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಓದುವುದನ್ನು ಮುಂದೂಡುವುದು, ಸಿಲಬಸ್ ಬಗ್ಗೆ ಆತಂಕ ಪಡುವುದೇ ಹೆಚ್ಚು. ಬದಲಾಗಿ ಸಿಲಬಸ್ ಅನ್ನು ಚಿಕ್ಕ ಭಾಗಗಳಾಗಿ ಮಾಡಿ, ದಿನಕ್ಕೆ ಇಷ್ಟು ಎಂಬಂತೆ ಗುರಿ ಇಟ್ಟುಕೊಂಡು ಓದಬೇಕು.
ಗುರಿಯನ್ನು ನಿರ್ಧರಿಸುವುದು ಏಕೆ ಅಗತ್ಯ?
ನೀವು ಬೆಟ್ಟ ಹತ್ತಬೇಕೆಂದಿದ್ದರೆ, ಬೆಟ್ಟ ನೋಡಿದ ಕೂಡಲೇ ಭಯ ಪಡಬಹುದು. ಆದರೆ ಎಲ್ಲಿಯವರೆಗೆ ತಲುಪಬೇಕೆಂಬ ಗುರಿ ಇಟ್ಟು, ಹತ್ತುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಾಗಿದರೆ, ಗುರಿ ತಲುಪಿದ ಖುಷಿ ಸಿಗುತ್ತದೆ. ಹಾಗೆಯೇ ಪರೀಕ್ಷೆಯ ಸಮಯದಲ್ಲಿ ಎಲ್ಲವೂ ಕಷ್ಟ ಎನಿಸಬಹುದು. ಆದರೆ ಸಣ್ಣ ಸಣ್ಣ ಹೆಜ್ಜೆಗಳಿಡುತ್ತಾ ತಯಾರಾದಾಗ ಸುಲಭವಾಗಿ ಗುರಿ ತಲುಪುತ್ತೀರಿ.
ಗುರಿಯ ವಿಧಗಳು:
ನಿಮಗೆ ಯಾವಾಗ ಫಲಿತಾಂಶ ಬೇಕು ಎಂಬ ಆಧಾರದ ಮೇಲೆ ಗುರಿಗಳನ್ನು ಹೀಗೆ ವಿಂಗಡಿಸಬಹುದು.
ದೀರ್ಘ ಕಾಲದ ಗುರಿಗಳು:
ತಕ್ಷಣದ ಗುರಿಗಳು: ಇವು ದೀರ್ಘ ಕಾಲದ ಗುರಿಗಳನ್ನು ಸಾಧಿಸಲು ಸಹಾಯಕ. ಉದಾಹರಣೆಗೆ,
ಸಣ್ಣ ಗುರಿಗಳು: ಇದು ಒಂದು ದಿನ, ವಾರ ಅಥವಾ ತಿಂಗಳಲ್ಲಿ ಪೂರ್ತಿಗೊಳಿಸಬೇಕಾದ ಕೆಲಸಗಳು. ನಿಮ್ಮ ತಕ್ಷಣದ ಗುರಿಗಳನ್ನು ತಲುಪಲು ಇವು ಸಹಾಯ ಮಾಡುತ್ತವೆ. ಉದಾಹರಣೆಗೆ:
ನೀವು ಗುರಿಯನ್ನು ಹೇಗೆ ರೂಪಿಸಿಕೊಳ್ಳಬಹುದು?
ಪ್ರತಿಯೊಬ್ಬರು ಓದುವ ವಿಧಾನವೂ ಬೇರೆಯಾಗಿರುತ್ತದೆ. ಗುರಿಯನ್ನು ರೂಪಿಸಿಕೊಳ್ಳಲು ಈ ಅಂಶಗಳು ಮುಖ್ಯ-