ಭಾರತದಲ್ಲಿ ಭಾವಿ ತಂದೆಯಂದಿರು ಎಷ್ಟೋ ಬಾರಿ ತಮ್ಮ ಪಾತ್ರವನ್ನು ಆರ್ಥಿಕ ಬೆಂಬಲ ನೀಡುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ. ಗರ್ಭಧಾರಣೆಯ ಅವಧಿಯು ನಿರೀಕ್ಷೆ ಮತ್ತು ಸಂತೋಷದಿಂದ ಕೂಡಿದ್ದರೂ, ನೂತನ ತಾಯಂದಿರು ತಮ್ಮ ಮಗುವಿನ ಆರೋಗ್ಯ, ತಮ್ಮ ಆರೋಗ್ಯ, ದೈಹಿಕ ಅಡಚಣೆಗಳು ಮತ್ತು ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿಂದಾಗಿ ಆತಂಕ ಮತ್ತು ಮತ್ತು ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಂಗಾತಿಯಾದವನು – (ಹೆಚ್ಚಿನ ವೇಳೆ ಮಹಿಳೆಗೆ ಇವರೇ) ಎಲ್ಲರಿಗಿಂತ ಆತ್ಮೀಯರಾಗಿರುತ್ತಾರೆ.
ಅನೇಕ ವೇಳೆ ಗಂಡನಾದವನು ತನ್ನ ಹೆಂಡತಿಯ ಜೀವನದಲ್ಲಿ ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅನ್ನಿಸುತ್ತಿರುತ್ತದೆ. ಆದರೆ ತಾವು ಹೇಗೆ ಸಹಾಯ ಮಾಡಬಹುದೆಂದು ತಿಳಿದಿರುವುದಿಲ್ಲ. ಕೆಲವೊಮ್ಮೆ ಹೆರಿಗೆ, ಮಗು, ಅದರ ಆರೈಕೆ ಇವೆಲ್ಲಾ ಮಹಿಳೆಗೆ ಸಂಬಂಧಿಸಿದ ವಿಷಯ ಎಂಬ ತಪ್ಪು ಕಲ್ಪನೆಯಿಂದಾಗಿಯೂ ಅವರು ಗರ್ಭಧಾರಣೆಯ ಸಮಯದಲ್ಲಿ ಸಹಾಯ ಮಾಡಲು ಹಿಂಜರಿಯಬಹುದು.
ಸಂಗಾತಿಯ ಸಕ್ರಿಯ ಪಾಲ್ಗೊಳ್ಳುವಿಕೆಯಿರುವ ಮಹಿಳೆಯರು ಪ್ರಸವಪೂರ್ವ ಮತ್ತು ಪ್ರಸವಾನಂತರದ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಂಭವ ಕಡಿಮೆ ಇರುತ್ತದೆ. ಮತ್ತು ಅಂಥವರು ಗರ್ಭಾವಸ್ಥೆಯನ್ನು ಚೆನ್ನಾಗಿ ಕಳೆಯುತ್ತಾರೆ. ಆದ್ದರಿಂದ ಭಾವಿ ತಂದೆಯಾದವನು ಈ ವೇಳೆ ಏನು ಮಾಡಬಹುದು?.