ಆತಂಕ ನಿವಾರಣೆ: ಬರ್ಡಿಂಗ್

ಆತಂಕ ನಿವಾರಣೆ: ಬರ್ಡಿಂಗ್

ಆತಂಕವನ್ನು ನಿಭಾಯಿಸಲು ಸಹಾಯ ಮಾಡಿದ ಅನಿರೀಕ್ಷಿತ ಮಿತ್ರ ಕುತೂಹಲದ ಕ್ರಿಯೆಯಾಗಿ ಪ್ರಾರಂಭವಾದ ಹವ್ಯಾಸದ ಮೂಲಕ ನನ್ನ ಆತಂಕಗಳನ್ನು ಹೋಗಲಾಡಿಸಲು ನಾನು ಕಲಿತಿದ್ದೇನೆ

2006ರಲ್ಲಿ ನನಗೆ ಮೊದಲ ಪ್ಯಾನಿಕ್ ಅಟ್ಯಾಕ್ ಆಯಿತು. ಮುಂದಿನ ಎಂಟು ವರ್ಷಗಳ ಕಾಲ ಸಾಮಾನ್ಯ ಖಿನ್ನತೆಯ ಖಾಯಿಲೆಯಿಂದ ಬಳಲಿದ್ದೇನೆ ಮತ್ತು ಮತ್ತೆ ಮತ್ತೆ ಪ್ಯಾನಿಕ್ ಅಟ್ಯಾಕಿಗೆ ಈಡಾಗಿದ್ದೇನೆ. ಕೆಲವೊಮ್ಮೆ ಒಂದೇ ದಿನದಲ್ಲಿ ಹಲವು ಬಾರಿ ಆಗಿದ್ದೂ ಉಂಟು. ಇಂತ ಪರಿಸ್ಥಿಯಲ್ಲಿ ಪ್ಯಾನಿಕ್ ಅಟ್ಯಾಕ್ ಆಗದೆ ಇದ್ದಾಗ ಮುಂದಿನದು ಯಾವಾಗ ಆಗುವುದೋ ಎಂದು ಆತಂಕದಿಂದ ಕಾಯುವಂತೆ ಮಾಡುತ್ತಿತ್ತು.  ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ) ಮತ್ತು ಔಷಧಿಗಳ ಸಹಾಯದಿಂದ ನಾನು ಈ ಗೀಳಿನಿಂದ ಒಂದಿಷ್ಟು ವಿರಾಮವನ್ನು ಸಾಧಿಸಿದೆ. ಇದರಿಂದ ನನಗೆ ಅರೆ - ಕ್ರಿಯಾಶೀಲ ಬದುಕನ್ನು ಸಾಧಿಸಲು ಸಾಧ್ಯವಾಯಿತು.

