ತಾಯ್ತನವು ಮಹಿಳೆಯ ಜೀವನದ ಒಂದು ಸಂಕೀರ್ಣ ಅವಧಿಯಾಗಿದೆ. ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವು ಈ ಸಮಯದಲ್ಲಿ ಕುಸಿಯುವುದರಿಮದ ಪ್ರತಿಯೊಂದು ಭಾವೀ ತಾಯಿಗೂ ಈ ಅವಧಿಯಲ್ಲಿ ಸರಿಯಾದ ಕಾಳಜಿ ಮತ್ತು ಪರಾನುಭೂತಿಯ ಅವಶ್ಯಕತೆಯಿರುತ್ತದೆ.
ಕೆಲವು ಮಹಿಳೆಯರಿಗೆ ಗರ್ಭಧಾರಣೆಯು ಸಂತೋಷದ ಅವಧಿಯಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನ ಸಮಯವಾಗಿರುತ್ತದೆ. ಹಲವಾರು ಜೈವಿಕ ಮತ್ತು ಮನೋಸಾಮಾಜಿಕ ಅಂಶಗಳು ಅವರಲ್ಲಿ ಖಿನ್ನತೆ, ಆತಂಕ, ಒಸಿಡಿ ಮತ್ತು ಪ್ರಸವಾನಂತರದ ಸೈಕೋಸಿಸ್ ನಂತಹ ಮಾನಸಿಕ ಸಮಸ್ಯೆಯನ್ನು ಉಂಟುಮಾಡುತ್ತವೆ.
ಗರ್ಭಿಣಿಯ ದೈಹಿಕ ಆರೋಗ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯ ರಕ್ಷಣೆಗೂ ನೀಡಬೇಕು.
ಗರ್ಭಾವಸ್ಥೆ
ಒಂಬತ್ತು ತಿಂಗಳ ಗರ್ಭಾವಸ್ಥೆಯ ಸಮಯವನ್ನು ಪ್ರಸವಪೂರ್ವ ಅವಧಿಯೆನ್ನುತ್ತಾರೆ. ಈ ಸಮಯದಲ್ಲಿ ಕೆಲವು ಜೈವಿಕ ಮತ್ತು ಮಾನಸಿಕ ಕಾರಣದಿಂದಾಗಿ ಮಹಿಳೆಯರು ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಆದರೆ, ಖಿನ್ನತೆಯ ಲಕ್ಷಣಗಳು ಗರ್ಭಾವಸ್ಥೆಯ ಉಳಿದ ಸಹಜ ಲಕ್ಷಣಗಳಾದ ಕಿರಿಕಿರಿಯೆನಿಸುವುದು, ಸುಸ್ತು, ನಿದ್ರೆ ಮತ್ತು ಹಸಿವಿನ ತೊಂದರೆಯನ್ನೇ ಹೊಂದಿರುವುದರಿಂದ, ಇಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಪತ್ತೆಯಾಗದೇ ಉಳಿಯುತ್ತವೆ.
ಪ್ರಸವಪೂರ್ವದಲ್ಲಿ ಖಿನ್ನತೆಗೆ ಕಾರಣವಾಗಬಹುದಾದ ಕೆಲವು ಅಂಶಗಳು:
ಗರ್ಭಧಾರಣೆಯಲ್ಲಿ ಸಹಜವಾದ ಬದಲಾವಣೆಗಳು | ಅಸಹಜ ಲಕ್ಷಣಗಳು |
ಗರ್ಭಧಾರಣೆಯ ಸಂದರ್ಭದಲ್ಲಿ ಪ್ರತಿ ಮಹಿಳೆಯಲ್ಲಿಯೂ ಕೆಲವು ಸಾಮಾನ್ಯ ಬದಲಾವಣೆಗಳು ಕಂಡುಬರುತ್ತವೆ. ಹಾರ್ಮೋನಿನಲ್ಲಾಗುವ ಬದಲಾವಣೆ ಇದಕ್ಕೆ ಕಾರಣವಾಗಿದೆ. ಮೊದಲನೆಯ ತ್ರೈಮಾಸಿಕದಲ್ಲಿ ತಲೆತಿರುಗುವುದು/ವಾಂತಿ ಮನಸ್ಥಿತಿಯಲ್ಲಿನ ಬದಲಾವಣೆಗಳು, ಭಾವನಾತ್ಮಕ ಅಥವಾ ದುಃಖದ ಭಾವ ಕಿರಿಕಿರಿಯೆನಿಸುವುದು ಕುಸಿದ ಆತ್ಮಗೌರವ
| ಈ ಕೆಳಗಿನ ಲಕ್ಷಣಗಳು ಮಹಿಳೆಯು ಪ್ರಸವಪೂರ್ವ ಖಿನ್ನತೆಯಿಂದ ಬಳಲುತ್ತಿರುವುದನ್ನು ಸೂಚಿಸುತ್ತವೆ: ತೂಕದ ಕುಸಿತ ಅಥವಾ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚದಿರುವುದು. ಮಾರ್ನಿಂಗ್ ಸಿಕ್ ನೆಸ್ ನಿಂದ ಚೇತರಿಸಿಕೊಂಡ ಮೇಲೂ ನಿರಂತರವಾಗಿ ಹಸಿವೆ ಕಡಿಮೆಯಾಗುವುದು. ನಿದ್ರೆಯ ಅವಧಿ ಮತ್ತು ಸಮಯದಲ್ಲಿ ಬದಲಾವಣೆಗಳು. ಕೋಪಗೊಳ್ಳುವುದು ಮತ್ತು ಅವಿಶ್ರಾಂತ ಭಾವನೆ.
ಗರ್ಭಧಾರಣೆಯ ಸಂದರ್ಭದಲ್ಲಿ ನಿಮ್ಮಲ್ಲಿ, ನಿಮ್ಮ ಪತ್ನಿ/ಮಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಜ್ಞರ ಸಹಾಯ ಪಡೆಯಿರಿ. |
ಪ್ರಮುಖ ಸೂಚನೆ: ಪ್ರಸವಪೂರ್ವ ಖಿನ್ನತೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು. ಖಿನ್ನತೆಗೆ ಒಳಗಾದ ಮಹಿಳೆಗೆ ಸೂಕ್ತವಾದ ಚಿಕಿತ್ಸೆ ಕೊಡಿಸಿದರೆ, ಹೆರಿಗೆಗೆ ಮೊದಲು ಆಕೆಯು ಚೇತರಿಸಿಕೊಳ್ಳುತ್ತಾಳೆ.