ಉತ್ತಮ ಯೋಗಾಭ್ಯಾಸ ಮಾಡಲು ಐದು ಯೋಗ ಆ್ಯಪ್ ಗಳು
ಯೋಗ ಪಂಡಿತರು ನಮ್ಮ ಮೇಲೆ ಕೂಗಾಡಬಹುದು. ಆದರೆ ಯೋಗ ತರಗತಿಗಳಿಗೆ ಹೋಗಲು ಸಾಧ್ಯವಾಗದ ನಮ್ಮಂಥವರಿಗೆ ಒಂದು ಯೋಗ ಆ್ಯಪ್ ಸಾಕಷ್ಟು ಪರಿಹಾರ ಒದಗಿಸುತ್ತದೆ. ನಾವು ಹಲವಾರು ಆ್ಯಪ್ ಸ್ಟೋರುಗಳನ್ನು ಕೆದಕಿ ನೋಡಿದ ನಂತರ ಸಾಕಷ್ಟು ಆಯ್ಕೆಗಳು ದೊರೆತಿವೆ. ಯೋಗ ಗುರುವಿನ ಸ್ಥಾನವನ್ನು ಯಾರೂ ವಹಿಸಿಕೊಳ್ಳಲು ಸಾಧ್ಯವಿಲ್ಲವಾದರೂ ಯೋಗ ಮಾಡದೆ ಇರುವುದಕ್ಕಿಂತಲೂ ಸ್ವಲ್ಪ ಮಟ್ಟಿಗೆ ಯೋಗ ಮಾಡುವುದು ಉತ್ತಮ. ವೈಟ್ ಸ್ವಾನ್ ಫೌಂಡೇಷನ್ ಸಂಸ್ಥೆಯ ಪ್ರಿಯಾಂಕ ಮಂತ್ರಿಪ್ರಗಾದ ಅವರು ವಿವಿಧ ಮೊಬೈಲ್ ವೇದಿಕೆಗಳ ಮೂಲಕ ಐದು ಯೋಗ ಆ್ಯಪ್ ಗಳನ್ನು ಪರಿಶೀಲಿಸಿದ್ದು ಯಾವುದು ಒಳ್ಳೆಯದು ಯಾವುದು ಅಲ್ಲ ಎಂದು ಕಂಡುಹಿಡಿದಿದ್ದಾರೆ. ಬಳಕೆದಾರರೊಡನೆ ಸಂಪರ್ಕದ ಮೂಲಕ ಮತ್ತು ಜನಪ್ರಿಯತೆಯ ಆಧಾರದಲ್ಲಿ ಈ ಐದು ಆ್ಯಪ್ ಗಳನ್ನು ಆಯ್ಕೆ ಮಾಡಲಾಗಿದೆ.
ಈ ಆ್ಯಪ್ ಐಒಎಸ್, ವಿಂಡೋಸ್ ಮತ್ತು ಆಂಡ್ರಾಯ್ಡ್, ಈ ಮೂರು ಮೊಬೈಲ್ ವೇದಿಕೆಗಳಲ್ಲಿ ಲಭ್ಯವಿರುತ್ತದೆ. ಇದು ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದೆ. ದಿನನಿತ್ಯದ ಯೋಗದಲ್ಲಿ ಆಸನಗಳನ್ನು ಯೋಗಿಯಂತೆಯೇ ಕಾಣುವ ಚಿತ್ರವು ಪ್ರದರ್ಶಿಸುತ್ತದೆ. ಈ ಆ್ಯಪ್ ನಲ್ಲಿ ಈ ಕೆಳಗಿನ ವಿಭಾಗಗಳಿವೆ. ಆರಂಭಿಕ ತರಬೇತಿ , ಆಸನದ ಗ್ರಂಥಾಲಯ, ಸಮುದಾಯ, ಯೋಗ ಸಂಗೀತ ಇನ್ನೂ ಹೆಚ್ಚಿನ ಮಾಹಿತಿ ಮತ್ತು ಇತರ ಆ್ಯಪ್ ಗಳು. ಆ್ಯಪ್ ನ ಉಚಿತ ಆವೃತ್ತಿಯೂ ಲಭ್ಯವಿದ್ದು ಪರಿಪೂರ್ಣ ಅನುಭವಕ್ಕಾಗಿ ವೃತ್ತಿಪರ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
ಒಳ್ಳೆಯದೇನಿದೆ ?
ಸರಿಯಿಲ್ಲದಿರುವುದೇನು ?
ಈ ಯೋಗ ಆ್ಯಪ್ ಎರಡು ಹಂತಗಳಲ್ಲಿ ಆಸನಗಳನ್ನು ಸೂಚಿಸುತ್ತದೆ. ಪ್ರತಿಯೊಂದು ಹಂತಕ್ಕೂ 20, 40 ಮತ್ತು 60 ನಿಮಿಷಗಳ ಕಾಲಾವಕಾಶ ಇರುತ್ತದೆ. ಯೋಗಾಸನಗಳ ತೀವ್ರತೆಯಲ್ಲಿ ಪ್ರತಿಯೊಂದು ಹಂತವೂ ವಿಭಿನ್ನವಾಗಿರುತ್ತದೆ. ಈ ಆ್ಯಪ್ ಉಚಿತವಾಗಿ ದೊರೆಯಲಿದ್ದು ವೃತ್ತಿಪರ ಆವೃತ್ತಿಗೆ ಬದಲಿಸಿಕೊಳ್ಳುವ ಅವಕಾಶ ಇರುತ್ತದೆ.