ಆದರೆ ಆಗಲೂ ಸಾಕಷ್ಟು ಅವಲಂಬನೆಗಳಿದ್ದವು. ಸ್ನಾನಕ್ಕೆ ಹೋದಾಗ ಅಲ್ಲೇ ಬಿದ್ದು ಬಿಡುವ ಭಯದಿಂದ ಬಾಗಿಲಿನ ಚಿಲಕ ಹಾಕಿಕೊಳ್ಳದೆ ಸ್ನಾನ ಮಾಡುತ್ತಿದ್ದೆ. ಕೆಳಗಿನ ಅಂಚೆ ಪೆಟ್ಟಿಗೆ ಪರೀಕ್ಷಿಸಲು ಹೋಗುವಾಗಲೂ ನಾನು ಫೋನ್ ಇಲ್ಲದೆ ಹೋಗುತ್ತಿರಲಿಲ್ಲ. ನಿರ್ಜಲೀಕರಣದಿಂದ ಸಾಯುತ್ತೇನೆ ಎಂಬ ಭಯದಿಂದ ನಾನು ಹೋದಲ್ಲೆಲ್ಲಾ ನಾನು ಯಾವಾಗಲೂ ನೀರಿನ ಬಾಟಲಿಯನ್ನು ಒಯ್ಯುತ್ತಿದ್ದೆ. ನನ್ನ ಇಯರ್ ಫೋನ್ ಗಳ ನನ್ನ ದೇಹದ ಅನಿವಾರ್ಯ ಅಂಗವಾಗಿ ಮಾರ್ಪಟ್ಟವು: ನಗರದ ಭಯಾನಕ ಸದ್ದುಗಳನ್ನು ಮರೆಮಾಚಲು ನನಗೆ ಸಂಗೀತದ ಅವಶ್ಯಕತೆಯಿತ್ತು. ಮನೆಯಿಂದ ಹೊರಗೆ ಬಂದರೆ ನಾನಿರುವಲ್ಲೇ ಹತ್ತಿರದಲ್ಲಿ ಆಸ್ಪತ್ರೆಯಿರಬೇಕಿತ್ತು. ನಾನು ಎಲ್ಲಾ ಸಮಯದಲ್ಲೂ ಕೆಲವು ರೀತಿಯ ಸಂಪರ್ಕವನ್ನು ಹೊಂದಿರಬೇಕಾಗಿತ್ತು. ನಾನು ಲಿಫ್ಟ್‌ಗಳು, ಎಸ್ಕಲೇಟರ್‌ಗಳು ಮತ್ತು ಕಿಕ್ಕಿರಿದ ಸಾರ್ವಜನಿಕ ಸಾರಿಗೆಯನ್ನು ತಪ್ಪಿಸುತ್ತಿದ್ದೆ ಮತ್ತು ನಾನು ಎಂದಾದರೂ ಸಾಮಾನ್ಯ ಜೀವನವನ್ನು ನಡೆಸುತ್ತೇನೆ ಎಂಬ ಕಲ್ಪನೆಯನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೆ.

2014 ರಲ್ಲಿ ನನ್ನ ಸಹೋದರಿಯನ್ನು ಭೇಟಿ ಮಾಡಲು ಮಧ್ಯಪ್ರದೇಶದ ಗ್ವಾಲಿಯರ್‌ಗೆ 45 ಗಂಟೆಗಳ ನೋವಿನಿಂದ ಕೂಡಿದ್ದ ರೈಲು ಪ್ರಯಾಣ ಮಾಡಿದ್ದೆ. ಅವರು ನಗರದ ಗದ್ದಲಗಳಿಂದ ದೂರವಿರುವ ಒಂದು ಸುಂದರವಾದ ವಸತಿ ಆವರಣದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಬೆಳಿಗ್ಗೆ ಚಹಾ ಕುಡಿಯುತ್ತಾ ಪಕ್ಷಿಗಳು ಮತ್ತು ಅಳಿಲುಗಳು ಸೊಂಪಾದ ಹುಲ್ಲುಹಾಸಿನ ಆಡುವ ಸುಂದರ ದೃಶ್ಯವನ್ನು ನೋಡಬಹುದಿತ್ತು. ಸಂಜೆ, ನಾನು ನವಿಲುಗಳ ನೋಟವನ್ನು ಸವಿಯಲು ಕ್ಯಾಂಪಸ್ ಸುತ್ತಲೂ ಸೈಕ್ಲಿಂಗ್‌ಗೆ ಹೋಗಿದ್ದೆ.

