ಮಹಿಳೆಯರು

ಬಹುಪಾಲು ದಿನಗಳಲ್ಲಿ ನಾನು ತಕ್ಕಮಟ್ಟಿಗೆ ಇರುತ್ತೇನೆ

ವೈಟ್ ಸ್ವಾನ್ ಫೌಂಡೇಶನ್

ಶಾಲೆಯಲ್ಲಿ ನಿಧಾನಗತಿಯವಳಾಗಿದ್ದ ನಾನು

ಶಾಲೆಯ ನಾಟಕದಲ್ಲಿ ಪುಟ್ಟ ಮಗುವಿನಂತೆ ಕಾಣುತ್ತಿದ್ದೆ

ಹಾಕಿ ಸ್ಟಿಕ್ ಒಂದನ್ನು ಹೊತ್ತು ತಿರುಗುತ್ತಾ

ಮೂಕ ಪಶುವಿನಂತಿದ್ದೆ;

ನನಗೆ ಸರಿಹೋಗುವ ಜೀನ್ಸ್ ದೊರೆಯದೆ

ನನಗೆ ಸರಿಹೊಂದುವ ಗೆಳತಿಯರಿಲ್ಲದೆ

ನನ್ನ ಕುಬ್ಜ ಗೆಳತಿಯರು ನನ್ನ ಕುರೂಪವನ್ನು ಕಂಡೇ

ನನ್ನೊಡನೆ ಒಡನಾಟ ಹೊಂದಿದ್ದರೇ ಎಂದು ಚಿಂತಿಸುತ್ತೇನೆ;

ನನ್ನ ಸೌಂದರ್ಯಕ್ಕೆ ನಾನೇ ತಲೆದೂಗುತ್ತಾ

ಕೆಲವೊಮ್ಮೆ ಜನರು ಸುಂದರವಾಗಿಯೂ ಇರುತ್ತಾರೆ

ಎನ್ನುವುದನ್ನು ಕಂಡುಹಿಡಿದಿದ್ದೇನೆ;

ಹಸಿವು ನೀಗಿಸದ ಆಹಾರ ಸೇವನೆ

ಜಿಮ್‍ನಲ್ಲಿ ಕುಸಿದು ಬೀಳುವ ಕ್ಷಣ

ತೂಕ ಕಡಿಮೆ ಮಾಡು ಧೂಮ್ರಪಾನ ಮಾಡೆಂದ

ಯಾರದೋ ಮಾತು ಕೇಳಿ ಧೂಮ್ರಪಾನ ಮಾಡಲಾರಂಭಿಸಿದೆ

ನೀನು ಚಂದವಾಗಿದ್ದೀಯ ಎಂದು ಹೇಳಿದವನೊಡನೆ

ಲೈಂಗಿಕ ಕ್ರಿಯೆಯಲ್ಲಿ ತೊಡಗಿದೆ

ಶಕ್ತಿ ಉಡುಗಿಸುವ ಸಾಮಾಜಿಕ ಕಳಂಕ

ಕೆಟ್ಟ ಸ್ತ್ರೀವಾದಿ ನಾನು ಎನಿಸಿಬಿಟ್ಟಿತು;

ಅಮೆರಿದ ಉನ್ನತ ರೂಪದರ್ಶಿಯನ್ನು ನೋಡಿದೆ

ನಿನ್ನ ದೇಹವನ್ನು ಪ್ರೀತಿಸುವುದು ಪ್ರತಿರೋಧದ ಕ್ರಿಯೆ ಎಂದು ಎಲ್ಲೋ ಓದಿದೆ

ನಾನು ಪ್ರತಿರೋಧಿಸುವ ಶಕ್ತಿ ಉಳ್ಳವಳಲ್ಲ

ಆದರೂ ಪ್ರಯತ್ನಿಸುತ್ತಿದ್ದೇನೆ;

ನನ್ನ ಚರ್ಮದ ಆರೋಗ್ಯ ಕಾಪಾಡಲು ಯೋಚಿಸಿದೆ

ನಾನು ಮಾತ್ರ ಮೇಕಪ್ ಮಾಡಿಕೊಳ್ಳಲು ನಿರ್ಧರಿಸಿದೆ

ಇತರರಿಗೆ ಬೇಕಿಲ್ಲ ಎನಿಸಿತು

ಹತ್ತು ಕಿಲೋಮೀಟರು ಓಡಿದೆ

ನಾನಾಗಿಯೇ ಹಸಿವಿನಿಂದ ಇರದಿರಲು ನಿರ್ಧರಿಸಿದೆ

ಅತಿಯಾಗಿ ವರ್ತಿಸುವುದನ್ನು ನಿಲ್ಲಿಸಿದೆ

ಕೆಲವು ದಿನಗಳು ನಾನು ಮರೆತುಹೋಗುತ್ತೇನೆ

ಆದರೆ ಬಹುಪಾಲು ದಿನಗಳಲ್ಲಿ ನಾನು ತಕ್ಕಮಟ್ಟಿಗೆ ಇರುತ್ತೇನೆ!