ಎಂಡೊಮೆಟ್ರಿಯೋಸಿಸ್ ಎಂದರೇನು?
ಗರ್ಭಾಶಯವು ಎಂಡೊಮೆಟ್ರಿಯಮ್ ಎಂಬ ಲೈನಿಂಗ್ ಅನ್ನು ಹೊಂದಿದೆ. ಎಂಡೊಮೆಟ್ರಿಯೊಸಿಸ್ ಈ ಅಂಗಾಂಶವು ಗರ್ಭಾಶಯದ ಹೊರಭಾಗದಲ್ಲಿ ಬೆಳೆಯುತ್ತದೆ, ಮತ್ತು ಕೆಲವೊಮ್ಮೆ ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ಗಳು ಮತ್ತು ಕೆಲವೊಮ್ಮೆ ಕರುಳನ್ನು ಒಳಗೊಂಡಂತೆ ದೇಹದ ಇತರ ಭಾಗಗಳಲ್ಲಿ ಬೆಳೆಯುತ್ತದೆ. ಗರ್ಭಾಶಯದ ಹೊರಗೆ ಈ ಪದರದ ಉಪಸ್ಥಿತಿಯು ಮುಟ್ಟಿನ ಅವಧಿಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು. ಕೆಲವೊಂದು ಮಹಿಳೆಯರಿಗೆ, ನೋವು ತೀರಾ ತೀವ್ರವಾಗಿರಬಹುದು, ಅವರ ಮುಟ್ಟಿನ ಅವಧಿಯನ್ನು ಸಂಪೂರ್ಣವಾಗಿ ಎದುರಿಸಲು ಅವರು ಅಸಮರ್ಥರಾಗಿರುತ್ತಾರೆ.
ಇದು ಕೇವಲ ದೈಹಿಕ ನೋವು ಅಲ್ಲ; ಎಂಡೊಮೆಟ್ರಿಯೊಸಿಸ್ಗೆ ಸಂಬಂಧಿಸಿದ ಈ ತೀವ್ರ ನೋವು ಭಾವನಾತ್ಮಕ ತೊಂದರೆಗಳಿಗೆ ಕೂಡ ಕಾರಣವಾಗಬಹುದು.
ಎಂಡೊಮೆಟ್ರಿಯೊಸಿಸ್ನ ಲಕ್ಷಣಗಳು ಯಾವುವು?
ಎಂಡೊಮೆಟ್ರಿಯೊಸಿಸ್ ಸಾಮಾನ್ಯವಾಗಿ ಸಂತಾನೋತ್ಪತ್ತಿಯ ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಸಂತಾನೋತ್ಪತ್ತಿ ವಯಸ್ಸಿನ ಆರಂಭದಲ್ಲಿ ಶುರುವಾಗುವ ಈ ಖಾಯಿಲೆ ನಂತರ ಕ್ರಮೇಣ ಉಲ್ಬಣವಾಗಬಹುದು. ಹಲವು ಸಲ ಖಾಯಿಲೆ ಶುರುವಾಗಿ ತುಂಬಾ ಕಾಲದ ಬಳಿಕ ಇದನ್ನು ಗುರುತಿಸಲು ಸಾಧ್ಯವಾಗಬಹುದು: ಮುಟ್ಟಿನ ಬಗ್ಗೆ ಸಾವರ್ವಜನಿಕವಾಗಿ ಮಾತನಾಡುವುದಕ್ಕೆ ಹಿಂಜರಿಕೆ ಮತ್ತು ಇದೊಂದು ತೀರಾ ಸಾಮಾನ್ಯ ಸಂಗತಿ ಅನ್ನುವ ಭಾವನೆಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವ ಅಗತ್ಯವಿದೆ. ಇದರ ಲಕ್ಷಣಗಳು:
5ರಿಂದ 20 ಶೇಕಡಾದಷ್ಟು ಭಾರತೀಯ ಮಹಿಳೆಯರು ಎಂಡೋಮೆಟ್ರಿಯೋಸಿಸ್ ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ತುಂಬ ದಿನಗಳ ವರೆಗೆ ಮುಟ್ಟಿನ ಸಮಯದಲ್ಲಿ ಸಹಿಸಲಸಾಧ್ಯವಾದ ನೋವು ಅನುಭವಿಸುತ್ತಿದ್ದರೆ ನಿಮ್ಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಎಂಡೊಮೆಟ್ರಿಯೋಸಿಸ್ ಹೌದೋ ಅಲ್ಲವೋ ಖಾತ್ರಿ ಪಡಿಸಿಕೊಳ್ಳಿ.
