ಗರ್ಭಿಣಿಯರಲ್ಲಿ ಆತಂಕವು ಸಹಜ. ಈ ಸಂದರ್ಭದಲ್ಲಿ ತಾವು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಏನು ಮಾಡಬಹುದು, ಏನು ಮಾಡಬಾರದು ಎಂಬೆಲ್ಲ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವುದು ಸಹಜ. ಬದುಕಿನ ಈ ಹಂತವು ಒಮ್ಮೆ ರೋಮಾಂಚಕಾರಿಯೆನಿಸಿದರೆ, ಇನ್ನೊಮ್ಮೆ ಭಯವನ್ನುಂಟುಮಾಡುತ್ತದೆ. ಆದರೆ ಒಂದುವೇಳೆ ಈ ಯೋಚನೆಗಳು ಅತಿಯಾಗಿ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೂ ಪ್ರಭಾವ ಬೀರಲು ಆರಂಭಿಸಿದರೆ, ಇದು ಆತಂಕದ ಸಮಸ್ಯೆಯ ಲಕ್ಷಣವಾಗಿರಬಹುದು.
ನಿಮ್ಮ ಆಲೋಚನೆಗಳು ಒಂದು ಮಿತಿಯನ್ನು ಮೀರಿ ಮೇಲಿನ ಲಕ್ಷಣಗಳು ಕಂಡುಬರುತ್ತಿದ್ದರೆ, ತಜ್ಞರನ್ನು ಸಂಪರ್ಕಿಸಿ. ನಿಮ್ಮ ಸಂಗಾತಿ ಅಥವಾ ಕುಟುಂಬದ ಸದಸ್ಯರ ಜೊತೆ ಮಾನಸಿಕ ತಜ್ಞರನ್ನು ಭೇಟಿ ಮಾಡುವ ಕುರಿತು ಮಾತನಾಡಿ.
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಉಂಟಾಗುವ ಮಾನಸಿಕ, ದೈಹಿಕ ಬದಲಾವಣೆಗಳಿಂದಾಗಿ ಕೆಲವು ಮಹಿಳೆಯರು ಆತಂಕ ಮತ್ತು ಖಿನ್ನತೆಗೆ ಒಳಗಾಗುವುದು ಸಹಜ. ಹಲವು ಮಹಿಳೆಯರು ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಆದರೆ ಕೆಲವರಲ್ಲಿ ಇದು ಗಂಭೀರ ಸ್ವರೂಪವನ್ನು ಪಡೆಯುತ್ತದೆ. ಮಹಿಳೆಯ ಗರ್ಭಾವಸ್ಥೆಯಲ್ಲಿ ಆತಂಕದ ಸಮಸ್ಯೆಯನ್ನು ಉಂಟುಮಾಡುವ ಕೆಲವು ಅಪಾಯಕಾರಿ ಅಂಶಗಳೆಂದರೆ:
ಇದು ಸಹಜ: ಮಗುವಿನ ಆರೋಗ್ಯದ ಬಗ್ಗೆ, ನೀವು ಒಳ್ಳೆಯ ಪಾಲಕರಾಗಬಲ್ಲಿರಾ ಎಂಬ ಬಗ್ಗೆ ಮತ್ತು ಮಗುವನ್ನು ಪಡೆಯುವುದು, ಆರ್ಥಿಕ ಅಂಶಗಳ ಬಗ್ಗೆ ಚಿಂತಿಸುವುದು. ಕೆಲವು ದಿನಗಳ ಕಾಲ ನಿದ್ರೆಯಿಲ್ಲದಿರುವುದರಿಂದ ಉಂಟಾಗುವ ನೋವು.
ಇದು ಸಹಜವಲ್ಲ: ನಿಮ್ಮ ಚಿಂತೆಯಿಂದಾಗಿ ನಿಮ್ಮ ದೈನಂದಿನ ಚಟುವಟಿಕೆಯು ಭಾದಿತವಾದರೆ, ಮನೆ ಅಥವಾ ಕಛೇರಿಯಲ್ಲಿ ನಿಮಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ನಿಮಗೆ ಮೊದಲು ಇಷ್ಟವಾಗುತ್ತಿದ್ದ ಕಾರ್ಯಗಳಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ಪದೇ ಪದೇ ಭಯ ಮತ್ತು ಗಾಬರಿಗೆ ಒಳಗಾಗುತ್ತಿದ್ದರೆ. ಸ್ನಾಯುಗಳಲ್ಲಿ ಬಿಗಿತ ಮತ್ತು ಬಳಲಿಕೆಯನ್ನುಂಟು ಮಾಡುವ ಜೋರಾದ ಹೃದಯ ಬಡಿತ.
ಚಿಕಿತ್ಸೆ
ಸಾಧಾರಣದಿಂದ ಮಧ್ಯಮ ಹಂತದ ಆತಂಕದ ಲಕ್ಷಣಗಳಿಗೆ, ಭಾವನಾತ್ಮಕ ಬೆಂಬಲ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಹಾಗೂ ಇಂಟರ್ ಪರ್ಸನಲ್ ಬಿಹೇವಿಯರಲ್ ಥೆರಪಿಯಂತಹ ಚಿಕಿತ್ಸೆಗಳು ಸಾಕಾಗುತ್ತವೆ. ಈ ಚಿಕಿತ್ಸೆಗಳು ವ್ಯಕ್ತಿಗೆ ಅಂತಹ ಯಾತನಾಮಯ ಯೋಚನೆಗಳು ಏಕೆ ಉಂಟಾಗುತ್ತವೆ ಎಂಬ ಕಾರಣವನ್ನು ಗುರುತಿಸಿ ಅವರ ಯೋಚನಾ ಸರಣಿಯನ್ನು ಬದಲಾಯಿಸಲು ಸಹಾಯ ಮಾಡುತ್ತವೆ.
ಇನ್ನೂ ಗಂಭೀರ ಸಮಸ್ಯೆಯಿದ್ದಲ್ಲಿ ಔಷಧಗಳನ್ನೂ ನೀಡಬೇಕಾಗುತ್ತದೆ. ನಿಮ್ಮ ಮನೋವೈದ್ಯರು ನಿಮಗೆ ಕಡಿಮೆ ಅಡ್ಡಪರಿಣಾಮಗಳಿರುವ (ಕಡಿಮೆ ಡೋಸ್ ಅಥವಾ ಅಗತ್ಯವಿರುವಾಗ ಮಾತ್ರ) ಔಷಧಗಳನ್ನು ನೀಡಬಹುದು.