ತಾಯ್ತನ

ಪ್ರಸವದ ಬಳಿಕ ತಂದೆಯ ಪಾತ್ರ

ಸಂಗಾತಿಯ ಬೆಂಬಲ ದೊರೆತಾಗ, ಆಕೆಯ ಜವಾಬ್ದಾರಿಯ ಹೊರೆ ಕಡಿಮೆಯಾಗುತ್ತದೆ.

ವೈಟ್ ಸ್ವಾನ್ ಫೌಂಡೇಶನ್

ಮಗುವಿನ ಜನನದ ನಂತರ ತಾಯಿಗೆ ತನ್ನ ದೇಹ ಮತ್ತು ಜೀವನಶೈಲಿಯಲ್ಲಿ ಉಂಟಾಗುವ ಬದಲಾವಣೆಗೆ ಹೊಂದಿಕೊಳ್ಳಲು ಪತಿಯ ಸಹಾಯವು ಅಗತ್ಯವಾಗಿರುತ್ತದೆ. ತನ್ನ ಸಂಗಾತಿಯ ಬೆಂಬಲ ದೊರೆತಾಗ, ಆಕೆಯ ಜವಾಬ್ದಾರಿಯ ಹೊರೆಯು ಕಡಿಮೆಯಾಗುತ್ತದೆ ಮತ್ತು ತನ್ನ ಕರ್ತವ್ಯಗಳನ್ನು ಉತ್ತಮವಾಗಿ ನಿಭಾಯಿಸುವುದು ಸಾಧ್ಯವಾಗುತ್ತದೆ.

ತಂದೆಯು ಈ ಸಂದರ್ಭದಲ್ಲಿ ಏನನ್ನು ಮಾಡಬಹುದು:

  • ಹೆರಿಗೆಯ ಮತ್ತು ಉಳಿದ ವೈದ್ಯಕೀಯ ಅಗತ್ಯಗಳ ಸಂದರ್ಭದಲ್ಲಿ ಹಾಜರಿರುವುದು.
  • ಭಾವನಾತ್ಮಕ ಬೆಂಬಲ ನೀಡುವುದು.
  • ಎಲ್ಲಾ ನೂತನ ತಾಯಂದಿರಿಗೂ ಹೆರಿಗೆಯಾದ ತಕ್ಷಣ ಮಗುವಿನ ಜೊತೆ ಬಾಂಧವ್ಯ ಬೆಳೆಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯಾದವನು ಮೊದಲಿಗೆ ಬಾಂಧವ್ಯವನ್ನು ಬೆಳೆಸಿಕೊಂಡು ತಾಯಿಗೂ ನಿಧಾನವಾಗಿ ಮಗುವಿನ ಜೊತೆ ಬಾಂಧವ್ಯ ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು.
  • ತಾಯಿಗೆ ಮಗುವನ್ನು ಸಮಾಧಾನಪಡಿಸಲು ಸಹಾಯ ಮಾಡಿ.
  • ಆಕೆಗೆ ವಿಶ್ರಾಂತಿ ದೊರೆತು ಒತ್ತಡದಿಂದ ಮುಕ್ತರಾಗುವಂತೆ ನೋಡಿಕೊಳ್ಳಿ, ಇದರಿಂದ ಆಕೆಗೆ ಮಗುವಿಗೆ ಸ್ತನ್ಯಪಾನ ಮಾಡಿಸಲು ಸುಲಭವಾಗುತ್ತದೆ.
  • ಮಗುವಿನ ಲಸಿಕೆಗಳ ವೇಳಾಪಟ್ಟಿಯನ್ನು ಯೋಜಿಸಿ.
  • ಸಾಮಾಜಿಕ, ಸಾಂಸ್ಕೃತಿಕ ಅಡಚಣೆಗಳನ್ನು ನಿಭಾಯಿಸಲು ಸಹಾಯ ಮಾಡಿ.
  • ಗರ್ಭಧಾರಣೆಯ ನಡುವೆ ಅಂತರವಿರುವಂತೆ ನೋಡಿಕೊಳ್ಳಿ, ಇದರಿಂದ ತಾಯಿಯು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಸೂತಿತಜ್ಞರೊಂದಿಗೆ ಗರ್ಭನಿರೋದಕ ವಿಧಾನಗಳ ಕುರಿತು ಚರ್ಚಿಸಿ.