ಸಾಮಾನ್ಯ ಮುಟ್ಟಿನ ನೋವಿಗಿಂತ ಎಂಡೊಮೆಟ್ರಿಯೊಸಿಸ್ ಹೇಗೆ ಭಿನ್ನ?
ಹೆಚ್ಚಿನ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ತೀವ್ರ ನೋವಿನ ಸೆಳೆತ, ಹೊಟ್ಟೆನೋವು, ಬೆನ್ನಿನ ನೋವುಗಳನ್ನು ಅನುಭವಿಸುತ್ತಾರೆ. ಇದರಲ್ಲಿ ಕೆಲವು ನೋವುಗಳು ಸಾಮಾನ್ಯವಾದರೂ ಕೆಲವು ಮಹಿಳೆಯರಿಗೆ ಹಾರ್ಮೋನ್ನ ಅಸಮತೋಲನದಿಂದ ಉಂಟಾಗುತ್ತದೆ. ಹಾಗೆಯೇ, ಎಂಡೊಮೆಟ್ರಿಯೋಸಿಸ್ ಇದ್ದರೆ ತೀಕ್ಷ್ಣವಾದ ನೋವು ಕಾಡಿ ಮಹಿಳೆಯರಿಗೆ ದೈನಂದಿನ ಕೆಲಸಕ್ಕೆ ತೊಂದರೆ ಮಾಡುತ್ತದೆ. ಕೆಲವು ಮಹಿಳೆಯರಿಗೆ ಮುಟ್ಟಿಗಿಂತ ಮೊದಲು ಹಾಗೂ ನಂತರದ ದಿನಗಳಲ್ಲಿ ನೋವಿನ ಅನುಭವವಾಗುತ್ತದೆ.
ಎಂಡೋಮೆಟ್ರೋಸಿಸ್ ದೀರ್ಘಕಾಲ ಇರುವಂಥ ಖಾಯಿಲೆಯಾಗಿದ್ದು, ಔಷಧಿಗಳ ಮೂಲಕ ಕಡಿಮೆ ಮಾಡಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಇತರ ಅಂಗಗಳಿಂದ ಎಂಡೊಮೆಟ್ರಿಯಮ್ ಅನ್ನು ತೆಗೆದುಹಾಕಲು ವೈದ್ಯರು ಶಿಫಾರಸು ಮಾಡಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಇದು ಪುನರಾವರ್ತಿಸಬಹುದು.
ಸಾಮಾನ್ಯವಾಗಿ, ಎಂಡೊಮೆಟ್ರೋಸಿಸ್ ಅನ್ನು ಮುಟ್ಟಿನ ಅವಧಿಯ ನೋವಿಗೆ ಹೋಲಿಸಲಾಗುತ್ತದೆ. ಯಾಕೆಂದರೆ ಇದನ್ನು ಎದುರಿಸುವುದು ದೊಡ್ಡ ಸವಾಲು.
