ಆಪ್ತ ಸಮಾಲೋಚನೆ ಎಂದರೇನು ? ಅದು ಹೇಗೆ ನೆರವಾಗುತ್ತದೆ ?

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾನ ವಯಸ್ಕರ ಸಲಹೆ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾನ ವಯಸ್ಕರ ಸಲಹೆ

ಒಬ್ಬ ವಿದ್ಯಾರ್ಥಿಯಾಗಿ ನಿಮಗೆ ಯಾವುದಾದರೂ ಸಮಸ್ಯೆ ಎದುರಾದರೆ ಅಥವಾ ನೀವು ಯಾವುದಾದರೂ ವಿಚಾರದಲ್ಲಿ ಚಿಂತೆಗೀಡಾಗಿದ್ದರೆ ಮೊದಲು ನೀವು ಯಾರನ್ನು ಸಂಪರ್ಕಿಸುತ್ತೀರಿ ? ನಿಮ್ಮ ಗೆಳೆಯನನ್ನೋ ಅಥವಾ ವಿಶ್ವಾಸ ಇರುವ ಹಿರಿಯರನ್ನೋ ? ಬಹುಪಾಲು ಸಂದರ್ಭಗಳಲ್ಲಿ ನಿಮ್ಮ ಗೆಳೆಯರನ್ನೇ ಸಂಪರ್ಕಿಸುತ್ತೀರಿ. ಏಕೆಂದರೆ ನಿಮ್ಮ ಸಮಸ್ಯೆಯನ್ನು, ನಿಮ್ಮ ಪೋಷಕರು ಮತ್ತು ಶಿಕ್ಷಕರಿಗಿಂತಲೂ, ಆ ಗೆಳೆಯ ಚೆನ್ನಾಗಿ ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಎಂಬ ನಂಬಿಕೆ ನಿಮಗಿರುತ್ತದೆ. ಹದಿಹರೆಯದವರಾಗಿ ಅಥವಾ ಯೌವ್ವನದಲ್ಲಿರುವ ವಯಸ್ಕರಾಗಿ, ನಿಮ್ಮ ಸಮಸ್ಯೆಗಳನ್ನು ಕುರಿತು ನಿಮಗಿಂತಲೂ ಹಿರಿಯರೊಡನೆ ಚರ್ಚೆ ಮಾಡುವುದಕ್ಕಿಂತಲೂ   ನಿಮ್ಮ ವಯಸ್ಸಿನವರೊಂದಿಗೆ ಮತ್ತು ಸಮಾನ ಮನಸ್ಥಿತಿ ಹೊಂದಿರುವವರೊಡನೆ ಚರ್ಚೆ ಮಾಡುವುದು ಸುಲಭವಾಗುತ್ತದೆ. ಇದರಿಂದ ಆಪ್ತ ಸಮಾಲೋಚನೆ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ವಯಸ್ಸಿಗೆ ಬಂದ ಮಕ್ಕಳು ತಮ್ಮ ಸಮಸ್ಯೆಯನ್ನು ನಿವಾರಿಸುವ  ನಿಟ್ಟಿನಲ್ಲಿ ಮೊದಲ ಹೆಜ್ಜೆ ಮುಂದಿಡಲು ಅನುಕೂಲವಾಗುತ್ತದೆ.

ಸಮಾನ ವಯಸ್ಕ ಸಮಾಲೋಚನೆ ಎಂದರೇನು ?

ಸಮಾನ ವಯಸ್ಕರ ಸಮಾಲೋಚನೆ ಒಂದು ಸಹಾಯಕ ಪೂರ್ವ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಏಕ ವ್ಯಕ್ತಿ ಸಂಪರ್ಕ ಮತ್ತು ಸಮಾಲೋಚನೆ ಇರುತ್ತದೆ. ಒಂದು ಗುಂಪಿನಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರೊಡನೆ ಕುಳಿತು, ಒಬ್ಬರಿಗೊಬ್ಬರಂತೆ ತಮಗೆ ಸಂಬಂಧಿಸಿದ ಸಮಾನ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಸುತ್ತಾರೆ. ಶೈಕ್ಷಣಿಕ ಪರಿಸರದಲ್ಲಿ  ಪ್ರತಿ ವಿದ್ಯಾರ್ಥಿಯೂ ಮತ್ತೊಬ್ಬ ವಿದ್ಯಾರ್ಥಿಯೊಡನೆ ಸಮಾಲೋಚನೆ ನಡೆಸುತ್ತಾನೆ. ಒಂದು ರೀತಿಯಲ್ಲಿ ಇದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಅವರ ಸಮಸ್ಯೆಗಳಿಗೆ ಮತ್ತೊಬ್ಬರ ಸಮಸ್ಯೆಯೊಡನೆ ಸಂಬಂದ ಕಲ್ಪಿಸುವ ಮೂಲಕ, ಜನರಿಗೆ ನೆರವಾಗುವ ಪ್ರಕ್ರಿಯೆ ಇದಾಗಿದೆ. ಹೀಗೆ ಮಾಡುವುದರಿಂದ ವಿಭಿನ್ನ ಚಿಂತನೆಗಳನ್ನು ಶೋಧಿಸಿ, ಭಾವನೆಗಳನ್ನು ಅರ್ಥ ಮಾಡಿಕೊಂಡು, ಸಮಸ್ಯೆ ಮತ್ತು ಕಾಳಜಿಗಳನ್ನು ಅರಿತು ಪರಿಹಾಋ ಸೂಚಿಸಬಹುದು. ಹಾಗೆಯೇ ಸಮಸ್ಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಉತ್ತಮ ನಿರ್ಧಾರವನ್ನು ಕೈಗೊಳ್ಳಬಹುದು.