ಒಂದು ವಾರದ ರಜಾ ವಿಹಾರದಲ್ಲಿನ ನನ್ನ ಹಕ್ಕಿಗಳೆಡೆಗಿನ ಕುತೂಹಲ ನನ್ನನ್ನು ಉಲ್ಲಾಸಗೊಳಿಸಿತು. ಹುಲ್ಲು ಹಾಸಿನ ಬಳಿ ಭೇಟಿ ನೀಡುತ್ತಿದ್ದ ಹಕ್ಕಿಗಳನ್ನು ಗುರುತಿಸಲು ನಾನು ಅಂತರ್ಜಾಲದಲ್ಲಿ ಕಾಲ ಕಳೆಯಲು ಪ್ರಾರಂಭಿಸಿದೆ. ಅವುಗಳ ಹೆಸರುಗಳನ್ನು ಕಲಿಯಲು ಪ್ರಾರಂಭಿಸಿ ಅಲ್ಲಿ ಕಂಡುಬರುವ ಒಂದೊಂದೇ ಹಕ್ಕಿಯ ಹೆಸರನ್ನು ಗುರುತಿಸಲು ಪ್ರಾರಂಭಿಸಿದೆ. ನನ್ನ ಉಳಿದ ರಜಾದಿನಗಳನ್ನು ನನ್ನಿಂದ ಸಾಧ್ಯವಿರುವಷ್ಟು ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸುತ್ತಾ ಕಳೆದೆ. ಪಟ್ಟಿಯಲ್ಲಿರುವ 42 ಪಕ್ಷಿಗಳಲ್ಲಿ ನಾನು 22 ನ್ನು ಗುರುತಿಸಿದೆ, ಆದರೆ ನಿಜವಾದ ಗೆಲುವು ನಂತರದ್ದಾಗಿದೆ.

ಈ ನಡುವೆ ನಾನು ಸಾಕಷ್ಟು ಕ್ರಿಯಾಶೀಲಳಾಗಿದ್ದೆ. ಹಕ್ಕಿಗಳ ಸದ್ದನ್ನು ಗುರುತಿಸಲು ಬೆಳಿಗ್ಗೆ ಬೇಗನೆ ಏಳುತ್ತಿದ್ದೆ. ಹಕ್ಕಿ ಕೂಗುಗಳನ್ನು ಕೇಳಲು ಮತ್ತು ಅವುಗಳನ್ನು ಗುರುತಿಸಲು ಹೊರಗೆ ಹೋಗುವಾಗ ನನ್ನ ಹೆಡ್‌ಫೋನ್‌ಗಳನ್ನು ಒಯ್ಯುವುದನ್ನು ನಿಲ್ಲಿಸಿದೆ. ಇದರಿಂದಾಗಿ ಇದ್ದಕ್ಕಿದ್ದಂತೆ ನಾನು ಹೊಸದೊಂದು ಮಂಡಲವನ್ನು ಪ್ರವೇಶಿಸಿದಂತೆ ಭಾವಿಸಿದೆ ಮತ್ತು ಹಕ್ಕಿಗಳನ್ನು ಹುಡುಕುವುದರಲ್ಲಿ ಹೆಚ್ಚಿನ ಕಾಲವನ್ನು ಕಳೆಯಲು ಪ್ರಾರಂಭಿಸಿದೆ. ಇದರಿಂದ ನನ್ನ ಮನಸ್ಸಿಗೆ ಶಾಂತಿ ದೊರಕುತ್ತಿತ್ತು.

ನಾನು ಎಂದೂ ಧ್ಯಾನವನ್ನು ಮಾಡಿರಲಿಲ್ಲ. ಧ್ಯಾನವನ್ನು ಮಾಡಲು ಪ್ರಯತ್ನಿಸಿದಾಗಲೆಲ್ಲ ನನ್ನ ಆಲೋಚನೆಗಳು ಒಮ್ಮೆಲೇ ನುಗ್ಗಿ ನನ್ನನ್ನು ಇನ್ನೂ ಹೆಚ್ಚು ಆತಂಕಕ್ಕೆ ಒಳಗಾಗಿಸುತ್ತಿದ್ದವು. ನನ್ನ ಆಲೋಚನೆಗಳೊಂದಿಗೆ ಒಬ್ಬಳೇ ಇರುವುದು ಭಯಾನಕ ಅನುಭವವಾಗಿದೆ. ಆದರೆ ಕ್ಯಾಂಪಸ್ಸಿನಲ್ಲಿ ಹಕ್ಕಿಗಳನ್ನು ನೋಡುತ್ತಾ ಜನರು ಮಾತನಾಡುವುದನ್ನು ಸಾವಧಾನದಿಂದ ಇರುವುದನ್ನು ಅನುಭವಿಸಿದೆ. ಇದರಿಂದಾಗಿ ನನಗೆ ಪ್ರಸ್ತುತತೆ, ಕೇಂದ್ರಿಕೃತ ಗಮನ ಮತ್ತು ನಿಜವಾದ ಶಾಂತಿಯನ್ನು ಸಾಧಿಸಲು ಸಾಧ್ಯವಾಗಿದೆ.