ಮತ್ತು ಅರಿವಿನ ಕೊರತೆಯಿಂದಾಗಿ, ಎಂಡೊಮೆಟ್ರಿಯೊಸಿಸ್ ಹೊಂದಿರುವ ಮಹಿಳೆ ಮೊದಲೇ ತನ್ನನ್ನು ಕಾಡುತ್ತಿರುವ ರೋಗ ನಿರ್ಣಯ ಮಾಡಲಾಗದೇ ವರ್ಷಗಳವರೆಗೆ ನೋವನ್ನು ಅನುಭವಿಸುತ್ತಾರೆ. ನೋವು ಅಸಹನೀಯವಾಗಿದ್ದಾಗ ಮಾತ್ರ ಕೆಲವು ಮಹಿಳೆಯರು ಸಹಾಯ ಪಡೆಯುತ್ತಾರೆ.
ಭಾವನಾತ್ಮಕ ಪರಿಣಾಮ
ಎಂಡೋಮೆಟ್ರೋಸಿಸ್ನ ನೋವಿನೊಂದಿಗೆ ಏಗುವುದು ಸಾಮಾನ್ಯ ಮುಟ್ಟಿನ ನೋವಿಗಿಂತ ಹೆಚ್ಚುಕಷ್ಟದಾಯಕ. ದೀರ್ಘಕಾಲ ಕಾಡುವ ನೋವು ಮಹಿಳೆಯರಿಗೆ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಎಂದಿನಂತೆ ತೊಡಗಿಕೊಳ್ಳಲು ಬಿಡುವುದಿಲ್ಲ. ಇದೆಲ್ಲವೂ ಒತ್ತಡದಿಂದ ಕೂಡಿರಬಹುದು:
ಇತರ ಹಾರ್ಮೋನ್-ಸಂಬಂಧಿತ ಸ್ಥಿತಿಗತಿಗಳಂತೆ, ಇದು ಹಾರ್ಮೋನಿನ ವಿರಳತೆಯಿಂದ ತೊಂದರೆ ಉಂಟುಮಾಡುತ್ತದೆ. ದೈಹಿಕವಾದ ಸಂಗತಿಗಳು ಮಹಿಳೆಗೆ ಒತ್ತಡವನ್ನುಂಟುಮಾಡುತ್ತಿದ್ದರೆ, ಸಮಸ್ಯೆಯೊಂದಿಗೆ ಹೋರಾಡುವ ಅವಳ ಸಾಮರ್ಥ್ಯವನ್ನು ಕಮ್ಮಿ ಮಾಡುತ್ತದೆ. ಹಿನ್ನೆಲೆಯಲ್ಲಿ ಕಾಡುವ ಒತ್ತಡಗಳು ಕೂಡಾ, ಸಮಸ್ಯೆಯನ್ನು ನಿವಾರಿಸುವಲ್ಲಿ ತೊಡಕುಂಟುಮಾಡುತ್ತವೆ. ಹಿನ್ನೆಲೆಯ ಒತ್ತಡವನ್ನೂ ಒಳಗೊಂಡಿರಬಹುದು:
ಈ ಹಿನ್ನಲೆ ಒತ್ತಡದಿಂದಾಗಿ ಮಹಿಳೆಯೊಬ್ಬಳು ಏಕಾಂಗಿತನವನ್ನು ಅನುಭವಿಸಬಹುದು, ಸ್ವಾಭಿಮಾನದ ಕೊರತೆ ಕಾಣಬಹುದು. ಮತ್ತು ಏನನ್ನೂ ಅರ್ಥ ಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಬರಬಹುದು. ಅನಾರೋಗ್ಯದ ತೀವ್ರತೆಯು ಹೆದರಿಸಬಹುದು ಮತ್ತು ಹತಾಶೆಗೆ ಕಾರಣವಾಗಬಹುದು. ಎಂಡೊಮೆಟ್ರೋಸಿಸ್ನ ಹೆಚ್ಚಿನ ಹಿನ್ನಲೆ ಒತ್ತಡ ಹೊಂದಿರುವ ಮಹಿಳೆಯರು ಮುಖ್ಯವಾಗಿ ಚಿತ್ತ ತೊಂದರೆಗಳು, ಆತಂಕ, ಖಿನ್ನತೆ ಅಥವಾ ಗೀಳು ಪ್ರಚೋದನೆಗಳಿಂದ ಬಳಲುತ್ತಿದ್ದಾರೆ. ಹಾರ್ಮೋನುಗಳ ಚಿಕಿತ್ಸೆಯು ಲಹರಿಯ ಬದಲಾವಣೆ ಉಂಟುಮಾಡಬಹುದು.