ಸಮಾನ ವಯಸ್ಕ ಸಮಾಲೋಚನೆ ವಿದ್ಯಾರ್ಥಿಗಳಿಗೆ ಹೇಗೆ ನೆರವಾಗುತ್ತದೆ ?

ಒಬ್ಬ ವಿದ್ಯಾರ್ಥಿಯಾಗಿ ನಿಮಗೆ ಜೀವನದಲ್ಲಿ ಹಲವಾರು ರೀತಿಯ ಒತ್ತಡಗಳಿರಬಹುದು. ಶೈಕ್ಷಣಿಕ ಒತ್ತಡಗಳು ಮಾತ್ರವೇ ಅಲ್ಲದೆ, ಅಷ್ಟಕ್ಕೇ ಸೀಮಿತವಾಗದೆ, ನಿಮ್ಮ ಭವಿಷ್ಯದ ಓದು ಮತ್ತು ಅಧ್ಯಯನ, ಸಮಾನ ವಯಸ್ಕರ ಒತ್ತಡ, ಸಂಬಂಧಗಳ ನಡುವಿನ ಸಮಸ್ಯೆ, ದೈಹಿಕ ಸಮಸ್ಯೆಗಳು, ವಿವಿಧ ವ್ಯಸನಗಳು ಹೀಗೆ ಹಲವು ಒತ್ತಡಗಳು ಸಾಧ್ಯ. ಎಲ್ಲರಿಗೂ ವೃತ್ತಿಪರ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಸಲಹೆ ಪಡೆಯಲು ಸಾಧ್ಯವಾಗದಿರಬಹುದು. ಏಕೆಂದರೆ ಕೆಲವೊಮ್ಮೆ ಸಮಾಲೋಚಕರು ಲಭ್ಯವಿರುವುದಿಲ್ಲ ಅಥವಾ ಅವರಿಗೆ  ಶುಲ್ಕ ನೀಡುವ ಸಾಮಥ್ರ್ಯ ವಿದ್ಯಾರ್ಥಿಗಳಿಗೆ ಇರುವುದಿಲ್ಲ ಅಥವಾ ಸಮಾಜದಲ್ಲಿ ಕಳಂಕಕ್ಕೆ ಹೆದರಿ ಸಂಪರ್ಕಿಸದೆ ಇರಬಹುದು. ಇಂತಹ ಸಂದರ್ಭಗಳಲ್ಲಿ ಸಮಾನ ವಯಸ್ಕ ಸಮಾಲೋಚಕರು ನಿಮ್ಮ ನೆರವಿಗೆ ಬರುತ್ತಾರೆ. ನಿಮ್ಮ ಗೆಳೆಯರಿಗೂ ಸಹ ನೆರವಾಗುತ್ತಾರೆ. ಈ ಕೆಲವು ಉಪಯೋಗಗಳನ್ನು ಪಡೆಯಬಹುದು :

• ಸಂಘರ್ಷದ ನಿವಾರಣೆ

• ಆತ್ಮ ವಿಶ್ವಾಸ ಮತ್ತು ಆತ್ಮಗೌರವ ಹೆಚ್ಚಿಸುವುದು

• ಪರೀಕ್ಷೆಯ ಒತ್ತಡ ಮತ್ತು ಶೈಕ್ಷಣಿಕ ಸಂಕಷ್ಟಗಳು

• ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಡನೆ ಹೊಂದಾಣಿಕೆ

• ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವ ವಿಚಾರಗಳು

• ರ್ಯಾಗಿಂಗ್, ಹಿಂಸಿಸುವುದು ಮತ್ತು ಇತರ ಸಮಸ್ಯೆಗಳು.

ಹಲವಾರು ಪ್ರಕರಣಗಳಲ್ಲಿ ಸಮಾನ ವಯಸ್ಕ ಸಮಾಲೋಚಕರನ್ನು ಸಂಪರ್ಕಿಸುವುದು ಪರಿಣಾಮಕಾರಿಯಾಗುತ್ತದೆ. ಏಕೆಂದರೆ ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹಾರ ಸೂಚಿಸಲು ಮತ್ತೊಬ್ಬರಿಗೆ ಸಾಧ್ಯವಾಗುತ್ತದೆ.  ಈ ಸಮಾಲೋಚಕರು ತರಬೇತಿ ಪಡೆದಿರುವುದರಿಂದ ಸಮಾನ ವಯಸ್ಕ ಸಮಾಲೋಚಕರು ಸಮಸ್ಯೆಯನ್ನು ಆಲಿಸಿ, ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ ಪರ್ಯಾಯ ಮಾರ್ಗಗಳ್ನು ಸೂಚಿಸುತ್ತಾರೆ. ಕೇವಲ ಸಲಹೆಗಳನ್ನು ನೀಡುವುದಿಲ್ಲ.

ಸಮಾನ ವಯಸ್ಕ ಸಮಾಲೋಚಕರು ತರಬೇತಿ ಪಡೆದಿರುತ್ತಾರೆ

ಸಮಾನ ವಯಸ್ಕ ಸಮಾಲೋಚಕರು ಸಂವಹನ, ಆಲಿಸುವ ಕೌಶಲ್ಯ, ದೃಢ ನಿರ್ಧಾರ ತಾಳುವುದು, ಸಮಾಲೋಚನೆಯ ನೈತಿಕ ಮೌಲ್ಯಗಳು, ಗೋಪ್ಯತೆಯನ್ನು ಕಾಪಾಡುವುದು ಮತ್ತು ಹೊರಗೆಡಹುವುದು, ಇತರರಿಗೆಎ ಸಹಾಯ ಮಾಡುವ ಇತಿಮಿತಿಗಳು, ಮೂಲ ಸಮಾಲೋಚಕ ಕೌಶಲ್ಯ ಇವೇ ಮುಂತಾದ ವಿಚಾರಗಳಲ್ಲ ತರಬೇತಿ ಪಡೆದಿರುತ್ತಾರೆ. ಇವರಿಗೆ ತರಬೇತಿ ದೊರಕಿದ್ದರೂ ಯಾವುದೇ ಪ್ರಮಾಣಪತ್ರ ಪಡೆದಿರುವುದಿಲ್ಲ. ಸಮಾಲೋಚಕರನ್ನು ಹೊಂದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನ ವಯಸ್ಕ ಸಮಾಲೋಚಕರು ವಿದ್ಯಾರ್ಥಿ ಮತ್ತು ಸಮಾಲೋಚಕರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಶಾಲೆ ಅಥವಾ ಕಾಲೇಜಿನಲ್ಲಿ ಸಮಾಲೋಚಕರು ಇಲ್ಲದಿದ್ದಲ್ಲಿ ಸಮಾನ ವಯಸ್ಕ ಸಮಾಲೋಚಕರು ತಮ್ಮ ಸಹಪಾಠಿಗಳಿಗೆ ನೆರವಾಗುವುದೇ ಅಲ್ಲದೆ ಅವರ ಆವೇಗ ಮತ್ತು ವರ್ತನೆಯಲ್ಲಿನ ವ್ಯತ್ಯಯಗಳನ್ನು ಅರ್ಥಮಾಡಿಕೊಂಡು ಪರಿಹಾರ ಮಾರ್ಗಗಳನ್ನು ಸೂಚಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತಿರದಲ್ಲಿರುವ ವೃತ್ತಿಪರ ಸಮಾಲೋಚಕರ ಬಳಿ ಕಳುಹಿಸುತ್ತಾರೆ.

ತರಬೇತಿ ಹೊಂದಿದ್ದರೂ ಒಬ್ಬ ವಿದ್ಯಾರ್ಥಿ ಸಮಾನ ವಯಸ್ಕ ಸಮಾಲೋಚಕನಾಗಲು ಕೆಲವು ಅರ್ಹತೆಗಳನ್ನು ಹೊಂದಿರುವುದು ಅತ್ಯವಶ್ಯ. ಅವು ಹೀಗಿವೆ :

• ಮಧ್ಯೆ ಪ್ರವೇಶಿಸದೆ ಸಕ್ರಿಯವಾಗಿ ಆಲಿಸುವ ಕೌಶಲ್ಯ

• ಸಂವೇದನೆ ಮತ್ತು ಮತ್ತೊಬ್ಬರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಶಕ್ತಿ

• ವಿದ್ಯಾರ್ಥಿಗಳ ಮಾಹಿತಿಯನ್ನು ಗೋಪ್ಯವಾಗಿಡುವ ಮತ್ತು ಗಾಳಿಸುದ್ದಿ ಹರಡದಂತೆ ಎಚ್ಚರವಹಿಸುವ ಕೌಶಲ್ಯ.

• ಉತ್ತಮ ಸಂವಹನ ಕೌಶಲ್ಯ ಮತ್ತು ವಿದ್ಯಾರ್ಥಿಯ ಮನಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸಾಮಥ್ರ್ಯ.

• ಹೊಂದಾಣಿಕೆಯ ಸ್ವಭಾವ.

ಬಹಳ ಮುಖ್ಯವಾದ ಅಂಶವೆಂದರೆ ಸಮಾಲೋಚಕರು ಇತರ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ ಹೊಂದಿರಬೇಕು.

ಸಮಾನ ವಯಸ್ಕ ಸಮಾಲೋಚಕರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ತಮ್ಮ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಾರೆ. ಮಾನಸಿಕ ಆರೋಗ್ಯದ ವಿಚಾರಗಳು, ಕಳಂಕ ಮತ್ತು ತಾರತಮ್ಯದ ವಿಚಾರಗಳು, ಮಾನಸಿಕ ಅನಾರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಸಮಾನ ವಯಸ್ಕ ಸಮಾಲೋಚಕರೂ ಉಪಯೋಗ ಪಡೆಯುತ್ತಾರೆ.

ತಮ್ಮ ಸಹಪಾಠಿಗಳಿಗೆ ಸಹಾಯವಾಗುವುದೇ ಅಲ್ಲದೆ ಸಮಾನ ವಯಸ್ಕ ಸಮಾಲೋಚಕರು ತರಬೇತಿ ಮತ್ತು ಕಾರ್ಯ ನಿರ್ವಹಣೆಯ ವೇಳೆ ಖುದ್ದಾಗಿ ಕೆಲವು ಉಪಯೋಗಗಳನ್ನು ಪಡೆಯುತ್ತಾರೆ.

• ಕೆಲವು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎನ್‍ಜಿಒ ಮತ್ತು ಅನುಭವಸ್ಥ ಸ್ವಯಂ ಸೇವಕರಿಗೆ ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸಮಾಲೋಚಕ  ಕೌಶಲ್ಯವನ್ನು ಉಲ್ಲೇಖಿಸಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

• ಇದರಿಂದ ಅವರ ಆತ್ಮ ಗೌರವ ಮತ್ತು ಸಮಸ್ಯೆ ಬಗೆಹರಿಸುವ ಕೌಶಲ್ಯ ಹೆಚ್ಚಾಗುತ್ತದೆ.

• ನಾಯಕತ್ವದ ಕೌಶಲ್ಯಗಳನ್ನು ಪಡೆಯಬಹುದು.

• ಮತ್ತೊಬ್ಬರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಮತ್ತು ಮತ್ತೊಬ್ಬರನ್ನು ಗೌರವಿಸಿ ಅವರ ಕೌಶಲ್ಯಗಳನ್ನು ಗೌರವಿಸಲು ನೆರವಾಗುತ್ತದೆ.

ಸಮಾನ ವಯಸ್ಕ ಸಮಾಲೋಚಕರನ್ನು ಹೊಂದಿರುವ ಕಾಲೇಜುಗಳು

• ಸನ್ ಶೈನ್ - ಸಮಾನ ವಯಸ್ಕ ಸಮಾಲೋಚಕ ತಂಡ ಐಐಟಿ ಹೈದರಾಬಾದ್

• ಸಮಾಲೋಚಕ ಕೇಂದ್ರ ಐಐಟಿ ಗಾಂಧಿನಗರ, ಇಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶಕರು ಮತ್ತು ಸಮನ್ವಯ ಅಧಿಕಾರಿಗಳು ಇದ್ದಾರೆ.

• ನಿಮ್ಮ ಗೆಳೆಯ (ಯುವರ್ ದೋಸ್ತ್)- ಭಾವನಾತ್ಮಕ ಪ್ರೋತ್ಸಾಹ ನೀಡುವ ಪದ್ಧತಿ : ಐಐಟಿ ಗವಹಾತಿಯ ಸಮಾಲೋಚಕ ಕೇಂದ್ರ ಇಲ್ಲಿ ವಿದ್ಯಾರ್ಥಿ ಮಾರ್ಗದರ್ಶಕರನ್ನು ಸಾಥಿ ಎಂದು ಕರೆಯಲಾಗುತ್ತದೆ.

• ವಿಶ್ವಾಸ್ : ಜೈನ್ ವಿಶ್ವವಿದ್ಯಾಲಯ ಬೆಂಗಳೂರು - ಸಮಾಲೋಚನಾ ಕೇಂದ್ರ ( ಆಸಕ್ತಿ ಇರುವ ಇತರ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು)

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org