ನಾನು ಮನೆಗೆ ಮರಳಿದ ನಂತರ ಹೆಚ್ಚು ಬರ್ಡಿಂಗ್ ಪ್ರಾರಂಭಿಸಿದೆ. ನನ್ನ ಟೆರೇಸ್‌ನಲ್ಲಿ ನನ್ನ ಬೆಳಿಗ್ಗೆ ಮತ್ತು ಸಂಜೆ ಕಳೆದೆ. ಮತ್ತು ಪಕ್ಷಿಗಳನ್ನು ನೋಡುವ ಏಕೈಕ ಉದ್ದೇಶಕ್ಕಾಗಿ ಹೆಚ್ಚು ಪ್ರಯಾಣಿಸಲು ಪ್ರಾರಂಭಿಸಿದೆ. ಹಕ್ಕಿಗಳಿಂದಾಗಿ ಅನೇಕ ಸ್ಥಳಗಳನ್ನು ನೋಡಿದೆ ಮತ್ತು ಬೆಟ್ಟಗಳು, ಬಯಲು ಪ್ರದೇಶಗಳು ಮತ್ತು ಕಡಲತೀರಗಳಲ್ಲಿ ನಾನು ಅವುಗಳನ್ನು ಹಿಂಬಾಲಿಸುತ್ತಿದ್ದಂತೆ ನನ್ನ ಆತಂಕಗಳನ್ನು ಬಿಡಲಾರಂಭಿಸಿದೆ.

ಈ ನಡುವೆ ಬಳಲಿಕೆಯ ಭಯದ ಹೊರತಾಗಿಯೂ ನಾನು ಟ್ರೆಕಿಂಗ್ ಪ್ರಾರಂಭಿಸಿದೆ; ನಾನು ಕತ್ತಲೆಗೆ ಹೆದರುತ್ತಿದ್ದರೂ ಕ್ಯಾಂಪಿಂಗ್ ಮಾಡುತ್ತಿದ್ದೆ; ನನ್ನ ಎತ್ತರದ ಕುರಿತ ಭಯದ ಮುಖದಲ್ಲಿ ಬೆಟ್ಟಗಳನ್ನು ಹತ್ತುವುದನ್ನೂ ಮಾಡಿದೆ . ನಾನು ನಗರದಿಂದ ದೂರವಿರುವುದನ್ನು ಆನಂದಿಸಿದೆ ಮತ್ತು ಜಗತ್ತಿನೊಂದಿಗಿನ ನನ್ನ ಇತರ ಸಂಪರ್ಕವನ್ನು ಕಡಿದುಕೊಂಡೆ.