ಎಂಡೊಮೆಟ್ರೋಸಿಸ್ ಅನ್ನು ನಿಭಾಯಿಸುವುದು
"ಎಂಡೊಮೆಟ್ರಿಯೊಸಿಸ್-ಸಂಗಿಲ್ಬಂಧಿತ ನೋವು ಬಂದಾಗ ಈ ಬಗ್ಗೆ ಗ್ರಹಿಸಬೇಕು. ಮತ್ತು ಇದೊಂದು ಕಲ್ಪಿತ ನೋವು ಎಂದು ಭಾವಿಸಬೇಕಾಗಿಲ್ಲ. ಹಿನ್ನೆಲೆಯ ಒತ್ತಡದ ಆಧಾರದಲ್ಲಿ ನೋವನ್ನು ಗ್ರಹಿಸತಕ್ಕದ್ದು. ಒತ್ತಡವು ಹೆಚ್ಚಾಗುತ್ತಿದ್ದಂತೆ, ನೋವಿನ ಮಿತಿ ಕಡಿಮೆಯಾಗುತ್ತದೆ ಮತ್ತು ನಿಭಾಯಿಸಲು ಕಷ್ಟವಾಗುತ್ತದೆ "ಎಂದು ಸ್ತ್ರೀರೋಗತಜ್ಞ ಡಾ. ಲತಾ ವೆಂಕಟರಾಮನ್ ಹೇಳುತ್ತಾರೆ. "ಮತ್ತು ಕೆಲವೊಮ್ಮೆ, ಅವಳ ಸುತ್ತಲಿರುವ ಜನರಿಗೆ ನೋವನ್ನು ಹೆಚ್ಚಿಸುವ ಸಾಧ್ಯತೆಯಿದೆ ಏಕೆಂದರೆ ಇದು ದೀರ್ಘಕಾಲೀನವಾಗಿರುತ್ತದೆ. ಅವರು ನೋವನ್ನು ನಿರ್ಲಕ್ಷಿಸಬಹುದು ಅಥವಾ ಬೆಂಬಲವಿಲ್ಲದ ಪ್ರತಿಕ್ರಿಯೆಯನ್ನು ನೀಡಬಹುದು. ಇದರಿಂದ ಒತ್ತಡ ಹೆಚ್ಚಾಗಬಹುದು ಮತ್ತು ನಿಭಾಯಿಸುವ ಸಾಮರ್ಥ್ಯ ಕಮ್ಮಿ ಮಾಡಬಹುದು. ಆದ್ದರಿಂದ ಇದು ವಿಷವರ್ತುಳವಾಗಿ ಮಾರ್ಪಡುತ್ತದೆ. "
ಹಿನ್ನೆಲೆ ಒತ್ತಡವನ್ನು ಮೊದಲೇ ಗುರುತಿಸಿ ಮತ್ತು ಸೂಕ್ತವಾಗಿ ನಿರ್ವಹಿಸಿದರೆ ಎಂಡೋಮೆಟ್ರಿಯೋಸಿಸ್ಅನ್ನು ನಿಭಾಯಿಸುಉವುದು ಕಷ್ಟದ ಕೆಲಸವಲ್ಲ.
ಎಂಡೋಮೆಟ್ರಿಯೋಸಿಸ್ನಿಂದ ಬಳಲುತ್ತಿರುವವರಿಗೆ ನೀವೇನು ಮಾಡಬಹುದು ಅಂದರೆ: