ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ಓದಲು ಅಥವಾ ಕೆಲಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬೇರೆ ಊರಿಗೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಇದು ಸಾಮಾನ್ಯ ವಿಷಯ. ಕೆಲವರಿಗೆ ಇದು ಕುತೂಹಲಕಾರಿ ಮತ್ತು ಹೊಸ ಅನುಭವ, ಮತ್ತೆ ಕೆಲವರಿಗೆ ಇದೊಂದು ಸವಾಲು.
ಬೇರೆ ಊರಿಗೆ ಹೋದಾಗ, ಹೊಸ ಜಾಗ, ಹೊಸ ಸ್ನೇಹಿತರು, ಅಗತ್ಯ ವಸ್ತುಗಳನ್ನು ಹೊಂದಿಸುವುದು ಮತ್ತು ಆ ವಾತಾವರಣಕ್ಕೆ ಹೊಂದಿಕೊಳ್ಳುವುದು, ಇತ್ಯಾದಿ ವಿಷಯವನ್ನು ಒಳಗೊಂಡಿರುತ್ತದೆ. ರೆಸಿಡೆನ್ಷಿಯಲ್ ಕಾಲೇಜಿಗೆ ಸೇರುವ ಯುವಕರು, ಅಲ್ಲಿನ ವ್ಯವಸ್ಥೆಗೆ, ಹೊಸ ನಿಯಮಗಳಿಗೆ ಹೊಂದಿಕೊಳ್ಳಬೇಕು. ಕೆಲವರಿಗೆ ಪೇಯಿಂಗ್ ಗೆಸ್ಟ್ (ಪಿ ಜಿ), ಅಥವಾ ಬಾಡಿಗೆ ಮನೆಯಲ್ಲಿ ಇರಲು ಇಷ್ಟ ಪಡುತ್ತಾರೆ. ಇವರಿಗೆ ಬೇಕಾಗುವ ವ್ಯಚ್ಛ, ಮತ್ತಿತರ ಖರ್ಚುಗಳ ಒತ್ತಡ ಇರಬಹುದು.
ಈ ಹಿಂದೆ ಪೋಷಕರಿಂದ ದೂರ ಎಂದೂ ಇರದಿದ್ದಾಗ, ಈ ರೀತಿ ಅನುಭವ ಆಗಬಹುದು:
ಇಂತಹ ಸನ್ನಿವೇಶವನ್ನು ನಿಭಾಯಿಸಲು ಕೆಲವು ಸಲಹೆಗಳು :
ಹೊಸ ಊರಿನಲ್ಲಿ ತಾತ್ಕಾಲಿಕವಾಗಿ ಬೇಸರ, ಆತಂಕ, ಚಿಂತೆ ಉಂಟಾಗುವುದು ಸಹಜ. ಆದರೆ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು. ಈ ಆಲೋಚನೆಗಳು ನಿರಂತರವಾಗಿದ್ದು, ನಿಮ್ಮ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತಿದ್ದರೆ ತಜ್ಞರ ಸಹಾಯ ಪಡೆಯಿರಿ. ಒಂದು ವೇಳೆ ನಿಮ್ಮ ಕಾಲೇಜಿನಲ್ಲಿ ಆಪ್ತಸಲಹೆಗಾರರಿದ್ದರೆ, ಅವರನ್ನು ಸಂಪರ್ಕಿಸಿ.