ಈಗ ನನ್ನ ನಿಗದಿತ ಔಷಧಿ ಪ್ರಮಾಣವು ಚಿಕ್ಕದಾಗಿದೆ ಮತ್ತು ಅಂತಿಮವಾಗಿ ನಾನು ಮೊದಲ ಪ್ಯಾನಿಕ್ ಅಟ್ಯಾಕ್ ಆಗುವ ಮೊದಲು ಬದುಕುತ್ತಿದ್ದ ಜೀವನವನ್ನು ನಡೆಸುತ್ತಿದ್ದೇನೆ. ಅಟ್ಯಾಕ್ ಆಗುವ ಮೊದಲು ಮೊದಲು ನಾನು ಬಾಗಿಲು ಮುಚ್ಚಿ ಸ್ನಾನ ಮಾಡುತ್ತಿದ್ದೆ; ಆಟೋ ಬದಲಿಗೆ ಬಸ್ ತೆಗೆದುಕೊಳ್ಳುತ್ತಿದ್ದೆ ಮತ್ತು ನಾನು ಹೆಚ್ಚು ದೈಹಿಕವಾಗಿ ಸಕ್ರಿಯಳಾಗಿದ್ದೆ. ನಾನು ಹೊಸ ವಿಷಯಗಳನ್ನು ಪ್ರಯತ್ನಿಸುವಲ್ಲಿ ಮುಕ್ತಳಾಗಿದ್ದೆ ಮತ್ತು ಒಮ್ಮೆ ನಾನು ಹೆದರುತ್ತಿದ್ದ ಅಪಾಯಗಳನ್ನು ಎದುರಿಸುವ ಧೈರ್ಯ ತೆಗೆದುಕೊಂಡೆ. 2016 ರಲ್ಲಿ ನಾನು ನಾಲ್ಕು ದಿನಗಳ ನನ್ನ ಮೊದಲ ಏಕವ್ಯಕ್ತಿ ಪ್ರವಾಸವನ್ನು ಮಾಡಿದ್ದೇನೆ ಮತ್ತು ನನ್ನ ಔಷಧಿಗಳನ್ನು ಒಮ್ಮೆ ಸಹ ತೆಗೆದುಕೊಂಡಿಲ್ಲ.

ಈಗ, ನಾನು ಪ್ರಯಾಣಿಸುವಾಗಲೆಲ್ಲಾ ನನ್ನ ಜೋಡಿ ಬೈನಾಕ್ಯುಲರ್‌ಗಳು ಮತ್ತು ಪಕ್ಷಿ ಮಾರ್ಗದರ್ಶಿ ಇಲ್ಲದೆ ಇರುವುದಿಲ್ಲ; ನಾನು ಗುರುತಿಸುವ ಪಕ್ಷಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಲು ಸಣ್ಣ ನೋಟ್‌ಬುಕ್‌ ಇಟ್ಟುಕೊಳ್ಳುವುದರೊಂದಿಗೆ ನನ್ನ ಪ್ರಯಾಣ ಶುರುವಾಗುತ್ತದೆ. ಅದರಲ್ಲಿರುವ ಪ್ರತಿಯೊಂದು ಪುಟವು ನನ್ನ ಆರಾಮ ವಲಯದಿಂದ ನಾನು ಎಷ್ಟು ದೂರ ಸರಿದಿದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿದೆ.

ನಗರದಲ್ಲಿ, ನಗರವಾಸಿ ಪಕ್ಷಿಗಳು ನನ್ನನ್ನು ಮೋಹಕ್ಕೆ ಒಳಗಾಗಿಸುತ್ತವೆ - ಅದು ಬೆಂಗಳೂರು ಮೆಟ್ರೋದ ಕಿಟಕಿಯಿಂದ ಒಂಟಿ ರಣಹದ್ದು ಅಥವಾ ಸಂಜೆ ನಾಲ್ಕು ಗಂಟೆಗೆ ಜಂಗಲ್ ಮೈನಾಗಳ ಹಠಾತ್ ಗದ್ದಲವನ್ನು ನೋಡುವುದು ಇವೆಲ್ಲ ನನ್ನ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಪಕ್ಷಿಗಳು ನನಗೆ ವರ್ತಮಾನಕ್ಕೆ ಬರಲು ಸಹಾಯ ಮಾಡಿದವು.

ಇದು ಪ್ರಾಸಂಗಿಕ ಕುತೂಹಲವಾಗಿ ಪ್ರಾರಂಭವಾಯಿತು ಮತ್ತು ಪಕ್ಷಿಗಳನ್ನು ಗಮನಿಸುವುದರಿಂದ ಶಕ್ತಿ, ತಾಳ್ಮೆ, ಶಿಸ್ತು ಮತ್ತು ಧೈರ್ಯವನ್ನು ಪಡೆಯಬಹುದೆಂದು ನಾನು ಎಂದಿಗೂ ಊಹಿಸಿರಲಿಲ್ಲ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org