ಒಳ್ಳೆಯದೇನಿದೆ ?
ಸರಿಯಿಲ್ಲದಿರುವುದೇನು ?
ಇದು ಹೊಸಬರಿಗೆ ಮತ್ತು ವೃತ್ತಿಪರರಿಗೆ ಬಳಕೆಯಾಗುವ ಜನಪ್ರಿಯ ಆ್ಯಪ್ ಆಗಿದೆ. ಯೋಗ ಸ್ಟುಡಿಯೋ ಪಾವತಿ ಮಾಡಬೇಕಾದ ಯೋಗ ಆ್ಯಪ್. ಯೋಗಾಸನ ತರಗತಿಗಳನ್ನು ಚಿತ್ರಗಳ ಮೂಲಕ ಬಿತ್ತರಿಸಲಾಗುತ್ತದೆ. ಹಿನ್ನೆಲೆಯಲ್ಲಿ ಮೆಲ್ಲನೆಯ ಸಂಗೀತವೂ ಇರುತ್ತದೆ. ನಿಮಗೆ ಲಭ್ಯವಾದ ಸಮಯದ ಅನುಸಾರ ನೀವು ನಿಮ್ಮ ಯೋಗಾಭ್ಯಾಸದ ಸಮಯವನ್ನು ವಾಡಿಕೆ ಮಾಡಿಕೊಳ್ಳಬಹುದು. ಈ ಆ್ಯಪ್ ನ ಬೆಲೆ 250 ರೂಪಾಯಿಗಳಾಗಿದ್ದು ಕೇವಲ ವೃತ್ತಿಪರ ಆವೃತ್ತಿ ದೊರೆಯುತ್ತದೆ.
ಒಳ್ಳೆಯದೇನಿದೆ ?
ಸರಿಯಿಲ್ಲದಿರುವುದೇನು ?
ವಿಂಡೋಸ್ ವೇದಿಕೆಯಲ್ಲಿ ದೊರೆಯುವ ಮತ್ತೊಂದು ಸಮಗ್ರ ಆ್ಯಪ್ ಎಂದರೆ ಯೋಗ ಕ್ಯೂರ್. ಇದರಲ್ಲಿ ಮೂರು ವಿಭಾಗಗಳಿವೆ : ನನ್ನ ದೇಹ, ನನ್ನ ಆರೋಗ್ಯ ಮತ್ತು ಯೋಗ ಕೇಂದ್ರಗಳು (ದೇಶಾದ್ಯಂತ ಇರುವ ಯೋಗ ಕೇಂದ್ರಗಳ ಸ್ಥಳ ವಿವರ ಒದಗಿಸುತ್ತದೆ). ನನ್ನ ದೇಹ ವಿಭಾಗದಲ್ಲಿ ನಿರ್ದಿಷ್ಟ ಆಸನಗಳನ್ನು ತೋರಿಸಲಾಗುತ್ತದೆ. ಈ ಆಸನಗಳಿಂದ ದೇಹದ ಅಂಗಗಳಾದ ಮಿದುಳು, ಭುಜಗಳು, ಥೈರಾಯ್ಡ್, ಕಿಬ್ಬೊಟ್ಟೆ ಇವುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ತೋರಿಸಲಾಗುತ್ತದೆ. ನನ್ನ ಆರೋಗ್ಯ ವಿಭಾಗದಲ್ಲಿ ಹೆಚ್ಚಿನ ರಕ್ತದೊತ್ತಡ, ಬೆನ್ನು ನೋವು, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಅನುಕೂಲವಾಗುವಂತಹ ಆಸನಗಳನ್ನು ತೋರಿಸಲಾಗಿದೆ. ಅನಿಮೇಟೆಡ್ ವಿಡಿಯೋಗಳನ್ನು ಪುನಃ ಬಿತ್ತರಿಸುವ ಅವಕಾಶ ಲಭ್ಯವಿದೆ.
ಒಳ್ಳೆಯದೇನಿದೆ ?
ಸರಿಯಿಲ್ಲದಿರುವುದೇನು ?
5. ಯೋಗ.ಕಾಂ (ಆಂಡ್ರಾಯ್ಡ್)
289 ಆಸನಗಳ ನ್ನು ಮತ್ತು ಉಸಿರಾಟದ ಕಸರತ್ತುಗಳನ್ನು , 37 ವಿವಿಧ ಯೋಗ ಕಾರ್ಯಕ್ರಮಗಳನ್ನು ಹೊಂದಿರುವ ಭಂಡಾರದೊಂದಿಗೆ ಯೋಗ.ಕಾಂ ಆ್ಯಪ್ ಸಮಗ್ರವಾದ ಯೋಗಾಭ್ಯಾಸ ಆಯ್ಕೆಗಳನ್ನು ಒದಗಿಸುತ್ತದೆ. ಉದಾಹರಣೆಗೆ, ಪ್ರತಿಯೊಂದು ಆಸನಕ್ಕೂ ನೀವು ಸಚಿತ್ರ ಮಾಹಿತಿಯನ್ನು ಪಡೆಯಬಹುದು ಅಥವಾ ವಿಡಿಯೋ ಪ್ರದರ್ಶನವನ್ನು ನೋಡಬಹುದು.
ಒಳ್ಳೆಯದೇನಿದೆ ?
ಸರಿಯಿಲ್ಲದಿರುವುದೇನು ?