ಈ ವ್ಯಾಖ್ಯಾನವು, ವಿಶ್ವ ಆರೋಗ್ಯ ಸಂಸ್ಥೆಯ, 1999ರ ಮಕ್ಕಳ ದೌರ್ಜನ್ಯ ತಡೆಗಟ್ಟುವಿಕೆ ಕುರಿತ ಸಮಾಲೋಚನೆಯ ಆಧಾರಿತವಾಗಿದೆ.
- ಮಗುವಿಗೆ ಲೈಂಗಿಕೆ ಕ್ರಿಯೆ ಬಗ್ಗೆ ಗ್ರಹಿಸಲು ಸಾಧ್ಯವಾಗದೇ ಇದ್ದಾಗ ಅಥವಾ
- ಪೂರ್ವ ಒಪ್ಪಿಗೆ ಇಲ್ಲದಿದ್ದರೆ ,
- ಮಗುವಿನ ಶಾರೀರಿಕ ಬೆಳವಣಿಗೆ ಆಗದೇ ಇದ್ದಾಗ, ಅದನ್ನು ಲೈಂಗಿಕ ಕ್ರಿಯೆಗೆ ಒಳಪಡಿಸುವುದರೆ ಅಥವ ಈ ಕ್ರಿಯೆ ಕಾನೂನು ಬಾಹಿರ ಅಥವಾ ಸಾಮಾಜಿಕ ಬಾಹಿರವಾಗಿದ್ದರೆ, ಇದನ್ನು ಮಕ್ಕಳ ಲೈಂಗಿಕ ಕಿರುಕುಳ ಎನ್ನಲಾಗುವುದು.
ಮಗು ಲೈಂಗಿಕ ನಿಂದನೆಗೆ ಒಳಪಟ್ಟಿದೆ ಎಂದು ಗುರುತಿಸುವುದು ಹೇಗೆ?
ಲೈಂಗಿಕ ನಿಂದನೆಗೆ ಒಳಪಟ್ಟ ಮಕ್ಕಳಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ದೈಹಿಕ ಲಕ್ಷಣಗಳು/ ಕಾಣಿಸುತ್ತವೆ. ಅವು ಈ ರೀತಿ ಇವೆ.
- ದೇಹದ ಗೌಪ್ಯ ಭಾಗಗಳಲ್ಲಿ ಗಾಯ ( ಮೊಲೆ/ಯೋನಿ/ ಗುದದ್ವಾರ)
- ಮಲ/ ಮೂತ್ರ ವಿಸರ್ಜನೆ ಮಾಡುವಾಗ ನೋವು
- ಯೋನಿ ಸ್ರಾವ
- ( ರಕ್ತ/ ಬಿಳಿಸ್ರಾವ )
- ಹೊಟ್ಟೆ ನೋವು
- ಲೈಂಗಿಕ ಸೋಂಕುಗಳು/ ಎಚ್ ಐ ವಿ
- ಮರುಕಳಿಸುವ ಮೂತ್ರನಾಳದ ಸೋಂಕು
- ಗರ್ಭಧಾರಣೆ
ಮಗು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಾಗ ನಡವಳಿಕೆ/ವರ್ತನೆಯಲ್ಲಿ ಆಗುವ ವ್ಯತ್ಯಾಸ
ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಇರುತ್ತದೆ ಮತ್ತುಕೆಲವು ಲಕ್ಷಣಗಳನ್ನು ತೋರಿಸುತ್ತಾರೆ.
- ವಯಸ್ಸಿಗೆ ಉಚಿತವಲ್ಲದ/ ಅನುಚಿತ ಲೈಂಗಿಕ ತಿಳುವಳಿಕೆ
- ವಿದ್ಯಾಭ್ಯಾಸದಲ್ಲಿ ವ್ಯತ್ಯಾಸ
- ಬೆಡ್ ವೆಟ್ಟಿಂಗ್
- ಕೆಲವು ಸ್ಥಳ ಅಥವಾ ವ್ಯಕ್ತಿಗಳನ್ನು ಕಂಡಾಗ ಭಯ/ ಆತಂಕ ಅಥವಾ ಇಷ್ಟವಾಗದೇ ಇರುವುದು
- ಹಸಿವಿನಲ್ಲಿ ವ್ಯತ್ಯಾಸ
- ಎಲ್ಲರೊಂದಿಗೆ ಬೆರೆಯಲು ಹಿಂಜರಿಕೆ ಅಥವಾ ಒಂಟಿಯಾಗಿರಲು ಬಯಸುವುದು
- ಹೆಚ್ಚಾಗಿ ಸ್ನಾನ ಮಾಡುವುದು ಅಥವ ಸ್ವಚ್ಛ ಮಾಡಿಕೊಳ್ಳುವುದು
- ನಿದ್ರಾ ಹೀನತೆ, ದುಸ್ವಪ್ನ (ನೈಟ್ ಮೇರ್ಸ್)
- ಸ್ವಯಂ ಹಾನಿ ಮಾಡಿಕೊಳ್ಳುವ ಪ್ರಯತ್ನ
- ಆತಂಕ/ ಖಿನ್ನತೆ